ನಿಮ್ಮ ಭಾವನೆಗೆ ನನ್ನ ಕೆಲವೇ ಕೆಲವು ಪದಗಳು ಇಲ್ಲಿರುವ ಯಾವುದೇ ಕವಿತೆಗಳಿಗೆ ಮತ್ತು ಹಾಳುಮೂಳು ಬರಹಗಳಿಗೆ ಒಂದು ದೃಷ್ಟಿಕೋನ ಒಂದು ಗುರಿ,ಧ್ಯೇಯ ಯಾವುದು ಇಲ್ಲ.ಇಲ್ಲಿರುವ ಪದಗಳಿಗೆ ಕವಿತೆ ಅನ್ನುವ ಚಂದದ ಹೆಸರಿನಿಂದ ಕರೆಯಬೇಕ? ಅದೂ ತೋಚುತ್ತಿಲ್ಲ.ಕೊನೆಗೆ ಈ ಪದಗಳ ಮೂಲಕ ನಾನು ಏನು ಹೇಳಲಿಕ್ಕೆ ಹೊರಟಿದ್ದೇನೆ ಅಂತ ಕೆಲವೊಂದು ಸಲ ನನಗೂ ಅರ್ಥವಾಗುವುದಿಲ್ಲ. ಇಲ್ಲಿರುವುದೆಲ್ಲ ಕೇವಲ ಹುಚ್ಚು ಮನಸ್ಸಿನ ಭೋರ್ಗರೆತಗಳು ಮಾತ್ರ. ಇವನ್ನ ಕವಿತೆ ಮತ್ತು ಅದ್ಭುತ ಬರಹ ಅಂತ ಓದುವ ನಿಮಗೆ ಮತ್ತು ನಿಮ್ಮ ಸಹನೆಗೆ ಮತ್ತು ಅತ್ಯಮೂಲ್ಯ ಸಮಯಕ್ಕೆ ನಾನು ಅಭಾರಿ…….ಮತ್ತೆ ಇಲ್ಲಿ ಕೆಲವೊಂದು ಸಲ ಕೆಲವು ಘಟನೆಗಳನ್ನ ನೆರವಾಗಿ ಹೇಳಬೇಕಾದ ಸಮಯದಲ್ಲಿ ಅನಿವಾರ್ಯವಾಗಿ ಅಸಂಬದ್ದ ಪದಗಳನ್ನ ಉಪಯೋಗಿಸಲೇ ಬೇಕಾಗುತ್ತದೆ ..ಮಡಿವಂತ ಮಹಾಶಯರು ನನ್ನ ಈ ಒಂದು ತಪ್ಪನ್ನ ಕ್ಷಮಿಸಿಬಿದಬೇಕು…….ಇಂತಿ ನಿಮ್ಮ ಪ್ರೀತಿಯ ನವಿಲುಗರಿ ಹುಡುಗ
ಚುಟುಕು……( ಶತ್ರು)
ಶತ್ರು॒॒॒॒॒॒॒
ಬಯಸಿ ಬಯಸಿ
ನಲ್ಲೆಯ ಬಳಿ ಸಾಗಿದ
ನಲ್ಲನಿಗೆ, ನಿರಾಸೆಗೊಳಿಸಿದ
ಅವಳ ಮಲ್ಲಿಗೆಯ ಲಜ್ಜೆ…
This entry was posted
on September 28, 2006 at 3:06 pm and is filed under ಕವನಗಳು.
You can follow any responses to this entry through the RSS 2.0 feed.
You can leave a response, or trackback from your own site.
ha ha haa…. chennaagide
Ana - November 15, 2006 at 7:28 am