ಕೆಲವು ಚುಟುಕುಗಳು..!!
ಸಾಮ್ಯತೆ……..!!!
ನೀ ನನ್ನಿಂದ
ದೂರಾಗುತ್ತಿರುವುದಕ್ಕು
ನಾ ಸಾವಿಗೆ
ಹತ್ತಿರವಾಗುತ್ತಿರುವುದಕ್ಕು
ಅಂತಹ ವ್ಯತ್ಯಾಸವೇನಿಲ್ಲ….!
ಹಾರೈಕೆ……….!!!
ಹೃದಯಗಳೇ
ನೀವು ಕಳೆದುಕೊಂಡ
ಒಲವೆಲ್ಲ
ಇಂದಲ್ಲ ನಾಳೆ
ಉಲ್ಕೆಗಳ ರೂಪದಲ್ಲಿ
ಸುರಿದು ಬರಲಿ…..!
ತೃಪ್ತಿ……!!!
ನಲಿವೇ
ಆಗಬೇಕೆಂದಿಲ್ಲ
ನಿನ್ನೊಲವಿನ
ನೋವಾದರು ಸಾಕು…..!
ಮಾಯಗಾತಿ….!!!
ಬೆಂಬಿಡದೆ
ಕಾಡುತ್ತೇವೆಂದ ಕನಸುಗಳಿಗೆ
ನಿನ್ನ ಒಲವ ಕುರಿತು ಹೇಳಿದೆ..
ಪಾಪದ ಕನಸುಗಳು ಕನಸುಗಳು ಕೂಡ
ಕನವರಿಸುತ್ತಿವೆಯಂತೆ ನಿನ್ನ….!!!
ಗೆಜ್ಜೆ-ಹೆಜ್ಜೆ
ನನ್ನೊಳಗೆ ನೀ ಬಿಟ್ಟು ಹೋದ
ಗೆಜ್ಜೆಗಳಿಗು
ಹೆಜ್ಜೆಗಳಿಗು
ಅಂತಾ ವ್ಯತ್ಯಾಸವೇನಿಲ್ಲ !
ಹೆಜ್ಜುಗಳು ನಿನ್ನೊಲವ ವಿರಹಗೀತೆಗಳಾದರೆ
ಗೆಜ್ಜೆಗಳು ನಿನ್ನೊಲವ ಪ್ರೇಮಗೀತೆಗಳು..
Loading...
ಉಲ್ಕೆ ಉರಿದು ಹೋಗುತ್ತದಲ್ಲ! ನಾವು ಕಳೆದುಕೊಂಡ ಒಲವೂ ಉಲ್ಕೆಯ ಹಾಗೆ ಉರಿದು ಹೋಗಲಿ ಎಂಬ ಆಶಯ ಸರಿಯಲ್ಲ. ನಾವು ಕಳೆದುಕೊಂಡ ಒಲವು ಮಳೆಯ ಹಾಗೆ ಸುರಿದು ಜೀವವನ್ನು ಪೋಷಿಸಲಿ ಎಂದು ಹಾರೈಸೋಣ.
ಬ್ಲಾಗು ವಿಹಾರಿ - March 5, 2007 at 2:22 am
olavo-virahavo
kanike kanikeye.
neeve andhange
adu kooda hejjegalaguvudalla?
neel3 - March 20, 2007 at 4:09 pm