ನಿಮ್ಮ ಭಾವನೆಗೆ ನನ್ನ ಕೆಲವೇ ಕೆಲವು ಪದಗಳು
ಇಲ್ಲಿರುವ ಯಾವುದೇ ಕವಿತೆಗಳಿಗೆ ಮತ್ತು ಹಾಳುಮೂಳು ಬರಹಗಳಿಗೆ ಒಂದು ದೃಷ್ಟಿಕೋನ ಒಂದು ಗುರಿ,ಧ್ಯೇಯ ಯಾವುದು ಇಲ್ಲ.ಇಲ್ಲಿರುವ ಪದಗಳಿಗೆ ಕವಿತೆ ಅನ್ನುವ ಚಂದದ ಹೆಸರಿನಿಂದ ಕರೆಯಬೇಕ? ಅದೂ ತೋಚುತ್ತಿಲ್ಲ.ಕೊನೆಗೆ ಈ ಪದಗಳ ಮೂಲಕ ನಾನು ಏನು ಹೇಳಲಿಕ್ಕೆ ಹೊರಟಿದ್ದೇನೆ ಅಂತ ಕೆಲವೊಂದು ಸಲ ನನಗೂ ಅರ್ಥವಾಗುವುದಿಲ್ಲ. ಇಲ್ಲಿರುವುದೆಲ್ಲ ಕೇವಲ ಹುಚ್ಚು ಮನಸ್ಸಿನ ಭೋರ್ಗರೆತಗಳು ಮಾತ್ರ. ಇವನ್ನ ಕವಿತೆ ಮತ್ತು ಅದ್ಭುತ ಬರಹ ಅಂತ ಓದುವ ನಿಮಗೆ ಮತ್ತು ನಿಮ್ಮ ಸಹನೆಗೆ ಮತ್ತು ಅತ್ಯಮೂಲ್ಯ ಸಮಯಕ್ಕೆ ನಾನು ಅಭಾರಿ…….ಮತ್ತೆ ಇಲ್ಲಿ ಕೆಲವೊಂದು ಸಲ ಕೆಲವು ಘಟನೆಗಳನ್ನ ನೆರವಾಗಿ ಹೇಳಬೇಕಾದ ಸಮಯದಲ್ಲಿ ಅನಿವಾರ್ಯವಾಗಿ ಅಸಂಬದ್ದ ಪದಗಳನ್ನ ಉಪಯೋಗಿಸಲೇ ಬೇಕಾಗುತ್ತದೆ ..ಮಡಿವಂತ ಮಹಾಶಯರು ನನ್ನ ಈ ಒಂದು ತಪ್ಪನ್ನ ಕ್ಷಮಿಸಿಬಿದಬೇಕು…….ಇಂತಿ ನಿಮ್ಮ ಪ್ರೀತಿಯ ನವಿಲುಗರಿ ಹುಡುಗ

ನಿನ್ನ ನೆನಪಾಯಿತು..!!!

null

ನಿನ್ನ ಕಳೆದುಕೊಂಡ ನಾನು
ಇನ್ನೂ ಬದುಕಿರುವೆನೆಂದರೆ
ಒಮ್ಮೆಯಾದರು ನೀನು ಬಂದು
ನನ್ನ ಕನಸಲ್ಲಾದರೂ ಲಾಲಿ
ಹಾಡುವೆಯೆಂಬಾ ಮಹದಾಸೆಯಿಂದ..!

ಬಯಗೊಳಿಸುವ ಕತ್ತಲಿದೆ
ಆದರೂ ಅರೆಕ್ಷಣ ಕಣ್ಣುಮುಚ್ಚುತ್ತಿಲ್ಲ!
ಕಣ್ಣಾಲೆಗಳ ತುಂಬ ನಿನ್ನ ಹಾಡುಗಳೇ
ನಿನ್ನ ಹಾಡಿನ ಲಾಲಿಯ ಜೋಕಾಲಿಯಲ್ಲಿ
ಪಾಪ ಕತ್ತಲೂ ಕೂಡ ನನ್ನ ಮುಂದೆ ಕಣ್ಮುಚ್ಚಿ ಮಲಗಿದೆ..!!

ನೋವು,ನಿರಾಸೆ,ಕಣ್ಣೀರು
ಒಂಟಿತನ,ಬೇಸರ, ತಬ್ಬಲಿತನಗಳು
ನೀ ಕೊಟ್ಟ ಬಳುವಳಿಗಳೆಂದು ತಿಳಿದ ಮೇಲೆ
ನನಗ್ಯಾವುದರ ಅರಿವಿಲ್ಲ..!!
ಹೃದಯವೇ ಇಲ್ಲದವನಲ್ಲಿ ಇನ್ನು ಅನುಭವಗಳೆಲ್ಲಿ..!!!

ನಿನ್ನ ಜಿಂಕೆಮರಿಯಂದಿದ್ದೆ
ನನ್ನ ಅಪರಾಧವಾಯಿತೆ ಗೆಳತಿ..!
ಕ್ಷಣದೊಳಗೆ ನನ್ನನ್ನಗಲಿ
ನೀ ಅಗೋಚರ ದಿಕ್ಕಿಗೆ ಸಾಗಿ ಬಿಟ್ಟೆ
ನೋಡಿಲ್ಲಿ ನನ್ನೆದೆಯಾಳದ
ಮೈದಾನ ನಿನ್ನಾಟವಿಲ್ಲದ ಬರಡು ಬರಡು..!!

ನನಗೆ ನೀನು ನೆರಳ ಕೊಡದಿದ್ದರು
ಚಿಂತೆಯಿಲ್ಲವೆ ಗೆಳತಿ..ಬಿರುಬಿಸಿಲು ಬೇಡ
ನಿನ್ನ ಚಂದ್ರನಿಗೆ ಹೋಲಿಸಿದ್ದು ನಾನು
ನನ್ನ ನಂಬಿಕೆ ಸುಳ್ಳಾಗದಿರಲಿ…!

ನಾನು ಯಾವತ್ತೂ ದೇವರನ್ನು
ನಂಬುವುದಿಲ್ಲ, ಕನಸಿನಲ್ಲಿಯು ಕೂಡ..!
ಕಣ್ಣಾಗಿದ್ದ ನೀನು ನನ್ನ ಅಗಲಿದೆಯಲ್ಲ…!

ನನಗೆ ನಿನ್ನ ನೆನಪಾಗುತ್ತಿಲ್ಲ,
ನನಗೇನು ಅನ್ನಿಸುತ್ತಿಲ್ಲ,
ನಾನೇನನ್ನು ಕಳೆದುಕೊಂಡಿಲ್ಲ,
ನೋಡಿ..ಹೃದಯವೂ ಸುಳ್ಳು ಹೇಳುವುದು
ನಿಜವಾದಂತಾಯಿತಲ್ಲವೆ?…!

ನಾನು ಇಷ್ಟೊಂದು ನಲಿವು ಗೆಲವು
ಸಂತೋಷಗಳ ಮದ್ಯೆಯೂ
ದುಃಖಿಸುತ್ತೇನಲ್ಲ ಗೆಳತಿ…
ನನಗೆ ನೋವಾಗುವುದಿಲ್ಲ..
ಬದಲಾಗಿ ನಿನ್ನ ನೆನಪಾಯಿತಲ್ಲವೆಂದು
ದುಃಖದಲ್ಲು ನಗುತ್ತಿರುತ್ತೇನೆ..!!

ನನಗೆ ಪ್ರತಿದಿನ ಬರುವ
ಕನಸುಗಳಲ್ಲಿ ಒಂದು ವಿನಂತಿಯೆಂದರೆ
ನನಗೆ ಅವಳ ಒಂದಷ್ಟು ನಗುವಾದರು ತನ್ನಿ
ನಾನು ನಗಬೇಕಿದೆ…!!!

9 Responses to “ನಿನ್ನ ನೆನಪಾಯಿತು..!!!”

  1. nice one.1st stanza is touchy.carry on u hv lots of talents.

    SIRI - February 17, 2007 at 6:25 am

  2. Somanna,

    wonderful……..neenu gr8 kano!!

    impressive!

    Dr Smriti - February 19, 2007 at 7:43 pm

  3. hello somu. naan ondu maathu kelteeni..yaake ee kavanada tumba yaaro eddare anta ansta ide.i am right na? yaaradu? yaake asht bejaar maadidra nimge? bidi avarigondu thanks heli.illa andere isht olle kavana bartha irlilla..u know somu naan 4 pyaaragalanna copy maadikondu nanna friendsgella torside..tumba tumba olle kavana.nanage mail maadu nimma jote matadabeku..keep writing somu

    kaplana - February 21, 2007 at 4:32 pm

  4. hello…………. enappa?
    nin kavna bombat.. ninge ee reeti kavna bareyo hage maadbeku andre nin mansige bejaragiro agatya idiya? anyways nin kavna superb keep writing. blessing 4 ur future….. tata…….

    anju,priya - February 22, 2007 at 8:33 am

  5. ಕವಿತೆ ಚೆನ್ನಾಗಿದೆ, ಕನಸಲ್ಲೂ ಆ ಹುಡುಗಿ ಕರೆಯದ ಬರುತ್ತಾಳೆ,ಬಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾಳೊ ಇಲ್ಲಾ ಅವಳು ಬರುವುದೇ ಇಲ್ಲವೋ,ಅವಳ ಹಾದಿಯಲ್ಲಿ ಕಾಯುವುದೇನಾ ಕನಸಿನ ಕೆಲ್ಸ ಅಂತ ಒಂದು ಚಿಕ್ಕ ಸಂದೇಹ.,

    ಚುಂಬನವಾಸಿ - February 24, 2007 at 12:47 pm

  6. ಕಚಗುಳಿಯ ಅನುಭವ ಬರೆ ಕವಿಗುಂಟಾದರೆ ಸಾಕೆ? ಓದುವ ಸಹೃದಯನಿಗೂ ಆಗಬೇಕಲ್ಲವೆ? ಪದ್ಯ ಇಷ್ಟು ಸಲೀಸಾದರೆ ಹೇಗೆ ಸ್ವಾಮಿ? ಎಸ್ ಎಸ್ ಎಲ್ ಸಿ ಪಾಸು ಮಾಡಲೂ ಪರಿಶ್ರಮ ಪಡಬೇಕು, ಕಾವ್ಯಕೃಷಿಗೆ ಸ್ವಲ್ಪವಾದರೂ ಪರಿಶ್ರಮ ಬೇಡವೆ? ಭಾವನೆಗಳ ಭೋರ್ಗರೆತವೇ ಕಾವ್ಯ ಅಲ್ಲ! ಕನ್ನಡದಲ್ಲಿ ಎಷ್ಟೆಲ್ಲ ಒಳ್ಳೆಯ ಪದ್ಯಗಳಿವೆ. ಅವುಗಳನ್ನು ಓದಿ ಅನುಭವಿಸಿ ಕಾವ್ಯದ ಗುಟ್ಟನ್ನು ತಿಳಿದುಕೊಳ್ಳಿ.

    ಬ್ಲಾಗು ವಿಹಾರಿ - March 5, 2007 at 2:19 am

  7. superb somu, geLathiya nenapendare hAgE alwa……..

    ravi - May 9, 2007 at 3:03 pm

  8. Superb…i just loved it

    ashwini - July 13, 2007 at 10:18 am

  9. ಕವಿತೆ ತುಂಬ ಚೆನಾಗಿದೆ ಸೋಮು ,
    ನೀನ್ ಕವಿತೆ ಬಗ್ಗೆ ನಾನ್ ಏನು ಹೇಳ್ಬೇಕು ಅನ್ನುದೆ ಗುಥಗ್ಥ ಇಲ್ಲಾ ..
    ಗೆಳತಿಯ ಗುಟ್ಟು , ಮತ್ತೆ ಅಮ್ಮನೆಂಬ ಮಹಾನ್ ಕಳ್ಳಿ ಸೂಪರ್ ಮತ್ತೆ . ನಿನ್ನ ಹೊಲಿಸಲಾರೆ ಅನ್ನುದು ತುಂಬ ಇಷ್ಟ ಆಯಿತು ಕಣೋ ,

    jagaddesh - February 29, 2008 at 2:23 am

Leave a Reply