ಚುಟುಕುಗಳು……….
ಮೀನುಗಾರನ ಬದುಕುವ ಛಲ
ಮತ್ತೆ ಮೀನಿನ ಬದುಕುವ ಹಠ
ಎರೆಡು ಪ್ರಾಮಾಣಿಕತೆಯಿಂದ
ಕೂಡಿದ್ದರ ಪ್ರತಿಬಿಂಬವೇನೋ
ಅನ್ನುವಂತೆ ಒಂದೋಂದು ಸಲ
ಮೀನಿಗೆ ಸೋಲು…
ಮಗದೊಂದು ಸಲ ಮೀನುಗಾರನ ಸಾವು…!!!!
_______________________________________
ಸಾಗಿಬಂದ ದಾರಿ ಏನೇನು ಅಲ್ಲ
ಸಾಗಬೇಕಾದ ದಾರಿ ತುಂಬಾ ಇದೆ
ಅನ್ನುವಾ ಭಾಷಣಕಾರರೇ..ನೋಡ ಬನ್ನಿ
ಅವಳಿಲ್ಲದೇ ಸಾಗಿ ಬಂದ ನನ್ನ ಪ್ರತೀ
ಹೆಜ್ಜೆಗಳು ಅನುಭವಿಸಿದ ಒಂಟಿತನವನ್ನ
ಜಗತ್ತಿಗೇ ಹಂಚಿ ಉಳಿಯುವಷ್ಟಿದೆ…
___________________________________________
ಪ್ರೀತಿ ಪ್ರೇಮ ಪ್ರಣಯ
ಸೊಗಸು ಕನಸು ಮನಸು
ಹೃದಯ ಅಂದ ಚೆಂದಗಳ
ಅರಮನೆಯಲ್ಲಿರುವ ನಿಮಗೆ
ವಾಸ್ತವದ ಅರಿವಾಗುವುದು
ಬದುಕೆಂಬ ಮಾಯಾವಿ
ವಾಸ್ತವದ ಛಡಿಯೇಟು ಕೊಟ್ಟಾಗಲೆ…………….
___________________________________________
ಬರೀ ಕಷ್ಟಗಳಿಗೆ ಹೆದರಿ
ನಿಂತಿರುವ ನೀನು…]
ಕೆಟ್ಟಾನುಕೆಟ್ಟ ಕೆಸರಿನಲ್ಲಿಯೂ
ಅರಳುತ್ತಿರುವ ಕಮಲದ ಹೂವಿನ
ಜೀವನೋತ್ಸಾಹವನ್ನು ಕಂಡು
ನಾಚಿ ತಲೆ ತಗ್ಗಿಸಲೇ ಬೇಕು….
Loading...
ಅದ್ಭುತವಾಗಿದೆ ನಿಮ್ಮ ಬ್ಲಾಗ್ ಸ್ಪಾಟ್
parameshwara - August 3, 2007 at 7:58 am
ಪ್ರೀತಿಯಾ ಸೊಮುರವರೆ,
ನಿಮ್ಮ ಪ್ರತಿಯೊಂದು ಕವನಗಳೂ ತುಂಬ ತುಂಬಾ ಚೆನ್ನಾಗಿದೆ.
ನಿಜವಾಗಲು ನಿಮಗೆ ಓಳ್ಳೇಯ ಭವಿಶ್ಯ್ವ ವಿದೆ.ಹೀಗೆ ಬರೆಯುತ್ತಿರಿ,ನಾವುಗಳೂ ಓದುತ್ತೀರುತ್ತೆವೆ.
ನಿಮಗೆ ಶುಭವಾಗಲಿ.
ಸವಿತಾಶ್ರೀಧರ್
savithasreedhar - February 7, 2008 at 2:39 pm
priya somu you are a best kavi in karnataka
sadiga - March 25, 2008 at 11:31 am