ನೆನಪಿಗೆ ಬರಬಾರದು ನೀನು……

ಸಾದ್ಯವಾದಷ್ಟು ದೂರವೇ ಇರು
ಸಾದ್ಯವಾದರೆ ತೊಲಗು ನೀನು
ದಿಕ್ಕುಗಳೇ ಇರಬಾರದು ನಿನಗೆ
ದಾರಿಗಳೆಲ್ಲ ಚಕ್ರವ್ಯೂಹಗಳಾಗಬೇಕು
ಮತ್ತೆ ನನ್ನೊಳಗಿಳಿಯಲು ಹೊರಟೀಯ ಜೋಕೆ
ಈ ದಿನದಿಂದ ದೈವ ನನ್ನ ಜೊತೆಗಿದೆ ದ್ರೋಹಿ
ಇಷ್ಟು ದಿನ ನೀನು ನನ್ನ ಜೊತೆಗಿದ್ದ ಹಾಗೆ…!
ಸಾದ್ಯವಾದರೆ ಎರೆಡು ಹನಿ ಕಣ್ಣೀರು ಕೆಡಹು
ನನಗಾಗಿ ಅಲ್ಲ, ನನಗದು ಬೇಕಿಲ್ಲ
ನಿನ್ನ ಕಣ್ಣುಗಳಲ್ಲಿರುವ ಕೆಲವೇ ಕೆಲವು
ನನ್ನ ಕನಸುಗಳು ಈಚೆಗೆ ಬರಬೇಕಿದೆ,
ಮರುಭೂಮಿಯಲ್ಲಿ ಮಲ್ಲಿಗೆ ಬೆಳೆಯುವುದಿಲ್ಲವೆಂಬ
ಸತ್ಯವನ್ನ ನನ್ನ ಕನಸುಗಳಿಗೆ ನಾನು ಹೇಳಬೇಕಿದೆ…!
ಸಾದ್ಯವಾದರೆ ಮತ್ತೆ ನೀನು
ನನ್ನ ನೆನಪಿಗೆ ಬರಬಾರದು
ಈಗಷ್ಟೆ ಕನಸುಗಳ ದಫನ್ ಆಗಿದೆ ಇಲ್ಲಿ
ಮತ್ತೆ ಅವು ಚಿಗುರೊಡೆಯಬೇಕಲ್ಲವ?
ಚಿಗುರೊಡೆಯುವ ನನ್ನ ಕನಸುಗಳಿಗೆ
ನಾನು ಅಸುನೀಗಿದ ಕತೆಯ ಹೇಳಬೇಕಿದೆ..
Loading...
ಯಾಕೋ ಸೋಮ… ತುಂಬಾ ಸೆಂಟಿ ಆಗ್ಬಿಟ್ಟಿದಿಯ?
ಕವಿತೆ ಬಹಳ ಇಷ್ಟ ಆಯಿತು……
ಸಾದ್ಯವಾದರೆ ಎರೆಡು ಹನಿ ಕಣ್ಣೀರು ಕೆಡಹು
ನನಗಾಗಿ ಅಲ್ಲ, ನನಗದು ಬೇಕಿಲ್ಲ
ನಿನ್ನ ಕಣ್ಣುಗಳಲ್ಲಿರುವ ಕೆಲವೇ ಕೆಲವು
ನನ್ನ ಕನಸುಗಳು ಈಚೆಗೆ ಬರಬೇಕಿದೆ, …. ಸೂಪರ್!!
ಫ್ರ್ಯಾನ್ಸಿಸ್ ಸಂತೋಶ್ - December 7, 2007 at 12:06 pm
ಹೌದಲ್ರೀ ಸೋಮ್, ಇಷ್ಟ್ ದಿನದ ಮೌನದ ನಂತರ ಸಿಕ್ಕಾಪಟ್ಟೆ ಸೆಂಟಿ ಕವನ..!
ಒಟ್ಟುಗೂಡಿಸಿ ಗುಚ್ಛ ಮಾಡಲಾಗದಂತೆ ಭಾವನೆಗಳು ಒಂದರ ಮೇಲೊಂದರಂತೆ ಒಂದು ಧುಮ್ಮಿಕ್ಕಿದೆ. ನಿಧಾನ ಕೂತು ಬರೆದರೆ ಎಲ್ಲ ಸಾಲುಗಳೂ ಒಂದೊಂದು ಹೊಸ ಕವಿತೆಯನ್ನು ಹುಟ್ಟು ಹಾಕುತ್ತದೆ ಅನ್ನಿಸುತ್ತಿದೆ. ಭಾವತರಂಗದ ಬಗ್ಗೆ ಎರಡು ಮಾತಿಲ್ಲ.
ನನಗೆ ತುಂಬ ಇಷ್ಟವಾಗಿದ್ದು ಮತ್ತೆ ಚಿಗುರೊಡೆಯಲಿರುವ ಕನಸುಗಳಿಗೆ ಅಸುನೀಗಿದ ಕತೆ ಹೇಳುತ್ತಾ ಅವನು ಜೀವನ್ಮುಖಿಯಾಗಹೊರಟಿರುವುದು..
ಇಷ್ಟ ಆಯಿತು
ಪ್ರೀತಿಯಿಂದ
ಸಿಂಧು
Sindhu - December 7, 2007 at 3:23 pm
Bahala sogasada kavite.
Chetana Thirthahalli
chetana - December 7, 2007 at 3:44 pm
[...] ನೆನಪಿಗೆ ಬರಬಾರದು ನೀನು…… [...]
ನೆನಪಿಗೆ ಬರಬಾರದು ನೀನು…… « Kannada, Kannadiga, Kannadigaru, Karnataka, - December 7, 2007 at 6:19 pm
ಸೋಮು ನಮಸ್ಕಾರ,
ತುಂಬಾ ಚನ್ನಾಗಿ ಬರೆದ್ದೀಯಾ., ತುಂಬಾ ದಿನದ ಮೇಲೆ ನೆನಪಿಗೆ ಬಾರದಿರು ನೀನು ಅಂತಾ ನೆನೆಪು ಮಾಡಿಕೊಂಡಿದ್ದಿಯಾ.
ಬರೀತಾ ಇರೋ ಸೋಮಣ್ಣ. ಗುರುವೇ. ಪುರುಸೊತ್ತು ಮಾಡ್ಕೊಂಡು ಆಯ್ತಾ.
Ranjana Hegde - December 8, 2007 at 3:52 am
@santosh
naan yaavattu senti ne ansutte adke naan bariyodralli hecchu heege irutte …thanks
@sindhu
ಅವನು ಜೀವನ್ಮುಖಿಯಾಗಹೊರಟಿರುವುದು antha bardiddiri..idu kevala ondu huduga kavite antha odok hortiro haagide hudugi nu aagabahudalva[:P] thanks sindhu avare [:)]
ranju and chethna thanksp[:0]
navilagari - December 8, 2007 at 4:44 am
neevu kavite barediddire anda koodle naan nim kavite odok munche ne heli bidteeni idu novina kavite antha matte nanage ondu prashna kelbeku nimmadu prema vaifalyada kateyaa? heli somu avare…
tumba muddaagide nimma kavite
kavitha - December 8, 2007 at 4:56 am
hi….somu
good….u know….the pain of life…
but
ಸಾದ್ಯವಾದರೆ ಎರೆಡು ಹನಿ ಕಣ್ಣೀರು ಕೆಡಹು
ನನಗಾಗಿ ಅಲ್ಲ, ನನಗದು ಬೇಕಿಲ್ಲ
ನಿನ್ನ ಕಣ್ಣುಗಳಲ್ಲಿರುವ ಕೆಲವೇ ಕೆಲವು
ನನ್ನ ಕನಸುಗಳು ಈಚೆಗೆ ಬರಬೇಕಿದೆ, …. !!
this is nothing but of pain of death….
keep :)……
take care…ur health….
Aruna
Aruna.R - December 8, 2007 at 6:08 am
somu putta sakhattagide…
anju - December 8, 2007 at 8:44 am
mast chollo aiti,
khushi ato dukkha agakatteto ondu tilia oldu,
thanks dosta
shrishail - December 8, 2007 at 8:50 am
I am happy to see this
Keepitup
Malthesh
Malthesh - December 8, 2007 at 10:24 am
ಅಬ್ಬಾ…
“ನೆನಪಿಗೆ ಬರಬಾರದು ನೀನು” ಅಂತ ಅನ್ನೋದ್ರಲ್ಲಿ ಖಂಡಿತ ಕಾಠಿಣ್ಯ ಇರೋದಿಲ್ಲ. ನೋವು ತುಂಬಿ ಹೋಗಿದೆ. ನೆನಪಿಗೆ ಬರಬೇಕೆಂಬ ತುಡಿತವೂ ಇದೆ… ಅಲ್ವಾ?
ಭಾವನೆ ಮಡುಗಟ್ಟಿದ ಸಾಲುಗಳು ತುಂಬಾ ಇಷ್ಟವಾಯಿತು.
Avinash - December 8, 2007 at 1:11 pm
ಹಾ….. ತುಂಬಾ ತುಂಬಾ ತುಂಬಾ ತುಂಬಾ……………. ಇಷ್ಟಾ ಆಯ್ತು….
‘ಸಾದ್ಯವಾದಷ್ಟು ದೂರವೇ ಇದ್ದು…..
ಎರಡು ಹನಿ ಕಣ್ಣೀರು ಕೆಡಹಿ…….
ಸಾದ್ಯವಾದರೆ ಮತ್ತೆ ನಿನ್ನ ನೆನಪಿಗೆ ಬಾರದಿರುವ………….!’
ಏನವು? ನೆನಪುಗಳಾ?
ಹೀಗೆ ಬರೀತಾ ಇರು….. good luck….
:- ranju.
ranjana - December 8, 2007 at 1:22 pm
Hmm,
Yaako Somu iSTu dina mounavaagidde:-0
Inta ondu kavite huTTu hAkodakka:-/
Tumba chennagide kanda ninna yella kavitegaLa tara..Aadre yAke bari mosa dukha tumbkonDiro kavitegaLanne jAsti baritiyA:-/…Inmele ondiSTu lavlavike kavanagaLanna baritiya anta bhAvastini
Take care
Rohini - December 8, 2007 at 4:14 pm
sikkapatte chennagide maraya kavithe! ist late agi odtaa ideeni!
ಶ್ರೀನಿಧಿ.ಡಿ.ಎಸ್ - January 24, 2008 at 6:55 pm
ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
ವಿಳಾಸ: http://nagenagaaridotcom.wordpress.com/
ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.
ನಗೆ ಸಾಮ್ರಾಟ್
nagenagaaridotcom - January 28, 2008 at 10:24 am
ಸಾದ್ಯವಾದರೆ ಎರೆಡು ಹನಿ ಕಣ್ಣೀರು ಕೆಡಹು
ನನಗಾಗಿ ಅಲ್ಲ, ನನಗದು ಬೇಕಿಲ್ಲ
ನಿನ್ನ ಕಣ್ಣುಗಳಲ್ಲಿರುವ ಕೆಲವೇ ಕೆಲವು
ನನ್ನ ಕನಸುಗಳು ಈಚೆಗೆ ಬರಬೇಕಿದೆ,
ಮರುಭೂಮಿಯಲ್ಲಿ ಮಲ್ಲಿಗೆ ಬೆಳೆಯುವುದಿಲ್ಲವೆಂಬ
ಸತ್ಯವನ್ನ ನನ್ನ ಕನಸುಗಳಿಗೆ ನಾನು ಹೇಳಬೇಕಿದೆ…!
adhbuta ri, nimma kalpane ge saati illa…
lakshmi - February 5, 2008 at 11:37 am
super Soma, wonderful wording
Shree - February 11, 2008 at 8:25 am
ಮನಸಿನ ಭಾವವನ್ನ ತೀವ್ರವಾಗಿ ಕಾಡಿದಾಗ ಇಷ್ಟವಾಗೋದು ಭಾವಗೀತೆಗಳು ಇಲ್ಲಾ ಗಜಲ್ ಗಳು…. ಕನ್ನದಲ್ಲಿ ಈ ಪ್ರಯೋಗ ಮೆಚ್ಚುವಂತದ್ದು …….. ನವಿಲ ಗರಿಯಿಂದ ಮತ್ತಷ್ಟು ದಾರೆ ಹರಿದು ಬರಲಿ….. ” ಅಬ್ ಅಗರ್ ಆವೊ ತೊ ಜಾನೆ ಕೇಲಿಯೆ ಮತ್ ಆನಾ ….. ಸಿರ್ಫ್ ಎಹಸಾಸ್ ಜತಾನೆ ಕೇಲಿಯೆ ಮತ್ ಆನಾ”……
ಬೆಳಗು!
http://www.kannota.blogspot.com/
beLagu - February 18, 2008 at 3:46 pm
ಹೌದು …………
ಚಿಗುರೊಡೆಯುವ ನನ್ನ ಕನಸುಗಳಿಗೆ
ನಾನು ಅಸುನೀಗಿದ ಕತೆಯ ಹೇಳಬೇಕಿದೆ..
ಅಸು ನೀಗಿದ ಮೇಲೂ ಕನಸು ಕಟ್ಟುವುದಿದೆಯಲ್ಲ…..ಅದು ಅಚ್ಚರಿ ಅಮ್ಮನ ಹೊಟ್ಟೆಯಲ್ಲಿ ಆಟವಾಡುವ ಮಗುವಿನಂತೆ
Radhakrishna Anegundi - February 24, 2008 at 8:13 am
THANK U VERY MUCH SOMU……….. NANA ANTHARANGASDA MATHANNA HELIDIYA THANK U VERY MUCH…………………..
vidya - February 28, 2008 at 7:57 pm
ಸಾದ್ಯವಾದರೆ ಎರೆಡು ಹನಿ ಕಣ್ಣೀರು ಕೆಡಹು
ನನಗಾಗಿ ಅಲ್ಲ, ನನಗದು ಬೇಕಿಲ್ಲ
ನಿನ್ನ ಕಣ್ಣುಗಳಲ್ಲಿರುವ ಕೆಲವೇ ಕೆಲವು
ನನ್ನ ಕನಸುಗಳು ಈಚೆಗೆ ಬರಬೇಕಿದೆ,
Soooper…. !!! En maga idu ee level ge touch aagtha ide ……. Simply awesome !
Vishwesh - February 29, 2008 at 6:42 am
chindi aagide devru….
Appi - April 17, 2008 at 6:38 pm
ನಮಸ್ಕಾರ ಸೋಮುರವರೆ,
ಅಬ್ಬಬ್ಬ! ನಿಮ್ಮ ಕವನ ಚಿಂದಿಯಾಗಿದೆ. ನಿಮ್ಮ ಪದಗಳ ಬಳಕೆ ಸೂಪೆರ್. ನಿಮ್ಮ ಕವನಗಳಿಗೆ ಇದೋ ನನ್ನ ನೂರೆಂಟು ನಮಸ್ಕಾರಗಳು.
ರಾಜಣ್ಣ, ಸುಂದರನಾಡು
sundaranadu - July 4, 2008 at 6:10 am