ನಿಮ್ಮ ಭಾವನೆಗೆ ನನ್ನ ಕೆಲವೇ ಕೆಲವು ಪದಗಳು
ಇಲ್ಲಿರುವ ಯಾವುದೇ ಕವಿತೆಗಳಿಗೆ ಮತ್ತು ಹಾಳುಮೂಳು ಬರಹಗಳಿಗೆ ಒಂದು ದೃಷ್ಟಿಕೋನ ಒಂದು ಗುರಿ,ಧ್ಯೇಯ ಯಾವುದು ಇಲ್ಲ.ಇಲ್ಲಿರುವ ಪದಗಳಿಗೆ ಕವಿತೆ ಅನ್ನುವ ಚಂದದ ಹೆಸರಿನಿಂದ ಕರೆಯಬೇಕ? ಅದೂ ತೋಚುತ್ತಿಲ್ಲ.ಕೊನೆಗೆ ಈ ಪದಗಳ ಮೂಲಕ ನಾನು ಏನು ಹೇಳಲಿಕ್ಕೆ ಹೊರಟಿದ್ದೇನೆ ಅಂತ ಕೆಲವೊಂದು ಸಲ ನನಗೂ ಅರ್ಥವಾಗುವುದಿಲ್ಲ. ಇಲ್ಲಿರುವುದೆಲ್ಲ ಕೇವಲ ಹುಚ್ಚು ಮನಸ್ಸಿನ ಭೋರ್ಗರೆತಗಳು ಮಾತ್ರ. ಇವನ್ನ ಕವಿತೆ ಮತ್ತು ಅದ್ಭುತ ಬರಹ ಅಂತ ಓದುವ ನಿಮಗೆ ಮತ್ತು ನಿಮ್ಮ ಸಹನೆಗೆ ಮತ್ತು ಅತ್ಯಮೂಲ್ಯ ಸಮಯಕ್ಕೆ ನಾನು ಅಭಾರಿ…….ಮತ್ತೆ ಇಲ್ಲಿ ಕೆಲವೊಂದು ಸಲ ಕೆಲವು ಘಟನೆಗಳನ್ನ ನೆರವಾಗಿ ಹೇಳಬೇಕಾದ ಸಮಯದಲ್ಲಿ ಅನಿವಾರ್ಯವಾಗಿ ಅಸಂಬದ್ದ ಪದಗಳನ್ನ ಉಪಯೋಗಿಸಲೇ ಬೇಕಾಗುತ್ತದೆ ..ಮಡಿವಂತ ಮಹಾಶಯರು ನನ್ನ ಈ ಒಂದು ತಪ್ಪನ್ನ ಕ್ಷಮಿಸಿಬಿದಬೇಕು…….ಇಂತಿ ನಿಮ್ಮ ಪ್ರೀತಿಯ ನವಿಲುಗರಿ ಹುಡುಗ

ಹನಿ-ಹನಿ

ಅವಳು

ಕನಸುಗಳಿಗೆ
ಕಾರಣಳಾದವಳು
ಕನಸೇ ಆಗಿ ಹೋದವಳು.
——————————-
ಜಾಣತನ

ನಿನ್ನ ತೋಳುಗಳ
ಬಲೆಗೆ ಬೀಳದೆ
ನನ್ನ ಪಿಯೂಸಿ
ಪಾಸುಮಾಡಿಕೊಂಡಿದ್ದು.
——————————-

ಮೂರ್ಖತನ

ನನ್ನ ಕತ್ತಲೆಗೆ
ಬೆಳಕ ನೀಡದ
ನಿನ್ನೆರೆಡು ಕಣ್ಣುಗಳನ್ನ
ಬೆಳಗುವ ದೀಪಗಳಿಗೆ
ಹೋಲಿಸಿ ಪದ್ಯ ಬರೆದಿದ್ದು.
——————————-
ಭಾವನೆಗಳು

ಹೃದಯವೆಂಬ
ತೋಟದಲ್ಲಿನ
ಸುಂದರ ಹೂವುಗಳು
——————————-
ನೀನೆಂದರೆ

ನನ್ನರ್ದ
ಕನಸುಗಳಿಗೆ
ಕಾರಣ..
ಇನ್ನರ್ದ
ನೋವುಗಳಿಗೆ
ಪ್ರೇರಣ.
——————————-

ನೆನಪು

ನನ್ನ ಸಕಲ
ನೊವು ನಿರಾಸೆಗಳಿಗೆ
ನಾನು ಕಂಡುಕೊಂಡ
ಔಷಧ.
——————————-

ಹಾರೈಕೆ

ಹೃದಯಗಳೇ
ನೀವು ಕಳೆದುಕೊಂಡ
ಒಲವೆಲ್ಲ
ಇಂದಲ್ಲ ನಾಳೆ
ಉಲ್ಕೆಗಳ ರೂಪದಲ್ಲಿ
ಸುರಿದು ಬರಲಿ.
——————————-
ತೃಪ್ತಿ

ನಲಿವೇ ಆಗಬೇಕೆಂದಿಲ್ಲ
ನಿನ್ನೊಲವಿನ
ನೋವಾದರೂ ಸಾಕು.
——————————-

ಮಾಯಗಾತಿ.

ಬೆಂಬಿಡದೆ ಕಾಡುತ್ತೇವೆಂದ
ಕಹಿ ಕನಸುಗಳಿಗೆ
ನಿನ್ನ ಒಲವ ಕುರಿತು ಹೇಳಿದೆ
ಪಾಪದ ಕನಸುಗಳು ಕೂಡ
ಕನವರಿಸುತ್ತಿವೆಯಂತೆ ನಿನ್ನ.
——————————-

ಸಾಮ್ಯತೆ.

ನೀನು ನನ್ನಿಂದ
ದೂರಾಗುತ್ತಿರುವುದಕ್ಕೂ
ನಾನು ಸಾವಿಗೆ
ಹತ್ತಿರವಾಗುತ್ತಿರುವುದಕ್ಕು
ಅಂತಹ ವ್ಯತ್ಯಾಸವೇನಿಲ್ಲ ಬಿಡು
——————————-

ಸಾಗರ.

ನಿನ್ನ ಒಲವು
ಮತ್ತು ಅದರ
ವಿಶಾಲತೆಯ ಮುಂದೆ
ಸೋತು ಸುಣ್ಣವಾಗಿದ್ದು.
——————————-

ಹೃದಯ.

ನಿನ್ನನ್ನ ಕಣ್ಣುಗಳಲ್ಲಿ
ತುಂಬಿಕೊಂಡ ದಿನ
ನಲಿದಾಡಿದ್ದು
ದೂರಾಗುತ್ತಲೇ ಅತ್ತು
ಗೋಳಾಡಿದ್ದು.
——————————-

ನಿಜ.

ಗಟ್ಟಿಯಾಗಿ ನಿನ್ನ
ಕೈ ಹಿಡಿದಿದ್ದು
ಆಸೆಯಿಂದಲ್ಲ..
ನನ್ನ ಬಿಟು ಹೋಗುತ್ತೇನೆಂದ
ನಿನ್ನ ಮೇಲಿನ ಬಯದಿಂದ.
——————————-
ಸುಳ್ಳು.

ನನ್ನ ಕನಸಿಗೆ ಪ್ರತಿ ದಿನ
ನೀನು ಬರುವುದೇ
ಇಲ್ಲವೆಂದು ಎದೆತಟ್ಟಿಕೊಂಡು
ನಾನು ಹೇಳಿದ್ದು.
——————————-

ದುರಂತ.

ನಾನು ನಿನಗೆ
ನೆನಪಾಗದಿರುವುದು
ನೀನು ನನಗೆ ನೆನಪೇ ಆಗಿರುವುದು.
——————————-

ಸುಳ್ಳು.

ನಿನ್ನ ಕನಸಿಗೆ ನಾನು
ನನ್ನ ಕನಸಿಗೆ ನೀನು
ಬಂದೇ ಇಲ್ಲವೆಂದು
ಎದೆತಟ್ಟಿಕೊಂಡು ಹೇಳಿದ್ದು.
——————————-

ಗುಲಾಬಿ.

ನನಗಿಂತಲೂ
ಮೊದಲೇ
ನನ್ನವಳ ಬಂಗಾರದ
ಬೆರಳ ಸ್ಪರ್ಶಿಸಿದ
ನನ್ನ ಪ್ರೀತಿಯ ಶತೃ.
——————————-

ಶಾಪ

ದೇವರೇ ಅವನಿಗೋಸ್ಕರ
ಕೂಡಿಟ್ಟ ಅಷ್ಟು
ಕನಸುಗಳಲ್ಲಿ
ಒಂದಾದರು ಸುಳ್ಳಾದರೆ
ನಿನಗೆ ಮರಣ ಬರಲಿ.
——————————-

ಬಾ

ಎದೆಯ ದೀಪ
ಉರಿದು ದಣಿದು
ಆರುವ ಮುನ್ನ.
——————————-
ನಾನು

ನಿನ್ನ ನೆನಪೆಂಬ ನೋವುಗಳ
ಗೋಡೆಗಳಲ್ಲಿ ಪ್ರೀತಿಯ
ಚಿತ್ರ ಬಿಡಿಸುತ್ತ ನಿಂತ
ಒಬ್ಬ ವಿಧೂಷಕಿ ಅಷ್ಟೆ.
——————————-

ಬಯಕೆ

ಈ ಎದೆಯ
ಅಗೆದು ಬಗೆದು ಮೀಟಿ
ತೋಟ ಮಾಡಿ
ನನಗೊಂದು ಗುಲಾಭಿ
ಕೊಡ್ತೀಯಾ ಗೆಳೆಯ..
——————————-

ತುಂಟ

ಗೆಳತಿ ತನ್ನ ಹಣೆಗಿಟ್ಟ
ಅಷ್ಟೂ ಮುತ್ತುಗಳ
ಹೊರತಾಗಿಯೂ, ತನ್ನದೇ
ಕೆನ್ನಗಿಲ್ಲವಲ್ಲವೆಂದು ಜಗಳ ತೆಗೆದ
——————————-

——————————————————
ಇವೆಲ್ಲ ಕನ್ನಡದ ದಿನಪತ್ರಿಕೆ ವಿಜಯ-ಕರ್ನಾಟಕದಲ್ಲಿ ಪ್ರಕಟವಾದಂತವು… :)
——————————————————

4 Responses to “ಹನಿ-ಹನಿ”

  1. ಸೋಮು , ಹುಡುಗಿಯ ಭಾವನೆಗಳನ್ನ ಚೆನ್ನಾಗಿಯೇ ಬಿಂಬಿಸುತ್ತೀಯ. ಆದರೆ, ನಂದೊಂದು ಮಾತು. ಅವರ ದನಿಯಲ್ಲಿ ಬರೆಯುವ ಮುನ್ನ, ಅವರ ದನಿಯನ್ನ ಒಮ್ಮೆ ವಾಸ್ತವದ ದೃಷ್ಟಿಕೋನದಿಂದ ನೋಡಿ, ಅವರು ಅನುಭವಿಸುವ ಅನುಭೂತಿಯನ್ನ ಒಮ್ಮೆ ಅವರನ್ನ ಅವಾಹಿಸಿಕೊಂಡು ಅನುಭವಿಸಿ ಬರೆದರೆ ಇನ್ನೂ ಚೆಂದ ಅನ್ನಿಸುತ್ತದೆ. ಯಾಕೆಂದರೆ, ಹುಡುಗರಾಗಿ ನಾವು ಹುಡುಗಿಯರು ಏನನ್ನ ಬಯಸುತ್ತಾರೆಂದು ನಾವು ಊಹಿಸಿಕೊಳ್ಳುತ್ತೇವೇ ಹೊರತು ಅವರು ಏನನ್ನ ಬಯಸುತ್ತಾರೆಂದು ತಿಳಿದು, ಅನುಭವಿಸಿ ಬರೆಯುವುದನ್ನ ಅಭ್ಯಾಸಿಸಿರುವುದಿಲ್ಲ. ಹಾಗಾಗಿ ಈ ಮಾತು ಹೇಳಿದೆ.

    ಒಮ್ಮೆ ನನ್ ಪಂಚ್ ಲೈನ್, ಪ್ರತಿಸ್ಪಂದನದ ಕಡೆಗೂ ಕಣ್ಣು ಹಾಯಿಸಿ ರಾಯರೆ…! :-)

    Ganesh K - April 18, 2008 at 2:25 pm

  2. somu, chutukagaLu soopar. innashTu chutukagaLa nireeksheyalli
    - vijayraj kannanth

    antarangadaapthaswara - April 19, 2008 at 12:49 pm

  3. ಜಾಣತನ

    ನಿನ್ನ ತೋಳುಗಳ
    ಬಲೆಗೆ ಬೀಳದೆ
    ನನ್ನ ಪಿಯೂಸಿ
    ಪಾಸುಮಾಡಿಕೊಂಡಿದ್ದು.

    ಸಖತ್ತಾಗಿದೆ ಇದು !! [:)] extremely witty !! ಆದರೆ, ಹುಡುಗರು ಹುಡುಗೀರಿಂದಲೇ ಪಿಯೂಸಿ fail ಆಗ್ತಾರೆ ಅನ್ನೋದು ಅಷ್ಟೋಂದು ಸರಿ ಅಲ್ಲ ನೋಡಿ….there might be many other reasons.

    ಚುಟುಕಗಳು ಒಂದಕ್ಕಿಂತ ಒಂದು ಸೂಪರಾಗಿರೋದ್ರಿಂದ….ನನ್ನಂಥಾ ಪಾಮರರಿಗೆ ಒಟ್ಟಿಗೆ Digest ಮಾಡಿಕೊಳ್ಳಲು ಸಲ್ಪ ಕಷ್ಟ…instalment ನಲ್ಲಿ ಕೊಟ್ಟಿದ್ದಿದ್ದ್ರೆ….ನಮಗೆ ಮಹದುಪಯೋಗ ಆಗಿರೋದು !!

    Lakshmi S - April 19, 2008 at 5:58 pm

  4. ganesh nimma salahege tumba tumba abhaari[:)]…vijayraaj ji…nimma haraike heege irali…….

    preethiya lakshmi……………..idu kevala hudugi ge anvayisutte antha yaake ankoteeri? illi yaarannu hesarisilla…hudugiyu aagabahudu huduganu aagabahudu…..barediddu huduga ashte…..ashtu maatrakke heege tilkondu bitre hege? illiruva yellachutukugala kadege gamana harisi…illi yaara paravaagiyu illa yaara viruddavaagiyu illa[:)]……

    nimma
    somu

    ನವಿಲಗರಿ - April 20, 2008 at 7:56 am

Leave a Reply