ಹೇಗಿದ್ದಿಯೋ ಒರಟ ? ಬಿಡೋ ನನಗೆ ಗೊತ್ತಿದೆ. ಯಾವುದೋ ಲೇಡೀಸ್ ಕಾಲೇಜ್ ಮುಂದೆ ನಿನ್ನ ಯಮಹ ಆರ್ ಎಕ್ಸ್ ಬೈಕಿನಲ್ಲಿ ರೌಂಡಿಂಗ್ ಮಾಡ್ತಿರ್ತಿಯ, ನೀನು ನಿನ್ನ ಆ ಡಬ್ಬಾ ಗಾಡಿ ನ ಓಡ್ಸೋ ಸ್ಪೇಡಿಗೇನೆ ಎಷ್ಟೋ ಹುಡುಗೀರ ಎದೆಯಲ್ಲಿ ಅವಲಕ್ಕಿ ಕುಟ್ಟುತಿರ್ತೀಯ, ಯಾವ ಹುಡುಗಿ ನೋಡೋಕೆ ವೈನಾಗಿದ್ದಾಳೆ ಅಂತ ಕಣ್ಣಲ್ಲೆ ಬೇಟೆಯಾಡುತಿರ್ತೀಯ, ನೋಡೋ ನಿನ್ನ ಎಲ್ಲಾ ದಶಾವತಾರಗಳನ್ನು ನಾನು ಬಲ್ಲೆ. ಆದರೆ ನಿನ್ನ ಆ ಅಮಾಯಕ? ಕಣ್ಣುಗಳಲ್ಲಿದೆಯಲ್ಲಾ ಆ ಅಮಾಯಕತೆ..! ನಿನ್ನೆಲ್ಲಾ ತರಲೆಗಳನ್ನ ಕ್ಷಮಿಸುವಂತೆ ಮಾಡುತ್ತೆ ಕಣೋ. ಎಷ್ಟು ಚೆಂದವಿದ್ದಾವೋ ನಿನ್ನ ಈ ಜಿಂಕೆ ಕಣ್ಣುಗಳು? ಒಂದೇ ಒಂದು ಸಲ ಮುತ್ತಿಡಲ? ಪ್ಲೀಸ್ ಕಣೋ. ಯಾಕೋ ಇಷ್ಟು ಹತ್ತಿರವಾಗಿ ಬಿಟ್ಟೆ ಬಿಟ್ಟಿರಲಾರದಷ್ಟು ?ಮುದ್ದು ಒರಟ, ಐ ಲವ್ ಯೂ ಗೊತ್ತ.
ಒಂದು ದಿನಾ ಆದ್ರು ತಲೆ ಬಾಚಿದ್ದಿಯೇನೊ ತರಲೆ? ಎಷ್ಟು ದಿನ ಆಯ್ತೊ ನಿನ್ನ ಕುರುಚಲು ಗಡ್ಡಗಳಿಗೆ ಬ್ಲೇಡು ತಾಗಿಸಿ? ಬೆಂಗಳೂರಿನ ಅಷ್ಟೂ ರಸ್ತೆಗಳನ್ನ ನಿನ್ನ ಹರಕಲು ಮುರುಕಲು ಜೀನ್ಸ್‌ಲ್ಲೆ ಗುಡಿಸಿ ಸ್ವಚ್ಚ ಮಾಡುತ್ತೀಯಲ್ಲೊ? ನೋಡೋ ನಿನಗೇ ಅಂತಾನೆ ಮಿಂಚಿಂಗ್ ಮಿಂಚಿಗ್ ಡ್ರೆಸ್ಸೆಲ್ಲ ಹಾಕೊಂಡು ಕ್ಲಾಸಿನ ಮೊದಲ ಬೆಂಚಲ್ಲೆ ನಿನ್ನ ಕಣ್ಣುಗಳ ಬೇಟೆಯಾಡಲು ಕುಳಿತರೆ, ನಿನೇನೋ ಆ ಕುಂದಾಪುರದ ಕೋಮಲಾಂಗಿ ಪಕ್ಕದಲ್ಲೆ ಕುಳಿತುಕೊಂಡು ಹಲ್ಲುಗಿಂಜುವುದು? ಅದು ಅಲ್ಲದೇ ನಿಂದೇನು ಆ ಹಿಸ್ಟರಿ ಟೀಚರಮ್ಮ ಬಾಯಿಬಡಕಿ ಆಂಟಿಯ ಜೊತೆ ಕಣ್ಣು ಸನ್ನೆ ಬಾಯಿ ಸನ್ನೆ? ನನಗೆ ತುಂಬಾ ಕೋಪ ಬರತ್ತೆ ಕಣೋ, ಆ ಕೋಪದಲ್ಲಿ ಹಂಗೆ ನಿನ್ನ ತಬ್ಬಿಕೊಂಡು ನಿನ್ನ ಉಸಿರುಗಟ್ಟಿಸಿ ಹಾಗೆ ನಿನ್ನ ಕಣ್ಣುಗಳಿಗೆ ಲೊಚ್ಚ್ ಅಂತ ಒಂದು ಮುತ್ತು ಕೊಟ್ಟು ಬಿಡ್ತೀನಿ ನೋಡು.
ಎಷ್ಟು ಹುಡುಗೀರನ್ನ ನೋಡಿದ್ದೀಯ ನೀನು? ಅದಕ್ಕಿಂತ ಜಾಸ್ತಿನೇ ಜೊಲ್ಲು ಜೊಲ್ಲು ಹುಡುಗರನ್ನ ನಾನು ನೋಡಿದ್ದೀನಿ ಕಣೊ. ಆದರೆ ಯಾವತ್ತು ನಿನ್ನ ಹಾಗೆ ಅಮ್ಮಾ ತಾಯಿ ಅಂತ ಹೋಗಿಲ್ಲ ತಿಳ್ಕೋ. ಜೀವನ ಅಂದ್ರೆ ಒಂದು ಹುಡುಗಿಯ ತೋಳ ತೆಕ್ಕೆಯಲ್ಲಿ ಕರಗಿ ನೀರಾಗುವುದು ಅಂದುಕೊಂಡಿದ್ದೀಯೇನೊ ಬೆಪ್ಪ? ಎಷ್ಟು ದಿನ ನೀನು ಆ ಜೋಷ್ ನಲ್ಲಿರ್ತೀಯ ? ಎಷ್ಟು ದಿನ ನೀನು ಆ ಖುಷಿನಲ್ಲಿರ್ತೀಯ? ಇವೆಲ್ಲ ನೀರ ಮೇಲಿನ ಗುಳ್ಳೆಗಳು ಕಣೊ. ಬಾ ಜೀವನ ಅಂದ್ರೆ ನಾನು ನಿನಗೆ ಹೇಳಿ ಕೊಡ್ತೀನಿ, ನೀನು ನನಗೆ ಹೇಳಿ ಕೊಡು. ಜೀವನ ಪೂರ್ತಿ ನಾವಿಬ್ರೂ ಜೊತೆಯಾಗಿರಬಹುದು ಕಣೊ.ನಿನ್ನೆಲ್ಲ ತರಲೆ ತಾಪತ್ರಯಗಳ ಹೊರತಾಗಿಯೂ.
ನಿಜ ಹೇಳೋ ನನಗೇನಾಗಿದೆ? ಹಿಸ್ಟರಿ ಟೀಚರಮ್ಮ ತರ ಗುಂಡುಗುಂಡಾಗಿದ್ದೀನ? ಅಥವ ನಿನ್ನ ಕುಂದಾಪುರದ ಕೋಮಲಾಂಗಿ ತರ ಸಣಕಲು ಬಡಕಲು ಮೇಕೆ ತರ ಇದ್ದೀನ? ಒಂದು ಸಲ ನೋಡೊ ನನ್ನ , ಸುಮ್ಮನೆ ನನ್ನ ಮುಟ್ಟಬೇಕೆಂದರೂ ನೀನು ಕೈತೊಳೆದು ಮುಟ್ಟಬೇಕು ಕಣೊ ಹಾಗಿದ್ದೀನಿ. ಜೊತೆಗೆ ನಿನಗೇ ಅಂತಾನೆ ಜೋಪಾನವಾಗಿಟ್ಟುಕೊಂಡಿರುವ ಬಂಗಾರದಂತಹ ಹೃದಯ..! ಆದರೆ ನೀನು? ಮುಟ್ಟಿ ಕೈತೊಳೆದುಕೊಳ್ಳಬೇಕು ಹಾಗಿದ್ದೀಯ ಒರಟ, ನೋಡು ಪ್ರೀತಿಗೆ ಬಣ್ಣದ ಹಂಗಿಲ್ಲ ಕಣೊ, ನಿನ್ನ ಒರಟುತನ, ನಿನ್ನ ಸೋಮಾರಿತನ, ನಿನ್ನ ಅಲೆಮಾರಿತನ, ನಿನ್ನ ಲೋಲುಪತನ ನಿನ್ನ ಹೆಣ್ಣುಬಾಕತನ, ಇದ್ಯಾವುದು ನಿನ್ನ ಮೇಲಿರುವ ನನ್ನ ಆರಾಧನಾಭಾವವನ್ನ ಕಡಿಮೆಮಾಡದು ಕಣೊ . ನನಗೆ ಬೇಕೆಂದರೆ ಸಾಲು ಸಾಲು ಜೊಲ್ಲು ಮುಖದ ಹುಡುಗರನ್ನ ಸಾಲು ಸಾಲಾಗಿ ನಿಲ್ಲಿಸ್ತೀನಿ ಕಾಲೇಜಿನ ಕಾಂಪೌಂಡಿನ ಮುಂದೆ. ಆದರೆ ಅವರ ಕಣ್ಣುಗಳಲ್ಲಿ ನನ್ನ ಚಿತ್ರ ಕಾಣೊಲ್ಲಗೊತ್ತ. ಅದು ನಿನ್ನ ಕಣ್ಣುಗಳಲ್ಲಿ ಮಾತ್ರ ಕಣೋ. ಈ ಸಲದ ನಿನ್ನ ಯಮಹ ಬೈಕಿನ ಸಂಜೆಯ ಹುಡುಗಿಯರ ಕಾಲೇಜಿನ ರೌಂಡಿಂಗ್ಸ್ ಗೆ ನಾನು ಜೊತೆಯಾಗಿರ್ತೀನಿ. ನೋಡೋಣ ಅದ್ಯಾರು ನಿನ್ನ ಈ ಕೋತಿ ಮೂತಿಗೆ ಮರುಳಾಗ್ತಾರೆ ಅಂತ..ಯಾರಾದ್ರು ನಿನ್ ಕಡೆ ನೋಡ್ಲಿ, ಹಂಗೆ ಕಣ್ಣು ಕಿತ್ತಾಕಿಬಿಡ್ತೀನಿ. ನೀನು ಇಷ್ಟೊಂದು ಒರಟ ಆದ್ರೆ ನಾನಾಗಬಾರದೇನೊ? ಆದ್ರೆ ನೋಡೊ ಮನಸ್ಸು ಮಾತ್ರ ನವಿಲುಗರಿಯ ಹಾಗೇನೆ ಗೊತ್ತ. ಒಂದು ಸಲ ಸುಮ್ಮನೆ ಈ ಎದೆಯೊಳಗೆ ಬಾ…ನಿನ್ನ ಜೋಪಾನವಾಗಿ ಬಚ್ಚಿಟ್ಟುಕೊಳ್ಳುತ್ತೀನಿ.ನೀನು ಅಲ್ಲಿರುವ ನಿನ್ನದೇ ಹಾಡುಗಳನ್ನ ನನ್ನ ರಾಗದಲ್ಲೇ ಹಾಡುವಂತೆ. ಜಗತ್ತಿಗೆಲ್ಲ ಪ್ರೇಮಗೀತೆ ಅಮಲು ಹತ್ತಿಕೊಳ್ಳುವಂತೆ ಮಾಡೋಣ. ಏನಂತೀಯೊ ಓರಟ?
January 10, 2009 at 11:14 am
ತುಂಬಾ ಚೆನ್ನಾಗಿ ಬರಿತೀರಿ ಸೋಮು ಅವರೇ. ವಾಕ್ಯಗಳನ್ನು ತುಂಬಾ ತಮಾಷೆಯಾಗಿಯೂ ಅದರಲ್ಲಿ ಅರ್ಥ ಇರುವ ಹಾಗೆಯೂ ನೋಡಿಕೊಂಡು ಹೇಗೆ ಬರೀತೀರೋ ನಾ ಕಾಣೆ. ನಾನಂತೂ ನಿಮ್ಮ ಬ್ಲಾಗ್ನಲ್ಲಿರುವುದನ್ನು ಒಂದೂ ಬಿಡದೆ ಓದುತ್ತೇನೆ. ಆದರೆ ನನ್ನದು ಇದು ಮೊದಲ ಕಮೆಂಟ್. ನಿಮ್ಮ ಪರಿಚಯ ಮಾಡಿಕೊಂಡ ಬಗೆಯೂ ಸೂಪರ್…
January 11, 2009 at 12:38 pm
very well written blog.
keep up the good work
January 12, 2009 at 7:48 am
somanna adeshtu sala odiddini gotta. ninu hudga hogi hudugi yavaga adiyo yeshtu hotte uri kano ninage ninu baiyo riti nodi nagu bantu kano
ನಿನ್ನ ಕುಂದಾಪುರದ ಕೋಮಲಾಂಗಿ ತರ ಸಣಕಲು ಬಡಕಲು ಮೇಕೆ yari make
nanagottu hela beda alva
innu bari somanna
January 12, 2009 at 3:11 pm
ಮೊದಲು ಈ ಪತ್ರವನ್ನ ಓದಿದಾಗ ಯಾವುದೋ ಹುಡುಗಿಯೇ ಬರೆದಿರಬೇಕು ಅಂದುಕೊಂಡೆ…ಆಮೇಲೆ ನಿಮ್ಮ ಬಗ್ಗೆ ತಿಳಿದುಕೊಂಡೆ..ಹುಡುಗಿಯರ ಭಾವನೆಗಳನ್ನೇ ತುಂಬಾ ಪತ್ರಗಳಲ್ಲಿ ಹೇಳಿದ್ದೀರಲ್ಲವ ಇದು ಹೇಗೆ ಸಾದ್ಯ? ತುಂಬ ಅದ್ಭುತ ಬರಹ ಅಂತ ಒಪ್ಪಿಕೊಳ್ಳಲು ಕಷ್ಟವಾದರೂ ಒಪ್ಪಿಕೊಳ್ಳದೇ ಇರೋಕು ಕೂಡ ನನಗೆ ಸಾದ್ಯವಾಗುತ್ತಿಲ್ಲ ! ಒಂದೊಳ್ಳೆ ಬ್ಲಾಗನ್ನ ಪರಿಚಯಿಸಿದ ಕೆಂಡಸಂಪಿಗೆ ಗೆ
ಥಾಂಕ್ಸ್ ! ಮತ್ತೆ ನಿಮಗೊಂದು ದೊಡ್ಡ ಥ್ಯಾಂಕ್ಸ್ !
January 15, 2009 at 5:59 pm
Somu super kano…inta bhavaneya hudgiru iglu irtara??? Anta Hudgine ninge sigli kano:)
January 16, 2009 at 7:56 am
superro superru. sakhath ishta aaythu .
January 19, 2009 at 8:24 pm
tumba chenaag ide..
liked all ur old posts under “love cheeti”
nice work.. hinge baritaane iri…
January 27, 2009 at 5:23 pm
??????????????
February 7, 2009 at 4:28 pm
Hey,nimma luv cheeti chennagide kanri.,..
-nimma ‘haagesummane’ puneeth
March 25, 2009 at 4:55 pm
ನಿನ್ನ ಜೋಪಾನವಾಗಿ ಬಚ್ಚಿಟ್ಟುಕೊಳ್ಳುತ್ತೀನಿ.ನೀನು ಅಲ್ಲಿರುವ ನಿನ್ನದೇ ಹಾಡುಗಳನ್ನ ನನ್ನ ರಾಗದಲ್ಲೇ ಹಾಡುವಂತೆ. ಜಗತ್ತಿಗೆಲ್ಲ ಪ್ರೇಮಗೀತೆ ಅಮಲು ಹತ್ತಿಕೊಳ್ಳುವಂತೆ ಮಾಡೋಣ. ಏನಂತೀಯೊ ಓರಟ?
Simply superb
March 31, 2009 at 9:30 pm
Nija nija nanu varatane……………..
ಯಾರಾದ್ರು ನಿನ್ ಕಡೆ ನೋಡ್ಲಿ, ಹಂಗೆ ಕಣ್ಣು ಕಿತ್ತಾಕಿಬಿಡ್ತೀನಿ. edondu line nodidre tiliyutte kane ninage nanna pritiso ella hakkide anta.Sanje collage munde kayta yirtine bandbidu hage summane vandu round tirugadikondu barona.Nanu node bidteni estu janara kannu kittu hakteya anta……….
September 8, 2009 at 7:40 pm
nice one Somu… this is also a person by name Somu. glad to know you.
September 16, 2009 at 8:42 am
Somu next article plzzzzzzzzz we r waiting!!!!