ಕೂಡಲೇ ಅವಳಲ್ಲಿ ಒಂದು ಸುಳ್ಳು ಹೇಳಬೇಕಿತ್ತು ಇವನು. ಅವಳ ಕಣ್ಣುಗಳ ನೋಡಿ ತಡವರಿಸುತ್ತಲೇ ಸತ್ಯ ಹೇಳಿ ಒಂದು ಮುತ್ತು ಪಡೆದುಕೊಂಡ…!
——————————————————————-
ಮದುವೆಯಾಯಿತು.ಅವನು ಬದುಕಲು ಬೇಕಾಗುವ ಸಾಮಾನುಗಳ ಪಟ್ಟಿ ತಯಾರಿಸುತ್ತಿದ್ದ.
ಮತ್ತೆ ಇವಳ ಮುಖವನ್ನೊಮ್ಮೆ ನೋಡಿದ .ಸಾಮಾನುಗಳ ಪಟ್ಟಿ ಯಾಕೋ ಪೂರ್ತಿಯಾಗಲಿಲ್ಲ.
——————————————————————-
ಅದೆಷ್ಟೋ ಹಾಡುಗಳನ್ನ ಬರೆದಿದ್ದ. ಈಗ ಒಂದು ಬರೆಯಲಾಗುತ್ತಿಲ್ಲ ಅನ್ನುತ್ತಿದ್ದಾನೆ. ಮತ್ತೆ ಅವಳು ನೆನಪಾಗುತ್ತಿದ್ದಾಳೆ..ನೆನಪಾಗುತ್ತಿಲ್ಲ ಅನ್ನುತ್ತಿದ್ದಾನೆ…!
——————————————————————-
ಬಂಜೆ ಅಂದು ಮೂದಲಿಸಿದರು ಮಂದಿ. “ ನಿನಗೆ ನಾನು ಮಗು ನನಗೆ ನೀನು ಮಗು” ಅನ್ನುವ ತನ್ನವನ ಮಾತು ನೆನಪಾಗಿ ದುಃಖ ಕಮ್ಮಿ ಮಾಡಿಕೊಂಡಳು…!
——————————————————————-
ತಾನೆಷ್ಟು ಪ್ರೀತಿಸುತ್ತೇನೆ ಅಂತ ತನ್ನ ಗೆಳತಿಗೆ ಹೇಳುತ್ತಿದ್ದ. “ಎಷ್ಟು ಪ್ರೀತಿಸ್ತೀಯ” ಅಂದು ಕಣ್ಣು ಮಿಟುಕಿಸಿದಳು. ಇವನಿಗೆ ಆಕಾಶದಲ್ಲಿನ ನಕ್ಷತ್ರಗಳ ಲೆಖ್ಖ ಸಿಗಲಿಲ್ಲ.
——————————————————————-
ಪ್ರೀತಿಸಿದ್ದನ್ನ ಕುಷಿಯಿಂದ ಪುಟಗಟ್ಟಲೇ ಬರೆದುಕೊಂಡಳು.. ದ್ವೇಶಿಸಿದ್ದನ್ನ ಬಿಕ್ಕಳಿಸುತ್ತ ಒಂದು ಸಾಲು ಬರೆಯಲಾಗದೆ ಖಾಲಿಯಾದಳು.!
——————————————————————-
ಚಂದನೆಯ ಹೆಸರಿನ ಗೆಳೆಯ ಸತ್ತು ಹೋಗಿದ್ದ. ಹಾಳುಜನ ಕೂಡಲೇ ಅವನಿಗೊಂದು ಹೆಸರಿಟ್ಟಿದ್ದರು. “ಬಾಡಿ” ಇನ್ನು ಬಂದಿಲ್ಲವಂತೆ ಅನ್ನುತ್ತಿದ್ದರು.
——————————————————————-
“ ನನಗಿಷ್ಟ ಇಲ್ಲ ನೀನು” ಅಂದವನನ್ನೊಮ್ಮೆ ನೋಡಿದಳು. “ಮೊದಲು ನಾನಾಡಿದ ಮಾತುಗಳನ್ನ ಕಾಪಿ ಮಾಡ್ತೀಯೇನೊ” ಅಂದು ನಕ್ಕಳು. ಅವನು ನಗಲಿಲ್ಲ. ಮತ್ತೆ ಅವಳು ಯಾವತ್ತೂ ನಗಲಿಲ್ಲ.
——————————————————————-
ಗೆಳೆಯ ಗೆಳತಿಗೆ ದೇವರು ಪ್ರತ್ಯಕ್ಷವಾಗಿ ಏನು ವರ ಬೇಕು ಅಂತ ಕೇಳಿದ. “ಒಂದಿಷ್ಟು ಚಳಿಗಾಲ ಪ್ಲೀಸ್”ಅಂದು ಇಬ್ಬರೂ ನಕ್ಕರು.
——————————————————————-
ಒಂದು ದಿನ ತುಂಬಾ ಸುಂದರವಾದ ಹೂವುಗಳ ಓಟದ ಸ್ಪರ್ಧೆ ನಡೆಯಿತು. ನನ್ನವಳಿಗೆ ಮೊದಲ ಬಹುಮಾನ ಸಿಕ್ಕಿತು.
——————————————————————-
(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)
February 2, 2009 at 2:16 pm
ಚೆನ್ನಾಗಿವೆ.
-ಕೇಶವ (www.kannada-nudi.blogspot.com)
February 3, 2009 at 5:37 am
ನಮಸ್ತೆ ಸೋಮಣ್ಣ
ಕೂಡಲೇ ಅವಳಲ್ಲಿ ಒಂದು ಸುಳ್ಳು ಹೇಳಬೇಕಿತ್ತು ಇವನು. ಅವಳ ಕಣ್ಣುಗಳ ನೋಡಿ ತಡವರಿಸುತ್ತಲೇ ಸತ್ಯ ಹೇಳಿ ಒಂದು ಮುತ್ತು ಪಡೆದುಕೊಂಡ…!
ಬಂಜೆ ಅಂದು ಮೂದಲಿಸಿದರು ಮಂದಿ. “ ನಿನಗೆ ನಾನು ಮಗು ನನಗೆ ನೀನು ಮಗು” ಅನ್ನುವ ತನ್ನವನ ಮಾತು ನೆನಪಾಗಿ ದುಃಖ ಕಮ್ಮಿ ಮಾಡಿಕೊಂಡಳು…!
ಅದೆಷ್ಟೋ ಹಾಡುಗಳನ್ನ ಬರೆದಿದ್ದ. ಈಗ ಒಂದು ಬರೆಯಲಾಗುತ್ತಿಲ್ಲ ಅನ್ನುತ್ತಿದ್ದಾನೆ. ಮತ್ತೆ ಅವಳು ನೆನಪಾಗುತ್ತಿದ್ದಾಳೆ..ನೆನಪಾಗುತ್ತಿಲ್ಲ ಅನ್ನುತ್ತಿದ್ದಾನೆ…!
ನೀನು ಬರೆದ ಈ ಸಾಲುಗಳಲ್ಲಿ ಈ ಮೂರೂ ಸಾಲುಗಳು ಮಾತ್ರ ಮನಸ್ಸಿಗೆ ಹಿಡಿಸಿದವು
ಇನ್ನೂ ಚೆನ್ನಾಗಿ ಬರೆಯೋ ಸೋಮಣ್ಣ
February 3, 2009 at 10:39 am
“ಗೆಳೆಯ ಗೆಳತಿಗೆ ದೇವರು ಪ್ರತ್ಯಕ್ಷವಾಗಿ ಏನು ವರ ಬೇಕು ಅಂತ ಕೇಳಿದ. “ಒಂದಿಷ್ಟು ಚಳಿಗಾಲ ಪ್ಲೀಸ್”ಅಂದು ಇಬ್ಬರೂ ನಕ್ಕರು.
ಒಂದು ದಿನ ತುಂಬಾ ಸುಂದರವಾದ ಹೂವುಗಳ ಓಟದ ಸ್ಪರ್ಧೆ ನಡೆಯಿತು. ನನ್ನವಳಿಗೆ ಮೊದಲ ಬಹುಮಾನ ಸಿಕ್ಕಿತು.”
ಚೆನ್ನಾಗಿವೆ.
-ಶೆಟ್ಟರು
February 3, 2009 at 11:26 am
NICE
February 3, 2009 at 9:53 pm
Sooper Somanna ! Continue maadi !!
Koneyadu tumba hidisitu !
February 5, 2009 at 7:03 am
ಗುರುಗಳೇ,
ಎಲ್ಲಾ ಸೂಪರ್, ಆದರೆ ಇದನ್ನು ಕತೆಗಳ ರೂಪದಲ್ಲಿ ಹಾಕಿ ಹನಿಗವಿತೆಗಳಿಗೆ ಅನ್ಯಾಯ ಮಾಡ್ತಿದ್ದೀರಿ ಅನ್ನಿಸ್ತಿದೆ.
ಪ್ರತೀ ಕತೆಯಲ್ಲೂ “ಹನಿ” ತುಂಬಿ ತುಳುಕ್ತಿದೆ..:)
February 7, 2009 at 8:56 am
ಓದಿ ಭಾಳ ಕುಷಿಯಾಯಿತು..ಜೊತೆಗೆ ಪ್ರತಿಕ್ರಿಯೆಗಳೂ…
-ಚಿತ್ರಾ
February 10, 2009 at 8:33 am
ಮುದ್ದು-ಮುದ್ದಾಗಿದೆ ಚೋಮು…..
February 10, 2009 at 1:13 pm
two lines stories: superb.. new concept!!!
beautiful… somu boss!!!
February 28, 2009 at 3:56 pm
Soooooooooooooparo soooooooooooooparu..
March 13, 2009 at 3:06 pm
ಪ್ರೀತಿಸಿದ್ದನ್ನ ಕುಷಿಯಿಂದ ಪುಟಗಟ್ಟಲೇ ಬರೆದುಕೊಂಡಳು.. ದ್ವೇಶಿಸಿದ್ದನ್ನ ಬಿಕ್ಕಳಿಸುತ್ತ ಒಂದು ಸಾಲು ಬರೆಯಲಾಗದೆ ಖಾಲಿಯಾದಳು.!
“ ನನಗಿಷ್ಟ ಇಲ್ಲ ನೀನು” ಅಂದವನನ್ನೊಮ್ಮೆ ನೋಡಿದಳು. “ಮೊದಲು ನಾನಾಡಿದ ಮಾತುಗಳನ್ನ ಕಾಪಿ ಮಾಡ್ತೀಯೇನೊ” ಅಂದು ನಕ್ಕಳು. ಅವನು ನಗಲಿಲ್ಲ. ಮತ್ತೆ ಅವಳು ಯಾವತ್ತೂ ನಗಲಿಲ್ಲ.
ಒಂದು ದಿನ ತುಂಬಾ ಸುಂದರವಾದ ಹೂವುಗಳ ಓಟದ ಸ್ಪರ್ಧೆ ನಡೆಯಿತು. ನನ್ನವಳಿಗೆ ಮೊದಲ ಬಹುಮಾನ ಸಿಕ್ಕಿತು.
March 13, 2009 at 3:06 pm
chenagide yella
April 13, 2009 at 11:11 am
“Modalu nanadida matugalanna copy madtiyeno” andu nakkalu. avanu nagalilla. matte avalu yavattu nagalilla. nimage ee matugaladru ellinda sigutte, ellara dinanityada padagale adaru nimma matugalalleno helalagada arthavondide.
April 17, 2009 at 4:08 am
ಸುಂದರವಾದ ಸಂಗ್ರಹ..
ಮನಸ್ಸಿನ ಮೇಲೆ ಪರಿಣಾಮ ಬೀರಿದವು……..
ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ
April 17, 2009 at 12:47 pm
ಇಚ್ಚಿಸಿದವು ನಿಮ್ಮ ಸಾಲುಗಳು!
ಆದ್ರೆ ಕೆಲವು ತಪ್ಪುಗಳು ಕಾಣಸಿಗುತ್ತವೆ.
ಮುಂದೆ ತಪ್ಪಾಗದಂತೆ ಎಚ್ಚರಿಕೆ ವಹಿಸಿ.ಸಹಾಯಕ್ಕೆ ನಾನು!
June 2, 2009 at 12:11 pm
Very nice…
October 15, 2009 at 7:01 am
“ ನನಗಿಷ್ಟ ಇಲ್ಲ ನೀನು” ಅಂದವನನ್ನೊಮ್ಮೆ ನೋಡಿದಳು. “ಮೊದಲು ನಾನಾಡಿದ ಮಾತುಗಳನ್ನ ಕಾಪಿ ಮಾಡ್ತೀಯೇನೊ” ಅಂದು ನಕ್ಕಳು. ಅವನು ನಗಲಿಲ್ಲ. ಮತ್ತೆ ಅವಳು ಯಾವತ್ತೂ ನಗಲಿಲ್ಲ.
A hudga helida mathanu nanu nan huduganige helide. Preethige mosa madida e peddu hudugina kshmiso gelaya.