shhhh

ಯಾರಲ್ಲಿ?..!
ಈಗಷ್ಟೇ ಹದಿನಾರು ತುಂಬಿ ಹದಿನೇಳು ಅಷ್ಟೇ.. ಅಷ್ಟೇನಾ? ನಿಜ ಹೇಳ್ಬೇಕು ಅಂದ್ರೆ ಹುಡುಗೀರು ನಮ್ ನಮ್ ವಯಸ್ಸನ್ನ ಕುಚ್ ಕುಚ್ ಕಮ್ಮಿ ನೇ ಹೇಳ್ಕೊಳ್ಳೋದು. ನಿಜ ಹೇಳಬೇಕು ಅಂದ್ರೆ ನನಗೆ ಹದಿನೇಳಾಗಿ ಒಂದು ವರ್ಷ ಆಯ್ತಪ್ಪ ! ಇಲ್ಲಿವಯವರೆಗು ನಾನಾಯ್ತು, ನನ್ನ ಪುಸ್ತಕಗಳಾಯ್ತು, ನನ್ನ ಪುಟಾಣಿ ಸ್ಕೂಟಿ, ನಮ್ಮಪ್ಪಾಮ್ಮ ನನ್ ಕೆಲ್ವು ಜಿಗ್ರಿ ದೋಸ್ತುಗಳಾಯ್ತು ಅಂತ ಇದ್ಬಿಟ್ಟೆ. ಮತ್ಯಾಕೆ ಈ ಪತ್ರ ಬರೆಯುವ ಉಮೇದು ಬಂದಿದ್ದು ಅಂತ ಕೇಳಬೇಡಿ..ನಾಚಿ ನೀರಾಗಿ ಹೋಗ್ಬಿಡ್ತೀನಿ ಅಷ್ಟೆ. ಹೊರಗೆಲ್ಲೋ ಅಪಾಚ್ಚಿ ಬೈಕಿನ ಸದ್ದು ಕೇಳಿದರೆ ನನಗ್ಯಾಕೊ ಇಲ್ಲಿ ಸುಮ್ನಿರೋಕಾಗ್ತಿಲ್ಲ! ಅದ್ಯಾರೋ ಪೋಲಿ ಹುಡುಗನ ಬೆನ್ನಿಗೆ ತನ್ನನ್ನಂಟಿಸಿಕೊಂಡು ಕುಳಿತಿರುವ ಆ ಹುಡುಗಿ ನನ್ನ ಸವತಿಯೇನೋ ಅನ್ನಿಸಿಬಿಡತ್ತೆ. ಪುಸ್ತಕವನ್ನ ಎದೆಗೊತ್ತಿಕೊಂಡು ಸುಮ್ಮನೆ ತಲೆಬಗ್ಗಿಸಿ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಮೊದ್ಲಿನ್ ತರ ಓಡಡೋಕ್ ಆಗ್ತಿಲ್ಲ. ಕಣ್ಣು ಕ್ಯಾಂಪಸ್ಸಿನಲ್ಲಿ ಕುಳಿತ ಚಂದನೆಯ ಕಣ್ಣುಗಳ ಭೇಟೆಯಾಡುತ್ತೆ. ಮನೇನಲ್ಲಿ ಸುಮ್ಮನೆ ಸೀರೆ ಸುತ್ತಿಕೊಂಡು ಕನ್ನಡಿ ಮುಂದೆ ನಿಂತ್ಕೊಂಡು ಬಿಟ್ರೆ ನಿಮಿಷ ಘಂಟೆಗಳೆಲ್ಲ ಆತ್ಮಹತ್ಯೆ ಮಾಡ್ಕೋತಾವೆ. ಅಮ್ಮ ಅನುಮಾನದ ಕಣ್ಣುಗಳಲ್ಲಿ ನೋಡ್ತಾಳೆ. ನಾನು ಸುಮ್ಮನೆ ತುಂಟನಗು ನಕ್ಕು ಬಾಗಿಲು ಹಾಕೊಂಡ್ಬಿಡ್ತೀನಿ. ದಿಂಬು ಉಸಿರುಗಟ್ಟಿ ಸಾಯುತ್ತೆ. ಮತ್ತೇ ಮತ್ತೇ ಮುಂದೇ ಎನ್ ಗೊತ್ತ?..ಬೇಡ ಸೆನ್ಸಾರ್ ಕಟ್ ಪ್ಲೀಸ್..!
ಪ್ಲೀಸ್ ಬೈಯ್ಕೋಬೇಡಿ ನಾನು ತುಂಬಾ ತುಂಬಾ ಒಳ್ಳೆ ಹುಡುಗಿ ಗೊತ್ತ !

ನಿಜ ಕಣ್ರಿ ಐ ಯಾಮ್ ಇನ್ ಲವ್ ! ಹಾಗಂತ ಇನ್ನೂ ಯಾರನ್ನೂ ಇಷ್ಟಪಟ್ಟಿಲ್ಲ! ನನಗೂ ಒಬ್ಬ ಗೆಳೆಯ ಅಂತ ಇದ್ದಿದ್ರೆ ಅನ್ನಿಸೋಕೆ ಶುರುವಾಗಿದೆ ! ಕ್ಯಾಂಪಸ್ಸಿನ ಮಸಾಲ ದೊಸೆಯನ್ನ ಇಬ್ಬರೂ ಹರಿದು ಮುರಿದು ತಿನ್ನಬೇಕು ಅನ್ನಿಸ್ತಿದೆ, ಯಾವುದಾದರೂ ಎರೆಡು ಕಣ್ಣುಗಳೂ ಸುಮ್ಮನೆ ನನ್ನೇ ನೋಡ್ಬೇಕು ಅನ್ನಿಸ್ತಿದೆ, ಅವನ ತಬ್ಬಿಕೊಂಡು ಹಿ ಈಸ್ ಮೈ ಡ್ರೀಮ್ ಬಾಯ್ ಅಂತ ನನ್ನ flirt ಗೆಳತಿಯರ ಮುಂದೆ ನಿಲ್ಬೇಕು ಅನ್ನಿಸ್ತಿದೆ. ಈ ಹೆಗಲ ಮೇಲೆ ಒಂದಿಷ್ಟು ಕೇಜಿ ತೂಕದ ಕೈ ಯಾವಗಲೂ ಇರಬೇಕು ಅನ್ನಿಸ್ತಿದೆ. ಹಾದಿ ಬೀದೀಲಿ ನನ್ನ ರೇಗಿಸಿದೋರ ಮೂತಿ ಕೆಂಪಾಗಿಸೋ ಕಪ್ಪು ಬಣ್ಣದ ರಾಜಕುಮಾರ ಬೇಕು. ಮೊದಲೇ ಹೇಳಿಬಿಡ್ತೀನಿ ನನಗೆ ಕಪ್ಪು ಬಣ್ಣದ ರಾಜಕುಮಾರನೇ ಬೇಕು. ಯಾಕೋ ಕಪ್ಪು ಬಣ್ಣ ಅಂದ್ರೆ ನನಗಿಷ್ಟಾನಪ್ಪ. ಆದ್ರೆ ತುಂಬ ಚಂದ ಇರ್ಬೇಕು ಓಕೆ ನ? ಯಾಕೆ ಅಂತ ಸ್ವಲ್ಪ ಕೇಳಿ.. ನಾನು ಇಡೀ ಕಾಲೇಜಿನ ಹಾಟ್ ಕೇಕ್ ತರ ಇದ್ದೀನಿ. ಇಂತ ಕ್ಯೂಟ್ ಹುಡುಗಿಗೆ ಎಂತ ಹುಡುಗ ಇರ್ಬೇಕು ಅಲ್ವಾ?

ಇದನ್ನೇ ಅಡ್ವಾಂಟೇಜ್ ಆಗಿ ತಗೊಳ್ಳೋದಾದ್ರೆ ನನಗವನು ಖಂಡಿತ ಬೇಡ ! ಅವನ ಜೊತೆ ನಾನ್ ಪಾರ್ಕಿಗೆ ಬರೋಲ್ಲ! ಅಪ್ಪು ಸಿನಿಮಾಗೆ ಆದ್ರೆ ಖಂಡಿತ ಮಾರ್ನಿಂಗ್ ಷೋಗೆ ಬಂದೇ ಬರ್ತೀನಿ! ಸಿನಿಮಾದ ಕತ್ತಲಲ್ಲಿ ಏನಾದ್ರೂ ಆಟ ಆಡಿದ್ರೆ ಹುಷಾರ್! ನನಗಿಷ್ಟ ಆಯ್ತು ಅಂದ್ರೆ ಸುಮ್ಮನೆ ಯಾರಿಗೂ ಗೊತ್ತಾಗದ ಹಾಗೆ ಒಂದು ಚೋಟ ಮುತ್ತು ಕೊಟ್ಬಿಡ್ತೀನಿ ಹಾಗಂತ ಮತ್ತೆ ಅವನು ಮುಂದುವರಿಯೋ ಹಾಗಿಲ್ಲ ! ತುಂಬಾ ಪುಟ್ಟ ಹುಡುಗಿ ನನಗೆ ಏನೂ ಗೊತ್ತಾಗೊಲ್ಲ ಅಂದುಕೊಂಡು ಸುಮ್ಮನೆ ಬೈಕಿಗೆ ಬ್ರೇಕು ಹಾಕಿದ್ರೆ ಸರಿ ಇರಲ್ಲ ಮತ್ತೆ!
ನನಗಿಷ್ಟ ಆದ್ರೆ ನಿನ್ನ ಉಸಿರುಕಟ್ಟೋ ಹಾಗೆ ತಬ್ಬಿಕೊಳ್ಳೋಕು ಬರುತ್ತೆ ಚಿಂತೆ ಬೇಡ ! ತುಂಬಾ ಮುದ್ದಾಗಿ ಬೆಳೆದ ಹುಡುಗಿ ನಾನು ಅದಕ್ಕಿಂತ ಮುದ್ದಾಗಿ ನೋಡ್ಕೋಬೇಕು ! ಅಪ್ಪ ಅಮ್ಮಾ ಅಂದ್ರೆ ಪ್ರಾಣ ನನಗೆ
ಅವರ ಕೈಕಾಲು ಹಿಡಿದಾದ್ರು ಒಪ್ಪಿಸ್ಬೇಕು ! ಮನೆ ಬಿಟ್ಟು ಬರೋ ಜಾಯಮಾನ ನನ್ನದಂತೂ ಅಲ್ಲ ಇದೊಂದು ವಿಷ್ಯದಲ್ಲಿ ನೋ ಕಾಂಪ್ರೋಮೈಸ್ ಡಿಯರ್ !

ಲವ್ ಲೆಟರ್ ಎಲ್ಲ ಬರಿಯೋ ಹುಡುಗಿ ಹೇಗೋ ಏನೋ ಅಂತ ಯೋಚನೆ ಬೇಡ. ನನಗೆ ಗೊತ್ತು ನಾನ್ ಸೂಪರ್ ಹುಡುಗಿ ಅಂತ. ನನಗೊಬ್ಬ ಸೂಪರ್ ಗೆಳೆಯ ಬೇಕು ಅಷ್ಟೇ ! ಪ್ಲೀಸ್ ಕೆಳಗಿನ ನಂಬರ್ ಗೆ ಒಂದು ಕಾಲ್ ಮಾಡಿ ಕಾಯ್ತ ಇರ್ತೀನಿ. ಸುಮ್ಮನೆ ಒಂದು ಸಲ ನನ್ನ ಧ್ವನಿ ಕೇಳೋಕಾದ್ರೂ ಮಾಡ್ತೀರಿ ಅಲ್ವಾ?

ಈ ನಂಬರಿನ ಹುಡುಗಿ !
9986843622