ಮೊದಲು ತೊದಲುತ್ತ ಬೆರೆದಿದ್ದ
ಬರೆಯಲಾರದೆ ಬಿಕ್ಕಿ ಅತ್ತಿದ್ದ
ಎರಡು ಸಾಲು ಬರೆಯಲೂ
ಲೆಕ್ಕವಿಲ್ಲದಷ್ಟು ನೆನಪು ಮಾಡಿಕೊಂಡು
ಅರ್ದ ಬರೆದಿಟ್ಟಿದ್ದ ಕವಿತೆ ಕಳೆದು ಹೋಗಿದೆ.
ಅಲ್ಲಿ ಬರೆದ ಒಂದು ಸಾಲು
ಒಂದಕ್ಷರ ಏನೆಂದರೇನೂ ನೆನಪಿಲ್ಲ
ಅಲ್ಲಿ ನಾನು ಬರೆದ ಸಾಲುಗಳಿಗಿಂತ
ಬರೆಯದೇ ಉಳಿಸಿಕೊಂಡ ಸಾಲಿನ
ಸಾಲ ತೀರಿಸಲಾರದ ಕವಿತೆ ಕಳೆದುಹೋಗಿದೆ.
ಅವಳು ನನಗಂತಲೇ
ಬಿಟ್ಟು ಹೋದ ಎಂದೂ
ಮುಗಿಯದ ವಿರಹವನ್ನು
ಕೇವಲ ಮೂರು ಸಾಲುಗಳಲ್ಲಿ ಬರೆದ
ಕವಿತೆ ಕಳೆದು ಹೋಗಿದೆ.
ಅವಳೊಂದಿಗೆ ಕಳೆದ
ಕೆಲವೇ ಕೆಲವು ಕ್ಷಣಗಳನ್ನ
ನನ್ನಿಡೀ ಬದುಕಿಗೆ ವಿಸ್ತರಿಸಿಕೊಂಡ
ಕೆಲವು ಮಾಯಾವಿ ಸಾಲುಗಳ
ಕವಿತೆ ಕಳೆದು ಹೋಗಿದೆ.
ನನಗೆ ಬೆನ್ನು ಮಾಡಿ
ಹೊರಟು ಹೋದವಳ
ಮೊಗದಲ್ಲಿ ಮೂಡಿದ
ಸಣ್ಣ ನಗೆಯನ್ನೂ
ಪ್ರೀತಿಸಿ ಬರೆದ ಸಾಲುಗಳ
ಕವಿತೆ ಕಾಣೆಯಾಗಿದೆ.
ತಾಯಿ ಮತ್ತು ದೇವರು ಹಾಗು
ಅವಳು ಸಮನಾರ್ಥಕ ಪದಗಳೆಂದು
ಹೇಳಿ ನನೊಳಗೆ ಸುಖಿಸಿದ
ಸಾಲುಗಳ ಕವಿತೆ ಕಳೆದು ಹೋಗಿದೆ.
ದೂರಾಗುವ ಮಾತು ನೀನಾಡಿದ
ಕೂಡಲೇ ನಾನು ನಿನ್ನ ಕಾಲಿಗೊರಗಿ
———————-
———————-
ಆ ಕವಿತೆ ಕಳೆದು ಹೋಗಿದೆ
ಬದುಕು ಮುಂದುವರಿಯಬೇಕಿದೆ
ಕವಿತೆ ಬೇಕಿದೆ.
November 9, 2009 at 2:43 pm
ಯಾಕೋ ಗೊತ್ತಿಲ್ಲ .. ಓದಿ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ ..
ಪಾರ್ಥ
November 10, 2009 at 11:26 am
ತುಂಬಾ ಚಂದವಾಗಿ ಬರೆದಿದ್ದಿರಾ, ಭಾವನೆ ತುಂಬಿದೆ
ಕಳೆದ ಕವಿತೆ ಬೇಗ ಸಿಗಲಿ
November 10, 2009 at 4:14 pm
ಅಳಬ್ಯಾಡ.. ನಿಂಗೆ “ಕವಿತಾ” ಸಿಕ್ಕೇ ಸಿಗ್ತಾಳೆ..;-)
November 11, 2009 at 12:43 pm
ಹೇಳಿದೀನಿ, ಕವಿತಾ ಸಿಗ್ತಾಳಂತೆ ನಾಳೆ ನಾಡಿದ್ದಲ್ಲಿ… ಕವಿತಾ ಆಗಿಲ್ಲ ಅಂದ್ರೆ ಕವನ ಅಂತೂ ಖಂಡಿತ ಸಿಗ್ತಾಳಂತೆ ಕಣಪ್ಪ… ನೀನು ಕವಿತೆ ಹುಡುಕ್ತ ಇದ್ದೀಯ.. ನಾನು ನಿನ್ನ ಹುಡುಕ್ತ ಇದೀನಿ…
ತುಂಬಾ ಚಂದದ ಕವಿತೆ ಕಣೋ ಸೋಮು… ಭಾವ ತುಂಬಿ ಬರ್ದಿದೀಯ..
November 13, 2009 at 9:24 am
ellelli dash haakbekoonta tilida nimma kavite chennagide
November 14, 2009 at 5:57 pm
naalkane charana bahala channagide……
“kelave keluvu…” KSHANAvu, edee nimma badukannu KSANIKA maadida nimma kavanada “MAAYE”, nijavaagi nanage nibberagagiside….
i wish you all the best and i am looking forward to read your such poems.
November 27, 2009 at 4:06 pm
ದೂರಾಗುವ ಮಾತು ನೀನಾಡಿದ
ಕೂಡಲೇ ನಾನು ನಿನ್ನ ಕಾಲಿಗೊರಗಿ
———————-
———————-
ಆ ಕವಿತೆ ಕಳೆದು ಹೋಗಿದೆ
ಬದುಕು ಮುಂದುವರಿಯಬೇಕಿದೆ
ಕವಿತೆ ಬೇಕಿದೆ.
thumba ishtavaada saalu…:)
nijjaaaaa…. thumba chanda ide soma….