ಒಂದು ಮನೆಯ ದೀಪವಾರಿದ ಕಥೆ…
April 20, 2008ಅದೊಂದು ದೊಡ್ಡ ಸಂಸಾರ..೫ ಜನ ಅಣ್ಣತಮ್ಮಂದಿರು ಮತ್ತೆ ೪ ಅಕ್ಕ ತಂಗಿಯರು. ಹಾಗಂತ ಆನಂದ ಸಾಗರವೇನು ಅಲ್ಲ…ಕಿತ್ತಾಟ ಮುನಿಸು ಒಳಜಗಳಗಳು ಕೋಪ ಒಬ್ಬರನ್ನೊಬ್ಬರು ಹೀಯಾಳಿಸುವುದು ಅಣ್ಣತಮ್ಮಂದಿರಲ್ಲೆ ಕತ್ತಿ ಮಸೆಯುವುದು ಒಬ್ಬರನ್ನೊಬ್ಬರು ತುಳಿಯುವುದು ಮಾಮೂಲೆ..ಇಷ್ಟೆಲ್ಲ ಒಳಜಗಳಗಳಿದ್ದರೂ ಅ ಕುಟುಂಬ ಈ ತನಕ ಅವಿಭಕ್ತ ಕುಟುಂಬವಾಗಿದ್ದರ ಬಗ್ಗೆ ನನಗೆ ಅಭಿಮಾನ ಮತ್ತು ಆಶ್ಚರ್ಯ ಮತ್ತು ಒಂದು ತರನಾದ ನಿಗೂಢತೆ ಇನ್ನು ನನ್ನ ಮನಸ್ಸಿನಿಂದ ಮರೆಯಾಗಿಲ್ಲ..ಅವರು ಕಿತ್ತಾಡುತ್ತಿರುವುದರ ಹಿಂದೆ ಅವರು ಅನಕ್ಷರಸ್ತರಾದ ಒಂದು ಕಾರಣವಿರಬಹುದು ಮತ್ತು ಇಲ್ಲಿಯವರೆಗೆ ಆ ಮನೆಯು ಅವಿಭಕ್ತ [...]