ನಿಮ್ಮ ಭಾವನೆಗೆ ನನ್ನ ಕೆಲವೇ ಕೆಲವು ಪದಗಳು
ಇಲ್ಲಿರುವ ಯಾವುದೇ ಕವಿತೆಗಳಿಗೆ ಮತ್ತು ಹಾಳುಮೂಳು ಬರಹಗಳಿಗೆ ಒಂದು ದೃಷ್ಟಿಕೋನ ಒಂದು ಗುರಿ,ಧ್ಯೇಯ ಯಾವುದು ಇಲ್ಲ.ಇಲ್ಲಿರುವ ಪದಗಳಿಗೆ ಕವಿತೆ ಅನ್ನುವ ಚಂದದ ಹೆಸರಿನಿಂದ ಕರೆಯಬೇಕ? ಅದೂ ತೋಚುತ್ತಿಲ್ಲ.ಕೊನೆಗೆ ಈ ಪದಗಳ ಮೂಲಕ ನಾನು ಏನು ಹೇಳಲಿಕ್ಕೆ ಹೊರಟಿದ್ದೇನೆ ಅಂತ ಕೆಲವೊಂದು ಸಲ ನನಗೂ ಅರ್ಥವಾಗುವುದಿಲ್ಲ. ಇಲ್ಲಿರುವುದೆಲ್ಲ ಕೇವಲ ಹುಚ್ಚು ಮನಸ್ಸಿನ ಭೋರ್ಗರೆತಗಳು ಮಾತ್ರ. ಇವನ್ನ ಕವಿತೆ ಮತ್ತು ಅದ್ಭುತ ಬರಹ ಅಂತ ಓದುವ ನಿಮಗೆ ಮತ್ತು ನಿಮ್ಮ ಸಹನೆಗೆ ಮತ್ತು ಅತ್ಯಮೂಲ್ಯ ಸಮಯಕ್ಕೆ ನಾನು ಅಭಾರಿ…….ಮತ್ತೆ ಇಲ್ಲಿ ಕೆಲವೊಂದು ಸಲ ಕೆಲವು ಘಟನೆಗಳನ್ನ ನೆರವಾಗಿ ಹೇಳಬೇಕಾದ ಸಮಯದಲ್ಲಿ ಅನಿವಾರ್ಯವಾಗಿ ಅಸಂಬದ್ದ ಪದಗಳನ್ನ ಉಪಯೋಗಿಸಲೇ ಬೇಕಾಗುತ್ತದೆ ..ಮಡಿವಂತ ಮಹಾಶಯರು ನನ್ನ ಈ ಒಂದು ತಪ್ಪನ್ನ ಕ್ಷಮಿಸಿಬಿದಬೇಕು…….ಇಂತಿ ನಿಮ್ಮ ಪ್ರೀತಿಯ ನವಿಲುಗರಿ ಹುಡುಗ

Jun
10

null

ನನ್ನ ಕತ್ತಲೆಗೆ ಒಂದಿಷ್ಟು
ಬೆಳಕ ನೀಡದ ನಿನ್ನ
ಕಣ್ಣುಗಳನ್ನ ನಾನು
ನಕ್ಷತ್ರಗಳಿಗೆ ಹೋಲಿಸುವ
ಪಾಪವ ಮಾಡಲಾರೆ ಕ್ಷಮಿಸು..!!!.

ಜಗದೊಳಿತಿಗೆ ತಂಪನೆರೆಯುವ
ಚಂದ್ರನ ಅಗಾಧ ಪ್ರೇಮಕ್ಕೆ
ಮತ್ತವನ ರೂಪಕ್ಕೆ ಹೃದಯವಿಲ್ಲದವಳ ನಿನ್ನ ಹೋಲಿಸಿ
ಮತ್ತೆ ಮತ್ತೆ ತಪ್ಪು ಮಾಡಲಾರೆ ಕ್ಷಮಿಸು..!!!

ಸುರಿಯುವ ಬೆಳದಿಂಗಳಿಗೆ,
ಮಲ್ಲಿಗೆ ಕಂಪಸೂಸುವ ತಂಗಾಳಿಗೆ,
ಮುದ್ದು ಮುದ್ದು ಮಗುವಿನ ಮನಸ್ಸುಗಳಿಗೆ
ಕದ್ದು ಕದ್ದು ಕಾಣುವ ಅಗೋಚರ ಕನಸುಗಳಿಗೆ,
ಕನಸುಗಳಿಲ್ಲದ ನಿನ್ನ ಹೋಲಿಸಲಾರೆ ಕ್ಷಮಿಸಿಬಿಡು…!!!

ಇದ್ದು ಇಲ್ಲದಂತಿದ್ದು..ಇರುವ..ದೇವರಿಗೆ,
ಸುಂದರ ಬದುಕಿಗೆ,ಕಾಣದ ನಾಳೆಗಳಿಗೆ,
ಕಳೆದ ಸುಂದರ ನಿನ್ನೆಗಳಿಗೆ,
ಕಳೆಯುತ್ತಿರುವ ಈ ಕ್ಷಣಗಳಿಗೆ.
ಕೇವಲ ನೋವುಣಿಸುವ ನಿನಗೆ ಹೋಲಿಸಲಾರೆ ಕ್ಷಮಿಸಿ ಬಿಡು…!!

Mar
12

null

ಬಾನಂಚಿನ ಮೋಡದಲ್ಲಿ ಮರೆಯಾದ ಕಣ್ಣೋಟ
ತುಟಿಯೆಲೆಯಂಚಿನ ಮುತ್ತಿನಲ್ಲಿ ಕಳೆದು ಹೋದ ಮುಗುಳ್ನಗೆ
ಮೋಹಕ ಕೋಲ್ಮಿಂಚಿನೊಂದಿಗೆ ಬರುವುದೇಕೀ ಸಿಡಿಲು?
ಮಳೆಯಾಗಿ ಸುರಿದರೂ ಮನದಲಿಲ್ಲ ನಿನ್ನ ನೆನಪು..!![shhhhhhhhh]

ಎದೆಯಾಳದಲ್ಲೆಲ್ಲೊ ಮರೆತ ಕವಿತೆ
ಹಾಡೆಂದರೆ ಹಾಡುವುದು ಹೇಗೆ ನೀನಿಲ್ಲದೆ?
ಎಲ್ಲವೂ ನೆನಪಿದೆ ನಿನ್ನ ಕೈತುತ್ತಿನ ಹಾಗೆ
ನಿನ್ನ ಬೆಚ್ಚನೆ ಮಡಿಲ ಹಾಗೆ
ಹಿಗ್ಗಿ ಹಿಗ್ಗಿ ಹುಗ್ಗಿಯಾಗಿದ್ದು ಜೀವ
ನಿನ್ನಗಲಿಕೆಯಿಂದ ಬಡವಾಗಿದ್ದು ಹೃದಯ…!! [shhhhhhhh]

ಮರೆವೆನೆಂದು ಕುಳಿತರೆ ನಿನ್ನ
ನೆನಪುಗಳ ಮೆರವಣಿಗೆಗಳ ಸಾಲು ಸಾಲು
ಮರಳಿ ಬರಲಾರದ ಹೃದಯವ ನೆನೆದು
ಮನದ ಮುಗಿಲೊಳಗೀಗ ಮಳೆಯಿಲ್ಲ..!!

Feb
13

null

ನಿನ್ನ ಕಳೆದುಕೊಂಡ ನಾನು
ಇನ್ನೂ ಬದುಕಿರುವೆನೆಂದರೆ
ಒಮ್ಮೆಯಾದರು ನೀನು ಬಂದು
ನನ್ನ ಕನಸಲ್ಲಾದರೂ ಲಾಲಿ
ಹಾಡುವೆಯೆಂಬಾ ಮಹದಾಸೆಯಿಂದ..!

ಬಯಗೊಳಿಸುವ ಕತ್ತಲಿದೆ
ಆದರೂ ಅರೆಕ್ಷಣ ಕಣ್ಣುಮುಚ್ಚುತ್ತಿಲ್ಲ!
ಕಣ್ಣಾಲೆಗಳ ತುಂಬ ನಿನ್ನ ಹಾಡುಗಳೇ
ನಿನ್ನ ಹಾಡಿನ ಲಾಲಿಯ ಜೋಕಾಲಿಯಲ್ಲಿ
ಪಾಪ ಕತ್ತಲೂ ಕೂಡ ನನ್ನ ಮುಂದೆ ಕಣ್ಮುಚ್ಚಿ ಮಲಗಿದೆ..!!

ನೋವು,ನಿರಾಸೆ,ಕಣ್ಣೀರು
ಒಂಟಿತನ,ಬೇಸರ, ತಬ್ಬಲಿತನಗಳು
ನೀ ಕೊಟ್ಟ ಬಳುವಳಿಗಳೆಂದು ತಿಳಿದ ಮೇಲೆ
ನನಗ್ಯಾವುದರ ಅರಿವಿಲ್ಲ..!!
ಹೃದಯವೇ ಇಲ್ಲದವನಲ್ಲಿ ಇನ್ನು ಅನುಭವಗಳೆಲ್ಲಿ..!!!

ನಿನ್ನ ಜಿಂಕೆಮರಿಯಂದಿದ್ದೆ
ನನ್ನ ಅಪರಾಧವಾಯಿತೆ ಗೆಳತಿ..!
ಕ್ಷಣದೊಳಗೆ ನನ್ನನ್ನಗಲಿ
ನೀ ಅಗೋಚರ ದಿಕ್ಕಿಗೆ ಸಾಗಿ ಬಿಟ್ಟೆ
ನೋಡಿಲ್ಲಿ ನನ್ನೆದೆಯಾಳದ
ಮೈದಾನ ನಿನ್ನಾಟವಿಲ್ಲದ ಬರಡು ಬರಡು..!!

ನನಗೆ ನೀನು ನೆರಳ ಕೊಡದಿದ್ದರು
ಚಿಂತೆಯಿಲ್ಲವೆ ಗೆಳತಿ..ಬಿರುಬಿಸಿಲು ಬೇಡ
ನಿನ್ನ ಚಂದ್ರನಿಗೆ ಹೋಲಿಸಿದ್ದು ನಾನು
ನನ್ನ ನಂಬಿಕೆ ಸುಳ್ಳಾಗದಿರಲಿ…!

ನಾನು ಯಾವತ್ತೂ ದೇವರನ್ನು
ನಂಬುವುದಿಲ್ಲ, ಕನಸಿನಲ್ಲಿಯು ಕೂಡ..!
ಕಣ್ಣಾಗಿದ್ದ ನೀನು ನನ್ನ ಅಗಲಿದೆಯಲ್ಲ…!

ನನಗೆ ನಿನ್ನ ನೆನಪಾಗುತ್ತಿಲ್ಲ,
ನನಗೇನು ಅನ್ನಿಸುತ್ತಿಲ್ಲ,
ನಾನೇನನ್ನು ಕಳೆದುಕೊಂಡಿಲ್ಲ,
ನೋಡಿ..ಹೃದಯವೂ ಸುಳ್ಳು ಹೇಳುವುದು
ನಿಜವಾದಂತಾಯಿತಲ್ಲವೆ?…!

ನಾನು ಇಷ್ಟೊಂದು ನಲಿವು ಗೆಲವು
ಸಂತೋಷಗಳ ಮದ್ಯೆಯೂ
ದುಃಖಿಸುತ್ತೇನಲ್ಲ ಗೆಳತಿ…
ನನಗೆ ನೋವಾಗುವುದಿಲ್ಲ..
ಬದಲಾಗಿ ನಿನ್ನ ನೆನಪಾಯಿತಲ್ಲವೆಂದು
ದುಃಖದಲ್ಲು ನಗುತ್ತಿರುತ್ತೇನೆ..!!

ನನಗೆ ಪ್ರತಿದಿನ ಬರುವ
ಕನಸುಗಳಲ್ಲಿ ಒಂದು ವಿನಂತಿಯೆಂದರೆ
ನನಗೆ ಅವಳ ಒಂದಷ್ಟು ನಗುವಾದರು ತನ್ನಿ
ನಾನು ನಗಬೇಕಿದೆ…!!!

Jan
25

null

ಹತ್ತಾರು ಕವಿತೆಯಲ್ಲಿರದ ಶಕ್ತಿ
ನಿನ್ನ ಕಣ್ಣಾಲೆಗಳಲ್ಲಿದೆಯಲ್ಲ ಗೆಳತಿ
ಅದರ ಗುಟ್ಟೇನು..!!
ನೂರಾರು ನೋವುಗಳು
ನಿನ್ನ ನಗುವ ಮಾಯೆಯಲ್ಲಿ
ಮಾಯವಾಗುವುದರ ಗುಟ್ಟೇನು ಗೆಳತಿ..!!

ಯಾರೊ ಬರೆದ ಪ್ರೀತಿಯ
ಕವಿತೆಯೊಳಗೂ ನಿನ್ನ ಛಾಯೆ !
ಯಾರೋ ಹಾಡಿದ ಹಾಡಿನೊಳಗೂ
ನಿನ್ನದೇ ಪ್ರೀತಿಯ ಮಾಯೆ ಮಾಯೆ
ನಿನ್ನ ಕುರಿತು ಬರೆದ ಪ್ರತಿ ಪದಗಳೂ
ಬಂಗಾರವಾಗುವುದರ ಗುಟ್ಟೇನು ಗೆಳತಿ..!!

ನೀನಾಡುವ ಪ್ರತಿ ಮಾತುಗಳು
ನೊಂದ ಹೃದಯಕ್ಕೆ ಮಲ್ಲಿಗೆಯಾಗುವುದರ ಗುಟ್ಟು ?
ನೀ ನೋಡುವ ಪ್ರತಿ ಹೂವುಗಳೂ
ಗುಲಾಭಿಯಾಗುವುದರ ಗುಟ್ಟೇನು ಗೆಳತಿ..!!

ಮನ ಮರುಗಿದಾಗಲೆಲ್ಲ
ನನ್ನ ಮನ ನಿನ್ನ ಹೆಗಲ ಬೇಡುವುದರ ಗುಟ್ಟೆನು?
ಕೂಡಿ ಬೆಳೆಯಲಿಲ್ಲ,ಕೂಡಿ ಬೆರೆಯಲಿಲ್ಲ
ಆದರೂ ಅರೆಕ್ಷಣ ನಿನ್ನಗಲಿರಲಾರದ
ಮಧುರ ನೋವಿನ ಗುಟ್ಟಾದರೂ ಏನು ಗೆಳತಿ..!!

ನಟ್ಟ ನಡುರಾತ್ರಿ ಬೆಚ್ಚಿ ಬೀಳಿಸುವ
ಕನಸುಗಳಿಗೆ ನಿನ್ನ ನೆನಪು ಮಾಡಿದೆ !
ಕನಸುಗಳೇನೊ ಮತ್ತೆ ಮತ್ತೆ
ನನ್ನೆದೆಗೆ ಜಾರುತ್ತಿವೆ..! ಆದರೆ ಬೆಚ್ಚಿ ಬೀಳಿಸುತ್ತಿಲ್ಲ
ಮನದೊಳಗೆ ಚಿತ್ತಾರ ಬಿಡಿಸುತ್ತಿರುವುದರ ಗುಟ್ಟೇನು ಗೆಳತಿ..!!

Dec
26

null

ಕಣ್ಣೊಳಗೆ ರಕ್ತ ಬರಿಸುವ ನೋವುಗಳಿದ್ದರು
ಒಳಗೊಳಗೆ ಅಳುತ್ತಾ ಅಳುತ್ತಾ
ಇಷ್ಟಗಲ ನಗುನಗುತ್ತಿದ್ದ, ಮಿನುಗುತ್ತಿದ್ದ
ಭೂಮಿ ತೂಕದ ಅಮ್ಮಾ..ನೀನು ಸುಳ್ಳಿಯಲ್ಲವೆ?

ಗುಮ್ಮಾ ಬಂದಾ ಎನ್ನುತ್ತಾ
ತುತ್ತು ತುತ್ತು ಅಮೃತವನ್ನು
ಮೋಸದಿಂದ ಬಾಯಿಗಿಟ್ಟು
ತಿನಿಸಿ ತನ್ನ ನೋವ ಮರೆಯುತ್ತಿದ್ದ ನೀನು ಸುಳ್ಳಿಯಲ್ಲವೆ?

ತುತ್ತು ಅನ್ನಕ್ಕು ಗತಿಯಿಲ್ಲದಿರುವಾಗ,
ಮಾಡಿದ ಒಂದಗುಲ ಗಂಜಿಯನ್ನ
ಮಕ್ಕಳಿಗೆ ತಿನ್ನಿಸಿ ನೀನು ಮಾತ್ರ
“ಯಾಕೊ ಹೊಟ್ಟೆ ನೋವು” ಅಂದು
ನೋವಿನಿಂದ ಹಸಿದು ನೆಲವ ತಬ್ಬಿ
ಮಲಗುತ್ತಿದ್ದ ಅಮ್ಮ ನೀನು ಸುಳ್ಳಿಯಲ್ಲವೇನೆ?

ಕುಡುಕ ಗಂಡನ ಹಾದರವನ್ನ
ನಿನ್ನ ಸೆರಗಿನಲ್ಲಿ ಕಟ್ಟಿಕೊಂಡು
ನೋಯುತ್ತಿದ್ದ ನೀನು ಸುಳ್ಳಿಯಲ್ಲವೆ..!
ಮಗನ ಹೊಡೆಯಲು ಬಂದ ಕುಡುಕ ಗಂಡನಿಗೆ
ಸೆರಗಿನಲ್ಲೆ ಮಗನ ಬಚ್ಚಿಟ್ಟುಕೊಂಡು
ಮಗನಿಲ್ಲವೆಂದು ಮಮತೆ ತೋರಿದ ನೀನು ಸುಳ್ಳಿಯಲ್ಲವೆ..?

ಕೊರಳಿನಲ್ಲಿ ಬೆಳ್ಳಿಯ ತಾಳಿ
ಅದಕ್ಕೆ 3 ಕಾಸಿನ ಬಂಗಾರದ ಲೇಪನ
ನಿನ್ನ ಅಕ್ಕಾ-ತಂಗಿಯರೆದುರು
ನನ್ನ ಗಂಡಾ ಮಾಡಿಸಿದ ಬಂಗಾರದ ತಾಳಿಯೆಂದು
ಎದೆಯುಬ್ಬಿಸಿ ಹೇಳಿ ಎದೆತಟ್ಟಿಕೊಂಡ ನೀನು ಸುಳ್ಳಿಯಲ್ಲವೇನೆ..?

ಅವ್ವಾ ಹುಗ್ಗಿ[ಪಾಯಸ]ಬೇಕೆಂದು
ಹಬ್ಬದ ದಿನ ಹಟ ಮಾಡಿದ ನಿನ್ನ ಮಕ್ಕಳಿಗೆ
ಅರೆಪಾವು ಗಂಜಿಗೆ 2 ಉಂಡೆಬೆಲ್ಲವನ್ನ ಹಾಕಿ
ನಮಗೆ ಹುಗ್ಗಿಯೆಂದು ಕುಡಿಸಿ ನಲಿಸಿದ ನೀನು
ಸುಳ್ಳಿಯಲ್ಲದೆ ಮತ್ತೇನು ..??

Dec
26

null

ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?

ಜುಪ್ ಎಂದು ಎಗರುತ್ತಿದ್ದವನು
ಚಪ್ಪೇ ಕಲ್ಲಷ್ಟು ಎಗರಾದಂತಾಗಿಹೆನು
ಹೂಮೇಲಿದ್ದ ಮಿಡತೆಯನ್ನು ಹಿಡಿಯುತ್ತಿದ್ದವನು
ಹೂವಿನ ಪಾಲಾಗುವ ಮಿಡತೆಯನ್ನು ಅರಸಿದೆನು…

ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?

ಅಪ್ಪನ ಎತ್ತರ ಬೆಳೆದಂತೆ
ಅಪ್ಪನ ಸಮವೆಂದು ಭಾವಿಸಿದೆನು
ಅಡುಗೆ ಮನೆಯ ಡಬ್ಬದಲ್ಲಿದ್ದ ದುಡ್ಡನ್ನು
ಪೆಟ್ಟಿ ಅಂಗಡಿಯ ಪಾಲು ಮಾಡಿದೆನು

ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?

ನವಿಲ ಗರಿಯಂತಿದ್ದ ಗುರುವನ್ನು
ಕಾಗೆಯ ಪುಕ್ಕವೆಂದು ದೂಡಿದೆನು
ಚಿಲ್ಲರೆ ಎಂದು ತಿಳಿದ ದುಡ್ಡನ್ನು
ಚೆಲ್ಲಾ ಪಿಲ್ಲಿ ಮಾಡಿ ಅಲೆದೆನು…..

ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?

ಮತ್ತೇರಿದ ಆನೆಯಂತೆ
ನಡೆದಿದ್ದೆ ದಾರಿ ಎಂದೆ,
ಹಿಂತಿರುಗಿ ನೋಡಿದಾಗ
ಕೊಚ್ಚೆ ದಾರಿಯೆಂದು ಅಳಲಿದೆನು…

ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?

ಕೈ ಕೊಡುವ ಹುಡುಗಿ ಇದ್ದರು,
ಬಳೆ ತೊಡಿಸಿಕೊಳ್ಳುವವಳು ಬಂದರೂ,
ಅತ್ತಾಗ ಸ್ನೇಹ ತಬ್ಬಿ ಹಿಡಿದರು,
ಹೋದಾಗ ಹೆಗಲು ಕೊಡುವವರಾರಿಹರು…?

ನಾನಿದ್ದೆ ನಾನಾಗಿ
ಬದಲಾಗುವೆ ನನಗಾಗಿ……ಬದಲಾಗುವೆ ನನಗಾಗಿ

[ಇದು ಗೆಳೆಯ ವಿನಾಯಕ ಜೋಶಿ ಬರೆದಿದ್ದು]

Dec
19

ಸಾಮ್ಯತೆ……..!!!

ನೀ ನನ್ನಿಂದ
ದೂರಾಗುತ್ತಿರುವುದಕ್ಕು
ನಾ ಸಾವಿಗೆ
ಹತ್ತಿರವಾಗುತ್ತಿರುವುದಕ್ಕು
ಅಂತಹ ವ್ಯತ್ಯಾಸವೇನಿಲ್ಲ….!

ಹಾರೈಕೆ……….!!!

ಹೃದಯಗಳೇ
ನೀವು ಕಳೆದುಕೊಂಡ
ಒಲವೆಲ್ಲ
ಇಂದಲ್ಲ ನಾಳೆ
ಉಲ್ಕೆಗಳ ರೂಪದಲ್ಲಿ
ಸುರಿದು ಬರಲಿ…..!

ತೃಪ್ತಿ……!!!

ನಲಿವೇ
ಆಗಬೇಕೆಂದಿಲ್ಲ
ನಿನ್ನೊಲವಿನ
ನೋವಾದರು ಸಾಕು…..!

ಮಾಯಗಾತಿ….!!!

ಬೆಂಬಿಡದೆ
ಕಾಡುತ್ತೇವೆಂದ ಕನಸುಗಳಿಗೆ
ನಿನ್ನ ಒಲವ ಕುರಿತು ಹೇಳಿದೆ..
ಪಾಪದ ಕನಸುಗಳು ಕನಸುಗಳು ಕೂಡ
ಕನವರಿಸುತ್ತಿವೆಯಂತೆ ನಿನ್ನ….!!!

ಗೆಜ್ಜೆ-ಹೆಜ್ಜೆ
ನನ್ನೊಳಗೆ ನೀ ಬಿಟ್ಟು ಹೋದ
ಗೆಜ್ಜೆಗಳಿಗು
ಹೆಜ್ಜೆಗಳಿಗು
ಅಂತಾ ವ್ಯತ್ಯಾಸವೇನಿಲ್ಲ !
ಹೆಜ್ಜುಗಳು ನಿನ್ನೊಲವ ವಿರಹಗೀತೆಗಳಾದರೆ
ಗೆಜ್ಜೆಗಳು ನಿನ್ನೊಲವ ಪ್ರೇಮಗೀತೆಗಳು..

Oct
24

null
ಎದೆಯೊಳಗೆ ನೂರಾರು ಕವಿತೆ
ಅದೆಷ್ಟೋ ಸಾಲುಗಳು, ಅದೆಷ್ಟೊ
ಮೊಗೆದಷ್ಟು ಭಾವನೆಗಳು, ಬೇಡಿದಷ್ಟು ಕನಸು !
ತುಂಬಿಕೊಂಡು ಬರೆಯಲು ಕುಳಿತರೂ,
ಒಂದು ಕವಿತೆ ಹುಟ್ಟುತ್ತಿಲ್ಲವೆಂದು ಬಿಕ್ಕಳಿಸುತ್ತೇನೆ !!!

ಕನಸಿನಲ್ಲೂ ಹಾಗೆ ಅದೆಷ್ಟೋ
ಸಾಗರದಷ್ಟು ಪದಗಳು ಬಂದು
ನನ್ನೊಡನೆ ಕಧನಕ್ಕಿಳಿಯುತ್ತವೆ !
ಒಂದೊಂದು ಪದಗಳಿಗು ಮುದ್ದು ಮಾಡಿ
ತಲೆ ನೇವರಿಸಿ ಬಂದು ಬರೆಯಲು ಕುಳಿತರೂ
ಬರೆಯಲಾಗದೆ ಮತ್ತೆ ಬಿಕ್ಕಳಿಸುತ್ತೇನೆ !!!

ಬೆರಳ ತುದಿಯಲ್ಲೇ ಶಭ್ಧಗಳ ಬಂಡಾರ
ಸುಮ್ಮನೆ ಬಂದು ಹೆಗಲೇರಿ ಕಚಕುಳಿಯಿಡುತ್ತವೆ
ಒಂದೊಂದು ಪದಗಳೂ, ನಲ್ಲನ ನಲ್ಲೆಯ ಹಾಗೆ ಸುಂದರ
ಬೆರಳ ತುದಿಯಲ್ಲಿದ್ದರೆ ಸಾಕೆ? ಮನದೊಳಗೆ ಚಿತ್ತಾರ ಮಾಡಬೇಡವೆ?
ಚಿತ್ತಾರವಿಲ್ಲದ ಕವಿತೆ ಬರೆದು ನನಗು ಅಭ್ಯಾಸವಿಲ್ಲ !
ಒಂದೆ ಒಂದು ಸಾಲು ಬರೆಯದೆ ನನ್ನಲ್ಲೆ ಬೆತ್ತಲಾಗುತ್ತೇನೆ !!!

ಉಮ್ಮಳಿಸಿ ಬರುವ ದುಃಖವನ್ನ
ತಡೆಹಿಡಿದು ಬೇಡಿದರು ಕೇಳುತ್ತಿಲ್ಲ
ಪದಗಳು ! ನವವಧುವಿನಂತೆ ಶೃಂಗರಿಸಿ
ಬರೆಯುತ್ತೇನೆಂದರು ಕೇಳುತ್ತಿಲ್ಲ ಪದಗಳು !
ನಮ್ಮನಮ್ಮೊಳಗೇ ವಿರಾಮವಿಲ್ಲದ ಕದನ
ಸುಮ್ಮನ ಹಠ ! ಬರೆಯಲಾಗುತ್ತಿಲ್ಲ ಕವನ!!!

ಕವಿತೆಗಳೇ ಹಾಗೆ,ಎಷ್ಟು ಗೋಗರೆದರು
ಬೇಡಿಕೊಂಡರು,ಯಾರ ಮಾತು ಕೇಳುವುದಿಲ್ಲ
ಪ್ರೀತಿಯಿಲ್ಲದೆ ಕರೆದರೆ ಹೇಗಾದರು ಬಂದೀತೆ ಕವಿತೆ
ಪ್ರೀತಿ ಇಲ್ಲದೆ ಬರೆದರೆ ಅದು ಆದೀತೆ ಕವಿತೆ !!!

Oct
02

null

ಮೆಲ್ಲಮೆಲ್ಲನೆ ಬೀಸುವ ತಂಗಾಳಿ
ನನ್ನ ಗೆಳತಿಯ ಬಳಿಯಲೊಮ್ಮೆ ಸುಳಿದು ನೋಡು
ಅವಳಿಂದ ನೀನು ಮತ್ತಷ್ಟು ತಂಪಾದರು ಆಶ್ಚರ್ಯವಿಲ್ಲ !

ಭುವಿಯ ಸವಿಯ ಹೆಚ್ಚಿಸುವ ಮುದ್ದು ಮುದ್ದು
ಹೂವುಗಳೇ, ಒಂದೇ ಒಂದು ಸಲ ಇವಳ
ನೆನಪು ಮಾಡಿಕೊಳ್ಳಿ, ಮಲಿನಗೊಂಡ ಮನಗಳಿಗೆ
ಮತ್ತಷ್ಟು ಮುದ ನೀಡುವ ಸೌಂದರ್ಯ ನಿಮ್ಮದಾಗಬಹುದು !

ಬದುಕಿನ ಆಸೆಯನ್ನ ಹೊರಹೊಮ್ಮಿಸುವ
ಸುಂದರ ಕವನಗಳೆ ಒಂದೇ ಒಂದು ಸಾರಿ
ಇವಳ ಮೃದು ಹೃದಯದೊಳಿಳಿದು ಬನ್ನಿ,
ಈ ಮಾಯಗಾತಿಯ ಮೈ ಸ್ಪರ್ಶದಿಂದಲಾದರು
ನಿಮ್ಮ ಸಾಲುಗಳು ಇನ್ನೂ ಶ್ರೀಮಂತವಾದಾವು !

ರಾತ್ರಿ ಮಿನುಗುವ ಚಂದಮಾಮನೇ
ಯಾಕಿಷ್ಟು ಕೆಂಪಾಗಿದ್ದಿ ತಂಪಾಗಿದ್ದಿ ?
ಗೊತ್ತಾಯಿತು ಬಿಡು…ಇವಳು ನಿನ್ನ ಕನಸಲ್ಲಿ ಬಂದಿರಬೇಕು !

ನಕ್ಷತ್ರಗಳೇ ನಿಮಗೆ ಏನು ಅನ್ನಿಸುವುದಿಲ್ಲವೆ?
ಈ ಮಲ್ಲಿಗೆಯ ಮಗಳಿಂದ ಅದೆಷ್ಟು ದೂರವಿದ್ದೀರಿ !
ಸುಮ್ಮನಿಳಿದು ಬಂದಿವಳ ಜೊತೆ ಜೊತೆಯಾಗಿ
ಆಟವಾಡಿಕೊಂಡಿರಬಾರದೇನು ! ಇವಳೇನು ದೂರದವಳ?
ನಿಮ್ಮ ಚಂದಮಾಮನ ತಂಗಿಯಲ್ಲವೇನು !

Sep
28

ಶತ್ರು॒॒॒॒॒॒॒

ಬಯಸಿ ಬಯಸಿ
ನಲ್ಲೆಯ ಬಳಿ ಸಾಗಿದ
ನಲ್ಲನಿಗೆ, ನಿರಾಸೆಗೊಳಿಸಿದ
ಅವಳ ಮಲ್ಲಿಗೆಯ ಲಜ್ಜೆ…