ನಿನ್ನ ಒಲವ ನೆನಪಿನಲ್ಲಿ

24 ಸೆಪ್ಟೆಂ

null

ಸಾವಂತ ಸಾವಿಗು ಹೆದರಿರಲಿಲ್ಲ ನಾನು
ಹಾಗೆ ನಡುಮನೆಯಲ್ಲಿ ನಿಂತು ಕಣ್ಣಿನಲ್ಲೆ ಗದರಿಸಿ
ಆಚೆಗೆ ಕಳುಹಿಸಿದ ಹಾಗೆ ಕನಸ ಕಂಡಿದ್ದಿದೆ !
ನಾನು ನಿನಗೆ ನೆನಪಾಗಲಿಲ್ಲ ಎಂಬ ಒಂದೇ ಕಾರಣಕ್ಕೆ
ಬಿಕ್ಕಿ ಬಿಕ್ಕಿ ಅತ್ತಿದ್ದು ಇದೆ………!!

ನನ್ನ ನಿನ್ನ ನಡುವೆ ಸಾವಿರ ಮೌನಗಳಿದ್ದಾಗ್ಯು
ಆ ಮೌನದೊಳಗೆ ನಿನಗಾಗಿ ಸಾವಿರ ಮಾತುಗಳನ್ನಡಿದ್ದಿದೆ !
ನಿನ್ನ ಕಣ್ಣಾಲೆಗಳಲ್ಲಿ ನನ್ನ ಹೆಸರಿಲ್ಲದ್ದನ್ನ ನೋಡಿ
ನಾ ಮತ್ತೆ ಮತ್ತೆ ಕಣ್ಣೀರಾಗಿದ್ದು ಇದೆ……..!!

ನಾ ಕತ್ತಲೆಯಲ್ಲಿರುವಾಗ ನೀ ನನಗೆ
ಬೆಳಕಾದೆಯಲ್ಲೊ ಹುಡುಗಾ ಎಂದು ಲಲ್ಲೆಗರೆದಿದ್ದ ಮರೆತಿಲ್ಲ !
ಕತ್ತಲೆಯಲ್ಲಿದ್ದೇನೆ ನಾನೀಗ……ನೀ ನನಗೆ ಪುಟಾಣಿ ಹಣತೆಯು
ಆಗಲಿಲ್ಲವೆಂಬ ನೋವ ನನ್ನಿಂದ ಮರೆಯಲಾಗುತ್ತಿಲ್ಲ……….!!

ನಾನೇನು ನಿನ್ನ ಜೀವನವನ್ನೇ ಕೇಳಿರಲಿಲ್ಲ ಅತಿಯಾಸೆಯಿಂದ !
ಆದರೆ ಬರಡಾಗಿದ್ದ ಈ ಹೃದಯಕ್ಕೆ ನಿನ್ನ ಪ್ರೀತಿಯ
ಎರೆಡು ಹನಿಯನ್ನಾದರು ಹಂಚಬಹುದಿತ್ತಲ್ಲವೆ?………!!

ಬಯವಾಗುತ್ತಿದೆ ಅದೆಷ್ಟು ದೂರ
ಒಂಟಿಯಾಗಿ ಸವೆಸಬೇಕಂತೆ ಜೀವನದ ಹಾದಿ
ಜೀವನ ಮೂರು ದಿನ ಅಂದವರ ಕೈ ಹಿಡಿದು ಕೇಳಬೇಕಿದೆ…!
ನನಗಿಲ್ಲಿ ಕ್ಷಣಕ್ಷಣವು ಯುಗದ ಸಮಾನ
ಒಂದಡಿ ಮುಂದಿಟ್ಟರೆ ನೋಯುತ್ತಿದೆ ಹ್ರುದಯ ಜೊತೆ ನೀನಿಲ್ಲ…….!!

ಎನೂ ತೋಚದಾದಾಗ ನಿನ್ನೆ ನೆನೆನೆನೆದೆ
ಎರೆಡು ಚಂದನೆಯ ಕವಿತೆ ಬರೆದಿದ್ದಿದೆ !
ಆದರೆ ನಿನ್ನ ಬಾಳ ಪುಟಗಳಲ್ಲಿ ನನ್ನ ಹೆಸರೇ ಇಲ್ಲವಂತೆ
ನೋಯದೇ ಇದ್ದೀತೆ ಹೃದಯ…….!!

ನೋವಿರಲಿ ಬಿಡು ನನಗೆ
ನೋವು -ನಲಿವಾಗೊದು
ನಲಿವು-ನೊವಾಗೋದು
ಇವೆರೆಡು ಬಾಳ ಹಾದಿಯಲ್ಲಿನ ಎರೆಡು ಮುಖಗಳಿದ್ದ ಹಾಗೆ
ಆದರೆ ನನ್ನ ನೋವು ನಲಿವಾಗೋದು ಸಾದ್ಯವ ನಿನ್ನ ಒಲವಿಲ್ಲದೆ???…………!!!

Advertisements

One Response to “ನಿನ್ನ ಒಲವ ನೆನಪಿನಲ್ಲಿ”

  1. Priya ಆಗಷ್ಟ್ 3, 2009 at 6:17 ಫೂರ್ವಾಹ್ನ #

    ನೀ ನನಗೆ ಪುಟಾಣಿ ಹಣತೆಯು
    ಆಗಲಿಲ್ಲವೆಂಬ ನೋವ ನನ್ನಿಂದ ಮರೆಯಲಾಗುತ್ತಿಲ್ಲ….
    E saalu tumba chanagide…..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: