ನಿನಗೆ ಕೆಲವು ಪ್ರಶ್ನೆಗಳು……..

26 Sep

null

ಸುಮ್ಮನೆ ಹೇಳುತ್ತಿಲ್ಲ
ನಿನಗಾಗಿ ನಾನು ಏಳು ಸಾಗರಗಳನ್ನ
ದಾಟಿಬಂದರು ಅಚ್ಚರಿಯಿಲ್ಲ!
ನಿನ್ನೊಳಗೆ ನನಗಾಗಿ ಏಳು ಮಲ್ಲಿಗೆ ತೂಕದ ಪ್ರೀತಿಯಿದೆಯೆ?

ಎಷ್ಟೋ ನಿದ್ದೆ ಬಾರದ ರಾತ್ರಿಗಳನ್ನ
ನಿನ್ನ ಗುಂಗಿನಲ್ಲೆ ಕಳೆದಿದ್ದಿದೆ!
ಒಮ್ಮೆಯಾದರು ನೀನು ಮಗ್ಗಲು
ಬದಲಿಸುವಾಗ ನನ್ನ ನೆನೆದಿದ್ದಿದೆಯ?

ನನಗಿಲ್ಲಿ ನಿನ್ನ ನೆನಪುಗಳೇ
ನನ್ನ ಬೆಳಕಾಗಿರುವಾಗ!
ನೀನು ನನ್ನೊಳಗೆ ಬಂದು
ಒಮ್ಮೆಯಾದರು ಕಚಕುಳಿ ಇಟ್ಟಿದ್ದಿದೆಯ?

ನಾನು ಬರೆದ ಕವಿತೆಗಳ ಪ್ರತಿ
ಸಾಲಿನಲ್ಲಿ ನಾನು ನಿನ್ನ ಮುದ್ದು ಹೆಸರ
ಪ್ರೀತಿಯಿ೦ದ ಬರೆದಿದ್ದಿದೆ!
ಅಷ್ಟು ಚಂದ ಹಾಡುವ ನೀನು
ಒಮ್ಮೆಯಾದರು ನನಗೆ ಲಾಲಿ ಹಾಡಿದ್ದಿದೆಯ?

ಸಾಕು ಸಾಕಿನ್ನು ನಿನ್ನ ನೆನಪೊಳಗೆ ನನ್ನ ಮರೆಯುವುದ
ನಾನು ನಾನಾಗಬೇಕಿದೆ ನೀನಿಲ್ಲದೆ
ಆದರೆ ನಾ ಇಡುವ ಪ್ರತಿಹೆಜ್ಜೆಹೆಜ್ಜೆಯಲ್ಲಿಯೂ
ನಾ ನಿನ್ನ ನೆನೆಯದಿದ್ದರೆ ನನ್ನಾಣೆ…..

Advertisements

One Response to “ನಿನಗೆ ಕೆಲವು ಪ್ರಶ್ನೆಗಳು……..”

  1. sanjay October 26, 2006 at 3:34 pm #

    yen somanna..full feeling nalli barediddiya? goood keep it up kano…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: