ಬೆಳಕು….

26 ಸೆಪ್ಟೆಂ

null

ಬೆಳಕೇ ನಿನ್ನೊಲುಮೆಯಿಂದ
ಹೃದಯದೊಳು ಒಲುಮೆಯ ಗೀತೆ
ತೇಲಿ ಬರುತ್ತಿರಲಿ ಎದೆಯಿಂದ ಎದೆಗೆ..
ನಿನ್ನ ಪ್ರೀತಿಯ ಗಾಳಿ ಸೋಕಿ
ದ್ವೇಷ ಸ್ವಾರ್ಥವ ಹೊರಗೆ ನೂಕಿ………..

ಕಲಿಸಿ ಬಿಡು ನೀನು ನಿನ್ನಂತೆ
ಬದುಕುವುದ ಬೆಳಗುವುದ
ಮರೆಸಿಬಿಡು ಕಹಿನೆನಪುಗಳ ಕಹಿ ಕನಸುಗಳ
ಬೆಳಕೆ ನಿನ್ನಿಂದ ಸಿಹಿ ನೆನಪು ಸಿಹಿ ಕನಸು
ಹೊರಬರಲಿ.. ವಸಂತ ಮೈತುಂಬಿ ನಲಿವ ತೆರದಲಿ…….

ಕತ್ತಲೆಂಬ ಮಾಯೆಯ ಮನದೊಳಗೆ
ಸೋಕಿಸು ನಿನ್ನ ಬೆಳ್ಳಿ ಕಿರಣ ಅನವರತ
ಕತ್ತಲೂ ಬೆಳಕಾಗಬಹುದು ಜಗದ ಸುತ್ತಲು
ಜಗದ ಜನರ ಸುತ್ತಲು……….

ಜಗದೊಳಗೆ ಅಂಧಕ್ಕಾರದ ಅದಿಪತ್ಯ
ಮನದೊಳಿರುವ ವಿಷವರ್ತುಲದ ಕಹಿಸತ್ಯ
ಒಂದಿರುವ ಜೊಗದೊಳಗೆ ಎಷ್ಟೊಂದು ಕತ್ತಲು
ಬಾ ಬೆಳಕೆ ಬಂದು ಕದಡಿದ ನಮ್ಮ ಕಹಿಮನಗಳಲ್ಲಿ
ನಿನ್ನ ಸಿಹಿ ಅಮ್ರುತವ ಸುರಿಸು…….

ಸತ್ಯ ಬೆಡುವ ಮನಗಳಿಗೆ
ಸುಳ್ಳಿನ ಮುಳ್ಳಿನ ಪರದೆ ಹೊದಿಸುವರಿಲ್ಲಿ
ಅಂಧಕ್ಕಾರದ ಅದಃಪತನ ನಿನ್ನಿಂದಲೆ ಆರಂಬವಾಗಲಿ
ಕಲ್ಲು ಮುಳ್ಳುಗಳೆಲ್ಲ ಬಳಲಿದ ಮನಗಳಿಗೆ
ಮಲ್ಲಿಗೆಯ ಹೂವಾಗಲಿ ನಿನ್ನಿಂದ ಬೆಳಕೆ ನಿನ್ನಿಂದ……….

ಸುಖವೆಲ್ಲಿದೆ ದುಃಖವೆಲ್ಲಿದೆ ನರಕವೆಲ್ಲಿ
ನಾಕವೆಲ್ಲಿ ಒಂದು ತಿಳಿಯದಾಗಿದೆ
ದೈವವಿದೆ, ದೈವವಿಲ್ಲ ತಿಳಿದವರಾರು..!
ಆದರೆ ಕತ್ತಲೂ ಇದೆ..ಕಪ್ಪನೆಯ ಕಾರ್ಮೋಡವು ಇದೆ
ಕತ್ತಲೂ ನಿನ್ನಿಂದ ಬೆಳ್ಳಿ ಬೆಳಕಾಗಲಿ ಕಪ್ಪನೆಯ ಕಾರ್ಮೋಡ ಕೂಡ
ಬೆಳಕಾಗಿ ಸುರಿಯಲಿ…ಗಂಗೆಯ ತರದಲಿ

Advertisements

2 Responses to “ಬೆಳಕು….”

  1. Ana ನವೆಂಬರ್ 15, 2006 at 7:32 ಫೂರ್ವಾಹ್ನ #

    Sakhattaagide Somaa…. 🙂

  2. Ana ನವೆಂಬರ್ 15, 2006 at 7:33 ಫೂರ್ವಾಹ್ನ #

    ellaa kavana, hanigavana ellaadakkoo haakiruva chitragalu thumbaane arthagalannu bimbisuttive… bahala chennaagide…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: