ಹಳ್ಳಿ ಹುಡುಗ್ರಾ……….

26 ಸೆಪ್ಟೆಂ

null

ದನ್ಗಳ ಮೇಯ್ಸ್ಕೊಂಡ್ ಕುರಿಗಳ್ ಆಡಿಸ್ಕೊಂಡ್
ಬಿಸ್ಲಿಗ್ ಮುಖಾನ್ ಕೆಂಪ್ ಮಾಡ್ಕೊಂಡು
ಒಪ್ಪತ್ತಿನ್ ಊಟ ಎರೆಡ್ ಹೊತ್ತಿಗ್ ಹೊಟ್ಟಿ ಮ್ಯಾಲ್ ತಣ್ಣೀರ್ ಬಟ್ಟೆ
ಹಾಕೊಂಡ್ ಹರ್ಕ ಮುರ್ಕ ಮನೆನಲ್ ಮಾರಜನ್ ಅಂಗೆ ಮಲ್ಕೊಳ್ಳೊ ಹಳ್ಳಿ ಹುಡುಗ್ರಾ………

ವರ್ಷಕ್ಕೊಂದು ಹೊಸ ಅಂಗಿ ಆರ್ತಿಂಗ್ಳಿಗೊಮ್ಮಿ ಪ್ಯಾಟಿ ಮುಕ
ಪ್ಯಾಟ್ಯಾಗ ಕಾಕ ಹೋಟ್ಲಾಗ್ ಊಟ…ಮತ್ತದ ಕನ್ನಡ ಹೊಲ್ಸು ಪಲ್ಸು ಪಿಚ್ಚರ್ರು
ಮುಕುಳಿ ಮ್ಯಾಲ್ ಅರ್ದ ಹರ್ದ ಚಡ್ಡಿ ಅದಕ್ಕೊಂದು ಅಂದ್ವಾದ್ ತೇಪೆ ಹಾಕೊಂಡು
ಹಿಂದ ಹಿಂದ ನೋಡ್ಕೋತ್ ಹೋಗೊ ಹಳ್ಳಿ ಹುಡುಗ್ರಾ……..

ಅವ್ವಾ ಸಾಲಿಗ್ ಹೋಗ್ತೀನ್ ಅಂತೇಳಿ ದಿನಾಲು
೫ ಕಿಲೋಮೀಟರ್ ನಡ್ಕೋತ, ಕನ್ನಡ ಮ್ಯಾಡಿಯಮ್ಮಾಗ್ ಒದ್ಕೋತ,
ಇಂಗ್ಲಿಷ್ ನ ೫ನೇ ಕ್ಲಾಸಾಗ್ ಕಲ್ಕೋತ, ಹಿಂದಿನ ಹಿಂದಮುರ್ಕಿ ಬರ್ಕೊಂಡು ಪಾಸಾಗಿ
ಕನ್ನಡಾನ ಪಸ್ಟ್ ಕ್ಲಾಸ್ನಾಗ್ ಪಾಸ್ ಮಾಡೊ ಹಳ್ಳಿ ಹುಡುಗ್ರಾ………

ಕಬ್ಬಡ್ಡಿ ಆಡ್ಕೋತ ಮರ್ಕೋತಿ ಆಡ್ಕೋತ
ಸಿಕ್ಕಾರ್ಚೆಂಡು ಬೆದ್ರಾಟ ಚಣಮಣಿ
ಬುಗುರಿ, ಕೂಕಾಟ ಬಯಲಾಟ ಎತ್ಕಲ್ಲು
ಕೊಲಾಟ ಬಯಲಾಟ ಆಡ್ಕೊಂಡು ನಮ್
ಜಮಾನದ್ ಆಟನ್ಯಲ್ಲ ಉಳ್ಸಿರೊ ಹಳ್ಳಿ ಹುಡುಗ್ರಾ

ಐಟಿ ಆವಾಂತ್ರ, ಬಿಟಿ ಬಡಿವಾರ, ಸಾಫ಼್ಟ್ವೇರು ಹಾರ್ಡ್ವೇರು
ಎಮ್ಜಿ ರೋಡು ಬ್ರಿಗೇಡ್ ರೋಡು ಪಿಜ್ಜ ಕಾರ್ನರ್ರು ಕಾಲ್ಸೆಂಟ್ರು ಎನ್ ಗೊತ್ತು ನಿಮಗ?
ರಾಜ್ಕುಮಾರ್ ಗೊತ್ತು, ನಮ್ ಯಂಕ್ಟಾಚಲಯ್ಯ ಗೊತ್ತು
ನಮ್ಗೆಲ್ಲ ಅನ್ನ ತಿನ್ಸೊ ಬ್ಯಾಸಾಯ ಗೊತ್ತು, ದನಕರುಗಳ್ ಗೊತ್ತು,
ಆದ್ರ “ವರ್ಲ್ಡ್ಸೆಕ್ಸ್.ಕಾಮು” “ದೇಸಿಬಾಬ.ಕಾಮು” “ಮೈಸೂರು ಮಲ್ಲಿಗೆ” ಗಮಗಮ
ಅಬ್ಬಬ್ಬ ದಟ್ಟ ದರಿದ್ರ ಇದೆಲ್ಲ ಗೊತ್ತಿಲ್ದೆ ಇರೊ ಹಳ್ಳಿ ಹುಡುಗ್ರಾ ..ನಮಸ್ಕಾರ

Advertisements

5 Responses to “ಹಳ್ಳಿ ಹುಡುಗ್ರಾ……….”

 1. ashwath ಅಕ್ಟೋಬರ್ 1, 2006 at 8:23 ಫೂರ್ವಾಹ್ನ #

  ಇದು ನನಗೆ ಸ್ವಲ್ಪ ಕಷ್ಟ ಆಯಿತು …. ಆದ್ರೂ.. ಬೋ ಪಸಂದಾಗೈತೆ..!
  ಇದೊಂದೇ ಅಲ್ಲಾ all most all ಸೂಪರ್!

 2. Maddy ಅಕ್ಟೋಬರ್ 10, 2006 at 10:32 ಫೂರ್ವಾಹ್ನ #

  ಗುರುಗಳೇ,
  ಈ ಕವನ ಮಾತ್ರ ಸಕತ್ ಆಗಿ ಇದೆ.. ಬೇರೆ ಮಾತೇ ಇಲ್ಲ ಇದರ ಬಗ್ಗೆ..
  ಸ್ವಲ್ಪ ಓದೋಕೆ ತೊ೦ದರೆ ಆಯಿತು ಆದರೂ ತು೦ಬಾ ಚೆನ್ನಾಗಿ ಇದೆ..

 3. Deepa ಡಿಸೆಂಬರ್ 28, 2006 at 2:45 ಅಪರಾಹ್ನ #

  ಆಮ್ಮನೆಂಬ ಮಹಾನ್ ಸುಳ್ಳಿ….!!! tumba channagidhe and manasige feel taro antha vishaya vaagi idhe… somu avara yella kavanagalu bahupaalu tumba channagirathe adhrallu ee kavana superb..

 4. akash ಜನವರಿ 15, 2007 at 12:10 ಅಪರಾಹ್ನ #

  u got a touch man..never dilute yourself Somu. ppl are looking at you to admire you n to see you-when you will loose yourself.

  so be at positive side maga 🙂

 5. yathi ಜನವರಿ 18, 2007 at 7:39 ಅಪರಾಹ್ನ #

  ಆಮ್ಮನೆಂಬ ಮಹಾನ್ ಸುಳ್ಳಿ….!!!

  maga e kavana…sooperagide kano….nijvagluu…!!!
  u hav pictured out, life in each n every house in a village…& dat is reallly awesome maga..& maga keep good work goin..!! all the best maga…..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: