ಹೃದಯ ಮಾತಾಡಿದಾಗ………

26 Sep

null

 

 

 

 

 

ಹದಿಹರೆಯದವಳ ಎದೆಯನ್ನೆ ಕೆಕ್ಕರಿಸಿಕೊಂಡು

ನೋಡುತ್ತಿದ್ದ ಹುಡುಗ ಅತಿ ಆಸೆಯಿಂದ……..

ತನ್ನ ಹೊತ್ತು ಹೆತ್ತ ತಾಯಿಯ ಬೊಚ್ಚು ಮೊಲೆಗಳ

ನೆನಪಾಗಿ ಪಶ್ಚಾತಾಪದಿಂದ ತಲೆ ತಗ್ಗಿಸಿ ಬಿಟ್ಟ…!!!

 

 

 

 

 

ದೇವರನ್ನ ನೋಡಿಬಿಡಬೇಕೆಂಬ ಹಂಬಲದಿಂದ

ದೂರ ದೂರ ನಡೆದ ಹುಡುಗ…ದಣಿವರಿಯದಂತೆ

ತಿಂಗಳಾಯಿತು, ವರ್ಷವಾಯಿತು, ಕ್ರೂರಿ ದೇವರಿ ಸಿಗಲಿಲ್ಲ

ಮತ್ತೆ ಹೆತ್ತಮ್ಮನ ನೆನಪಾಗಿ ಮನೆ ಸೇರಿದ…!!!

 

 

 

 

 

ಎರೆಡು ದಿನ ಅಮ್ಮ ಜೊತೆಯಿರಲಿಲ್ಲವೆಂಬ

ಕಾರಣಕ್ಕೆ ಇಪ್ಪತ್ತು ದಿನ ಅಮ್ಮನ ಜೊತೆ ಮಾತನಾಡಲಿಲ್ಲ

ಕೊಬ್ಬಿದ ಹುಡುಗಿ!!….ಪಾಪ ತನ್ನಪ್ಪ ಸತ್ತು ಇಪ್ಪತ್ತು ವರ್ಷವಾಗಿದ್ದು

ನೆನೆಪಾಗಿ ಅಮ್ಮನ ಮಡಿಲು ಸೇರಿ ಮಮ್ಮಲ ಮರುಗಿದಳು…!!!

 

 

 

 

 

ಮುಖದ ಮೇಲೆ ಎರೆಡು ಚಿಕ್ಕಾನು ಚಿಕ್ಕ’

ಮೊಡವೆಗಳಾಗಿದ್ದನ್ನ ಸಹಿಸಲಾಗಿರಲಿಲ್ಲ ಹುಡುಗಿಗೆ

3 ದಿನ ಅತ್ತಳು…!  ಆಸಿಡ್ ಹಾಕಿಸಿಕೊಂಡ

ತನ್ನ ಸ್ನೇಹಿತೆಯ ನೆನಪಾಗಿ ಕಣ್ಣೀರ್ ಒರೆಸಿಕೋಂಡಳು…!!!

 

 

 

 

 

ಅಮ್ಮ ಹೇಳಿದಳು ಬಿಟ್ಟು ಬಿಡು ಅವನನ್ನು !

ಅಷ್ಟು ಚಿಕ್ಕ ತಂಗಿ ಕೂಡ ತಲೆಗೆ ಮಲ್ಲಿಗೆ ಮುಡಿಸುತ್ತ

“ಅಕ್ಕಾ ಬಿಟ್ಟು ಬಿಡೆ ಅವನನ್ನ”

ಪಪ್ಪಾ ಕೂಡ ಲಲ್ಲೆಗರೆಯುತ್ತ.! ಮನೆಮಂದಿಯೆಲ್ಲ ಅಧಿಕಾರ ಚಲಾಯಿಸುತ್ತ !

ಕೊನೆಗೆ ತಾತ ಅಜ್ಜಿ ಕೂಡ ಮುದ್ದು ಮಾಡುತ್ತ..!!

ಆದರು ಹುಡುಗೀದು ಒಂದೆ ಮಾತು..” ಏನು ಬಿಟ್ಟು ಬಿಡಬೇಕ ಜೀವವನ್ನ?”

 

 

 

 

 

ಕಣ್ಣಿಗೆ ಕಾಡಿಗೆ ತಂದು ಕೊಡಲಿಲ್ಲ ಪಪ್ಪ

ಪಾಪದ ಹುಡುಗಿ ಎರೆಡು ದಿನ ಶಾಲೆಗೆ ಹೊಗಲಿಲ್ಲ…!

ಪಪ್ಪ ಜೊತೆ ಮಾತಿಲ್ಲ ಕತೆಯಿಲ್ಲ..!

ಪಪ್ಪ ಕೊನೆಗೆ ಕಣ್ಣಿಲ್ಲದ ಅನಾಥ ಹುಡುಗಿಯನ್ನ

ಇವಳ ಮುಂದೆ ತಂದು ನಿಲ್ಲಿಸಿದ ಕೂಡಲೆ…..

ಪಪ್ಪಾ “ಸಾರಿ” ಅಂದವಳೇ ಜಿಂಕೆ ಮರಿಯ ಹಾಗೆ ಶಾಲೆ ಕಡೆ ಹೆಜ್ಜೆ ಹಾಕಿದಳು…!!!

 

 

 

 

 

 

 

 

 

Advertisements

4 Responses to “ಹೃದಯ ಮಾತಾಡಿದಾಗ………”

 1. Ana October 9, 2006 at 12:46 pm #

  ellaa chennagide 🙂

 2. ನಾಗು February 1, 2007 at 6:02 pm #

  ಇದ್ದಿದ್ದು ಇದ್ದಂಗೆ ಹೇಳುವುದು “ಹೃದಯ” ಮಾತ್ರ…..
  ಬಣ್ಣ – ಸುಣ್ಣ ಅಚ್ಚಿ ಹೇಳೋದ್ “ಬಾಯಿ” ಅಂದ್ರ ತಪ್ಪಿಲ್ಲ…. ಖರೆ ಅಲ್ಲೇನ್ರೀ…..!!!!

 3. ಭಾವಬೃಂಗ....ಶಿವಪ್ರಸಾದ್ February 3, 2007 at 3:01 pm #

  ಗೆಳೆಯ….
  ಹನಿಗಳಿವೆ ಕಂಗಳಲಿ….
  ಕವನಗಳಿವೆ ಕಣ್ಣೆದುರಲಿ….
  ಬಣ್ಣಿಸಲು ಪದಗಳಿಲ್ಲ ನನ್ನಲ್ಲಿ….

  ಆದರೂ….ಆದರೂ….
  ಬಣ್ಣಿಸಲೇಬೇಕು….

  ನಲಿವತಾರೆಯ ಕರೆದು
  ಚಂದ್ರನಿಡುವಂತೆ ಮುತ್ತು….
  ಆಗ ಹೃದಯ ಮಾತಾಡಿತ್ತು
  :ಅಲ್ಲಿ ಮೌನ ಮಾತಾಗಿತ್ತು….

  ~ ಭಾವಬೃಂಗ

 4. Bhuhima February 6, 2007 at 6:13 am #

  kaveri taayi adikaaradinda kannada naadnalli hariyuva haage, taayi yedegina preeti adhikrutavagi haridu bandide; e kaviteya saalugalli

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: