ಕೆಲವು ಚುಟುಕುಗಳು..!!

19 ಡಿಸೆ

ಸಾಮ್ಯತೆ……..!!!

ನೀ ನನ್ನಿಂದ
ದೂರಾಗುತ್ತಿರುವುದಕ್ಕು
ನಾ ಸಾವಿಗೆ
ಹತ್ತಿರವಾಗುತ್ತಿರುವುದಕ್ಕು
ಅಂತಹ ವ್ಯತ್ಯಾಸವೇನಿಲ್ಲ….!

ಹಾರೈಕೆ……….!!!

ಹೃದಯಗಳೇ
ನೀವು ಕಳೆದುಕೊಂಡ
ಒಲವೆಲ್ಲ
ಇಂದಲ್ಲ ನಾಳೆ
ಉಲ್ಕೆಗಳ ರೂಪದಲ್ಲಿ
ಸುರಿದು ಬರಲಿ…..!

ತೃಪ್ತಿ……!!!

ನಲಿವೇ
ಆಗಬೇಕೆಂದಿಲ್ಲ
ನಿನ್ನೊಲವಿನ
ನೋವಾದರು ಸಾಕು…..!

ಮಾಯಗಾತಿ….!!!

ಬೆಂಬಿಡದೆ
ಕಾಡುತ್ತೇವೆಂದ ಕನಸುಗಳಿಗೆ
ನಿನ್ನ ಒಲವ ಕುರಿತು ಹೇಳಿದೆ..
ಪಾಪದ ಕನಸುಗಳು ಕನಸುಗಳು ಕೂಡ
ಕನವರಿಸುತ್ತಿವೆಯಂತೆ ನಿನ್ನ….!!!

ಗೆಜ್ಜೆ-ಹೆಜ್ಜೆ
ನನ್ನೊಳಗೆ ನೀ ಬಿಟ್ಟು ಹೋದ
ಗೆಜ್ಜೆಗಳಿಗು
ಹೆಜ್ಜೆಗಳಿಗು
ಅಂತಾ ವ್ಯತ್ಯಾಸವೇನಿಲ್ಲ !
ಹೆಜ್ಜುಗಳು ನಿನ್ನೊಲವ ವಿರಹಗೀತೆಗಳಾದರೆ
ಗೆಜ್ಜೆಗಳು ನಿನ್ನೊಲವ ಪ್ರೇಮಗೀತೆಗಳು..

Advertisements

2 Responses to “ಕೆಲವು ಚುಟುಕುಗಳು..!!”

 1. ಬ್ಲಾಗು ವಿಹಾರಿ ಮಾರ್ಚ್ 5, 2007 at 2:22 ಫೂರ್ವಾಹ್ನ #

  ಉಲ್ಕೆ ಉರಿದು ಹೋಗುತ್ತದಲ್ಲ! ನಾವು ಕಳೆದುಕೊಂಡ ಒಲವೂ ಉಲ್ಕೆಯ ಹಾಗೆ ಉರಿದು ಹೋಗಲಿ ಎಂಬ ಆಶಯ ಸರಿಯಲ್ಲ. ನಾವು ಕಳೆದುಕೊಂಡ ಒಲವು ಮಳೆಯ ಹಾಗೆ ಸುರಿದು ಜೀವವನ್ನು ಪೋಷಿಸಲಿ ಎಂದು ಹಾರೈಸೋಣ.

 2. neel3 ಮಾರ್ಚ್ 20, 2007 at 4:09 ಅಪರಾಹ್ನ #

  olavo-virahavo
  kanike kanikeye.
  neeve andhange
  adu kooda hejjegalaguvudalla?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: