ನಾನಿದ್ದೆ ನಾನಾಗಿ[ವಿನಾಯಕ ಜೋಶಿ]

26 ಡಿಸೆ

null

ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?

ಜುಪ್ ಎಂದು ಎಗರುತ್ತಿದ್ದವನು
ಚಪ್ಪೇ ಕಲ್ಲಷ್ಟು ಎಗರಾದಂತಾಗಿಹೆನು
ಹೂಮೇಲಿದ್ದ ಮಿಡತೆಯನ್ನು ಹಿಡಿಯುತ್ತಿದ್ದವನು
ಹೂವಿನ ಪಾಲಾಗುವ ಮಿಡತೆಯನ್ನು ಅರಸಿದೆನು…

ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?

ಅಪ್ಪನ ಎತ್ತರ ಬೆಳೆದಂತೆ
ಅಪ್ಪನ ಸಮವೆಂದು ಭಾವಿಸಿದೆನು
ಅಡುಗೆ ಮನೆಯ ಡಬ್ಬದಲ್ಲಿದ್ದ ದುಡ್ಡನ್ನು
ಪೆಟ್ಟಿ ಅಂಗಡಿಯ ಪಾಲು ಮಾಡಿದೆನು

ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?

ನವಿಲ ಗರಿಯಂತಿದ್ದ ಗುರುವನ್ನು
ಕಾಗೆಯ ಪುಕ್ಕವೆಂದು ದೂಡಿದೆನು
ಚಿಲ್ಲರೆ ಎಂದು ತಿಳಿದ ದುಡ್ಡನ್ನು
ಚೆಲ್ಲಾ ಪಿಲ್ಲಿ ಮಾಡಿ ಅಲೆದೆನು…..

ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?

ಮತ್ತೇರಿದ ಆನೆಯಂತೆ
ನಡೆದಿದ್ದೆ ದಾರಿ ಎಂದೆ,
ಹಿಂತಿರುಗಿ ನೋಡಿದಾಗ
ಕೊಚ್ಚೆ ದಾರಿಯೆಂದು ಅಳಲಿದೆನು…

ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?

ಕೈ ಕೊಡುವ ಹುಡುಗಿ ಇದ್ದರು,
ಬಳೆ ತೊಡಿಸಿಕೊಳ್ಳುವವಳು ಬಂದರೂ,
ಅತ್ತಾಗ ಸ್ನೇಹ ತಬ್ಬಿ ಹಿಡಿದರು,
ಹೋದಾಗ ಹೆಗಲು ಕೊಡುವವರಾರಿಹರು…?

ನಾನಿದ್ದೆ ನಾನಾಗಿ
ಬದಲಾಗುವೆ ನನಗಾಗಿ……ಬದಲಾಗುವೆ ನನಗಾಗಿ

[ಇದು ಗೆಳೆಯ ವಿನಾಯಕ ಜೋಶಿ ಬರೆದಿದ್ದು]

Advertisements

3 Responses to “ನಾನಿದ್ದೆ ನಾನಾಗಿ[ವಿನಾಯಕ ಜೋಶಿ]”

 1. pallavi ಡಿಸೆಂಬರ್ 26, 2006 at 11:48 ಫೂರ್ವಾಹ್ನ #

  ಕೈ ಕೊಡುವ ಹುಡುಗಿ ಇದ್ದರು,
  ಬಳೆ ತೊಡಿಸಿಕೊಳ್ಳುವವಳು ಬಂದರೂ,
  ಅತ್ತಾಗ ಸ್ನೇಹ ತಬ್ಬಿ ಹಿಡಿದರು,
  ಹೋದಾಗ ಹೆಗಲು ಕೊಡುವವರಾರಿಹರು…?

  hai Vinayak avare..ee saalu nanage tomba tomba ista ayitu..itz real superb….keep writin…

  pallavai

 2. Suresh ಡಿಸೆಂಬರ್ 26, 2006 at 9:03 ಅಪರಾಹ್ನ #

  Hi Vinayaka, chennagide ninna kayaka, sogasaagide adara phala(kavite)….

 3. guru ಡಿಸೆಂಬರ್ 27, 2006 at 4:42 ಅಪರಾಹ್ನ #

  hai vinayak….tumba chennagide kavite….appana yettara beladante appana samavende bhaavisidenu..anno saalu maatra super…baritha iri heege…….

  preetiyinda…

  gurumurthy

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: