ನಿನ್ನ ನೆನಪಾಯಿತು..!!!

13 ಫೆಬ್ರ

null

ನಿನ್ನ ಕಳೆದುಕೊಂಡ ನಾನು
ಇನ್ನೂ ಬದುಕಿರುವೆನೆಂದರೆ
ಒಮ್ಮೆಯಾದರು ನೀನು ಬಂದು
ನನ್ನ ಕನಸಲ್ಲಾದರೂ ಲಾಲಿ
ಹಾಡುವೆಯೆಂಬಾ ಮಹದಾಸೆಯಿಂದ..!

ಬಯಗೊಳಿಸುವ ಕತ್ತಲಿದೆ
ಆದರೂ ಅರೆಕ್ಷಣ ಕಣ್ಣುಮುಚ್ಚುತ್ತಿಲ್ಲ!
ಕಣ್ಣಾಲೆಗಳ ತುಂಬ ನಿನ್ನ ಹಾಡುಗಳೇ
ನಿನ್ನ ಹಾಡಿನ ಲಾಲಿಯ ಜೋಕಾಲಿಯಲ್ಲಿ
ಪಾಪ ಕತ್ತಲೂ ಕೂಡ ನನ್ನ ಮುಂದೆ ಕಣ್ಮುಚ್ಚಿ ಮಲಗಿದೆ..!!

ನೋವು,ನಿರಾಸೆ,ಕಣ್ಣೀರು
ಒಂಟಿತನ,ಬೇಸರ, ತಬ್ಬಲಿತನಗಳು
ನೀ ಕೊಟ್ಟ ಬಳುವಳಿಗಳೆಂದು ತಿಳಿದ ಮೇಲೆ
ನನಗ್ಯಾವುದರ ಅರಿವಿಲ್ಲ..!!
ಹೃದಯವೇ ಇಲ್ಲದವನಲ್ಲಿ ಇನ್ನು ಅನುಭವಗಳೆಲ್ಲಿ..!!!

ನಿನ್ನ ಜಿಂಕೆಮರಿಯಂದಿದ್ದೆ
ನನ್ನ ಅಪರಾಧವಾಯಿತೆ ಗೆಳತಿ..!
ಕ್ಷಣದೊಳಗೆ ನನ್ನನ್ನಗಲಿ
ನೀ ಅಗೋಚರ ದಿಕ್ಕಿಗೆ ಸಾಗಿ ಬಿಟ್ಟೆ
ನೋಡಿಲ್ಲಿ ನನ್ನೆದೆಯಾಳದ
ಮೈದಾನ ನಿನ್ನಾಟವಿಲ್ಲದ ಬರಡು ಬರಡು..!!

ನನಗೆ ನೀನು ನೆರಳ ಕೊಡದಿದ್ದರು
ಚಿಂತೆಯಿಲ್ಲವೆ ಗೆಳತಿ..ಬಿರುಬಿಸಿಲು ಬೇಡ
ನಿನ್ನ ಚಂದ್ರನಿಗೆ ಹೋಲಿಸಿದ್ದು ನಾನು
ನನ್ನ ನಂಬಿಕೆ ಸುಳ್ಳಾಗದಿರಲಿ…!

ನಾನು ಯಾವತ್ತೂ ದೇವರನ್ನು
ನಂಬುವುದಿಲ್ಲ, ಕನಸಿನಲ್ಲಿಯು ಕೂಡ..!
ಕಣ್ಣಾಗಿದ್ದ ನೀನು ನನ್ನ ಅಗಲಿದೆಯಲ್ಲ…!

ನನಗೆ ನಿನ್ನ ನೆನಪಾಗುತ್ತಿಲ್ಲ,
ನನಗೇನು ಅನ್ನಿಸುತ್ತಿಲ್ಲ,
ನಾನೇನನ್ನು ಕಳೆದುಕೊಂಡಿಲ್ಲ,
ನೋಡಿ..ಹೃದಯವೂ ಸುಳ್ಳು ಹೇಳುವುದು
ನಿಜವಾದಂತಾಯಿತಲ್ಲವೆ?…!

ನಾನು ಇಷ್ಟೊಂದು ನಲಿವು ಗೆಲವು
ಸಂತೋಷಗಳ ಮದ್ಯೆಯೂ
ದುಃಖಿಸುತ್ತೇನಲ್ಲ ಗೆಳತಿ…
ನನಗೆ ನೋವಾಗುವುದಿಲ್ಲ..
ಬದಲಾಗಿ ನಿನ್ನ ನೆನಪಾಯಿತಲ್ಲವೆಂದು
ದುಃಖದಲ್ಲು ನಗುತ್ತಿರುತ್ತೇನೆ..!!

ನನಗೆ ಪ್ರತಿದಿನ ಬರುವ
ಕನಸುಗಳಲ್ಲಿ ಒಂದು ವಿನಂತಿಯೆಂದರೆ
ನನಗೆ ಅವಳ ಒಂದಷ್ಟು ನಗುವಾದರು ತನ್ನಿ
ನಾನು ನಗಬೇಕಿದೆ…!!!

Advertisements

10 Responses to “ನಿನ್ನ ನೆನಪಾಯಿತು..!!!”

 1. SIRI ಫೆಬ್ರವರಿ 17, 2007 at 6:25 ಫೂರ್ವಾಹ್ನ #

  nice one.1st stanza is touchy.carry on u hv lots of talents.

 2. Dr Smriti ಫೆಬ್ರವರಿ 19, 2007 at 7:43 ಅಪರಾಹ್ನ #

  Somanna,

  wonderful……..neenu gr8 kano!!

  impressive!

 3. kaplana ಫೆಬ್ರವರಿ 21, 2007 at 4:32 ಅಪರಾಹ್ನ #

  hello somu. naan ondu maathu kelteeni..yaake ee kavanada tumba yaaro eddare anta ansta ide.i am right na? yaaradu? yaake asht bejaar maadidra nimge? bidi avarigondu thanks heli.illa andere isht olle kavana bartha irlilla..u know somu naan 4 pyaaragalanna copy maadikondu nanna friendsgella torside..tumba tumba olle kavana.nanage mail maadu nimma jote matadabeku..keep writing somu

 4. anju,priya ಫೆಬ್ರವರಿ 22, 2007 at 8:33 ಫೂರ್ವಾಹ್ನ #

  hello…………. enappa?
  nin kavna bombat.. ninge ee reeti kavna bareyo hage maadbeku andre nin mansige bejaragiro agatya idiya? anyways nin kavna superb keep writing. blessing 4 ur future….. tata…….

 5. ಚುಂಬನವಾಸಿ ಫೆಬ್ರವರಿ 24, 2007 at 12:47 ಅಪರಾಹ್ನ #

  ಕವಿತೆ ಚೆನ್ನಾಗಿದೆ, ಕನಸಲ್ಲೂ ಆ ಹುಡುಗಿ ಕರೆಯದ ಬರುತ್ತಾಳೆ,ಬಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾಳೊ ಇಲ್ಲಾ ಅವಳು ಬರುವುದೇ ಇಲ್ಲವೋ,ಅವಳ ಹಾದಿಯಲ್ಲಿ ಕಾಯುವುದೇನಾ ಕನಸಿನ ಕೆಲ್ಸ ಅಂತ ಒಂದು ಚಿಕ್ಕ ಸಂದೇಹ.,

 6. ಬ್ಲಾಗು ವಿಹಾರಿ ಮಾರ್ಚ್ 5, 2007 at 2:19 ಫೂರ್ವಾಹ್ನ #

  ಕಚಗುಳಿಯ ಅನುಭವ ಬರೆ ಕವಿಗುಂಟಾದರೆ ಸಾಕೆ? ಓದುವ ಸಹೃದಯನಿಗೂ ಆಗಬೇಕಲ್ಲವೆ? ಪದ್ಯ ಇಷ್ಟು ಸಲೀಸಾದರೆ ಹೇಗೆ ಸ್ವಾಮಿ? ಎಸ್ ಎಸ್ ಎಲ್ ಸಿ ಪಾಸು ಮಾಡಲೂ ಪರಿಶ್ರಮ ಪಡಬೇಕು, ಕಾವ್ಯಕೃಷಿಗೆ ಸ್ವಲ್ಪವಾದರೂ ಪರಿಶ್ರಮ ಬೇಡವೆ? ಭಾವನೆಗಳ ಭೋರ್ಗರೆತವೇ ಕಾವ್ಯ ಅಲ್ಲ! ಕನ್ನಡದಲ್ಲಿ ಎಷ್ಟೆಲ್ಲ ಒಳ್ಳೆಯ ಪದ್ಯಗಳಿವೆ. ಅವುಗಳನ್ನು ಓದಿ ಅನುಭವಿಸಿ ಕಾವ್ಯದ ಗುಟ್ಟನ್ನು ತಿಳಿದುಕೊಳ್ಳಿ.

 7. ravi ಮೇ 9, 2007 at 3:03 ಅಪರಾಹ್ನ #

  superb somu, geLathiya nenapendare hAgE alwa……..

 8. ashwini ಜುಲೈ 13, 2007 at 10:18 ಫೂರ್ವಾಹ್ನ #

  Superb…i just loved it

 9. jagaddesh ಫೆಬ್ರವರಿ 29, 2008 at 2:23 ಫೂರ್ವಾಹ್ನ #

  ಕವಿತೆ ತುಂಬ ಚೆನಾಗಿದೆ ಸೋಮು ,
  ನೀನ್ ಕವಿತೆ ಬಗ್ಗೆ ನಾನ್ ಏನು ಹೇಳ್ಬೇಕು ಅನ್ನುದೆ ಗುಥಗ್ಥ ಇಲ್ಲಾ ..
  ಗೆಳತಿಯ ಗುಟ್ಟು , ಮತ್ತೆ ಅಮ್ಮನೆಂಬ ಮಹಾನ್ ಕಳ್ಳಿ ಸೂಪರ್ ಮತ್ತೆ . ನಿನ್ನ ಹೊಲಿಸಲಾರೆ ಅನ್ನುದು ತುಂಬ ಇಷ್ಟ ಆಯಿತು ಕಣೋ ,

 10. Austin Kielman ಮೇ 20, 2011 at 11:14 ಫೂರ್ವಾಹ್ನ #

  Hi Webmaster, commenters and all people else !!! The weblog was completely improbable! Plenty of great data and inspiration, each of which we all want!Preserve ‘em coming… you all do such a fantastic job at such Ideas… can’t inform you how much I, for one recognize all you do!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: