ನಿನ್ನ ಹೋಲಿಸಲಾರೆ..!!

10 Jun

null

ನನ್ನ ಕತ್ತಲೆಗೆ ಒಂದಿಷ್ಟು
ಬೆಳಕ ನೀಡದ ನಿನ್ನ
ಕಣ್ಣುಗಳನ್ನ ನಾನು
ನಕ್ಷತ್ರಗಳಿಗೆ ಹೋಲಿಸುವ
ಪಾಪವ ಮಾಡಲಾರೆ ಕ್ಷಮಿಸು..!!!.

ಜಗದೊಳಿತಿಗೆ ತಂಪನೆರೆಯುವ
ಚಂದ್ರನ ಅಗಾಧ ಪ್ರೇಮಕ್ಕೆ
ಮತ್ತವನ ರೂಪಕ್ಕೆ ಹೃದಯವಿಲ್ಲದವಳ ನಿನ್ನ ಹೋಲಿಸಿ
ಮತ್ತೆ ಮತ್ತೆ ತಪ್ಪು ಮಾಡಲಾರೆ ಕ್ಷಮಿಸು..!!!

ಸುರಿಯುವ ಬೆಳದಿಂಗಳಿಗೆ,
ಮಲ್ಲಿಗೆ ಕಂಪಸೂಸುವ ತಂಗಾಳಿಗೆ,
ಮುದ್ದು ಮುದ್ದು ಮಗುವಿನ ಮನಸ್ಸುಗಳಿಗೆ
ಕದ್ದು ಕದ್ದು ಕಾಣುವ ಅಗೋಚರ ಕನಸುಗಳಿಗೆ,
ಕನಸುಗಳಿಲ್ಲದ ನಿನ್ನ ಹೋಲಿಸಲಾರೆ ಕ್ಷಮಿಸಿಬಿಡು…!!!

ಇದ್ದು ಇಲ್ಲದಂತಿದ್ದು..ಇರುವ..ದೇವರಿಗೆ,
ಸುಂದರ ಬದುಕಿಗೆ,ಕಾಣದ ನಾಳೆಗಳಿಗೆ,
ಕಳೆದ ಸುಂದರ ನಿನ್ನೆಗಳಿಗೆ,
ಕಳೆಯುತ್ತಿರುವ ಈ ಕ್ಷಣಗಳಿಗೆ.
ಕೇವಲ ನೋವುಣಿಸುವ ನಿನಗೆ ಹೋಲಿಸಲಾರೆ ಕ್ಷಮಿಸಿ ಬಿಡು…!!

Advertisements

16 Responses to “ನಿನ್ನ ಹೋಲಿಸಲಾರೆ..!!”

 1. kaplana June 10, 2007 at 3:16 pm #

  ನನ್ನ ಕತ್ತಲೆಗೆ ಒಂದಿಷ್ಟು
  ಬೆಳಕ ನೀಡದ ನಿನ್ನ
  ಕಣ್ಣುಗಳನ್ನ ನಾನು
  ನಕ್ಷತ್ರಗಳಿಗೆ ಹೋಲಿಸುವ
  ಪಾಪವ ಮಾಡಲಾರೆ ಕ್ಷಮಿಸು..!!!.

  huhhh….amazing thinking hege isht chennag barilikke sadya nimage? hecchu odidavaralla nthira? aadru hege? naanu nimma abhimaani antha helkolloke idu dodda word ansidru ….namge nimma kavitegal ishta aagute antha helteni. i like this poem yaar….

 2. Bigbuj June 11, 2007 at 3:09 am #

  Good one..Ondu hudgiya melina kopa istu chennagi varnisi helbahuda?….Innu intha kavithegalu barith iri

 3. shreenidhi.D.S June 11, 2007 at 7:20 am #

  ಜಗದೊಳಿತಿಗೆ ತಂಪನೆರೆಯುವ
  ಚಂದ್ರನ ಅಗಾಧ ಪ್ರೇಮಕ್ಕೆ
  ಮತ್ತವನ ರೂಪಕ್ಕೆ ಹೃದಯವಿಲ್ಲದವಳ ನಿನ್ನ ಹೋಲಿಸಿ
  ಮತ್ತೆ ಮತ್ತೆ ತಪ್ಪು ಮಾಡಲಾರೆ ಕ್ಷಮಿಸು..

  ಸೋಮು, ಕವನ ಬಹು ವಿಭಿನ್ನವಾಗಿದೆ. ಒಳ್ಳೆಯ ಭಾಷೆ ಮತ್ತು ಶಬ್ದ ಜೋಡಣೆ. ಮುದ ನೀಡಿತು.
  ಇದ್ದು ಇಲ್ಲದಂತಿದ್ದು..ಇರುವ..ದೇವರಿಗೆ,
  ಸುಂದರ ಬದುಕಿಗೆ,ಕಾಣದ ನಾಳೆಗಳಿಗೆ,

  ಒಳ್ಳೆಯ ಭಾವಗೀತೆಯಾಗಿ ಹಾಡಬಲ್ಲಂತ ಕವನ. ಹೀಗೇ ಬರೀತಾ ಇರು ಸೋಮು. ಸುಮಾರ್ ದಿನ ನಿಲ್ಸಿ ಬಿಟ್ಟಿದ್ದೆ ಬರಿಯೋದನ್ನ, ಹೆದ್ರಿಕೆ ಆಗಿತ್ತು. ಈ ಕವನ ನೋಡಿ ಸಮಾಧಾನ ಆಯ್ತು.

 4. prasad June 11, 2007 at 5:27 pm #

  tumba chanagide, nanagantu tumba ista aaitu, istu saralavagi nonda manasina bhavane padya da molaka vyata padisirodu nodi nanage tumba kushi agide. hige hosa hosa kalpanegalu nimage inu hechagi barali.

 5. Sunil Hande June 11, 2007 at 5:30 pm #

  soma bahala adhbutha vaag edhe……sadha heege geechtha eru 🙂

 6. tv srinivas June 12, 2007 at 3:18 am #

  vaah vaah super super kavana

  eMtaha hOlike – eMtaha pada jODaNe

  satyavaagaloo nee nanna manavannu geddiddIye sOmaNNa

  innoo lakShaaMtara kavanagaLu ninniMda mooDi barali

  gurudEva dayaa karo deena jane

 7. Rashmishekar June 12, 2007 at 5:45 am #

  ಇರದುದನ್ನು ಇರುವುದರ ಜೊತೆಗೆ ಸೊಗಸಾಗಿ ಸಮ್ಮಿಶ್ರಗೊಳಿಸಿ ಚಿತ್ರಿಸಿದ್ದೀರಾ, ಒಂದು ನಿಷ್ಟುರತೆಯ ಚಿಹ್ನೆ ಕಾಣಸಿಗುತ್ತದೆಯಾದರು, ಅದು ಕಟುಸತ್ಯ. ಮಾನವೀಯ ಪ್ರೀತಿ ಎಂದಿಗು ಪ್ರಕ್ರುತಿಯ ನೈಜ ಪ್ರೀತಿಗೆ ಸರಿಸಮನಾಗಲರದು, ಆದರೆ ಮನಸ್ಸಿಗೆ ಮಾತ್ರ ತನಗೆ ದೊರೆವ ಪ್ರೀತಿಯನ್ನೆಲ್ಲಾ ಪ್ರಕ್ರುತಿಯ ಹೊರೆಗೆ ಹಚ್ಚಿ ನೊಡುವ ಬಗೆ ಅಭ್ಯಾಸವಗಿಬಿಟ್ಟಿರುತ್ತದೆ ಎಂಬ ಭಾವವನ್ನು ಸುಂದರವಾಗಿ ಹೊರತಂದಿದೀರಾ. Keep Going.

 8. somu June 12, 2007 at 6:38 am #

  kaplana biggbujj shreenidi prasaad sunil matte nam gurugalu matte rashmi vare isht sundaravaagi COMENTISIDA nimge nanna namaskaara[:)]

 9. Rashmi June 12, 2007 at 9:11 am #

  nam kade indanu nimge ondu salute ri Somu

 10. ಶ್ರೀಕಾಂತ June 12, 2007 at 10:08 am #

  ಚೆನ್ನಾಗಿ ಬರೆಯುತ್ತಿದ್ದೀರ.ಮುಂದುವರೆಸಿ.

 11. Revana June 12, 2007 at 6:55 pm #

  ಮಸ್ತ್ ಬರಿದಿಯ ಸೋಮು, Super ಇದೆ ನಿನ್ನ ಭಾವನೆಗಳ ಮಿಳಿತ ಅದರಲೆ ಕಂಡು ಕಾಣದಿರುವ ತುಳಿತ!!

  ಯಾವ ಸಂದರ್ಭದಲ್ಲಿ ಬಂತೋ ಈ ಭಾವನೆಗಳು, ಅರತಲೇ ಸುಮದುರ ಸೂಸುವ ಈ ಹೂವಿನ ಕೂಸು!!

  “ಬರಿ ಬರಿ ಮಾತಲ್ಲ
  ಹುಡುಕಲು ಹೋದರೆ ಸಿಗದಿರುವ ಮುತ್ತಲ್ಲ,
  ಅದರೂ ಕೈಗೆ ಸಿಗದ ತುತ್ತಲ್ಲ,
  ಬರೆ-ಬರೆದೆ ಬರೆಯ ಎಳೆದಿರುವೆ
  ಆ ಕಠೋರ ಮನಕೆ ಕರೆದರು ಬಾರದ ತನಕೆ
  ಮಾತಲೆ ಬಿದ್ದೆದೆ ಒನಕೆ ಏಟು
  ಮಾತೇನು ಬೇಕಿಲ್ಲ ಆ ತಿರುಗಿ ನೋಡದ ತನಕೆ!!”

  “ಇಷ್ಟ ಪಟ್ಟಿರುವೆ ಅಷ್ಟು,
  ಬೇಳಕನೆ ದ್ವೇಷಿಸುವಷ್ಟು,
  ಅದಕೆ ಒಲವಲೆ ತೊರಿರುವೆ ದ್ವೇಷ ಅಷ್ಟಿಷ್ಟೆ
  ಕೈಗೆ ಸಿಕ್ಕಷ್ಟೆ ಮೈಗೆ ಹತ್ತಿದಷ್ಟೆ
  ಮನಕೆ ಮೇತ್ತಿದಷ್ಟೆ,
  ಪದಗಳಗೆ ಸಿಕ್ಕಷ್ಟೆ ನೋಟಕೆ ನಿಲುಕಿದಷ್ಟೆ,
  ನೀ ಸುಳಿಗೆ ಸಿಲುಕಿದಷ್ಟೆ
  ತಿರುಗಿಯೂ ನೋಡದ ತನವ ಕೊಂದಿರುವೆ,
  ಕೊಂದು ಮನದೋಳಗೆ ಬೆಂದಿರುವೆ
  ಬೆಂದು-ಬೆಂದು ನೊಂದಿರುವೆ,
  ಹೂವೆ ಬಾಡಿದ ಹಾಗೆ ಕಂದಿರುವೆ,
  ಕಂದಿದರೂ ಅವಳನೆ ಕರೆದಿರುವೆ!!”

 12. pushpalatha June 14, 2007 at 5:55 am #

  ನನ್ನ ಕತ್ತಲೆಗೆ ಒಂದಿಷ್ಟು
  ಬೆಳಕ ನೀಡದ ನಿನ್ನ
  ಕಣ್ಣುಗಳನ್ನ ನಾನು
  ನಕ್ಷತ್ರಗಳಿಗೆ ಹೋಲಿಸುವ
  ಪಾಪವ ಮಾಡಲಾರೆ ಕ್ಷಮಿಸು..!!!.

  ಜಗದೊಳಿತಿಗೆ ತಂಪನೆರೆಯುವ
  ಚಂದ್ರನ ಅಗಾಧ ಪ್ರೇಮಕ್ಕೆ
  ಮತ್ತವನ ರೂಪಕ್ಕೆ ಹೃದಯವಿಲ್ಲದವಳ ನಿನ್ನ ಹೋಲಿಸಿ
  ಮತ್ತೆ ಮತ್ತೆ ತಪ್ಪು ಮಾಡಲಾರೆ ಕ್ಷಮಿಸು..!!!

  abba enhelbeku anthane gothgthilla astu chennagi bardakbittidiya enidappa yarno kshme bere keltha iddeya, nimma manadaLada bhavangallelle onde sali “jalapathdanthe” dumuki dumki hariyuthiruvanthe gocharisuthide nanaganthu . chennagide nimma bhavanagala bannane ………..

 13. anjali June 17, 2007 at 8:28 am #

  maga soooooooooooooooooooooper… [:)]

 14. ranju June 27, 2007 at 8:41 am #

  ತುಂಬಾ ಚನ್ನಾಗಿ ಬರೆದಿದ್ದಿಯಾ ಸೋಮು. ಏಂಥಾ ಮೆಚ್ಯೂರ್ಡ್ ಕವಿತೆ ನಿಜಕ್ಕೂ ಅದ್ಭೂತ ಪದಗಳ ಜೋಡಣೆ.

 15. sheela July 2, 2007 at 10:09 am #

  ಅದ್ಭುತ ಕಣ್ರೀ,,,,,ನಿಮ್ಮ ಕಲ್ಪನೆ,ನಿಮ್ಮ ಹೋಲಿಕೆ,ಅಬ್ಬಾ ……… !!!

 16. Nandi October 24, 2011 at 9:18 am #

  very very very super enu helabeku anthane gothagthilla.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: