ನಿನ್ನ ನೆನೆಯುತ್ತಾ….!

8 Sep

ಕಾದಿದ್ದೆ ಬಂತು
ಭೂಮಿಯಾಕಾಶಗಳ ಮದ್ಯೆ
ಮನಸ್ಸು ಶಬರಿಯಾಗಿಸಿಕೊಂಡು
ಇಲ್ಲದ ರಾಮನಿಗಾಗಿ……

ನಟ್ಟ ನಡುರಾತ್ರಿ ಎದ್ದು
ಹೋದ ಬುದ್ಧನಂತೆ ಹೋದೆಯಲ್ಲ
ನಾನು ಅನುಭವಿಸಿದ ನೋವು
ನಿರಾಶೆ ತಬ್ಬಲಿತನಗಳ ಲೆಕ್ಕ
ಕೇಳುವೆ ಕೊಡು ನೋಡುವಾ…

ಶುಭ್ರವಾಗಿತ್ತಲ್ಲವ ಮನದ ಕೊಳ
ಒಂದಷ್ಟು ದಿನದಲ್ಲಿ ಅದೆಷ್ಟು ನೀರು
ರಾಢಿಯಾಗಿದ್ದಕ್ಕೆ ಬೇಸರವಿಲ್ಲ
ಮತ್ತದೇ ನೀರು ತುಂಬಲು
ನಾನೆಷ್ಟು ನೀರು ಸುರಿಸಬೇಕು?

ಇಲ್ಲ ಇಂದಿನಿಂದ
ನನ್ನೊಳಗೆ ಯಾವ ಬೀಜವೂ
ಮೊಳಕೆಯೊಡೆಯುವುದಿಲ್ಲ..
ಆದರೂ ಬೆಳೆದು ಹೆಮ್ಮರವಾಗುವಂತಹ
ನನ್ನ ಅಗಾದ ಆಸೆಗಳಿಗೆ ಬಂಜೆತನ ಬಂದಿಲ್ಲ..

ಬತ್ತಿದೊಡಲು ತುಂಬುವುದಿಲ್ಲ
ಎದೆಯೊಳಗೆ ಹಾಲಿನ ನದಿ ಹರಿಯುವುದಿಲ್ಲ
ನಿನ್ನಪ್ಪುಗೆಯಾ ಮಾಯೆಯಲ್ಲಿ ದೇಹ ಮುರಿದು
ದಣಿದು ಬೆವರ ಹೊಳೆಹರಿಯುವುದಿಲ್ಲ…ಪಾಪಿ ನೀನು

Advertisements

16 Responses to “ನಿನ್ನ ನೆನೆಯುತ್ತಾ….!”

 1. shruthi September 9, 2007 at 11:08 am #

  ಬತ್ತಿದೊಡಲು ತುಂಬುವುದಿಲ್ಲ
  ಎದೆಯೊಳಗೆ ಹಾಲಿನ ನದಿ ಹರಿಯುವುದಿಲ್ಲ
  ನಿನ್ನಪ್ಪುಗೆಯಾ ಮಾಯೆಯಲ್ಲಿ ದೇಹ ಮುರಿದು
  ದಣಿದು ಬೆವರ ಹೊಳೆಹರಿಯುವುದಿಲ್ಲ…ಪಾಪಿ ನೀನು

  ondu hennina manasthithiyanna tumba chennagi artha maadkondiddira…nijakku idanna ondu hudugi maatra anubavisi bareda haagide somu avare..thanks….tumba olle kavite kottiddakkke

 2. gayatri September 9, 2007 at 5:19 pm #

  somu neev yavaga ondu hennina manassina olge hogi bariyodu kalitri? NAnage tumba confuse agtha ide idu neev barediddu antha opkolloke yakandre ondu huudgi ya manassalli yen nadiyutte adna neeve anubhavisida hage bardiddiri…

 3. Ranjana Hegde September 10, 2007 at 3:51 am #

  ವಾವ್ ಸೋಮು,
  ಅದ್ಭುತ ಕಣೋ ಪ್ರತಿ ಒಂದು ಸಾಲುಗಳು ಹೃದಯ ಮುಟ್ಟಿದವು. ತುಂಬಾ ದಿನದ ಮೇಲೆ ಬ್ಲಾಗ್ ಅಪ್ ಡೇಟ್ ಮಾಡಿದ್ದೀಯಾ. ನಿನ್ನ ಕವನಗಳಿಗೆ ಸಾಟಿ ಮತ್ತೊಂದಿಲ್ಲ.
  “ಇಲ್ಲ ಇಂದಿನಿಂದ
  ನನ್ನೊಳಗೆ ಯಾವ ಬೀಜವೂ
  ಮೊಳಕೆಯೊಡೆಯುವುದಿಲ್ಲ..
  ಆದರೂ ಬೆಳೆದು ಹೆಮ್ಮರವಾಗುವಂತಹ
  ನನ್ನ ಅಗಾದ ಆಸೆಗಳಿಗೆ ಬಂಜೆತನ ಬಂದಿಲ್ಲ..” ತುಂಬಾ ಇಷ್ಟವಾದ ಸಾಲುಗಳು. ಸೋಮು ಬಿಟ್ಟು ಹೋದವರಿಗೆ ಹೆಗೋ ಗೊತ್ತಾಗುತ್ತೆ ನಮ್ಮ ಕಷ್ಟ ಎನು ಅಂತ. ಅವರು ಯಾವತ್ತು ನಮ್ಮ ನೋವ ಅರಿಯಲಾರರು.

 4. shivakumar hebri September 17, 2007 at 12:05 pm #

  nim blog tumba bari novugala saramale matte matt mumdvaritha ide alva? yen vishesha? adrallu bari prema vaifalyadde melugai madthiddiri antha ansta ide namage yentha vishya nimdu?

  ninna neneyutta chennagide adbhutha bhaavanegala jodane nimmadu

 5. somu September 18, 2007 at 6:42 am #

  shruthi and gayatri…..ond hennina bagge avala novina bagge henne baribeku antha yen illa bidi hehehe bhaavanegalanna hanchkolloke yaraadrenu[:P]..thanks nimma anisikege[:)]

 6. somu September 18, 2007 at 6:45 am #

  ranjana neev heliddu nija kalkondorge adara nov artha agodu…[:)]

  desi panditha opkoteeni idralli novige swalpa jasti pramukyathe kanri[:)]

  shivakumar nijaaa idralli bari novige jaasti mahatva ide annoasht anumaana barod nijaaa hagantha prema vaifalya ntha yen illapppa…ond vele vaifalya aadre idkintha jaasti novina kavitegalanna neev nanninda nireekshe maadabahudu[:P]

 7. Basava September 18, 2007 at 6:52 pm #

  Good one Somu avare,

  Kaviya antaraalada, vibhinna kalpana lokada anaavaranada udaharane illide.

  Keep on going my brother……..

 8. ನವಿಲಗರಿ September 19, 2007 at 5:13 am #

  basava thanks nim coments ge[:)]

 9. bhavana September 21, 2007 at 5:26 am #

  ninna kavitegalalli bari pain irode yaake somu? adrallu ee kavitenalli nanage yella saalugalu ishta aadvu…

 10. anjali September 24, 2007 at 9:18 am #

  maga bombaat kano.. entha bhaavane, sooperagide kano… heege baritiru..

 11. venu October 8, 2007 at 6:24 am #

  ಮನದಲ್ಲಿನ ನೋವುಗಳು ಪರಿಣಾಮಕಾರಿಯಾಗಿ ಅಕ್ಷರರೂಪಕ್ಕಿಳಿದಾಗ ಇಂತಹ ಸಾಲುಗಳು ಸೃಷ್ಟಿಯಾಗುತ್ತವೆ. ಸುಂದರ ಕವನ ಸೋಮು

 12. Aruna.R November 25, 2007 at 8:39 am #

  i’m happy to c and read this all,i can’t say anything more…just keep doing it….thank…u for giveing this…

 13. hemanth December 8, 2007 at 3:56 am #

  your wordings super da

 14. pannaga February 16, 2008 at 2:17 pm #

  ಪ್ರಿಯ ಗೆಳೆಯ..
  ನಾನೂ ನಿನ್ನಂತೆ ಒಬ್ಬ ಭಾವ ಜೀವಿ. ಆದರೆ ಭಾವಗಳು ನಿನ್ನಂತೆ ಅಕ್ಷರಗಳಾಗಿ ಈಚೆಗೆ ಬರವು..
  ಪ್ರಪಂಚ ನಾನಂದುಕೊಂಡಷ್ಟು ಬರಡಾಗಿಲ್ಲ ಎನ್ನುವುದಕ್ಕೆ ನಿನಗಿಂತ ದೊಡ್ಡ ಸಾಕ್ಷಿ ಬೇಕಿಲ್ಲವೇನೋ?
  ನಿನ್ನ ಪ್ರತಿ ಸಾಲುಗಳೂ ಹಸಿರಾಗಿವೆ ಗೆಳೆಯ.. ಆ ಸಾಲುಗಳನ್ನು ಜೀವಂತವಾಗಿರಿಸುವ ಉಸಿರು ಸದಾ ನಿನ್ನಲ್ಲಿ ಹಸಿರಾಗಿರಲಿ..

  Thanks & regards..
  pannaga kumar
  sringeri
  emailpannu.gmail.com

 15. amaresh.pg January 18, 2013 at 12:47 pm #

  nice bayya yidanne munduvaresi ………..yellanu tumba chennagive

Trackbacks/Pingbacks

 1. ನಿನ್ನ ನೆನೆಯುತ್ತಾ… | DesiPundit - September 10, 2007

  […] ನವಿಲಗರಿಯಲ್ಲಿ ನೋವು ನಿರಾಸೆ ತುಂಬಿದ ಪದ್ಯ ಮನತಾಕುತ್ತದೆ. […]

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: