ಕೆಲವು ಬಯಕೆಗಳು……

28 Feb

null

ಹೂಳಿಟ್ಟ ಅಗಾಧ
ಆಸೆಗಳನ್ನ ಮತ್ತೆ
ಹೊರತೆಗೆದು
ಚಿಗುರೊಡೆಯುವಂತೆ
ಮಾಡಬೇಕಿದೆ………..

ಗಾಯಗೊಂಡ
ಎದೆಯ ಸೀಳಿ ಸೀಳಿ
ಮರಣಹೊಂದಿದ
ಕೆಲವು ನೆನಪುಗಳಿಗೆ
ಮತ್ತೆ ಜೀವ ಕೊಡಬೇಕಿದೆ…….

ನಡೆಯಬೇಕಾದ
ದಾರಿಯಲ್ಲಿರುವ
ಕೆಲವು ಮುಳ್ಳುಗಳಿಗೆ
ಹೂವಿನ ಸ್ನೇಹವ
ಮಾಡಿಸಬೇಕಿದೆ………………

ಎಲ್ಲಾ ಕಳೆದುಕೊಂಡ
ಈ ತೋಳುಗಳಿಗೆ
ತಬ್ಬಿಕೊಳ್ಳುವ
ಪರಿಯ ಹೇಳಬೇಕಿದೆ…………..

ನೀನಿಲ್ಲದ ನಿನ್ನೆಗಳಿಗೆ
ನೀನಿರುವ ನಾಳೆಯ
ನದಿತೀರದ ಸಂಜೆಗಳ
ಕುರಿತುಹೇಳಲೇಬೇಕಿದೆ………..

ಆಗುಂಬೆಯಂತಾಗಿದ್ದ
ಕಣ್ಣುಗಳಿಗೆ ಸ್ವಲ್ಪ
ಬೆಳದಿಂಗಳನ್ನು ತುಂಬಬೇಕಿದೆ………..

ಮಾತುಗಳಿಲ್ಲದೆ ಮೌನವಾಗಿದ್ದ
ತುಟಿಗಳಿಗೀಗ ಮತ್ತೆ ಬೀಗ
ಹಾಕಿಕೊಳ್ಳುವ ಕಲೆಯ ಕಲಿಸಬೆಕಿದೆ……….

Advertisements

36 Responses to “ಕೆಲವು ಬಯಕೆಗಳು……”

 1. basava February 28, 2008 at 7:06 pm #

  Wonderful Somu,
  Nice one, i think experienced a lot much ahead of ur age. keep it up, keep writing.
  All the best, take care.

 2. vidya February 28, 2008 at 7:50 pm #

  nange nimma kavana galu thumba ishta agthave.
  Ellinda hiddu tharthira intha padagalanna antha ivatthugu gothagilla thanks for all the words which come together from u…….
  U ROCK SOMU………
  U DEFNITLY ROCK……….

 3. Pavi February 28, 2008 at 11:18 pm #

  nimma kavana is very good…keep it up…very nice

 4. Vinay Beleyur February 29, 2008 at 3:52 am #

  Hiii.. Somu,, really wonderfull. Nim kavithe tumba channagide. Tanx.

 5. n February 29, 2008 at 5:16 am #

  chennagide soma…..
  keep writing….

 6. anjali February 29, 2008 at 6:00 am #

  hmm gr8 tumba chennagide kaNo…
  keep it up.. [:)]

 7. Vishwesh February 29, 2008 at 6:19 am #

  Ee kavana odi kaldu hogbitte Somu. 🙂 Thumba chennagide kano.

  Good going 🙂

 8. Rashmi February 29, 2008 at 11:53 am #

  hmmmmmmmmm kavana odide its gud illa anta helidree tappagbahudeno, but still ello ninna “nenapige barabaradu” kavitiyaa impact ideyonoo ansutte……… yavde creative manushyaa ondu labell olage kutu bareyodu astu samanjasa alla ansutte idu aatana belavanigeyaa modalane biilu haudaa yochisi nodu, nija heltini “nenapige barabaradu” ondu hosa aayaama dondige hora chimmittu it really attracted much…….. ade expectation inda idanna hodidno eno gottilla I was really not satisfied……. U have much more potential than this try and dig it out…………. ALL THE BEST

 9. deepu February 29, 2008 at 2:25 pm #

  Hi i need 2 upload sum kavana .. if its possible

 10. ambika March 1, 2008 at 9:37 am #

  really wonderful…….. tumba chennagide

 11. harry March 1, 2008 at 9:51 am #

  yen guru .. kannada dalli ishta chennagi kavana baribuhuda… naanu try maadteeni ivathinda.. thx somu

 12. bhuvi March 1, 2008 at 10:10 am #

  somu avre, tumba arthabharita vaada kavana…………innu olle olle kavanagalanna aadashtu bega barili antha ashisuva nimma abhimaani………….ನೀನಿಲ್ಲದ ನಿನ್ನೆಗಳಿಗೆ
  ನೀನಿರುವ ನಾಳೆಯ
  ನದಿತೀರದ ಸಂಜೆಗಳ
  ಕುರಿತುಹೇಳಲೇಬೇಕಿದೆ………..e saalu galu thumba tumba chennagide…….
  ella olledaagali endu haaraisuva,

  bhuvi

 13. ravi March 1, 2008 at 10:47 am #

  hey,
  the poem is great and meaningful man,
  ur simply great man,
  bye
  have a nice day
  ravi

 14. sujatha March 1, 2008 at 10:56 am #

  tumba chennagide

  keep writing

 15. girish March 1, 2008 at 11:34 am #

  somanna …tumbaa channagi bardidiyaa….
  keep it up…somannaa…

 16. Ana March 1, 2008 at 3:22 pm #

  chennaagide Somaa…..
  but Maathillada thuti andre maunada beega haakdange alva….. matthe beega haakokke kalsod yaake? beega tereyodu hege antha helkodu 🙂

 17. ಶ್ರೀನಿವಾಸ March 1, 2008 at 3:23 pm #

  ಕವನ ಮಾತ್ರ ಬಹಳ ಬಹಳ ಚೆನ್ನಾಗಿದೆ. ಪದ ಜೋಡಣೆ ಮತ್ತು ಮನದ ಇಂಗಿತವನ್ನು ವ್ಯಕ್ತಪಡಿಸುವಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತಿದೆ

  ಆತ್ಮ ಸಾಕ್ಷಾತ್ಕಾರ ಆಗದ ನನಗೂ ಹೀಗೆಯೇ ಎನಿಸುತ್ತಿದೆ.

  ಆದರೆ, ಇದೊಂದು ಸ್ವಲ್ಪ ಅರ್ಥ ಆಗ್ಲಿಲ್ಲ …

  ಆಗುಂಬೆಯಂತಾಗಿದ್ದ
  ಕಣ್ಣುಗಳಿಗೆ ಸ್ವಲ್ಪ
  ಬೆಳದಿಂಗಳನ್ನು ತುಂಬಬೇಕಿದೆ………..

  ಆಗುಂಬೆಯಲ್ಲಿ ಕತ್ತಲುಗಾಲ ಜಾಸ್ತಿಯಾ? ಕ್ಷಮಿಸು, ನನಗೆ ಆಗುಂಬೆ ಬಗ್ಗೆ ಏನೇನೂ ಗೊತ್ತಿಲ್ಲ

  ಇಂತಹ ಕವನಗಳು ಇನ್ನೂ ಹೆಚ್ಚಾಗಿ ಬರಲಿ

  ಗುರುದೇವ ದಯಾ ಕರೊ ದೀನ ಜನೆ

 18. Srikanth March 2, 2008 at 4:50 pm #

  ಪದ್ಯ ಸೊಗಸಾಗಿದೆ… “ಆಗುಂಬೆಯಂತಾಗಿದ್ದ ಕಣ್ಣುಗಳಿಗೆ” ಎಂಬ ಎರಡು ಪದಗಳೇ ಎರಡು ಚರಣಗಳು ಹೇಳುವಷ್ಟು ಕಥೆಯನ್ನು ಹೇಳುತ್ತದೆ. [ಚಪ್ಪಾಳೆ]

 19. Arun March 2, 2008 at 4:54 pm #

  Agumbeya kaNNu… hmmm…. hOlike chennaagide.. aagumbe sooryaastamakke famoussu, maLe ge famoussu… aagumbeya kaNNu andre vipreeta aLtaa irOdu antha artha maadkobOdu nOdi ivre… 😉

 20. Rohini March 2, 2008 at 7:32 pm #

  Chennaagide..:-)

 21. Sindhu March 3, 2008 at 9:46 am #

  ಸೋಮು,

  ಕವಿತೆ ಚೆನಾಗಿದೆ. ಆಗುಂಬೆಯಂತಾಗಿರುವ ಕಂಗಳ ರೂಪಕ ತುಂಬ ಇಷ್ಟವಾಯಿತು.
  ನೀವೇಕೆ ಬೇರೆ ಬೇರೆ ವಿಷಯಗಳನ್ನ ಟ್ರೈ ಮಾಡೋಲ್ಲ.. ಇಲ್ಲಿವರೆಗೆ ಬರೆದ ಎಲ್ಲವೂ ತುಂಬ ಚೆನಾಗಿವೆ. ವಿಷಯ ವೈವಿಧ್ಯ ಪ್ತಯತ್ನಿಸಿದರೆ ನವಿಲು ಗರಿಗೆದರಿದಂತಿರುತ್ತದೆ.

  ಪ್ರೀತಿಯಿಂದ
  ಸಿಂಧು.

 22. ನವಿಲಗರಿ March 3, 2008 at 11:20 am #

  ಎಲ್ಲಾರಿಗೂ ಧನ್ಯವಾದ..:) ..ಕೆಲವೊಬ್ರು ಕೇಳಿದ್ದೀರ ಎಲ್ಲ ಒಂದೇ ತರ ಕವನ ಬರೀತೀಯ ಅಂತ ಎನ್ ಮಾಡಲಿ ಪ್ರೀತಿ ನೋವು ನನ್ನ ಬಹುನೆಚ್ಚಿನ ವಿಷಯ..ಓಕೆ ಇನ್ನು ಮೇಲೆ ಕಂಡಿತ ತಪ್ಪನ್ನ ತಿದ್ದಿಕೋತೀನಿ….

  ಸಿಂಧು ಅಕ್ಕಯ್ಯ….ನೀವು ಹೇಳಿದ ಹಾಗೆ ಆಗಲಿ ನನ್ನ ಮುಂದಿನ ಕವನ ಸ್ವ್೨ಅಲ್ಪ ವಿಬಿನ್ನವಾಗಿರತ್ತೆ…

  ಅಭಿಮಾನಿ ಹಾರೈಕೆ ಹೀಗೆ ಇರಲಿ…

 23. navada March 3, 2008 at 12:55 pm #

  ಪದ್ಯ ಮೂಡಿಬರುವ ಬಗೆಯೇ ನಿಮ್ಮಲ್ಲಿ ಸೊಗಸಾಗಿದೆ.
  ಆಗುಂಬೆಯಂತಾಗಿದ್ದ
  ಕಣ್ಣುಗಳಿಗೆ ಸ್ವಲ್ಪ
  ಬೆಳದಿಂಗಳನ್ನು ತುಂಬಬೇಕಿದೆ………..
  ಒಳ್ಳೆ ಚಿತ್ರಿಕೆ. ಎಷ್ಟೊಂದು ಸ್ರರಣಿ ಸನ್ನಿವೇಶಗಳನ್ನು ಕಣ್ಣಮುಂದೆ ತರುವ ಶಕ್ತಿ ಇದಕ್ಕಿದೆ.
  ಖುಷಿ ನೀಡಿತು.
  ನಾವಡ

 24. ಚಿತ್ರಾಕರ್ಕೇರಾ March 5, 2008 at 8:54 am #

  ನವಿಲಗರಿ ಚೆನ್ನಾಗಿದೆ..ಕೆಂಡಸಂಪಿಗೆಯಿಂದ ಲಿಂಕ್ ಹುಡುಕಿ ಇಲ್ಲಿಗೆ ಬಂದೆ.
  ವಾಸ್ತವ, ಆಶಯ, ಕನಸುಗಳನ್ನು ಕವನದ ಮೂಲಕ ತುಂಬಾ ಷೆನ್ನಾಗಿಯೇ ಬಿಚ್ಚಿಟ್ಟಿದ್ದೀರಾ..ಥ್ಯಾಂಕ್ಸ್ ಕಣ್ರೀ

 25. gubbacchi March 6, 2008 at 4:57 am #

  ಪ್ರಿಯ ಸೋಮು,

  ನಮಸ್ಕಾರ. ಹೇಗಿದ್ದೀರಿ?

  ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

  ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

  ಡೇಟು: ೧೬ ಮಾರ್ಚ್ ೨೦೦೮
  ಟೈಮು: ಇಳಿಸಂಜೆ ನಾಲ್ಕು
  ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

  ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

  ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

  ಅಲ್ಲಿ ಸಿಗೋಣ,
  ಇಂತಿ,

  -ಅಮರ

 26. Seema March 6, 2008 at 7:03 am #

  ಸೋಮು ಅವರೇ,
  ಎಷ್ಟು ಚೆನ್ನಾಗಿದೆ ನಿಮ್ಮ blog!!
  ನವಿಲೇ ಗರಿಗೆದರಿ ನಿಂತಿದೆ.
  ಇಷ್ಟವಾಯಿತು.

 27. Veeresha March 7, 2008 at 5:30 am #

  ಚೊಲೋ.. ಬರ್ದೀಲೇ..

 28. venuvinod.k.s March 7, 2008 at 10:36 am #

  ನೀನಿಲ್ಲದ ನಿನ್ನೆಗಳಿಗೆ
  ನೀನಿರುವ ನಾಳೆಯ
  ನದಿತೀರದ ಸಂಜೆಗಳ
  ಕುರಿತುಹೇಳಲೇಬೇಕಿದೆ………..

  ಕಲ್ಪನೆ ಚೆನ್ನಾಗಿದೆ ಸೋಮು…ಬರೆಯುತ್ತಿರಿ

 29. Richard March 16, 2008 at 5:02 pm #

  🙂
  tumba chennaagi ide 🙂
  manassu muttidavu ee saalugalu ..

 30. ದ್ಯ್ವಾವ್ರು March 16, 2008 at 8:31 pm #

  ಪದ್ಯ ಚೆನ್ನಾಗಿದೆ. ಇನ್ನೊಂದು ವಿಷಯ ನಾನು ಹೇಳಬೇಕಾಗಿದೆ…
  ನಿನ್ನ ಪರಿಚಯದ ಸಾಲುಗಳಲ್ಲಿ
  ಅವಿತಿರುವುದು ಪದ್ಯದ ಶೀರ್ಷಿಕೆ,
  ಸ್ವಲ್ಪ ಕೆಳಗೆ ಅದು ಬಂದರೆ,
  ಓದುವದಕ್ಕೆ ಆಗುವದಿಲ್ಲ ತೊಂದರೆ….
  ಸಾ

 31. ranjana March 17, 2008 at 6:12 am #

  ತುಂಬಾ ಚನ್ನಾಗಿ ಇದೆ
  ಕವನ
  ಗಾಯಗೊಂಡ
  ಎದೆಯ ಸೀಳಿ ಸೀಳಿ
  ಮರಣಹೊಂದಿದ
  ಕೆಲವು ನೆನಪುಗಳಿಗೆ
  ಮತ್ತೆ ಜೀವ ಕೊಡಬೇಕಿದೆ…… ಇಷ್ಟವಾದ ಸಾಲುಗಳು.

 32. Lakshmi S March 30, 2008 at 2:26 pm #

  ನೀನಿಲ್ಲದ ನಿನ್ನೆಗಳಿಗೆ
  ನೀನಿರುವ ನಾಳೆಯ
  ನದಿತೀರದ ಸಂಜೆಗಳ
  ಕುರಿತುಹೇಳಲೇಬೇಕಿದೆ………..

  ಸಖತ್ optimistic and cutely romantic ಬಯಕೆ ಇದು….ನನಗೆ ತುಂಬಾ ಇಷ್ಟವಾದ ಸಾಲುಗಳು ಇವು. ಹಾಗಂತ ಮಿಕ್ಕವೆಲ್ಲ ಇಷ್ಟವಾಗಲಿಲ್ಲ ಅಂತ ಅಲ್ಲ…ಅತ್ಯದ್ಭುತವಾದ ಈ ಕವನದಲ್ಲಿ ಅತಿಯಾಗಿ ಮೆಚ್ಚುಗೆಯಾದ ಸಾಲುಗಳು ಅಂತ ಹೇಳಲಿಚ್ಛಿಸುತ್ತೇನೆ . ನನ್ನ ಬ್ಲಾಗ್ ಗೆ ನಿಮ್ಮ ಬ್ಲಾಗ್ ರೋಲ್ ನಲ್ಲಿ ಜಾಗ ಕೊಟ್ಟಿದ್ದಕ್ಕೆ ಅನಂತ ಧನ್ಯವಾದ.

  ಲಕ್ಷ್ಮಿ ಶಶಿಧರ್

 33. ಜಯಶಂಕರ್ April 12, 2008 at 6:58 pm #

  ತುಂಬಾ ಚೆನ್ನಾಗಿ ಬರೆದಿದ್ದೀರ.

 34. basavaraj July 24, 2008 at 1:21 pm #

  Sir,

  Nimma ella kavanagalu nanage tumba-tumbane hidisidavu.
  Novu tumbane eddu kaanutte nimma kavanagalli.

  Thanks,
  Basu

 35. nirmala October 13, 2010 at 12:18 pm #

  nimma kavana gallu thumba chanagive

 36. Anil kumar November 29, 2013 at 3:48 pm #

  like men&women’s

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: