ಹನಿ-ಹನಿ

17 ಏಪ್ರಿಲ್

ಅವಳು

ಕನಸುಗಳಿಗೆ
ಕಾರಣಳಾದವಳು
ಕನಸೇ ಆಗಿ ಹೋದವಳು.
——————————-
ಜಾಣತನ

ನಿನ್ನ ತೋಳುಗಳ
ಬಲೆಗೆ ಬೀಳದೆ
ನನ್ನ ಪಿಯೂಸಿ
ಪಾಸುಮಾಡಿಕೊಂಡಿದ್ದು.
——————————-

ಮೂರ್ಖತನ

ನನ್ನ ಕತ್ತಲೆಗೆ
ಬೆಳಕ ನೀಡದ
ನಿನ್ನೆರೆಡು ಕಣ್ಣುಗಳನ್ನ
ಬೆಳಗುವ ದೀಪಗಳಿಗೆ
ಹೋಲಿಸಿ ಪದ್ಯ ಬರೆದಿದ್ದು.
——————————-
ಭಾವನೆಗಳು

ಹೃದಯವೆಂಬ
ತೋಟದಲ್ಲಿನ
ಸುಂದರ ಹೂವುಗಳು
——————————-
ನೀನೆಂದರೆ

ನನ್ನರ್ದ
ಕನಸುಗಳಿಗೆ
ಕಾರಣ..
ಇನ್ನರ್ದ
ನೋವುಗಳಿಗೆ
ಪ್ರೇರಣ.
——————————-

ನೆನಪು

ನನ್ನ ಸಕಲ
ನೊವು ನಿರಾಸೆಗಳಿಗೆ
ನಾನು ಕಂಡುಕೊಂಡ
ಔಷಧ.
——————————-

ಹಾರೈಕೆ

ಹೃದಯಗಳೇ
ನೀವು ಕಳೆದುಕೊಂಡ
ಒಲವೆಲ್ಲ
ಇಂದಲ್ಲ ನಾಳೆ
ಉಲ್ಕೆಗಳ ರೂಪದಲ್ಲಿ
ಸುರಿದು ಬರಲಿ.
——————————-
ತೃಪ್ತಿ

ನಲಿವೇ ಆಗಬೇಕೆಂದಿಲ್ಲ
ನಿನ್ನೊಲವಿನ
ನೋವಾದರೂ ಸಾಕು.
——————————-

ಮಾಯಗಾತಿ.

ಬೆಂಬಿಡದೆ ಕಾಡುತ್ತೇವೆಂದ
ಕಹಿ ಕನಸುಗಳಿಗೆ
ನಿನ್ನ ಒಲವ ಕುರಿತು ಹೇಳಿದೆ
ಪಾಪದ ಕನಸುಗಳು ಕೂಡ
ಕನವರಿಸುತ್ತಿವೆಯಂತೆ ನಿನ್ನ.
——————————-

ಸಾಮ್ಯತೆ.

ನೀನು ನನ್ನಿಂದ
ದೂರಾಗುತ್ತಿರುವುದಕ್ಕೂ
ನಾನು ಸಾವಿಗೆ
ಹತ್ತಿರವಾಗುತ್ತಿರುವುದಕ್ಕು
ಅಂತಹ ವ್ಯತ್ಯಾಸವೇನಿಲ್ಲ ಬಿಡು
——————————-

ಸಾಗರ.

ನಿನ್ನ ಒಲವು
ಮತ್ತು ಅದರ
ವಿಶಾಲತೆಯ ಮುಂದೆ
ಸೋತು ಸುಣ್ಣವಾಗಿದ್ದು.
——————————-

ಹೃದಯ.

ನಿನ್ನನ್ನ ಕಣ್ಣುಗಳಲ್ಲಿ
ತುಂಬಿಕೊಂಡ ದಿನ
ನಲಿದಾಡಿದ್ದು
ದೂರಾಗುತ್ತಲೇ ಅತ್ತು
ಗೋಳಾಡಿದ್ದು.
——————————-

ನಿಜ.

ಗಟ್ಟಿಯಾಗಿ ನಿನ್ನ
ಕೈ ಹಿಡಿದಿದ್ದು
ಆಸೆಯಿಂದಲ್ಲ..
ನನ್ನ ಬಿಟು ಹೋಗುತ್ತೇನೆಂದ
ನಿನ್ನ ಮೇಲಿನ ಬಯದಿಂದ.
——————————-
ಸುಳ್ಳು.

ನನ್ನ ಕನಸಿಗೆ ಪ್ರತಿ ದಿನ
ನೀನು ಬರುವುದೇ
ಇಲ್ಲವೆಂದು ಎದೆತಟ್ಟಿಕೊಂಡು
ನಾನು ಹೇಳಿದ್ದು.
——————————-

ದುರಂತ.

ನಾನು ನಿನಗೆ
ನೆನಪಾಗದಿರುವುದು
ನೀನು ನನಗೆ ನೆನಪೇ ಆಗಿರುವುದು.
——————————-

ಸುಳ್ಳು.

ನಿನ್ನ ಕನಸಿಗೆ ನಾನು
ನನ್ನ ಕನಸಿಗೆ ನೀನು
ಬಂದೇ ಇಲ್ಲವೆಂದು
ಎದೆತಟ್ಟಿಕೊಂಡು ಹೇಳಿದ್ದು.
——————————-

ಗುಲಾಬಿ.

ನನಗಿಂತಲೂ
ಮೊದಲೇ
ನನ್ನವಳ ಬಂಗಾರದ
ಬೆರಳ ಸ್ಪರ್ಶಿಸಿದ
ನನ್ನ ಪ್ರೀತಿಯ ಶತೃ.
——————————-

ಶಾಪ

ದೇವರೇ ಅವನಿಗೋಸ್ಕರ
ಕೂಡಿಟ್ಟ ಅಷ್ಟು
ಕನಸುಗಳಲ್ಲಿ
ಒಂದಾದರು ಸುಳ್ಳಾದರೆ
ನಿನಗೆ ಮರಣ ಬರಲಿ.
——————————-

ಬಾ

ಎದೆಯ ದೀಪ
ಉರಿದು ದಣಿದು
ಆರುವ ಮುನ್ನ.
——————————-
ನಾನು

ನಿನ್ನ ನೆನಪೆಂಬ ನೋವುಗಳ
ಗೋಡೆಗಳಲ್ಲಿ ಪ್ರೀತಿಯ
ಚಿತ್ರ ಬಿಡಿಸುತ್ತ ನಿಂತ
ಒಬ್ಬ ವಿಧೂಷಕಿ ಅಷ್ಟೆ.
——————————-

ಬಯಕೆ

ಈ ಎದೆಯ
ಅಗೆದು ಬಗೆದು ಮೀಟಿ
ತೋಟ ಮಾಡಿ
ನನಗೊಂದು ಗುಲಾಭಿ
ಕೊಡ್ತೀಯಾ ಗೆಳೆಯ..
——————————-

ತುಂಟ

ಗೆಳತಿ ತನ್ನ ಹಣೆಗಿಟ್ಟ
ಅಷ್ಟೂ ಮುತ್ತುಗಳ
ಹೊರತಾಗಿಯೂ, ತನ್ನದೇ
ಕೆನ್ನಗಿಲ್ಲವಲ್ಲವೆಂದು ಜಗಳ ತೆಗೆದ
——————————-

——————————————————
ಇವೆಲ್ಲ ಕನ್ನಡದ ದಿನಪತ್ರಿಕೆ ವಿಜಯ-ಕರ್ನಾಟಕದಲ್ಲಿ ಪ್ರಕಟವಾದಂತವು…:)
——————————————————

Advertisements

8 Responses to “ಹನಿ-ಹನಿ”

 1. Ganesh K ಏಪ್ರಿಲ್ 18, 2008 at 2:25 ಅಪರಾಹ್ನ #

  ಸೋಮು , ಹುಡುಗಿಯ ಭಾವನೆಗಳನ್ನ ಚೆನ್ನಾಗಿಯೇ ಬಿಂಬಿಸುತ್ತೀಯ. ಆದರೆ, ನಂದೊಂದು ಮಾತು. ಅವರ ದನಿಯಲ್ಲಿ ಬರೆಯುವ ಮುನ್ನ, ಅವರ ದನಿಯನ್ನ ಒಮ್ಮೆ ವಾಸ್ತವದ ದೃಷ್ಟಿಕೋನದಿಂದ ನೋಡಿ, ಅವರು ಅನುಭವಿಸುವ ಅನುಭೂತಿಯನ್ನ ಒಮ್ಮೆ ಅವರನ್ನ ಅವಾಹಿಸಿಕೊಂಡು ಅನುಭವಿಸಿ ಬರೆದರೆ ಇನ್ನೂ ಚೆಂದ ಅನ್ನಿಸುತ್ತದೆ. ಯಾಕೆಂದರೆ, ಹುಡುಗರಾಗಿ ನಾವು ಹುಡುಗಿಯರು ಏನನ್ನ ಬಯಸುತ್ತಾರೆಂದು ನಾವು ಊಹಿಸಿಕೊಳ್ಳುತ್ತೇವೇ ಹೊರತು ಅವರು ಏನನ್ನ ಬಯಸುತ್ತಾರೆಂದು ತಿಳಿದು, ಅನುಭವಿಸಿ ಬರೆಯುವುದನ್ನ ಅಭ್ಯಾಸಿಸಿರುವುದಿಲ್ಲ. ಹಾಗಾಗಿ ಈ ಮಾತು ಹೇಳಿದೆ.

  ಒಮ್ಮೆ ನನ್ ಪಂಚ್ ಲೈನ್, ಪ್ರತಿಸ್ಪಂದನದ ಕಡೆಗೂ ಕಣ್ಣು ಹಾಯಿಸಿ ರಾಯರೆ…! 🙂

 2. antarangadaapthaswara ಏಪ್ರಿಲ್ 19, 2008 at 12:49 ಅಪರಾಹ್ನ #

  somu, chutukagaLu soopar. innashTu chutukagaLa nireeksheyalli
  – vijayraj kannanth

 3. Lakshmi S ಏಪ್ರಿಲ್ 19, 2008 at 5:58 ಅಪರಾಹ್ನ #

  ಜಾಣತನ

  ನಿನ್ನ ತೋಳುಗಳ
  ಬಲೆಗೆ ಬೀಳದೆ
  ನನ್ನ ಪಿಯೂಸಿ
  ಪಾಸುಮಾಡಿಕೊಂಡಿದ್ದು.

  ಸಖತ್ತಾಗಿದೆ ಇದು !! [:)] extremely witty !! ಆದರೆ, ಹುಡುಗರು ಹುಡುಗೀರಿಂದಲೇ ಪಿಯೂಸಿ fail ಆಗ್ತಾರೆ ಅನ್ನೋದು ಅಷ್ಟೋಂದು ಸರಿ ಅಲ್ಲ ನೋಡಿ….there might be many other reasons.

  ಚುಟುಕಗಳು ಒಂದಕ್ಕಿಂತ ಒಂದು ಸೂಪರಾಗಿರೋದ್ರಿಂದ….ನನ್ನಂಥಾ ಪಾಮರರಿಗೆ ಒಟ್ಟಿಗೆ Digest ಮಾಡಿಕೊಳ್ಳಲು ಸಲ್ಪ ಕಷ್ಟ…instalment ನಲ್ಲಿ ಕೊಟ್ಟಿದ್ದಿದ್ದ್ರೆ….ನಮಗೆ ಮಹದುಪಯೋಗ ಆಗಿರೋದು !!

 4. ನವಿಲಗರಿ ಏಪ್ರಿಲ್ 20, 2008 at 7:56 ಫೂರ್ವಾಹ್ನ #

  ganesh nimma salahege tumba tumba abhaari[:)]…vijayraaj ji…nimma haraike heege irali…….

  preethiya lakshmi……………..idu kevala hudugi ge anvayisutte antha yaake ankoteeri? illi yaarannu hesarisilla…hudugiyu aagabahudu huduganu aagabahudu…..barediddu huduga ashte…..ashtu maatrakke heege tilkondu bitre hege? illiruva yellachutukugala kadege gamana harisi…illi yaara paravaagiyu illa yaara viruddavaagiyu illa[:)]……

  nimma
  somu

 5. harish ಆಗಷ್ಟ್ 28, 2008 at 1:04 ಅಪರಾಹ್ನ #

  ನೀನು ನನ್ನಿಂದ
  ದೂರಾಗುತ್ತಿರುವುದಕ್ಕೂ
  ನಾನು ಸಾವಿಗೆ
  ಹತ್ತಿರವಾಗುತ್ತಿರುವುದಕ್ಕು
  ಅಂತಹ ವ್ಯತ್ಯಾಸವೇನಿಲ್ಲ ಬಿಡು
  i like so much for this one and any one in navilagari

 6. Priya ಅಕ್ಟೋಬರ್ 15, 2009 at 11:52 ಫೂರ್ವಾಹ್ನ #

  ನೀನು ನನ್ನಿಂದ
  ದೂರಾಗುತ್ತಿರುವುದಕ್ಕೂ
  ನಾನು ಸಾವಿಗೆ
  ಹತ್ತಿರವಾಗುತ್ತಿರುವುದಕ್ಕು
  ಅಂತಹ ವ್ಯತ್ಯಾಸವೇನಿಲ್ಲ ಬಿಡು
  Edan odhi bejar aithu…..yarigu hege agadu beda.

 7. ravikiranhv ಅಕ್ಟೋಬರ್ 1, 2012 at 2:39 ಅಪರಾಹ್ನ #

  Excellent sir……… tumba chennagide 🙂

 8. chaithra ಏಪ್ರಿಲ್ 8, 2014 at 8:34 ಫೂರ್ವಾಹ್ನ #

  bavane tharuva manasannu thiligoli inthaha odu chutukugal mansige kushi koduthade

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: