ಹನಿ-ಹನಿ

23 ಜೂನ್

ಸತ್ಯ
———————–
ಚುಕ್ಕಿಯಿಲ್ಲದೆ ನೀನಿಟ್ಟ
ನನ್ನ ಹೆಸರಿನ ರಂಗೋಲಿಯ
ಆಯುಷ್ಯದ ಬಗ್ಗೆ ನಂಬಿಕೆಯಿಲ್ಲ-
ನಿನ್ನ ಕುರಿತು ಈ ಎದೆಯ ಮೇಲೆ
ಬರೆದುಕೊಂಡ ಭರಪೂರ
ಭಾವನೆಗಳಲ್ಲಿ ಬರವಸೆಯಿದೆ

ಸಲಹೆ
———————–
ಪ್ರತಿ ಸಲ ಬೇಡ
ಅಂತಹ ದುರಾಸೆಯಿಲ್ಲ ನನಗೆ.!
ದಿನಕ್ಕೊಂದು ಸಲ ನನ್ನ ಕನಸಿಗೆ ಬಂದು
ಮತ್ತೆ ನಾಳೆ ಬರ್ತೀನಿ ಅನ್ನೊ
ಬರವಸೆ ಕೊಟ್ಟು ಹೋಗಿ ಬಿಡು

ಕಾಮ
———————–
ನಮ್ಮ ಗೆಳೆಯ ಗೆಳತಿಯರ
ಪ್ರೇಮದೂರಿನಾಚೆ ಇರುವ
ಕಾಡೊಳಗೆ ಅವಿತು
ಕುಳಿತಿರುವ ಒಂದು ಚಿರತೆ.

ಗೆಳೆಯ
———————–
ನಾನು ಜೊತೆಯಲ್ಲಿರುವಾಗಲೆಲ್ಲ
ಇವನ ಕಣ್ಣಿಗೆ ಕಸ ಬೀಳುತ್ತೆ,
ಅರ್ದ ತಿಂದ ಹಣ್ಣಿನ ಮೇಲೂ
ಇವನ ಕಣ್ಣು ಬೀಳುತ್ತೆ,
ಮಜಭೂತಾದ ಮಾರ್ಚ್ ತಿಂಗಳಲ್ಲೂ
ಇವನಿಗೆ ಚಳಿಗಾಳಿ ಬೀಸುತ್ತೆ.

ಕೋರಿಕೆ
———————–
ಪ್ರತಿ ಕಾಮನ ಬಿಲ್ಲಿಗೂ ಇವಳ
ಹೆಸರಿಡುತ್ತೇನೆ, ಹೆಸರಿಡಿದು
ಕೂಗುವಷ್ಟರಲ್ಲಿಯೆ ಮಾಯವಾಗುತ್ತಾಳೆ
ದೇವರಲ್ಲಿ ಯಾವತ್ತು ನನಗೆ
ಕಾಮನಬಿಲ್ಲು ಕಾಣಿಸದಂತೆ ಶಾಪ ಕೊಡು
ಅಂತ ಕೇಳಿಕೊಳ್ಳಬೇಕು !

Advertisements

4 Responses to “ಹನಿ-ಹನಿ”

 1. ಸ್ವಾಮಿ ಜೂನ್ 25, 2008 at 5:51 ಫೂರ್ವಾಹ್ನ #

  ತುಂಬಾ ಅರ್ಥಗರ್ಭಿತವಾದ ಹನಿಗಳು.
  ———————–
  ಪ್ರತಿ ಕಾಮನ ಬಿಲ್ಲಿಗೂ ಇವಳ
  ಹೆಸರಿಡುತ್ತೇನೆ, ಹೆಸರಿಡಿದು
  ಕೂಗುವಷ್ಟರಲ್ಲಿಯೆ ಮಾಯವಾಗುತ್ತಾಳೆ
  ದೇವರಲ್ಲಿ ಯಾವತ್ತು ನನಗೆ
  ಕಾಮನಬಿಲ್ಲು ಕಾಣಿಸದಂತೆ ಶಾಪ ಕೊಡು
  ಅಂತ ಕೇಳಿಕೊಳ್ಳಬೇಕು !

  ಈ ಹನಿ ನನಗೆ ತುಂಬಾ ಇಷ್ಟವಾಯಿತು. ಇನ್ನೊಷ್ಟು ಮಧುರ ಹನಿಗೈಯಲಿ ನಿಮ್ಮ ಕವಿಯ ಮುಗಿಲಿನಿಂದ

 2. ನಿಮ್ಮವ - ರುದ್ರ ನಾಗೇಂದ್ರ ಸ್ವಾಮಿ ಜೂನ್ 25, 2008 at 1:10 ಅಪರಾಹ್ನ #

  ಸೋಮು ನಿಮ್ಮ ಕವನ ಓದಿಧಗ ಹಳೆಯ ನೆನ್ನಪುಗಳ್ಳು ಮರುಕಳಿಸುಥವೆ ಅದನು ಮರಯ ಬೇಕು ಅಂದುಕೊದದ್ನು ಪುನಹ ನೆನಪಿಸುತ್ಹವೇ ಅದೇನೇ ಇರ್ಲಿ ಈ ಕಲ್ಪನೆಗೆ & ಬರಹಕೆ ಹ್ಯಾಟ್ಸ್ ಹಾಪ್

 3. Lakshmi S ಜೂನ್ 28, 2008 at 6:26 ಅಪರಾಹ್ನ #

  ಸಲಹೆ
  ———————–
  ಪ್ರತಿ ಸಲ ಬೇಡ
  ಅಂತಹ ದುರಾಸೆಯಿಲ್ಲ ನನಗೆ.!
  ದಿನಕ್ಕೊಂದು ಸಲ ನನ್ನ ಕನಸಿಗೆ ಬಂದು
  ಮತ್ತೆ ನಾಳೆ ಬರ್ತೀನಿ ಅನ್ನೊ
  ಬರವಸೆ ಕೊಟ್ಟು ಹೋಗಿ ಬಿಡು

  ಸಿಕ್ಕಾಪಟ್ಟೆ ಅರ್ಥಗರ್ಭಿತವಾದ ಹನಿ ! ಎಲ್ಲವೂ ಚೆನ್ನಾಗಿದೆಯಾದರೂ ಇದು ಸಲ್ಪ ಸ್ಪೆಷಲ್ಲು ಅನ್ನಿಸಿತು!

 4. laxman ಏಪ್ರಿಲ್ 30, 2012 at 12:40 ಅಪರಾಹ್ನ #

  Geleyaa –adhbutha.-.
  Really your great.–

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: