ಹನಿ-ಹನಿ

30 Jul

ದೇವರು
———————–
ಕೇವಲ ಒಂದೇ ಒಂದು
ಜನುಮದಲ್ಲಾದರೂ ನಾನು
ನಿನ್ನ ಜೊತೆ ಬದುಕಿ ಬಾಳಬೇಕು
ಅನ್ನುವ ನನ್ನ ಮುಗ್ಧ ಬೇಡಿಕೆಗೂ
ಅಸ್ತು ಅನ್ನದ ಒಬ್ಬ ಜೋಕರ್.

ಪ್ರಶ್ನೆ
———————–
ನಿನ್ನಿಂದ ಮನದ ಸರೋವರ
ರಾಡಿಯಾಗಿದ್ದಕ್ಕೆ ಬೇಸರವಿಲ್ಲ
ಮತ್ತದೇ ಹಳೆಯ ನೀರ ತುಂಬಿಸಲು
ನಾನೆಷ್ಟು ನೀರು ಸುರಿಸಬೇಕು
ಸ್ವಲ್ಪ ಹೇಳ್ತೀಯಾ?

ಸುಳ್ಳು
———————–
ನನ್ನಲ್ಲಿರುವ ಸಾವಿರ
ನೋವಿನ ಕವನಗಳಿಗೂ
ಮತ್ತೆ ಸಾವಿರಾರು ಕಣ್ಣೀರ
ಕಥೆಗಳಿಗೆ ನೀನೆ ಕಾರಣವಾದರೂ
“ಛೇ” ನೀನಲ್ಲವೆಂದು ಈ ಹೃದಯ
ಸುಳ್ಳೇ ಸಮಧಾನ ಮಾಡುವ ಕಲೆ

ಬಯಕೆ
———————–
ಈ ಮಳೆಗಾಲದಲ್ಲಿ
ಮಳೆಯ ಹನಿಯ ಜೊತೆ
ನನ್ನ ಕೆಲವೇ ಕೆಲವು ಬೆಚ್ಚನೆಯ
ಬಯಕೆಗಳೂ ಬೆರೆತು ಅವಳಲ್ಲಿ
ಸುರಿದು ಅವಳು ನಾಚಿ ಕೆಂಪಾಗಿ
ನಾನು ನೆನಪಾಗಿ ಹಬ್ಬವಾಗಬಾರದ.?
———————–

ನಿರಪರಾದಿಗಳು
———————–
ನಿನ್ನೆದೆಯಲ್ಲಿ ಜಾಗ
ಕೇಳಿದ್ದು ನಾನು,
ಇಲ್ಲವೆಂದಿದ್ದು ನೀನು,
ನೊಂದಿದ್ದು ಮಾತ್ರ ಹೃದಯ,
ಆದರೆ ಬೋರ್ಗರೆದು ಅತ್ತಿದ್ದು
ಮಾತ್ರ ಈ ಕಣ್ಣುಗಳು.

Advertisements

7 Responses to “ಹನಿ-ಹನಿ”

 1. sunaath July 31, 2008 at 6:06 am #

  ಚುರುಕಾದ ಚುಟುಕಗಳು!

 2. swamy August 1, 2008 at 8:58 am #

  ಸೊಗಸಾದ ಚಿನ್ನ ಚಿನ್ನ ಹನಿಗಳು….

  ಸುಳ್ಳು
  ———————–
  ನನ್ನಲ್ಲಿರುವ ಸಾವಿರ
  ನೋವಿನ ಕವನಗಳಿಗೂ
  ಮತ್ತೆ ಸಾವಿರಾರು ಕಣ್ಣೀರ
  ಕಥೆಗಳಿಗೆ ನೀನೆ ಕಾರಣವಾದರೂ
  “ಛೇ” ನೀನಲ್ಲವೆಂದು ಈ ಹೃದಯ
  ಸುಳ್ಳೇ ಸಮಧಾನ ಮಾಡುವ ಕಲೆ
  ……….
  ಈ ಹನಿ ತುಂಬಾ ಇಷ್ಟವಾಯಿತು.

 3. Poornima Bhat August 3, 2008 at 2:12 pm #

  ಸೋಮು,
  ಚೆನಾಗ್ ಬರೀತೀರಿ. ಇಷ್ಟ ಆಯ್ತು ಎಲ್ಲಾ ಪೋಸ್ಟ್ ಗಳು. ಒಂದೇ ಒಂದು ಸಜೆಶನ್ನು.. ಈ ಬ್ಲ್ಯಾಕ್ ಅಂಡ್ ವೈಟ್ (ಕಪ್ಪು ಬ್ಯಾಕ್ ಗ್ರೌಂಡ್ – ಬಿಳಿ ಅಕ್ಷರ) ಥೀಮ್ ಕಣ್ಣಿಗೆ ಸ್ವಲ್ಪ ಕಷ್ಟ ಕೊಡತ್ತೆ (ಇದು ನನ್ನ ಪರ್ಸನಲ್ ಅನುಭವವೂ ಇರಬಹುದು). ಎನಿವೇ ಬ್ಲಾಗ್ ಚೆನ್ನಾಗಿದೆ ಕಣ್ರೀ…

 4. Venu..H.P August 19, 2008 at 3:26 am #

  Somu nanin kavana,story odtha ertini tumba chanagive, b’lore nallikelavu sala nanage tumba bejaradaga ninna Web nodtini adaralirodanna odtha time kalitini.

  Thank you Somu..

 5. somu August 19, 2008 at 9:30 am #

  sunaath and swami danyavadagalu:)

  dear pooornima medam neev heliddante madiddini:) thanks 🙂

  Dear Venu 🙂 thank u swalp jasti hogalibitri anstide nanage:)

 6. sudarshan August 27, 2008 at 12:03 pm #

  hi
  somu

  ella chennagide,swalpa malenadina parisarada bagge 2-3 kavite na hakabeku

 7. Sinchana August 27, 2008 at 1:30 pm #

  Hai,

  Estolleya Definitions Wah! Really wonderful!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: