ಹೆಸರಿನ ಹಂಗಿಲ್ಲದ ಹನಿಗಳು

4 Aug

ರಾತ್ರಿಯೆಲ್ಲ ನನಗೆ
ನಿದ್ರೇನೆ ಬರಲ್ಲಪ್ಪ
ಮೊದಲು ಆ ದಿಂಬಿಗಿಟ್ಟ
ನಿನ್ನ ಹೆಸರನ್ನ ಬದಲಿಸಬೇಕಾಗಿದೆ

ನಂಗೆ ಯಾರಿಗಾದ್ರು ಕೆಟ್ಟದಾಗಿ
ಬಯ್ಯಬೇಕು ಅನ್ನಿಸಿದ್ರೆ ಸೀದ
ದೇವರ ಹತ್ರ ಹೋಗಿ “ನೀನು
ಈಡಿಯಟ್” ಅಂದು ಬಿಡ್ತೀನಿ.!
ನೀನೆ ಹೇಳು, ಇಲ್ಲಿ ನಿಂಗು ನಂಗು
ಕೇವಲ ಏಳು ಜನ್ಮ ಅಂತ
ಕಾನೂನು ಮಾಡಿದ್ದು ಇವನ ತಪ್ಪಲ್ಲವ

ದೇವರು ಅನ್ನುವ ಪುಣ್ಯಾತ್ಮ
ನನಗೆ ಮೂರು ವರ ಕೊಟ್ರೆ
ಮೊದಲೆರೆಡು ವರವನ್ನ ನಿಂಗೆ
ಒಳ್ಳೆಯದು ಮಾಡಪ್ಪಾ ಅಂತ
ಕೇಳ್ಕೋತೀನಿ..ಮತ್ತೊಂದು ವರನ
ನಿನಗೆ ತುಂಬಾ ತುಂಬ ಒಳ್ಳೆಯದು
ಮಾಡು ಅಂತ ಬೇಡ್ಕೋತೀನಿ

ನನಗೊಂದು ಪುಟಾಣಿ
ಕನಸಿದೆ ಗೊತ್ತ? ದೇವರಿಗೆ
ಕೋಟಿ ಸುಳ್ಳುಗಳನ್ನಾದರೂ
ಹೇಳಿ ನಿನ್ನ ಪಡಿಬೇಕು ಅನ್ನೋದು

Advertisements

8 Responses to “ಹೆಸರಿನ ಹಂಗಿಲ್ಲದ ಹನಿಗಳು”

 1. kavana August 4, 2008 at 1:41 pm #

  nijakku ishtondu saralavagi ishtondu arthaviruva haage baribahudu annodanna torsi kottiddiri …kuntini anno blognalli naalku saalu annuva chutukugalanna oduvaaga yeshtu kushi agato ashte kushi agtide…keep writing

  kavana

 2. Tina August 5, 2008 at 6:25 pm #

  ಚೆಂದದ ಸರಳ ಪ್ರೇಮವುಕ್ಕುವ ಸಾಲುಗಳು.
  ಪ್ರೀತಿಯೂ ಇಷ್ಟೆ ಸರಳವಾಗಿ ಇರುವ ಹಾಗಿದ್ದರೆ ಚೆನ್ನಿತ್ತು
  ಅಲ್ಲ ಸೋಮು?
  -ಟೀನಾ

 3. antarangadaapthaswara August 6, 2008 at 8:15 am #

  ಸೋಮಣ್ಣಾ…

  ನಿನ್ನ ಕಲ್ಪನೆಯ ಶಕ್ತಿಗೆ ನನ್ನದೊಂದು ಸಲಾಮ್ ಇಟ್ಕೊ..
  ಅದು ಹ್ಯಾಗೆ ದೊರೆ ಮನಸಿನ ನವಿರು ಭಾವನೆಗಳನ್ನು ಇಷ್ಟು ಸರಳವಾಗಿ ಪದಗಳಲ್ಲಿ ಪೋಣಿಸಿ ಮುದ್ದಾಡ ಸಾಲುಗಳ ಮಾಲೆ ಹೆಣಿತೀಯೋ ಪುಣ್ಯಾತ್ಮ….?
  ನೀ ಹಿಂಗೇ ಮುದ್ ಮುದ್ ಆಗಿ ಬರೀತಾ ಇರು…
  ನಾವ್ ಓದಿ ಸಂತೋಷಪಡ್ತೀವಿ

  – ವಿಜಯರಾಜ್ ಕನ್ನಂತ್

 4. sunaath August 6, 2008 at 5:35 pm #

  ತುಂಬ ಭಾವನಾತ್ಮಕ ವರ್ಣನೆ. ನವಿಲುಗರಿಯ ಹಾಗೆ ನವಿರಾದ ವರ್ಣನೆ.

 5. neelanjaLa not neelanajaNa August 7, 2008 at 4:49 pm #

  sakattagide 😀

 6. ನವಿಲಗರಿ August 8, 2008 at 12:13 pm #

  ಕವನ ಅವರೇ ತುಂಬಾ ಹೋಗಳಿಬಿಟ್ರೆ ಹೇಗೆ?

  ಅಲ್ಲವ ಟೀನ ಮೇಡಮ್? ಎಷ್ತು ಚೆನ್ನಾಗಿರ್ತಿತ್ತು?

  ವಿಜಯ್ರಾಜ್ ಜೀ..ನೀವ್ ಕೂಡ ನನ್ನ ಹೊಗಳೋದು ಯಾವಗ ನಿಲ್ಲಿಸ್ತೀರ?

  ಸುನಾತ್ ಮತ್ತೆ ನೀಲಾಂಜಲ… 🙂

 7. shaila August 8, 2008 at 2:58 pm #

  somu avre …:)
  super kavithegalu……
  heege nimma baravanigeya payana mundvarithaa irliiiii:)

 8. anju September 14, 2008 at 1:29 pm #

  awesome….. wonderful, superb…….

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: