ಜೋಯೀಸರ ಮಗಳು

8 Aug

ಜೋಯೀಸರ ಮನೆಯ
ಹೊಲೆಯರ ಮಾದ ತನ್ನ
ಪೊಗದಸ್ತು ಎದೆಯ ಸುರಿಸಿಕೊಂಡು
ಸೌದೆಯ ಸಿಗಿಯುತ್ತಿದ್ದರೇ,
ಜೋಯೀಸರ ಮಗಳಿಗೆ
ಮಾದನ ಎದೆಯ ರೋಮದ
ಲೆಖ್ಖ ಸಿಗದೇ ತಡವರಿಸುತ್ತಿದ್ದಳಾ-
ಇಲ್ಲ ತನ್ನ ಮೇಲು ಜಾತಿಯ ಮೇಲೆ
ಶಪಿಸುತ್ತ ಕಂಪಿಸುತ್ತಿದ್ದಳಾ ಗೊತ್ತಿಲ್ಲ…

ಮಣ್ಣಿನ ಮಡಿಕೆಯಲ್ಲಿ ಮಾದನಿಗೆ
ಕುಡಿಯಲು ನೀರು ಸುರಿಯುವ ಬದಲು
ದೇವರ ಗುಡಿಯಲ್ಲಿದ್ದ ಬೆಳ್ಳಿ ಚೊಂಬಿನಲ್ಲಿ
ಹಾಲು ತುಂಬಿಸಿ ಕುಡಿಸುವಾಗಲಂತೂ
ತಾನು ಜೋಯೀಸರ ಮಗಳೆಂಬುದನ್ನು
ಮರೆತು ಮಾದನ ಕುಡಿಮೀಸೆಗೆ
ಬೆಳ್ಳಿಯ ಚೊಂಬು ತಾಕಿಸಿ ಚೊಂಬ ತನ್ನ
ಎದೆಗೊತ್ತಿಕೊಂಡು ರೋಮಾಂಚನಗೊಂಡಿದ್ದಳು…

ರಾತ್ರಿ ಮನೆಯ ಹೊರಗೆ ಮಲಗಿ
ಗೊರಕೆ ಹೊಡೆಯುತ್ತಿದ್ದವನ ಕಾಲ
ಬೇಕಂತಲೇ ತುಳಿದು ಕಣ್ಣುಗಳಲ್ಲಿ
ಎಲ್ಲ ತುಂಬಿಕೊಂಡು ಅವನನ್ನೇ
ನೋಡುತ್ತಿದ್ದವಳ ಕಾಲ ಮುಟ್ಟಿ
ಮೂರು ಸಲ ನಮಸ್ಕರಿಸಿದ
ಮಾದನ ಮುಗ್ಧತೆಯನ್ನ
ಕಂಡು ಒಳಗೊಳಗೇ ದುಃಖಿಸಿದ್ದಳು…

ತನ್ನ ಮದುವೆಯಾಗಿ ಇನ್ನೇನು
ಗಂಡನ ಮನೆಗೆ ಹೊರಡಬೇಕು
ಅನ್ನುವಷ್ಟರಲ್ಲಿಯೇ, ಮಾದ ತಾನೆ
ಹೊಲೆದುಕೊಂಡು ಬಂದಿದ್ದ
ಜೋಡುಗಳನ್ನ (ಚಪ್ಪಲಿ) ಮದುವೆಯ ಗಂಡಿನ
ಕಾಲಿಗೆ ತೊಡಿಸುವಾಗಲಂತೂ
ಒಳಗೊಳಗೆ ದುಃಖಿಸುತ್ತ ದೇವರಲ್ಲಿ
ನನಗೆ ಮತ್ತೊಂದು ಜನುಮ ಕೊಡು
ಅನ್ನುವ ಬೇಡಿಕೆಯನ್ನ ಸಲ್ಲಿಸಿದ್ದಳು…

Advertisements

17 Responses to “ಜೋಯೀಸರ ಮಗಳು”

 1. ವಿಕಾಸ್ ಹಗಡೆ August 8, 2008 at 11:15 am #

  🙂

 2. ambika August 8, 2008 at 11:40 am #

  hello somu avre… bhavanegalige jathiya bedha-bhavavilla annodanna chennagi bimbisiddira…

 3. Chomi August 8, 2008 at 11:46 am #

  Bapre!!!! somu ravare yello hogbitri.

  super aagidhe

 4. ನವಿಲಗರಿ August 8, 2008 at 11:53 am #

  ವಿಕಾಸ್ 😉

  ದನ್ಯವಾದ ಅಂಬಿಕ

  ಸೌಮ್ಯಾ..ನಾನ್ ಎಲ್ಲಪ್ಪ ಹೋಗಿಲ್ಲ ಇಲ್ಲೆ ಇದ್ದಿನಿ
  ದನ್ಯವಾದ:)

 5. pachhu August 8, 2008 at 1:13 pm #

  Abba,

  soma, nijakku adella bhavanegalanna hege padagalalli horahommistheyappa… 🙂

  thumba chennagide… keep writing…

  Nimma snehita,
  Prashantha G uraLa

 6. neelanjala August 8, 2008 at 7:33 pm #

  padya istavayitu.
  adare mattyake ade haLe ‘JoyIsara’ huDugi mattu ‘Holeyar’ maada ? 😦

 7. Yogesh August 9, 2008 at 6:01 am #

  Hareyada joisara magalaagi nimma parakaya pravesha, antharalada bayakeya tuditha vannu abhiveksi nirgamisiruva nimma kavana tumba channagide. viparyasa vendare joisara magalu mada nannu varisalu innondu janma vettabeku !!!!!!!!! 😦

 8. priya August 9, 2008 at 6:25 am #

  tumba chenagidhe somu heege munduvareyalli ninna baravanige..[:)]

 9. antarangadaapthaswara August 11, 2008 at 7:13 am #

  ninna bhaavanegaLa battaLikeyiMda tegedu ellara edegoo heege navilugariya baaNa biDuttiru…
  aa naviru yaataneyiMda naraLuva naavu dhanya 🙂

 10. sundaranadu August 13, 2008 at 5:01 am #

  ಪ್ರಿಯ ನವಿಲೆ,
  ನಿಮ್ಮ ಕಲ್ಪನೆಗೆ ನಾನೊಂದು ಹ್ಯಾಟ್ಸ್-ಆಫ್ ಹೇಳಲೇಬೇಕು. ನಿಮ್ಮ ಪದಗಳ ಪ್ರಯೋಗ ಮತ್ತು ವಾಕ್ಯ ರಚನೆ ಚೆನ್ನಾಗಿದೆ. ಇನ್ನೂ ಒಳ್ಳೆಯ ಕವನಗಳನ್ನ ಓದುವಂತಹ ಭಾಗ್ಯ ನಮಗೆ ಸಿಗಲಿ.
  ಶುಭ ಹಾರೈಕೆಗಳು.
  ರಾಜಣ್ಣ

 11. Mahesh September 2, 2008 at 6:12 pm #

  ಸತ್ಯಕ್ಕೆ ಹತ್ತಿರದಲ್ಲಿದೆ ಸೋಮಾ.. ಈ ಸಾಲುಗಳನ್ನ ಬರಿತೀರ ಅಂತಾದ್ರೆ, ಇವತ್ತಿನ ದಿನಕ್ಕೆ ತಕ್ಕ ಇನ್ನೂ ಒಳ್ಳೆಯ ಸಾಲುಗಳು ಮೂಡಿಬರೋ ಎಲ್ಲ ಸಾಧ್ಯತೆಗಳಿವೆ. ಬರೆವ ಶಕ್ತಿಯೂ ಇದೆ ನಿಮಗೆ. ಬರೆದ ದಿನ ತಿಳ್ಸಿ.

  ಕಲ್ಲರೆ

 12. LAKSHMEESH MOOGANUR September 4, 2008 at 10:57 am #

  HI SOMU, YOUR POEM WAS AWESOME, NEEVU KELAVE SALUGALALLI ADBHUTA BHAVNEGLNNU CHANDVAAGI HIDIDITTIDDEERI..

  NIMAGE VANDANEGLU,
  SHUBHASHYGLU
  LAKSHMEESH
  9916060355

 13. anju September 14, 2008 at 1:27 pm #

  abbabba!!!!! nam hudga super 🙂

 14. ಚಂದಿನ September 17, 2008 at 6:37 am #

  ಸಕತ್ ಸೋಮು,

  ಭಾವ ಮತ್ತು ಬದುಕಿನ ಕನ್ನಡಿಯಂತಿದೆ,

  – ಚಂದಿನ

 15. Mallikarjun December 25, 2008 at 3:17 pm #

  lo soma nangantu alu barutte kano e tara ninu kavite galannu barita hodre nane ondina atma hatye madkond bidtineno ansutte maarayaa…. good keep it up somaa ….. realy i appriciate u dear….heege barita hogu nine ondina kuvempu agtiya…..deffinately its true,,,….

 16. Prasann March 1, 2009 at 1:31 am #

  tumba chennagide ri Somu nimm kavana.. adbhutavaagi bareeteera.. bhavanegalantu heng barutvo nimm mansalli ee thara kavana bariyoke..sakkhttagide ri ee kavana

 17. manjappa April 14, 2011 at 8:17 am #

  nimma baraha tumba canngide edannu odi kusihgide.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: