ಉನ್ಕಿ ಯಾದ್ ಆಯೆ ತೋ ದಿಲ್ ಕ್ಯಾ ಕರೇ?

13 Aug
ಉನ್ಕಿ ಯಾದ್ ಆಯೆ ತೋ ದಿಲ್ ಕ್ಯಾ ಕರೇ?

ಉನ್ಕಿ ಯಾದ್ ಆಯೆ ತೋ ದಿಲ್ ಕ್ಯಾ ಕರೇ?

ತಮನ್ನಾ ಜಾನಮ್..
ಮನುಷ್ಯ ಕೆಲವೊಂದು ಸಲ ತುಂಬಾ ಬಲಹೀನನಾಗುತ್ತಾನೆ ಅಂತ ಪುಸ್ತಕದಲ್ಲಿ ಮತ್ತೆ ಕೆಲವೊಂದು ಸಲ ಸಿನಿಮಾಗಳಲ್ಲಿ ಮಾತ್ರ ನೋಡಿದ್ದೆ. ಆದರೆ ನನ್ನ ಜೀವನದಲ್ಲೂ ಅಂತ ಒಂದು ಘಳಿಗೆ ಬರುತ್ತೆ ಅಂತ ಯೋಚಿಸಿಕೂಡ ಇರಲಿಲ್ಲ ಅಲ್ಲವ ತಮನ್ನ? ಇಷ್ಟು ಚಂದದ ಹೆಸರಿನ ಗೆಳತಿಯೊಬ್ಬಳು ನನಗಿಷ್ಟ ಆಗ್ತಾಳೆ, ಇಷ್ಟ ಅಗೋಕು ಮುಂಚೆ ಮತ್ತಷ್ಟು ಇಷ್ಟ ಆಗೊ ಹಾಗೆ ಜಗಳವಾಡುತ್ತಾಳೆ ಇದನ್ನೆಲ್ಲ ನಾನು ಕಲ್ಪಿಸಿಕೊಂಡಿರಲಿಲ್ಲ ಅಲ್ಲವ ತಮನ್ನ ಜಾನಮ್? ನಿನ್ನ ಹೆಸರು ಚಂದವಿದ್ದ ಹಾಗೆ ನಿನ್ನ ಕುಲ್ಲಂ ಕುಲ್ಲ ಮಾತುಗಳು ಇಷ್ಟವಾಗುತ್ತಿದ್ದವು, ಸಿಟ್ಟುಬರೋ ಹಾಗೆ ಬಯ್ಯುತ್ತಿದ್ದೆ ಅಲ್ಲವ ಅವಗಲೆಲ್ಲ ಎಷ್ಟು ಕುಷಿಯಾಗ್ತಿತ್ತು ಗೊತ್ತ? ನಾನು ಕೂಡ ಸುಳ್ಳೇ ಕೋಪಿಸಿಕೊಳ್ಳುತ್ತಿದ್ದೆ. ನೀನು ಸುಳ್ಳೇ ಆದರು ಮುದ್ದು ಮಾಡುತ್ತೀಯ ಅಂತ ಕಾಯ್ತ ಇದ್ದೆ..ಆದರೆ ನೀನ? ಅಮ್ಮೀ ಆಗಯೀ ಅನ್ನುತ್ತ ಸುಳ್ಳುಸುಳ್ಳೇ ಮೊಬೈಲು ಕುಕ್ಕಿ ಬಿಡುತ್ತಿದ್ದೆ.

ಕೊನೆಕೊನೆಗೆ ನಾನು ನಿನ್ನ ವಿಪರೀತ ಹಚ್ಚಿಕೊಂಡಾಗಲಂತು ನೀನು ಮನಸೋ ಇಚ್ಚೆ ಬಯ್ಯುತ್ತಿದ್ದೆ, ಸುಮ್ಮನೇ ಆದ್ರು ಜಗಳ ತೆಗಿತಿದ್ದೆ, ಕೋಪಿಸಿಕೊಳ್ಳುತ್ತಿದ್ದೆ,ಇದೆಲ್ಲ ತಪ್ಪು ಅನ್ನುತ್ತಿದ್ದೆ,ಮನೆಯಲ್ಲಿ ಒಪ್ಪಲ್ಲ ಕಣೊ ನಮ್ಮದು ಸಂಪ್ರದಾಯಸ್ಥ ಮುಸ್ಲಿಂ ಕುಟುಂಬ ಮಗಳನ್ನ ಹಾಳು ಬಾವಿಗೆ ತಳ್ಳುತ್ತಾರೆ ವಿನಃ ಪ್ರೀತಿ ಪ್ರೇಮ ಅನ್ನೊ ಅದ್ಭುತ ಜಗತ್ತಿಗೆ ನನ್ನ ಕಳಿಸಲು ಒಪ್ಪಲ್ವೋ ಅನ್ನುತ್ತಿದ್ದೆ, ಆದ್ರೆ ನಾನು ನಿನ್ನ ಗೆಳತಿಯಾಗಿರ್ತೀನಿ ಅಂತಿದ್ದೆ,ಕೊನೇ ತನಕ ಜೊತೆಯಾಗಿರ್ತೀನಿ ಅಂತ ಹೇಳೋವಾಗಲಂತು ನಿನ್ನ ಸ್ವರ ಯಾಕೆ ಬದಲಾಗುತ್ತಿತ್ತು? ಏನು ಬಿಕ್ಕಳಿಸುತ್ತಿದ್ದೆ ಅಲ್ಲವ? ನನಗೆಲ್ಲಿ ಗೊತ್ತಾಗಿ ಬಿಡುತ್ತೋ ಅಂತ ಎಷ್ಟು ಚೆನ್ನಾಗಿ ನಗ್ತ ನಗ್ತಾನೆ ಅಳುತ್ತಿದ್ದೆಯಲ್ಲ ತಮನ್ನ? ಹೇಳು ನಿನ್ನಂತ ಹುಡುಗಿ ಇಷ್ಟವಾಗದೆ ನನಗೆ ಇನ್ಯಾರು ಇಷ್ಟವಾಗ್ತಾರೆ ಅಂತ? ಅದೇನೊ ನನ್ನ ಬಲಹೀನತೆಯೋ ಅಥವ ನಿನ್ನ ಮೇಲಿನ ಅತಿಯಾದ ಪ್ರೀತಿಯೋ ಗೊತ್ತಿಲ್ಲ..ಇಲ್ಲಿಯವರೆಗೂ ನೀನು ಹೇಳಿದ್ದಕ್ಕೆಲ್ಲ ಹೂ.. ಅಂದಿದ್ದೀನಿ ನಿನಗೆ ನಾನು ಪೋನ್ ಮಾಡುವವರೆಗೆ ಮಾಡಬೇಡ ಅಂದೆ ಮೋಬೈಲ್ ಕಡೆ ಮುಖ ಕೂಡ ಹಾಕಲಿಲ್ಲ..! ನನಗಿವತ್ತು ನಿನ್ನ ಜೊತೆ ತುಂಬಾ ಮತಾಡಬೇಕು ಅನ್ನಿಸ್ತಿದೆ ಪ್ಲೀಸ್ ಮಾತಡುತ್ತೀಯ ಅಂತ ಕೇಳಿದಾಗಲಾಗಲೆಲ್ಲ ಬೆಳೆಗ್ಗೆ ಕೋಳಿ ಕೂಗಿದಾಗಲೆ ನಮಗೆ ಬೆಳಗಾಯಿತು ಅಂತ ತಿಳಿತಿದ್ದಿದ್ದು, ಅರ್ದ ವಿಧ್ಯಾಭ್ಯಾಸಕ್ಕೆ ಟಾಟಾ ಹೇಳಿದ್ದವನಿಗೆ MBA ಮಾಡು ಅಂದೆ ಅದಕ್ಕೂ ಇಲ್ಲವೆನ್ನಲಿಲ್ಲ ಅಲ್ಲವ ನಾನು? ಅಮ್ಮನನ್ನ ಎಷ್ಟು ಇಷ್ಟ ಪಡುತ್ತಿದ್ದೆ ಅಲ್ವ ಅಷ್ಟೇ ನೀನಿಷ್ಟವಾಗಿದ್ದೆ ನನಗೆ ಕೊನೆಗೆ ನೀನು ಬೇರೆ ಮದುವೆಯಾಗು ಅನ್ನುವವರೆಗು. ನಿನ್ನ ಒಪ್ಪಿಸುವ ನನ್ನ ಎಲ್ಲ ಕೊನೆ ಪ್ರಯತ್ನಗಳು ವಿಫ಼ಲವಾದ ಮೇಲೆ ನಿನ್ನ ಜೊತೆ ಮಾತುಗಳನ್ನೆ ಬಿಟ್ಟುಬಿಟ್ಟೆ.
ಕೊನೆಗೆ ನಿನ್ನ ಮದುವೆ ನಿಶ್ಚಯವಾಯಿತು ಅಂತ ನೀನು ಹೇಳಿದಾಗಲಂತು ಬೇಡ ಬಿಡು…..

ನಿನಗೆ ಆಶ್ಚರ್ಯವಾಗಬಹುದು ಇವನೆಷ್ಟು ಕಲ್ಲು ಹೃದಯದ ಹುಡುಗಾ ಸ್ವಲ್ಪಾನು ನೋವಾಗಲಿಲ್ವ ಇವನಿಗೆ ಅಂತ..
ನನಗೆ ಬಹಿರಂಗವಾಗಿ ಅಳುವುದಕ್ಕಿಂದ ಒಳಗೊಳಗೆ ದುಃಖಿಸುವುದಿದೆಯಲ್ಲ ಅದೇ ಬೆಟರ್ ಅನ್ನಿಸುತ್ತೆ. ಕೊನೆಕೊನೆಗೆ ನೀನು “ನನ್ನ ಪ್ರೀತಿಸುವುದೇ ನಿಜವಾದರೆ ಬೇರೆ ಮದುವೆಯಾಗು” ಅಂದು ಗೋಳಿಟ್ಟು ಅಳುವಾಗಲಂತು ನಾನು ಸತ್ತೇ ಹೋದೆ ಅನ್ನುವಷ್ಟು ನೋವಾಗಿದ್ದು ನಿಜ..ಮತ್ತೆ ನಿನ್ನ ಬಲವಂತಕ್ಕೆ ಬೇರೆ ಮದುವೆಯಾಗಲು ಒಪ್ಪಿಗೆ ಕೊಟ್ಟಿದ್ದಂತು ನಿಜ…

ಉನ್ಕಿ ಯಾದ್ ಆಯೆ ತೋ
ದಿಲ್ ಕ್ಯಾ ಕರೇ..ಯಾದ್ ದಿಲ್ ಸೆ
ನಾ ಜಾಯೆತೋ ದಿಲ್ ಕ್ಯಾ ಕರೇ
ಸೋಚಾತ ಸಪ್ನೋಮೆ ಮುಲಾಖಾತ್ ಹೋಗಿ
ಮಗರ್ ನೀಂದ್ ನಾ ಆಯೇಥೋ ದಿಲ್ ಕ್ಯಾ ಕರೇ

ಸರಿ ನಿನ್ನಿಷ್ಟದಂತೆಯೇ ಮದುವೆಯಾಗಿದ್ದೀನಿ.. ಗೊತ್ತು ಜಗತ್ತಿನಲ್ಲಿರುವ ಯಾವ ಪ್ರೇಮಿಗಳೂ ನನ್ನ ಈ ನಿರ್ದಾರವನ್ನ ಒಪ್ಪಿಕೊಳ್ಳಲಾರರು ಅಂತ..ನನಗೆ ಜಗತ್ತಿನ ಬಗ್ಗೆ ಚಿಂತೆಯಿಲ್ಲ..ನಾನು ಮದುವೆಯಾಗುವುದು ನಿನಗಿಷ್ಟ ಅಂದಿದ್ದೀಯ ಅದಕ್ಕೆ ಅಂತಾನೆ ಒಪ್ಪಿಕೊಂಡಿದ್ದೀನಿ ಅಷ್ಟೆ.. ಈ ಮದುವೆಯಲ್ಲಿ ನನ್ನ ಕನಸುಗಳಿಲ್ಲ.. ನನ್ನ ಬಯಕೆಗಳಿಲ್ಲ..ಆದರೆ ನನ್ನ ನಂಬಿ ಬಂದಿರುವ ಇನ್ನೊಂದು ಜೀವಕ್ಕೆ ನನ್ನಿಂದ ಅನ್ಯಾಯವಾಗದಿರಲಿ ಅಂತ ನೀನು ನಿನ್ನ ಇಷ್ಟದ ದೇವರನ್ನ ಬೇಡಿಕೋ ಪ್ಲೀಸ್..ನೀನು ಬೇಡಿಕೊಂಡರೆ ನನಗೆ ಖಂಡಿತಾ ಒಳ್ಳೆಯದಾಗುತ್ತೆ.

ನಿನ್ನ ಕುರಿತಾದ ಕೆಲವು ಕನಸುಗಳನ್ನ ಮುಂದಿನ ಜನುಮ ಅನ್ನುವುದಿದ್ದರೆ ಅಲ್ಲಿ ಖಂಡಿತಾ ನನಸು ಮಾಡಿಕೊಳ್ಳುತ್ತೀನಿ..

ಈ ಜನ್ಮದಲ್ಲಿ ನಿನ್ನವನಲ್ಲದ ಅಯಾಜ್

Advertisements

8 Responses to “ಉನ್ಕಿ ಯಾದ್ ಆಯೆ ತೋ ದಿಲ್ ಕ್ಯಾ ಕರೇ?”

 1. Lakshmi S August 17, 2008 at 1:54 pm #

  ಅಳು ಬಂತು !

 2. kavana August 19, 2008 at 9:28 am #

  Yaako Eno odovaaga Swalpa Bejaru agoytu..preeti annodu yenella maadsutte dear navilugari?

 3. ambika August 22, 2008 at 11:57 am #

  hiii

  tumba chennagide adre ashte hrudayakke ghasi aythu somu avare… preethi andre idena???????

 4. sindhu August 23, 2008 at 9:29 am #

  this is very good article

 5. anju September 7, 2008 at 5:58 pm #

  en devru neenu? ishtella aaLavaada feelingsnella adeshtu sookshmavaagi baritiyallo? tumba chennagide gr8 going… 🙂

 6. irshad January 4, 2009 at 4:26 pm #

  preethy artha agadhe anubhvisuva ondu wonderful thing
  nanu nan lifenally edannu enjoy madthini andhukondirlilla adre nan gelathi adhannu
  nanage anubhavisalu avakasha madikotlu
  thanks BUDDY
  letter thumbha chennagide
  haleya nenapugalannu kedakidhakke
  thanks geleya

 7. Ram October 29, 2009 at 8:34 am #

  Heart touching……… nange ah tara expirience agta idieno anustu oda bekadre kannu thumbi bantu….. nice superb…

 8. Priya October 30, 2009 at 11:14 am #

  No words to say, amazing guru. Paapa avnege yestu feel agtedyo yeno.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: