ನಿಮ್ಮನ್ನ ಅದೇನೊ ಅಂತಾರಲ್ಲ ಆ ದೃಷ್ಟಿನಲ್ಲಿ ನೋಡಿದ್ದಿನೇನ್ರಿ?

25 ಆಗಸ್ಟ್
(

ಈ ಜನ್ಮದಲ್ಲಿ ಈ ಹೂವು ನಿನಗೆ ಕೊಡ್ಲಿಕ್ ಅಗಲ್ಲ ಅಲ್ವ:(

ಪವ್ವಿ

ರೀ ಪವ್ವಿ…..

ಹೀಗೆ ಕರಿಬಹುದೇನ್ರಿ ನಿಮಗೆ? ಮೊದಲಾಗಿದ್ರೆ ಪವ್ವಿ, ಪವ್ವಿ ಡಾರ್ಲಿಂಗ್, ಪವ್ವಿಪುಟ್ಟಿ, ಪವ್ವಿಚಿನ್ನು, ಇನ್ನು ಎನೇನೇನೇನೋ ಅಂದು ಒಂತರ ಕುಷಿಯಾಗ್ತಿದ್ದೆ. ಮತ್ತೆ ನಾನು ನಿಮ್ಮನ್ನ ಹೀಗೆ ಕರಿಯೋದಂತು ಕನಸಿನ ಮಾತು ಅಲ್ಲವೇನ್ರಿ? ನಿಮಗೆ ನಾನು ನಿಮ್ಮ ಹೆಸರಿಡಿದು ಕರೆದರೆ ಒಂತರ ದುಃಖ ಆಗುತ್ತೆ ಅಲ್ಲವೇನ್ರೀ? ನೀವೇನಾದ್ರು ಅಂದುಕೊಳ್ಳಿಪಾ..ನಾನಂತು ದಿನಕ್ಕೆ ಎಷ್ಟೆಷ್ಟೋ ಸಲ ಸುಮ್ಮನೆ ನನ್ನಷ್ಟಕ್ಕೆ ನಾನೆ ಯಾರಿಗೂ ಕೇಳಿಸದ ಹಾಗೆ ನಿಮ್ಮ ಹೆಸರಿಡಿದು ಕೂಗಿಬಿಡ್ತೀನಿ ಗೊತ್ತೇನ್ರಿ? ರೀ ಮತ್ತೊಂದು ಮಾತು ನಿಜಾ ಹೇಳಬೇಕು ಅಂದ್ರೆ ನನಗೆ ಹೀಗೆಲ್ಲ ಪತ್ರ ಬರೆದು ಅಭ್ಯಾಸ ಇಲ್ಲ ಕಣ್ರಿ. ಸುಮ್ಮನೇ ನನ್ನ ಸಮಾಧಾನಕ್ಕೆ ಅಂತ ಬರ್ಕೊತಾ ಇದ್ದೀನಿ ಓಕೆ ನ? ..ಚಿಂತೆ ಬೇಡ ರೀ..ನಾನು ಇದನ್ನ ಪೋಸ್ಟ್ ಮಾಡೊಲ್ಲ .. ಬೇಕಾದ್ರೆ ದಿನ ಬೆಳಗ್ಗೆ ನಿಮ್ಮನೆ ಮುಂದೆ ನಿಮ್ಮ ಬಂಗಾರದ ಬೆರಳಲ್ಲಿ ಅರಳಿ ನಿಂತಿರುತ್ತಲ್ಲ ಆ ರಂಗೋಲಿ ಮೇಲೆ ಪ್ರಾಮಿಸ್ ಮಾಡ್ತೀನಿ ಓಕೆ ನ? ನಿಮಗೆ ಗೊತ್ತಿರಬೇಕು ಈ ಅರುಣ್ ಅನ್ನೊ ಪ್ರಪಂಚದ ಅತ್ಯಂತ ದುರಾದ್ರುಷ್ಟ ಹುಡುಗನ ಪ್ರಾಮಿಸ್ ಅಂದ್ರೆ ಹೇಗಿರುತ್ತೆ ಅಂತ? ನಿಜ ಅಲ್ಲವೇನ್ರಿ? ವರ್ಷ ಆಗ್ತ ಬಂತು ನಿಮ್ಮ ನಂಬರ್ ನನ್ನ ಬೆರಳ ತುದಿಲಿದ್ರು ಒಂದೇ ಒಂದು ಎಸ್ಸೆಮ್ಮೆಸ್ ಮಾಡಿದ್ದೀನ? ಹೋಗ್ಲಿ ಜಸ್ಟ್ ಒಂದು ಮಿಸ್ಸ್ ಕಾಲ್ ಆದ್ರು? ನೋ ವೇ…

ಯಾವುದನ್ನ ಮರಿಬೇಕು ಅಂತ ಸ್ವಲ್ಪ ಹೇಳಿಕೊಡ್ತೀರ? ನನಗಂತು ನಿಮ್ಮ ಜೊತೆ ಕಳೆದ ಪ್ರತಿ ದಿನದ ಎಲ್ಲಾ ನಿಮಿಷಗಳೂ ಇಲ್ಲೆ ಇದೇ ಈ ಹುಡುಗನ ದುರಾದೃಷ್ಟದ ಎದೆಯ ಮೇಲೆ ಹಚ್ಚೆಯ ಹಾಗೆ ಅಚ್ಚಳಿಯದೆ ಉಳಿದುಬಿಟ್ಟಿವೆ ಕಣ್ರಿ..ನೀವು ೭ನೆ ತರಗತಿನಲ್ಲಿ ಇದ್ರಿ ಅನ್ಸುತ್ತೆ ಅಲ್ಲವೇನ್ರಿ? ನಿಮಗಿಂತ ಹೆಚ್ಚಂದ್ರೆ ೨ ಕ್ಲಾಸು ಮುಂದಿದ್ದೆ ಅಷ್ಟೇನಪ್ಪ.. ಅಗತಾನೆ ಮೀಸೆ ಚಿಗುರುತಿದ್ದ ವಯಸ್ಸು ಅಲ್ಲವ? ಎಲ್ಲಾ ಹುಡುಗರ ತರಾನೇ ನಿಮಗೆ ರೇಗಿಸ್ತಿದ್ದೆ.. ಮೊದ್ಲೆ ಹೇಳಿ ಬಿಡ್ತೀನಿ ಅದ್ರಲ್ಲಿ ನನ್ನ ತಪ್ಪೇನು ಇಲ್ಲ ಗೊತ್ತಾಯ್ತ? ನೀವು ಅಷ್ಟೊಂದು ಸುಂದರವಾಗಿದ್ರಿ ಅಂತಾನೆ ರೇಗಿಸ್ತಿದ್ದೆ ಇದನ್ನ ಒಪ್ಪಿಕೊಂಡು ಬಿಡ್ತೀನಪ್ಪ.. ಅಷ್ಟಕ್ಕೆ ಭೂಮಿ ಆಕಾಶಾನೆ ಒಂದಾಗೊ ಹಾಗೆ ಬೈದು ಜಗಳ ಮಾಡಿಬಿಟ್ರಿ ನೀವು..ಅವತ್ತೆ ಕೊನೆ ಅಲ್ಲವ? ಯಾವತ್ತಾದ್ರು ನಿಮ್ಮ ಮುಂದೆ ತಲೆಯೆತ್ತಿ ಮಾತಾಡಿದ್ನ? ನಮ್ಮ ಮನೆಯಿಂದ ಕೂಗಳತೆ ದೂರದಲ್ಲೆ ನಿಮ್ಮ ಮನೆ ಇದ್ರು, ಒಂದು ದಿನ ಆದ್ರು ನಿಮ್ಮ ಮನೆ ಮುಂದೆ ಬಂದು ಹಲ್ಕಿರಿದಿದ್ನ?

ಆದ್ರೆ ಇದ್ದಕ್ಕಿದ್ದಂತೆ ನಿಮ್ಮಲ್ಲಿ ಬೆಂಗಳೂರಿನ ಅದ್ಯಾವ ಮಹಾನ್ ದೇವತೆ ಬದಲಾವಣೆ ತಂದಳೋ ಗೊತ್ತಿಲ್ಲಪ್ಪ..ನಾನು ಹೋಗೊ ಪಾರ್ಕ್ ಗೆ ನೀವ್ ಕೂಡ ಬರೋಕೆ ಶುರುಮಾಡಿಕೊಂಡ್ರಿ,ಜೊತೆಗೆ
ಸೇಫ಼್ಟಿ ಗೆ ಅಂತ ಆ ನಾಯಿ ಮರಿ ಬೇರೆ, ಯಾಕೆ ಈ ಕರಡಿ ಮರಿ ಬಯ ಇತ್ತ ನಿಮಗೆ? ನಾನು ಯಾವತ್ತು ಪಾರ್ಕ್ ಗೆ ಹೋಗ್ಲಿಕ್ಕೆ ಆಗಲ್ವೊ ಆ ದಿನ ನೀವ್ ಕೂಡ ಹೋಗ್ತಿರ್ಲಿಲ್ಲ, “ಎನ್ ರೀ ಕಿಟಕಿನ್‌ಲ್ಲಿ ಕದ್ದು ನೋಡ್ತ್ ಇದ್ರ ಹೇಗೆ”? ಸ್ಕೂಲ್ನಲ್ಲಿ ಸಿಕ್ಕಾಗೆಲ್ಲ ಒಂದು ಚಂದನೆಯ ಸ್ಮೈಲ್ ಕೊಡೋಕೆ ಶುರು ಮಾಡಿದ್ರಿ, ಇಷ್ಟು ಸಾಕಲ್ಲವೇನ್ರಿ ಈ ಹುಡುಗನಿಗೆ? ಬೆಳಗ್ಗೆ ಎದ್ದೋನೆ ರಂಗೋಲಿ ಪೌಡರ್ ತಗೊಂಡು ನಾವು ವಾಕಿಂಗೆ ಗೆ ಹೊಗ್ತ ಇದ್ವಲ್ಲ ಅದೇ ರಸ್ತೆ ಮೇಲೆ “ಪವ್ವಿ ಐ ಲವ್ ಯೂ” ಅಂತ ಬರೆದೇ ಬಿಟ್ಟಿದ್ದೆ ನೆನಪಿದೆಯ? ಆದರೆ ಅದೇ ಐದುವರೆ ಅಕ್ಷರಗಳ ಮೇಲೆ (x) ಮಾರ್ಕ್ ಹಾಕಿ ಹೋದ್ರಲ್ಲ? ಅವತ್ತೆ ಕೊನೆ ಅನ್ನಿಸುತ್ತೆ ನಿಮ್ಮ ಮುಖ ನೋಡಿದ್ದು. ಅದಾದ ಸರಿಯಾಗಿ ಒಂದು ವರ್ಷವಾದ ನಂತರ ನೀವಾಗೆ ನಿನ್ನ ಪ್ರೀತಿಸ್ತಿದ್ದೀನಿ ಅರುಣ್ ಅನ್ನೊವರ್ಗು..

ಅಮೇಲಿನ ಕತೆ ಕೇಳೊದೆ ಬೇಡಪ್ಪ.. ನಾವು ನೊಡದ ಸಿನಿಮಾಗಳಿಲ್ಲ, ಸುತ್ತದ ಪಾರ್ಕುಗಳಿಲ್ಲ, ಸಮಸ್ತ ಬೆಂಗಳೂರಿನ ಪಾನಿಪೂರಿ ಅಂಗಡಿಯವರೆಲ್ಲ ನಮ್ಮಿಬ್ಬರಿಂದಾನೆ ಉದ್ಧಾರ ಆದ್ರು ಅನ್ಸುತ್ತೆ ಅಲ್ಲವ? ನಿಜ ಹೇಳ್ರಿ,ಅಷ್ಟು ದಿನ ನನ್ನ ಜೊತೆ ಇದ್ರಿ ಒಂದು ದಿನ ಆದ್ರು ನಿಮ್ಮನ್ನ ಅದೇನೊ ಅಂತಾರಲ್ಲ ಆ ದೃಷ್ಟಿನಲ್ಲಿ ನೋಡಿದ್ದಿನೇನ್ರಿ? ನೀವು ಹೇಳೊ ಮಾತಿಗೆಲ್ಲ ತಲೆಯಾಡುಸ್ತಿದ್ದೆ ಒಂದೇ ಒಂದು ಮಾತಾಡ್ತ ಇರ್ಲಿಲ್ಲ.. “ನೀನಿಲ್ದೆ ನಾನು ಬದ್ಕಿರೋದು ಡೌಟು ಕಣೊ” ಅಂದಾಗ ಮಾತ್ರ “I too” ಅಂತ ಇದ್ದೆ ಅಷ್ಟೆ..ಆದ್ರೆ ನೋಡಿ ವಿಪರ್ಯಾಸ ಅಂದ್ರೆ,ನೀವು ಇದ್ದಕ್ಕಿದ್ದ ಹಾಗೆ ಮತ್ತೆ ಬದಲಾಗಿ ಹೋದ್ರಿ ನಿಮ್ಮ ಎಸ್ಸೆಮ್ಮೆಸ್ಸುಗಳು ಖಾಯಿಲೆಗೆ ಬಿದ್ವು, ನಿi ಮೊಬೈಲಂತು ಸತ್ತೆ ಹೋಯಿತು. ಕಾರಣ ಕೇಳಿದ್ರೆ “ತಾತ ನನ್ ಹತ್ರ ಬಾಷೆ ತಗೊಂಡ್ರು ಅವರು ಹೇಳಿದ ಹುಡುಗನನ್ನೆ ಮದ್ವೆ ಆಗಬೇಕಂತೆ” ಅಂದ್ರಿ ಜೊತೆಗೆ ನನ್ನ ಮರೆತು ಬಿಡು ಪ್ಲೀಸ್ ಅನ್ನೊ ಇನ್ನೊಂದು ಮಾತನ್ನ ಕೂಡ ಸೇರಿಸಿದ್ರಿ, ಆದರೆ ಈ ಸಲ ಮಾತ್ರ “I too” ಅಂತ ಹೇಳೋಕೆ ಆಗ್ಲೆ ಇಲ್ಲ ಕಣ್ರಿ ಹಾಗೆಲ್ಲಾದ್ರು ಹೇಳಿದ್ರೆ ಸತ್ತೆ ಹೋಗ್ತ ಇದ್ದೆ. ನಿಮಗೆಷ್ಟು ಕಲ್ಲು ಮನಸ್ಸಪ್ಪ..ನಮಗೂ ಸ್ವಲ್ಪ ಕೊಡ್ತೀರ? ಮೋಸ ಮಾಡೋಕೆ ಅಲ್ಲಾರಿ ಕೆಲವು ನೆನಪುಗಳನ್ನ ಹೂಳಬೇಕು ಅಂತಿದ್ದೀನಿ

Advertisements

7 Responses to “ನಿಮ್ಮನ್ನ ಅದೇನೊ ಅಂತಾರಲ್ಲ ಆ ದೃಷ್ಟಿನಲ್ಲಿ ನೋಡಿದ್ದಿನೇನ್ರಿ?”

 1. naveen ಆಗಷ್ಟ್ 26, 2008 at 11:26 ಫೂರ್ವಾಹ್ನ #

  ree somu edenu real story na? tale chackobeku ansutte kanri papa ee devru hudugarige yak isht mosa madtaane anta gottagallaaaa

 2. shruthi ಆಗಷ್ಟ್ 26, 2008 at 12:18 ಅಪರಾಹ್ನ #

  Hai naveen nim kathe kelida mele nange tumba bejar agta ede ri edu nimma jivanada kathe agedre nange thumba bejar agutte…
  ee kathe tumbane channagide…

 3. Sumanth ಸೆಪ್ಟೆಂಬರ್ 12, 2008 at 1:54 ಅಪರಾಹ್ನ #

  “ಮತ್ತದೆ ಬೆಸರ, ಅದೆ ಸಂಜೆ, ಅದೆ ಏಕಾಂತ
  ನಿನ್ನ ಹೆಸರಿಲ್ಲದೆ, ಮಾತಿಲ್ಲದೆ, ಮನ ವಿಭ್ರಾಂತ…..”

 4. Jesh ಮಾರ್ಚ್ 26, 2009 at 6:03 ಅಪರಾಹ್ನ #

  “ಮತ್ತದೆ ಬೆಸರ, ಅದೆ ಸಂಜೆ, ಅದೆ ಏಕಾಂತ
  ನಿನ್ನ ಹೆಸರಿಲ್ಲದೆ, ಮಾತಿಲ್ಲದೆ, ಮನ ವಿಭ್ರಾಂತ…..

  wahhhhhh nice nice

 5. Pavithra ಏಪ್ರಿಲ್ 14, 2009 at 10:06 ಫೂರ್ವಾಹ್ನ #

  “ತಾತ ನನ್ ಹತ್ರ ಬಾಷೆ ತಗೊಂಡ್ರು ಅವರು ಹೇಳಿದ ಹುಡುಗನನ್ನೆ ಮದ್ವೆ ಆಗಬೇಕಂತೆ” ಅಂದ್ರಿ ಜೊತೆಗೆ ನನ್ನ ಮರೆತು ಬಿಡು ಪ್ಲೀಸ್ ಅನ್ನೊ ಇನ್ನೊಂದು ಮಾತನ್ನ ಕೂಡ ಸೇರಿಸಿದ್ರಿ, ಆದರೆ ಈ ಸಲ ಮಾತ್ರ “I too” ಅಂತ ಹೇಳೋಕೆ ಆಗ್ಲೆ ಇಲ್ಲ ಕಣ್ರಿ ಹಾಗೆಲ್ಲಾದ್ರು ಹೇಳಿದ್ರೆ ಸತ್ತೆ ಹೋಗ್ತ ಇದ್ದೆ. Nija alva ella matugaligu “I too” anta helakagalla.

 6. Priya ಜುಲೈ 30, 2009 at 12:37 ಅಪರಾಹ್ನ #

  Somu e article tumba chanagide adre 1 question “neev yenadru nijavaglu pavi place ali eddededre yen madtedre”? Plz nan question ge answer madi….

 7. Manjunath ಆಗಷ್ಟ್ 25, 2009 at 11:06 ಫೂರ್ವಾಹ್ನ #

  hi somu tumba chenagide lovestory adare nivu ondu hudugina love madidre avalu very lucky

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: