ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(

4 Sep

ನಿನಗೆ ಇದು ನನ್ನ ಕೊನೆಯ ಪತ್ರ ಅಂತ ತಿರ್ಮಾನಿಸಿಯೆ ನಿನಗೆ ಬರೆಯಲು ಕುಳಿತ್ತಿದ್ದೇನೆ ಗೊತ್ತ? ಈ ಪತ್ರ ಶುರು ಮಾಡೋದಕ್ಕು ದಿನಗಳನ್ನ ಆ ಪರಿ ಸುಟ್ಟಿದ್ದೇನೆ ಮತ್ಯಾವತ್ತು ನಿನಗೆ ನನ್ನಿಂದ ಪತ್ರ ಬರುವುದಿಲ್ಲ. ಆದರೆ ನಾನು ನಿನ್ನ ಕನಸಿಗೆ ಬರುವುದನ್ನ ಯಾರಿಂದಲೂ ತಪ್ಪಿಸಲು ಆಗೋದಿಲ್ಲ ಕಣೊ ಕೊನೆಯ ಪತ್ರ ನಿನ್ನ ಅಮೂಲ್ಯ ಸಮಯವನ್ನ ಹಾಳುಮಾಡಲಾರೆ ಸ್ವಲ್ಪಾನೆ ಸ್ವಲ್ಪ ಬರಿತ ಇದ್ದೀನಿ ಇಷ್ಟ ಇದ್ದರೆ ಓದಿಕೋ ಇಷ್ಟವಾಗಲಿಲ್ಲವ? ನನ್ನ ಮತ್ತೆ ನನ್ನ ಒಲವನ್ನ ಎಡಗಾಲಲ್ಲಿ ಒದ್ದು ಹೋದ ಹಾಗೆ ಇದಕ್ಕು…………………….?

.ಕೊನೆಗೂ ಮರೆತೇ ಬಿಟ್ಯ? ಎದೆಯ ಮೇಲೆ ಮೈಮರೆತು ಮಲಗಿ ಜಗತ್ತನ್ನೆ ಮರೆಸುವ ಮಾತುಗಳನ್ನಾಡುತ್ತಿದ್ದ ನೀನೇನ ಒಂದೆ ಒಂದು ಮಾತಾಡದೆ ಹೋಗಿದ್ದು? ಅದು ಒಂದು ಕಾರಣವನ್ನೂ ಹೇಳದೇ? ಕೊನೆಗೂ ಮರೆತೇ ಬಿಟ್ಯ? ನನ್ನ ಕಿರುಬೆರಳಿಗೆ ಬೆರಳು ತಾಗಿಸಿಕೊಂಡು ಮಾತುಗಳಿಲ್ಲದೆ ನಡೆದ ಆ ಸುಂದರ ನದಿತೀರದ ಸಂಜೆಗಳನ್ನ? ಮರೆತೆಯೇನೊ? ನನ್ನ ಕಾಲಿಗೆ ನೀನು ತಂದ ಬಣ್ಣದ ಗೆಜ್ಜೆಯನ್ನು ತೊಡಿಸುವಾಗ ” ಎಷ್ಟೇ ಜನುಮ ಬರಿಲಿ ಪುಟ್ಟು ಈ ಹೆಜ್ಜೆಗಳಿಗೆ ಮತ್ತೆ ಈ ಗೆಜ್ಜೆಗಳಿಗೆ ನಾನು ಜೊತೆಯಾಗಿರ್ತೀನಿ ” ಅಂದ ಬಂಗಾರದಂತ ಮಾತುಗಳನ್ನ? ಮರೆತೆಯೇನೋ ?ನನ್ನ ಬಿಗಿದಪ್ಪಿ ಉಸಿರುಗಟ್ಟಿಸಿ ” ಯಾವತ್ತು ನಿನ್ನವನೇ” ಅಂತ ಕಿವಿಯಲ್ಲಿ ಉಸಿರಿದ್ದು? ಇದೆಲ್ಲವನ್ನು ಮರೆತವನಿಗೆ ಈ ಪಾಪಿಯನ್ನ ಮರೆಯುವುದು ಅಷ್ಟು ಕಷ್ಟವಾಗಲಿಲ್ಲ ಅಲ್ಲವೇನೋ?

ಬದುಕು ಅನ್ನುವುದು ಇಷ್ಟೊಂದು ಘೋರ ಅಂತ ನಿನ್ನ ವಿದಾಯದ ನಂತರವೇ ನನಗೆ ಗೊತ್ತಾಗಿದ್ದು ಗೊತ್ತ? ಪ್ರೀತಿಯ ಗೆಳೆಯ ಜೀವದ ಗೆಳೆಯ ಒಂದೆ ಒಂದು ಮಾತನಾಡದೆ 6 ವರ್ಷದ ಹಸುಗುಸಿನಂತಹ ಪ್ರೀತಿಯನ್ನ ಎಡಗಾಲಲ್ಲಿ ಒದ್ದು ಹೋಗ್ತಾನೆ ಅಂತ ಯಾವ ಪಾಪದ ಹುಡುಗಿ ತಾನೆ ನಂಬುತ್ತಾಳೆ ಹೇಳು?ನಿಜ ಹೇಳು ನಾವಿಬ್ಬರು ಕಂಡ ಕನಸುಗಳನ್ನ ಲೆಕ್ಕ ಹಾಕಿದರೇ ಆ ಚುಕ್ಕಿಗಳು ಸಾಟಿಯಾಗುತ್ತಿದ್ದವ? ಕೊನೆಗು ಅಷ್ಟು ಕನಸುಗಳಲ್ಲಿ ಒಂದೆ ಒಂದು ಕೂಡ ನನಸಾಗಲಿಲ್ಲವಲ್ಲೋ? ಅಷ್ಟು ಹೀನ ಶಕುನದವಳ ನಾನು? ದೇವರಲ್ಲಿ ಕೇಳಿಕೊಂಡ ಬಹುಸಂಖ್ಯಾತ ಬೇಡಿಕೆಗಳಲ್ಲಿ ” ನಾನು ನಿನ್ನ ಜೊತೆ ಬದುಕಿ ಬಾಳಬೇಕು” ಅಂತ ಕೇಳಿಕೊಂಡ ಒಂದೇ ಒಂದು ವರ ಸಾಕಾಗಿತ್ತು ಕಣೊ ಈ ಪಾಪಿ ಜೀವಕ್ಕ್ಕೆ ಸಾಕಿತ್ತು ಆ ದೇವರು ಅದಕ್ಕು ಅಸ್ತು ಅನ್ನಲಿಲ್ಲ ನೋಡು. ಬಿಡು ನನ್ನ ಈ ಜಗತ್ತಿನಲ್ಲಿ ಈ ಹಾಳು ದೇವರಿಗೆ ನಾನು ಯಾವತ್ತು ವಿದೇಯಳಾಗಿರಬಾರದು ಅಂತ ತೀರ್ಮಾನಿಸಿಬಿಟ್ಟಾಗಿದೆ. ನನ್ನ ನಿನ್ನ ಒಂದು ಮಾಡಲೊಲ್ಲದ ಶಕ್ತಿಗೆ ದೇವರು ಅಂತ ಯಾಕೋ ಕರಿಬೇಕು ಹೇಳೂ?

ಸರಿ ನೀನು ಹೋಗಿಯಾಯಿತಲ್ಲ? ಹೇಗಿದ್ದೀಯ? ಹೊಸ ಹುಡುಗಿ ಸಿಕ್ಕಿರಬೇಕು ಅವಳ ಕಾಲಿಗು ಗೆಜ್ಜೆ ತೊಡಿಸುತ್ತ’ 7 ಜನುಮ ಜೊತೆ ಇರ್ತೀನಿ ಅಂತ ಹೇಳ್ತಿದ್ದೀಯ ಅಲ್ಲವ? ಅವಳ ಕೈ ಬೆರೆಳ ಜೊತೆ ಆಟ ಆಡುತ್ತ ಪ್ರತಿ ದಿನ ಸಂಜೆ ನದಿ ತೀರದಲ್ಲಿ………………….. ಅವಳ ಎದೆಯ ಮೇಲೆ…ಸಾಕು ಕಣೊ ಯಾಕೊ ಗಂಟಲುಬ್ಬಿ ಬರುತ್ತಿದೆ ನನಗೆ ಮತ್ತೆ ಒಂದು ಸಾಲು ಬರಿಲಿಕ್ಕೆ ಆಗ್ತಿಲ್ಲ ಗೊತ್ತ.

                                                                                                     ಇಂತಿ ನಿನ್ನ ಮರೆಯಲು ಪ್ರಯತ್ನಿಸಿ ಸೋತವಳು..:)

Advertisements

15 Responses to “ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(”

 1. vijayraj September 4, 2008 at 11:28 am #

  kaalakke ellavannoo maresO shaktiyide antaaralla

 2. raviajjipura September 7, 2008 at 7:28 am #

  ಪ್ರಿಯ ನವಿಲೆ
  ಹಾಗೆ ಎದೆಯ ಕಂಬಕೆ ಒರಗಿಕೊಂಡು,ಹಾಗಾಗೇ ಕಾಲಿಗೆ ಗೆಜ್ಜೆ ಕಟ್ಟಿಸಿಕೊಳ್ಳುತ್ತಾ… ಎದೆಯ ಮೇಲಿಂದ ಇಳಿದು ಬಿದ್ದ ಪಲ್ಲುವನ್ನು ಕಿರುಬೆರಳಲ್ಲಿ ಸುತ್ತಿಕೊಳ್ಳುತ್ತಾ ಒಂದೇ ಒಂದು ಮಾತಿಗಾಗಿ ಕಾದು ಕುಳಿತವರ ಪ್ರೀತಿ ಏನಂತ ಹೇಳಲಿ. ಪ್ರೀತಿ ಕಳೆದು ಹೋದ ಮೇಲೇನೇ ಅದು ಇರಬೇಕಿತ್ತು ಅನಿಸೋದು ಅಲ್ವಾ geleya. ಬಡ್ಡೀಮಗಂದು ಅದರ ಝಲಕ್ಕೇ ಬೇರೇ ಬಿಡು.
  ಅಂದಹಾಗೇ ಎಂತ ಚಂದಕ್ಕೆ ಬರಿತೀಯೋ. ಲವಲವಿಕೆ ನಿನಗೂ ಸಿದ್ದಿಸಿದೆ. ಅದು ಕಳೆದುಹೋಗದಂತೆ ನೋಡಿಕೋ.
  ಮುಂದಾ?

 3. sunaath September 8, 2008 at 11:37 am #

  ಒಂದು ಕೊಳಲು ಅಪಸ್ವರ ಹೊರಡಿಸಿದರೆ, ಏನು ಮಾಡ್ತೀರಿ? ಬೇರೊಂದು ಕೊಳಲು ತರ್ತೀರಿ ಅಲ್ವೆ?
  ಜೀವನದಲ್ಲೂ ಅದೇ ಸರಿ.

 4. Navilugari September 9, 2008 at 5:40 am #

  Vijayaraj..nimmma maatu nija ne aagali bidi 🙂

  ಡಿಯರ್ ಅಜ್ಜಿಪುರ…ಯಾಕೊ ನಿಮ್ಮ ಅನಿಸಿಕೆ ಓದಿ ಮತ್ತೊಂದು ಲೆಟರ್ ಬರಿಬೇಕು ಅನ್ನಿಸ್ತಿದೆ…ಬಡ್ಡಿ ಮಗಂದು ಅದರ ಝಲಕ್ಕೇ ಬೇರೆ ನೆ ಬಿಡಿ…ಚಂದ ಬರಿಲಿಕ್ಕೆ ಪ್ರಯತ್ನಿಸ್ತೀನಿ…

  ಮುಂದಾ…ನಿಮ್ಮ ಪ್ರೀತಿ ಹಿಂಗಾ ಇರಲಿ….

  ಮುಂದಾ?

  ಸುನಾತ್ ಡಿಯರ್…ಯಾಕೋ ನೀವು ಹೇಳಿದಷ್ಟು ಸುಲಬವಲ್ಲ ಅನ್ನಿಸ್ತಿದೆ ನನಗೆ..ಎನ್ ಅಂತೀರಿ? ಕೊಳಲನ್ನೆನೊ ಬೇರೆ ತರಬಹುದು…

  ಆಆಆಆಆಆ ದಾಆಆಆಆಅ ರೇ ?

  ಪ್ರೀತಿಯಿರಲಿ
  ನಿಮ್ಮ ನವಿಲುಗರಿ ಹುಡುಗ

 5. sumanth54 September 12, 2008 at 1:03 pm #

  ಓ ನವಿಲೆ
  ನಿಮ್ಮ ಲೆಖನವನ್ನು ಓದಿ ಕೆ.ಎಸ್.ನಿಸಾರ್ ಅಹ್ಮದ್ ರವರ ಒಂದು ಪದ್ಯ ನೆನಪಿಗೆ ಬಂದಿತು.
  “ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ, ಕಲ್ಲಿನಂದದೆ ಬಿತ್ತು ತಿಳಿಯಾದ ಎದೆಗೊಳವ ರಾಢಿಗೊಳಿಸುವೆ ಏಕೆ ಮಧುರ ನೆನಪೆ…..”

 6. ನವಿಲಗರಿ September 13, 2008 at 5:18 am #

  ಸುನಾತ್ ತುಂಬ ತೂಕದ್ದಾದ ಕಾಮೆಂಟು..ಜೀರ್ಣಿಸಿಕೊಳ್ಳೊಕೆ ಸ್ವಲ್ಪ ಕಷ್ಟ..:)

  ಥಾಂಕು 🙂

 7. rajayogi September 13, 2008 at 1:05 pm #

  nice story
  pls go thru my bog
  rajayogi.wordpress.com

 8. Jesh.. October 5, 2008 at 10:20 am #

  ಹೊಸ ಹುಡುಗಿ ಸಿಕ್ಕಿರಬೇಕು ಅವಳ ಕಾಲಿಗು ಗೆಜ್ಜೆ ತೊಡಿಸುತ್ತ’ 7 ಜನುಮ ಜೊತೆ ಇರ್ತೀನಿ ಅಂತ ಹೇಳ್ತಿದ್ದೀಯ ಅಲ್ಲವ? ಅವಳ ಕೈ ಬೆರೆಳ ಜೊತೆ ಆಟ ಆಡುತ್ತ ಪ್ರತಿ ದಿನ ಸಂಜೆ ನದಿ ತೀರದಲ್ಲಿ………………….. ಅವಳ ಎದೆಯ ಮೇಲೆ…ಸಾಕು ಕಣೊ ಯಾಕೊ ಗಂಟಲುಬ್ಬಿ ಬರುತ್ತಿದೆ ನನಗೆ ಮತ್ತೆ ಒಂದು ಸಾಲು ಬರಿಲಿಕ್ಕೆ ಆಗ್ತಿಲ್ಲ ಗೊತ್ತ.

  THUMBA CHENNAGIDE…

  nimma prathiyondu baravanigeu….thumba esta aguthe…but kelavondu pade pade repeat aguthe…

 9. ನವಿಲುಗರಿ October 5, 2008 at 12:43 pm #

  ನಿಜ..ಒಂದೇ ನೆನಪೂ ಪದೇ ಪದೇ ಕಾಡುತ್ತದಲ್ಲ ಅದನ್ನ ತಪ್ಪು ಅನ್ನಲಿಕೆ ಅಗುತ್ತ ಜೆಶ್? ರೀಪೀಟ್ ಮಾಡಿದ್ದೀನಿ ಅನ್ನಿಸುತ್ತಿಲ್ಲ ನನಗೆ…ಎಲ್ಲೋ ಕೆಲವು ಸಲ ಒಂದೇ ಭಾವನೆಯನ್ನ ತುಂಬಿಕೊಂಡು ಬರಿಲಿಕ್ಕೆ ಹೊರಟಾಗ ಹೀಗನ್ನಿಸಿರಬಹುದು ನಿಮಗೆ….

 10. October 11, 2008 at 5:38 pm #

  ¸ÉÆêÀÄÄ CªÀgÉ,
  ¤ÃªÁågÀÄ CAvÀ £À£ÀUÉ UÉÆwÛ®è. DzÀgÉ vÀÄA§ ¸ÀªÀÄAiÀÄ¢AzÀ ¤ªÀÄä §gÀºUÀ¼À£ÀÄß UÀªÀĤ¸ÀÄvÀÛ §A¢zÉÝãÉ.
  ¤ªÀÄä GvÁìºÀ ªÉÄZÀÄѪÀAxÀzÀÄÝ. ¤ªÀÄä §gÀªÀtÂUÉAiÀÄÆ ZÉ£ÁßVzÉ. DzÀgÉ zÀAiÀÄ«lÄÖ CPÀëgÀzÉÆõÀUÀ¼ÀvÀÛ PÉÆAZÀ UÀªÀÄ£À«r.
  PÀ£ÀßqÀªÀ£ÀÄß G½¸ÉÆÃt.

 11. Ramu b kumbar February 10, 2009 at 7:34 am #

  hosa hudugi sikkirbeku adakke nimmanna maretirabeku hudugiye

 12. Prasann March 1, 2009 at 1:13 am #

  Hats off sir nimge… soooooooooooper… ellinda kalitukondri ee thara bareyodanna..

 13. naveen kumar April 18, 2009 at 1:08 pm #

  feel feel feel……

 14. Anonymous April 10, 2010 at 10:13 am #

  all are lie ella mosa…. plz love na belive maadi life spoil maadkolbedi…..
  its my request….

 15. ramya September 23, 2010 at 12:58 pm #

  feeling

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: