ಹೆಸರಿನ ಹಂಗಿಲ್ಲದ “ಹನಿಗಳು”

17 ಸೆಪ್ಟೆಂ

 

  ನೀನಿಲ್ಲದೇ ಸತ್ತೇ ಹೋಗ್ತೀನಿ

 ಅಂದವನನ್ನೊಮ್ಮೆ ಕೆಕ್ಕರಿಸಿಕೊಂಡು

 ನೋಡಿದಳು…..ಹುಡುಗ ಅರ್ದ ಸತ್ತಿದ್ದ.

——————————-

 ಅವಳ ಹಂಗಿಲ್ಲದೆ

 ಕವಿತೆ ಬರೆಯ ಹೊರಟವನು

 ಕವಿತೆಯಿರಲಿ – 

 ಕವಿತೆಗೊಂದು 

 ಹೆಸರೂ ತೋಚದೆ ಬೆತ್ತಲಾಗಿದ್ದಾನೆ

——————————-

 

ಪ್ರೀತಿ ಮಾಡಿದ ಹುಡುಗನಿಗೇನು

ಸಿಕ್ಕಿತೋ ಗೊತ್ತಿಲ್ಲ..ಜಗತ್ತಿಗೆ

ಒಬ್ಬ ತತ್ವಜ್ನಾನಿ ಉದಯಿಸಿದ್ದ.

————————-

ಹೋಗಿ ಬರುತ್ತೇನೆಂದ

ಹುಡುಗನ ಮಾತಿಗೆ ವರ್ಷಗಳೇ

ಉರುಳಿದವು..ನಂಬಿ ಕುಳಿತ

ಗೆಳತಿಗೆ ಸಮಸ್ತ ದೇವತೆಗಳು

ಕೂಡ ಸುಳ್ಳು ಹೇಳಿದವು..

————————–

ಮತ್ತೆ ಮತ್ತೆ ಹುಡುಗಿ

ಹೂವಿನ ತೋಟದಲ್ಲಿ

ಸುತ್ತಿದ್ದಕ್ಕೆ ಹೂಗಳು

ನಾಚಿ ತಲೆತಗ್ಗಿಸಿ ಮರೆಯಾದವು..

ಜನರು ಹೂವಿನ ಗಿಡಗಳ

ಬಂಜೆತನಕ್ಕೆ ಶಪಿಸಿದರು..

——————————

ಹೀರೊ ಹುಡುಗಿಯನ್ನ

ಹಾರಿಸಿಕೊಂಡು ಹೋಗಿ ಮದುವೆಯಾದ

ಜನರು ಚಪ್ಪಾಳೆ ತಟ್ಟಿದರು..

ಮಗಳು ಯಾರನ್ನೋ ಇಷ್ಟವೆಂದಳು

ಒಂದು ಕೋಣೆಯಲ್ಲಿ ಕೂಡಿಟ್ಟು

ಬಾಗಿಲು ಹಾಕಿದರು

—————————–

Advertisements

17 Responses to “ಹೆಸರಿನ ಹಂಗಿಲ್ಲದ “ಹನಿಗಳು””

 1. venu ಸೆಪ್ಟೆಂಬರ್ 17, 2008 at 10:21 ಫೂರ್ವಾಹ್ನ #

  CHENNAGIDE…MODALA NALKU HANIGALU TUMBAAA ISHTAVADAVU

 2. ವಿಕಾಸ್ ಹೆಗಡೆ ಸೆಪ್ಟೆಂಬರ್ 17, 2008 at 12:58 ಅಪರಾಹ್ನ #

  ಕೊನೇದು ಸೂಪರ್

 3. lakshmi shrivasta ಸೆಪ್ಟೆಂಬರ್ 17, 2008 at 3:33 ಅಪರಾಹ್ನ #

  ಮತ್ತೆ ಮತ್ತೆ ಹುಡುಗಿ
  ಹೂವಿನ ತೋಟದಲ್ಲಿ
  ಸುತ್ತಿದ್ದಕ್ಕೆ ಹೂಗಳು
  ನಾಚಿ ತಲೆತಗ್ಗಿಸಿ ಮರೆಯಾದವು..
  ಜನರು ಹೂವಿನ ಗಿಡಗಳ
  ಬಂಜೆತನಕ್ಕೆ ಶಪಿಸಿದರು..

  abhuta kalpane..jana tumba kettavaru..

 4. karthik paradkar(www.hejje.blogspot.com) ಸೆಪ್ಟೆಂಬರ್ 18, 2008 at 7:19 ಫೂರ್ವಾಹ್ನ #

  ಹನಿ ಹನಿ ಸೇರಿ ಕಹಾನಿ..

 5. Pradee Hegde ಸೆಪ್ಟೆಂಬರ್ 18, 2008 at 7:44 ಫೂರ್ವಾಹ್ನ #

  great imagination..

 6. neelihoovu ಸೆಪ್ಟೆಂಬರ್ 18, 2008 at 8:50 ಫೂರ್ವಾಹ್ನ #

  ಎಲ್ಲಾ ಸೂಪರ್ ಗುರುಗಳೆ..

  ಮೊದಲೇ ಎಲ್ಲಾ ಕವನ ಓದಿದ್ರೂ ಮತ್ತೆ ಮತ್ತೆ ಓದಿದೆ.
  ಈ ಕಲ್ಪನೆಗಳೆಲ್ಲಾ ಅದು ಹ್ಯಾಗೆ ಹುಟ್ಟುತ್ತೆ ಮಾರಾಯ?..:)

 7. hema ಸೆಪ್ಟೆಂಬರ್ 18, 2008 at 8:59 ಫೂರ್ವಾಹ್ನ #

  ನಿಮ್ಮ ಕವನಗಳಿಗೆ ಸ್ಪೂರ್ತಿ ಆಗೋ ಹುಡುಗಿ ಯಾರು ಹೇಳಿ ಸೋಮೂರವರೇ ಒಂದು ಸಲ ದರ್ಶನ ಪಡೆಯಬೇಕು ಎಂದಿರುವೆ.

 8. ನವಿಲಗರಿ ಸೆಪ್ಟೆಂಬರ್ 18, 2008 at 11:05 ಫೂರ್ವಾಹ್ನ #

  ವೇಣು ವಿಕಾಸ್..:) ದನ್ಯವಾದ:೦

 9. ನವಿಲಗರಿ ಸೆಪ್ಟೆಂಬರ್ 18, 2008 at 11:07 ಫೂರ್ವಾಹ್ನ #

  ಹೌದು ಲಕ್ಷ್ಮಿಯವರೆ..ನೀವು ನಾವು ತುಂಬ ಕೆಟ್ಟವರು.. 🙂

  ಕಾರ್ತಿಕ್ ನಿಜಾನೆ ನಿಮ್ ಮಾತು;)

  ಪ್ರದೀಪ್ ಥಾಂಕು ಥಾಂಕು

 10. Jesh ಸೆಪ್ಟೆಂಬರ್ 18, 2008 at 11:11 ಫೂರ್ವಾಹ್ನ #

  ನಿಮ್ಮ ಕವನವನ್ನು ಎರಡು ಮೂರು ಸಲ ಓದಿದೆ ನಿಜಕ್ಕೂ ನಂಗೆ ತುಂಬಾ ಇಷ್ಟ ಆಯಿತು,…ಒಂದು ಕ್ಷಣ ನಾ ಎಲ್ಲಿರುವೆ ಅನ್ನೋದೇ ನಂಗೆ ಗೊತ್ಹಿರ್ಲಿಲ್ಲ ……

 11. ನವಿಲಗರಿ ಸೆಪ್ಟೆಂಬರ್ 18, 2008 at 11:18 ಫೂರ್ವಾಹ್ನ #

  ನೀಲಿಹೂವಿನ ನಿಸ್ಸೀಮರೇ..ನೀವು ಯಾವಗ ಕಾಮೆಂಟ್ ಮಾಡೋಕೆ ಬಂದಿದ್ರಿ? ಬರಿ ಹೊಗೊಳೋಕೆ ಅಂತಾನೆ ಬರ್ತೀರೇನ್ರಿ?

  ಆದ್ರೂ ನಿಮ್ ಹೊಗಳಿಕೆ ಕೇಳಿಕೊಂಡು ಮತ್ತಷ್ಟು ಬರಿಯೋಕೆ ಪ್ರಯತ್ನಿಸ್ತೀನಿ 🙂

  ಹೇಮಾ…ಹೀಗೆಲ್ಲ ಕೇಳಿಬಿಟ್ರೆ ಹೇಗೆ ನೀವು? ಯಾರು ಅಂತ ಹೇಳೋದು..ತುಂಬಾ ಹನಿಗಳು ಬರೆದಿರೊ ಕಾರಣಾ ನೇ ತುಂಬಾ ಹುಡುಗಿಯರು ಇದ್ದಾರೆ ಅನ್ನುವ ಕಾರಣಕ್ಕೆ ಹಿಹಿಹಿಹಿಹಿಹಿಹಿಹಿಹಿಹಿಹಿ…

  ಥಾಂಕು ಥಾಂಕು

 12. ರವಿ ಅಜ್ಜೀಪುರ ಸೆಪ್ಟೆಂಬರ್ 19, 2008 at 12:37 ಅಪರಾಹ್ನ #

  ಅಷ್ಟೂ ಇಷ್ಟ ಆಯ್ತು. ಏಯ್ ಇನ್ನೂ ಹೆಚ್ಚೆಚ್ಚು ಬರೀ ಮಾರಾಯ. ನನಗೆ ಇಂಥವೆಂದ್ರೆ ಪ್ರಾಣ. ಯಾಕೋ ಡಯರೆಕ್ಟಾಗಿ ಬಂದು ಎದೆಯಲ್ಲೇ ಗೂಡು ಕಟ್ಟುತ್ತವೆ.
  ಅಂದಹಾಗೆ
  ನೀನಿಲ್ಲದೇ ಸತ್ತೇ ಹೋಗ್ತೀನಿ
  ಅಂದವನನ್ನೊಮ್ಮೆ ಕೆಕ್ಕರಿಸಿಕೊಂಡು
  ನೋಡಿದಳು…..ಹುಡುಗ ಅರ್ದ ಸತ್ತಿದ್ದ.

  ಅಂತ ಬರಿದಿದೀಯಲ್ಲ ಯಾಕೋ ಹಿಂದಿನದ್ದೆಲ್ಲ ನೆನಪಾಗುತ್ತಿದೆ.
  ಥ್ಯಾಂಕ್ಸ್ ಯಾರ್.

 13. neelihoovu ಸೆಪ್ಟೆಂಬರ್ 20, 2008 at 7:17 ಫೂರ್ವಾಹ್ನ #

  “ನೀಲಿಹೂವಿನ ನಿಸ್ಸೀಮರೇ..ನೀವು ಯಾವಗ ಕಾಮೆಂಟ್ ಮಾಡೋಕೆ ಬಂದಿದ್ರಿ? ಬರಿ ಹೊಗೊಳೋಕೆ ಅಂತಾನೆ ಬರ್ತೀರೇನ್ರಿ?”

  ನವಿಲ್ಗರಿಗಿರುವ ಸಾವಿರ ಕಣ್ಣಿಂದ ತಪ್ಪಿಸಿಕೊಂಡು ಬರಕ್ಕಾಗುತ್ತಾ ಗುರುವೇ..?
  ನನ್ ಹೊಗಳಿಕೆ ತುಂಬಾ ದುಬಾರಿ ಕಣಪ್ಪಾ… ಸುಮ್ ಸುಮ್ನೆ ನೀಡಲಾರೆ.

  “ಹೀರೊ ಹುಡುಗಿಯನ್ನ
  ಹಾರಿಸಿಕೊಂಡು ಹೋಗಿ ಮದುವೆಯಾದ
  ಜನರು ಚಪ್ಪಾಳೆ ತಟ್ಟಿದರು..
  ಮಗಳು ಯಾರನ್ನೋ ಇಷ್ಟವೆಂದಳು
  ಒಂದು ಕೋಣೆಯಲ್ಲಿ ಕೂಡಿಟ್ಟು
  ಬಾಗಿಲು ಹಾಕಿದರು ”

  “ಹೋಗಿ ಬರುತ್ತೇನೆಂದ
  ಹುಡುಗನ ಮಾತಿಗೆ ವರ್ಷಗಳೇ
  ಉರುಳಿದವು..ನಂಬಿ ಕುಳಿತ
  ಗೆಳತಿಗೆ ಸಮಸ್ತ ದೇವತೆಗಳು
  ಕೂಡ ಸುಳ್ಳು ಹೇಳಿದವು..”
  ನೀನಿಲ್ಲದೇ ಸತ್ತೇ ಹೋಗ್ತೀನಿ

  “ಅಂದವನನ್ನೊಮ್ಮೆ ಕೆಕ್ಕರಿಸಿಕೊಂಡು
  ನೋಡಿದಳು…..ಹುಡುಗ ಅರ್ದ ಸತ್ತಿದ್ದ.”

  ಇದನ್ನ ಯಾರದ್ರೂ ಚೆನ್ನಾಗಿಲ್ಲ ಅನ್ನೋಕ್ಕಾಗುತ್ತಾ ಹೇಳು??

 14. Rohini ಸೆಪ್ಟೆಂಬರ್ 20, 2008 at 8:37 ಅಪರಾಹ್ನ #

  Yella soooooooooooooooooooper~aagide Kanase..aadre idella bareyodu naan yaavaaglu maataaDso Soma~ne na anta doubt aagatte…yeSTu simple aagi irtiya yeSTu friendly aagi irtiya ninnalliro Pratibhe bagge onchooru ninge ahankaara ilwalla..U R Really Great[:)]

 15. ಅನಾಮಿಕ ಜುಲೈ 16, 2011 at 6:44 ಫೂರ್ವಾಹ್ನ #

  Font na badalisidare kavanagalu ennu cennagiritte.

 16. amaresh.pg ನವೆಂಬರ್ 3, 2012 at 8:10 ಫೂರ್ವಾಹ್ನ #

  nice bayya

 17. sahyadri nagaraj ನವೆಂಬರ್ 3, 2012 at 9:32 ಫೂರ್ವಾಹ್ನ #

  siply nice..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: