ನೀಲಿ ಗಗನವೇ ಶಾಪ ಕೊಡು………….

18 ಸೆಪ್ಟೆಂ

ಅಬ್ಬಾ ಗಗನವೇ.. ಅದೆಷ್ಟು ನಕ್ಷತ್ರಗಳನ್ನ ನಿನ್ನೆದೆಯಲ್ಲಿಟ್ಟುಕೊಂಡು ಹಾಗೆ ಶಾಂತವಾಗಿದ್ದೀಯ? ನನಗೂ ಹೇಳಿ ಕೊಡು.ನಿನ್ನ ಸಹನಾ ಶಕ್ತಿಯನ್ನ. ನನ್ನೆದೆಯಲ್ಲಿ ಒಂದೇ ಒಂದು ನಕ್ಷತ್ರವನ್ನಿಟ್ಟುಕೊಳ್ಳಲಾಗದೆ ನಿನ್ನ ಮುಂದೆ ಕುಬ್ಜನಾಗಿ ನಿಂತಿರುವ ನನ್ನೆದೆಗೆ ನಿನ್ನ ಪ್ರೀತಿ ಕೊಡು ನಿನ್ನ ಸಹನೆ ಕೊಡು ನೋವುಗಳನ್ನ ಮರೆಯಬೇಕಿದೆ. ಅಷ್ಟಕ್ಕೂ ಮರೆಯುವುದಕ್ಕೆ ಅಂತ ಮಾತಿಗೆ ಹೇಳುತ್ತೇನಷ್ಟೆ ನಿಜಕ್ಕು ಅದು ಸಾದ್ಯಾನ ಅಂತ ನಿನ್ನೆದೆ ಗೂಡಲ್ಲಿ ಹುದುಗಿರುವ ಅಸಂಖ್ಹ್ಯಾತ ನಕ್ಷತ್ರಗಳನ್ನೆ ಕೇಳಿ ನೋಡು ! ಅಷ್ಟು ನಕ್ಷತ್ರಗಳಲ್ಲಿ ಒಂದೆ ಒಂದು ಮರೆಯುವುದಕ್ಕೆ ಸಾದ್ಯಾ ಅನ್ನುವುದೇ ಆದರೆ ನಾನು ಈ ಬದುಕು ಈ ಬವಣೆ ಈ ನೋವು ಈ ಹಿಂಸೆ ಈ ಜಗತ್ತಿನ ಅಷ್ಟೂ ಮೋಸಗಳಿಗೆ ಒಂದು ವಿದಾಯ ಹೇಳಿ ನಾನು ಕೂಡ ನಿನ್ನೆದೆಯಲ್ಲಿ ಒಂದು ನಕ್ಷತ್ರವಾಗುತ್ತೇನೆ.[:(]ಗೊತ್ತಿಲ್ಲ ನಿನಗೆ ಪ್ರತಿ ದಿನ ಪ್ರತಿ ಗಳಿಗೆ ನಾನು ಅನುಭವಿಸುತ್ತಿರುವ ನೋವು ದುಃಖ ಹಿಂಸೆ ಅವಮಾನವನ್ನ ನಾನು ಜಗತ್ತಿಗೇ ಹಂಚಿ ಮತ್ತೆ ನಿನ್ನೆದೆಗೆ ಸುರಿದರೂ ಕಾಲಿಯಾಗದಷ್ಟಿದೆ. ಪ್ರತಿ ಆ ಕ್ಷಣ ಕೂಡ ನನಗೆ ಒಂದು ಜ್ಯೋತೀರ್ವರ್ಷದ ಸಮಾನ. ನಿನಗೆ ಗೊತ್ತ? ನಾನು ಅಂತ ಪ್ರತೀ ಕ್ಷಣಗಳನ್ನು ಕೂಡ ಪ್ರೀತಿಯಿಂದ ಅನುಭವಿಸುತ್ತಿದ್ದೇನೆ.ನೋವಲ್ಲಿದ್ದಷ್ಟು ಹೊತ್ತೂ “ಅವರು ” ನೆನಪಲ್ಲಿರುತ್ತಾರಲ್ಲ ಎಂಬ ವಿಲಕ್ಷಣ ಆಸೆ. ಆಸೆ ನಿರಾಸೆಗಳ ಲೆಕ್ಕವಿಲ್ಲ .ಬದುಕಿನಲ್ಲಿ ಯಾವತ್ತೊ ಪ್ರೀತಿಯ ಲೆಕ್ಕದಲ್ಲಿ ನಪಾಸು ನಾನು..ಮತ್ತೆ ಪಾಸು ಮಾಡೊಕೆ ಇದು ಪರೀಕ್ಷೆಯಲ್ಲ ಕೇವಲ ನನ್ನ ಕನಸುಗಳ ಕೇವಲ ಕನಸುಗಳ ನಿರೀಕ್ಷೆ ಅಷ್ಟೆ.

ಮನಸಿನ ಯಾವುದೋ ಒಂದು ಮೂಲೆಯಲ್ಲಿ ನೆನಪು ಅನ್ನೊದು ಇದ್ದಿದ್ದರೆ ಅದನ್ನ ಮರೆತು ಬಿಡಬಹುದಿತ್ತು ಅಲ್ಲವ? ವಿಷಮ ಶೀತ ಜ್ವರದ ಹಾಗೆ ಮೈಮನವನ್ನೆಲ್ಲ ಆವರಿಸಿದ ಆ ಮಾಯೆಯ ಸುಳಿಯಿಂದ ಹೇಗೆ ಹೊರಬರಲಿ ಹೇಳು ನೀಲಿ ಗಗನವೇ. ನೀನು ನೊಂದಿದ್ದೀಯ? ಅದಕ್ಕೇನ ಒಂದೊಂದು ಸಲ ಮಳೆಯ ರೂಪದಲ್ಲಿ ಅಷ್ಟೂ ದುಃಖವನ್ನ ಹೊರಹಾಕುವುದು? ನಿನ್ನ ಹಾಗೆ ಮಳೆ ಸುರಿಸುವ ತಾಕತ್ತು ನನಗಿಲ್ಲ ಆದರೆ ನಾನು ಸುರಿಸುವ ಕಣ್ಣೀರಿನಲ್ಲಿರುವ ನೋವಿಗೆ ನೀನು ಮತ್ತೆ ನಿನ್ನ ಅಸಾಂಖ್ಯಾತ ನೋವುಗಳು ಸಾಟಿಯಾಗಲಾರಿರಿ ನೆನಪಿಡಿ. ನನಗೆ ಹೋಲಿಕೆ ಮಾಡಿ ಅಭ್ಯಾಸವಿಲ್ಲ ಕೇವಲ ಮೋಸ ಹೋಗಿ ಅಭ್ಯಾಸವಷ್ಟೆ.ಪ್ರೀತಿಯಲ್ಲಿ ಮೋಸ ಹೋಗುವುದು ನನಗೆ ಅಂತ ವಿಚಿತ್ರವೆನಿಸುತ್ತಿಲ್ಲ.ಆದರೆ ಪ್ರೀತಿ ಮೋಸಮಾಡುವುದು ನನಗೆ ವಿಚಿತ್ರವೆನಿಸುತ್ತೆ….ಯಾಕೊ ಬದುಕೇ ವಿಚಿತ್ರವೆನಿಸುತ್ತೆ ಯಾರಿಗೋ ಯಾರೋ ಕಣ್ಣೀರು ಹಾಕುವುದು, ಯಾರಿಗೋಸ್ಕರವೋ ಬದುಕಿ ಬಿಡುವುದು,ಯಾರೋ ನಮ್ಮ ಬದುಕಾಗಿಬಿಡುವುದು, ಅವರಿಲ್ಲವೆಂದ ಮಾತ್ರಕ್ಕೆ ಬದುಕೇ ಇಲ್ಲವೆನಿಸುವುದು ಇದು ಯಾವ ಮಾಯೆಯ ಮಾಯೆ? ಬಿಡು ಕಳೆದು ಹೋಗಿದ್ದರ ಬಗ್ಗೆ ಅಗಾಧ ನೋವಿದೆ…ಆ ನೋವು ಆ ಮಧುರ ಯಾತನೆ ಈ ಪ್ರಪಂಚದಲ್ಲಿ ನಾನಿರುವವರೆಗೆ ಇರುತ್ತೆ. ನಿನ್ನಲ್ಲಿ ಕೇಳಿಕೊಳ್ಳುವುದು ಇಷ್ಟೆ. ನನಗೆ ಯಾವತ್ತು ಈ ನೋವು ಮರೆತುಹೊಗದಂತ ಶಾಪ ಕೊಡು .ನೀನು ನೀಲಿಗಗನ.. ನಿನ್ನ ನಕ್ಷತ್ರಗಳ ಜೊತೆ ನಗುನಗುತ್ತಿರು..ನಾನು ನನ್ನ ನೋವುಗಳ ಜೊತೆ ಒಳಗೆ ಅಳುತ್ತ ಹೊರಗೆ ನಗುತ್ತಿರುತ್ತೇನೆ..

ನಿನ್ನ ಪ್ರೀತಿಯ ಚೋಮು

Advertisements

4 Responses to “ನೀಲಿ ಗಗನವೇ ಶಾಪ ಕೊಡು………….”

 1. hema ಸೆಪ್ಟೆಂಬರ್ 19, 2008 at 6:58 ಫೂರ್ವಾಹ್ನ #

  chennagidhe kane somi…… 😉

 2. neelihoovu ಸೆಪ್ಟೆಂಬರ್ 20, 2008 at 7:30 ಫೂರ್ವಾಹ್ನ #

  ಎಷ್ಟೊಂದು ಫೀಲ್ ಮಾಡ್ಕೊಂಡು ಬರೀತಿಯಪ್ಪಾ…

  ನಿನ್ನ ಭಾವನೆಗಳ ಫ್ಲೋ ವನ್ನು ಬರೇ ಪ್ರೀತಿಗೆ ಯಾಕೆ ಸೀಮಿತಗೊಳಿಸ್ತೀಯ?
  ನೀನ್ಯಾಕೆ ಬೇರೆ ವಿಷಯಗಳನ್ನೂ ನಮಗೆ ಬಡಿಸಬಾರದು…

  ಬೇಗ ಭಡ್ತಿ ತಗೋ ಮಾರಾಯ..:)

 3. Pavithra ಏಪ್ರಿಲ್ 11, 2009 at 9:25 ಫೂರ್ವಾಹ್ನ #

  Sir neevu barediruva hage beku andiddella mareyo hagidre estu chennagirutte alva. E nenapugale hage, Navilugariya hage endigu mareyalagaddu.

 4. Ram ಅಕ್ಟೋಬರ್ 29, 2009 at 7:49 ಫೂರ್ವಾಹ್ನ #

  somu nin kalpane madkondu baritiya…. or expirience ah….?

  anyhow super agide…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: