ನೀನೆಂದರೇ…!

19 ಸೆಪ್ಟೆಂ

 

ನೀನೆಂದರೇ

ಒಂದು ಪುಸ್ತಕ.

ಅಲ್ಲಿರುವುದೆಷ್ಟು

ಹಾಳೆಗಳೋ..!

ಮತ್ತು ನೀನೆಂದರೇ

ಅಲ್ಲಿರುವ ಅಷ್ಟೂ

ಹಾಳೆಗಳಲ್ಲಿರುವ

ಪ್ರೀತಿಯ ಘಜಲ್ಲುಗಳು.!

ಮತ್ತು ಅಷ್ಟೂ ಘಜಲ್ಲುಗಳಲ್ಲಿ

ಬಿಕ್ಕಳಿಕೆಗೆ ಅಗ್ರಸ್ಥಾನ.

 

ನೀನೆಂದರೇ

ಸಮಸ್ತ ದೇವರುಗಳು,          

ಅದೆಷ್ಟು ದೇವರುಗಳೋ

ಲೆಕ್ಕವಿಟ್ಟಿಲ್ಲ ಇಲ್ಲಿಯವರೆಗೆ..

ಮತ್ತೆ ನೀನೆಂದರೇ,

ದೇವರು ನನಗೆ ಇದಿರಾಗಿ

ನಿನ್ನ ಕುರಿತಾದ ನನ್ನ ಕೆಲವು

ಬೇಡಿಕೆಗಳಿಗೆ ಅಸ್ತು ಅನ್ನುವುದು.!

ಯಾಕೋ ದೇವರಿದ್ದಾನೆ ಅನ್ನುವ

ನಂಬಿಕೆಗೂ ಗೆದ್ದಲು ಹಿಡಿದಿದೆ.

 

ನೀನೆಂದರೇ ನನ್ನ

ಒಂದೇ ಒಂದು ಹಾಡು

ಇಲ್ಲಿರುವ ಭಾವಗಳೆಷ್ಟೋ !

ಮತ್ತೆ ನೀನೆಂದರೇ ನೀನೆ ಬರೆದ

ನನ್ನ ಮತ್ತೂ ಒಂದು ಹಾಡು,

ಇಲ್ಲಿನ ಸಾಹಿತ್ಯಕ್ಕೆ

ಕೊಂಚ ಪ್ರೀತಿ ಕಮ್ಮಿ!

ನೀನೆಂದರೇ ಒಟ್ಟು ನನ್ನ

ಜೀವನದ ಒಂದು ಹಾಡು ಅಷ್ಟೇ

ಆದರೇ ಒಂದೇ ಒಂದು ಸಾಲು

ನೆನಪಾಗುತ್ತಿಲ್ಲ..ನಿನ್ನ ಸಹಾಯಕ್ಕೆ ದಿಕ್ಕಾರ.

 

ನೀನೆಂದರೇ

ಒಂದು ಮೈದಾನ !

ಅಲ್ಲಿ ಪ್ರೀತಿಯ

ಕುರಿತಾದ ಎಲ್ಲಾ

ಆಟಪಾಠಗಳನ್ನು

ನಿಷೇದಿಸಲಾಗಿದೆ.

ಮತ್ತು ಅಲ್ಲಿನಾನಿಡಬೇಕಾದ

ಹೆಜ್ಜೆಗಳಿಗೀಗಾಗಲೇ ಕೋಳಗಳನ್ನ

ತಯಾರಿಸಿಡಲಾಗಿದೆಯಂತೆ.!

 

ನೀನೆಂದರೇ ಬೆಳಕು

ಆದರೂ ಏನು ಕಾಣಿಸುತ್ತಿಲ್ಲ..

ನೀನೆಂದರೇ ಅಮ್ಮ !

ಗುಮ್ಮ ಬಂದರೂ

ಎತ್ತಿಕೊಳ್ಳುತ್ತಿಲ್ಲ..

ನೀನೆಂದರೇ ಪ್ರೀತಿಯ

ಲೆಖ್ಖದ ಮಾಸ್ತರ್ !

ಏನು ಅರ್ಥವಾಗದು.

 

ನೀನೆಂದರೇ ಥೇಟು

ತುಂಬಿದ ಕೋರ್ಟು !

ಅಲ್ಲಿ ನೀನು ಎತ್ತುವ

ಎಲ್ಲ ಪ್ರಶ್ನೆಗಳಿಗೂ

ಹತ್ತಿಪ್ಪತ್ತು ಉತ್ತರಗಳು

ಮತ್ತೆ ನನಗೆ ಒಂದೂ

ಪ್ರಶ್ನೆಯಿಲ್ಲದೆ ಮರಣದಂಡನೆ.

 

Advertisements

13 Responses to “ನೀನೆಂದರೇ…!”

 1. ಅನಾಮಿಕ ಸೆಪ್ಟೆಂಬರ್ 19, 2008 at 11:28 ಫೂರ್ವಾಹ್ನ #

  ಪ್ರಶ್ನೆಯಿಲ್ಲದೆ ಮರಣದಂಡನೆ…?! adbhutha kalpane … Sathyavaada maathu .. aadare maranadandaneyalla … jeevadhi shishe antha nanna anisike

 2. Ashwath ಸೆಪ್ಟೆಂಬರ್ 19, 2008 at 11:28 ಫೂರ್ವಾಹ್ನ #

  ಪ್ರಶ್ನೆಯಿಲ್ಲದೆ ಮರಣದಂಡನೆ…?! adbhutha kalpane … Sathyavaada maathu .. aadare maranadandaneyalla … jeevadhi shishe antha nanna anisike

 3. neelihoovu ಸೆಪ್ಟೆಂಬರ್ 20, 2008 at 7:26 ಫೂರ್ವಾಹ್ನ #

  ಮೂರನೆಯ ಪ್ಯಾರ ಓದುವಾಗ ಸಲ್ಪ ಇಬ್ಬಂದಿತನ ಉಂಟಾಯ್ತು…ಬಹುಶಃ ನನ್ನ ತಲೆ ಅದನ್ನು ಅರ್ಥಮಾಡಿಕೊಳ್ಳಬಲ್ಲ ಲೆವೆಲ್ ಗೆ ತಲುಪಿಲ್ಲವೇನೋ…
  ಉಳಿದಂತೆ
  “ಅಲ್ಲಿ ನಾನಿಡಬೇಕಾದ
  ಹೆಜ್ಜೆಗಳಿಗೀಗಾಗಲೇ ಕೋಳಗಳನ್ನ
  ತಯಾರಿಸಿಡಲಾಗಿದೆಯಂತೆ”

  “ಅಲ್ಲಿ ನೀನು ಎತ್ತುವ
  ಎಲ್ಲ ಪ್ರಶ್ನೆಗಳಿಗೂ,
  ನನ್ನಲ್ಲಿ ಒಂದೂ
  ಪ್ರಶ್ನೆಯಿಲ್ಲದೆ ಮರಣದಂಡನೆ”

  ಅಬ್ಬಾ…:)
  ನಿನ್ನ ಕಲ್ಪನೆಗಳನ್ನು ನಂಗೂ ಸಲ್ಪ ಸಾಲವಾಗಿ ಕೊಡಪ್ಪಾ..:)

 4. Sumitra Deshapande ಸೆಪ್ಟೆಂಬರ್ 21, 2008 at 2:39 ಅಪರಾಹ್ನ #

  neenendare amma gumma bandaru yettikolluttilla…hmmm kalpane gud gud aagide….ond vishya…bari preeti prema viraha bikalike ge maatra nimma baraha na? adaraachegu ond jagattide alva? yaake prayatnisabaaradu? aadru odlikke adbhutavaagide..jaasti adambaragalillade bariteeri ade janakke ishtavaagodu..

 5. shreenidhids ಸೆಪ್ಟೆಂಬರ್ 22, 2008 at 7:18 ಫೂರ್ವಾಹ್ನ #

  u r amazing! maga, swalpa dina aste, neenu bhayankara mel hogteeya nodtiru!:)

 6. shiva ಸೆಪ್ಟೆಂಬರ್ 22, 2008 at 7:24 ಫೂರ್ವಾಹ್ನ #

  nice

 7. vijayraj ಸೆಪ್ಟೆಂಬರ್ 22, 2008 at 2:27 ಅಪರಾಹ್ನ #

  somu super aagide….
  yes.. I second what Sumitra Deshapande said.

  iShTu muddaagi saraLavaagi supeerrraagi bareyuva ninna barahakke innaShTu viShaya vaividhya bandre matoo adbhutavaagirutte kaNO….

  neenu innoo bEga mEle hOgabahudu…. 🙂

 8. Tejaswini Hegde ಸೆಪ್ಟೆಂಬರ್ 26, 2008 at 9:44 ಫೂರ್ವಾಹ್ನ #

  ಸೋಮು ಅವರೆ,

  ಅದೆಂತಹ ಕಲ್ಪನೆ ನಿಮ್ಮದು!! ತುಂಬಾ ಕಷ್ಟವಾಯಿತು ಅರಗಿಸಿಕೊಳ್ಳಲು… ಒಗಟಿನೊಳಗೊಂದು ಕವನವೋ ಇಲ್ಲಾ ಕವನದ ತುಂಬೆಲ್ಲಾ ಒಗಟೋ ತಿಳಿಯದು. ಕೊನೆಯ ಸಾಲುಗಳು ತುಂಬಾ ಮಾರ್ಮಿಕವಾಗಿವೆ.

 9. ನವಿಲಗರಿ ಅಕ್ಟೋಬರ್ 4, 2008 at 9:31 ಫೂರ್ವಾಹ್ನ #

  ಅಶ್ವಥ್..:)

  ಇಲ್ಲ ಇಲ್ಲ ನೀಲಿಹೂವಿನ ಊಹೆ ಸರಿಯಾಗೆ ಇದೆ..ಅಲ್ಲಿ ಸ್ವಲ್ಪ ಇಬ್ಬಂದಿತನವಾಗಿದ್ದು ನಿಜಾನೆ..ಎನ್ ಮಾಡೋದು..ಪರಿಸ್ತಿತಿ ಒಂದೊಂದು ಸಲ ಹಾಗೆ ಬರೆಯುವ ಹಾಗೆ ಮಾಡುತ್ತೆ..;)

 10. ನವಿಲಗರಿ ಅಕ್ಟೋಬರ್ 4, 2008 at 9:35 ಫೂರ್ವಾಹ್ನ #

  ಸುಮಿತ್ರಾ ಮೇಡಮ್…( ಕಡ್ಡಾಯವಾಗಿ ಪ್ರೀತಿ, ಪ್ರೇಮ,ವಿರಹ,ನೆನಪು ಮತ್ತು ಬಿಕ್ಕಳಿಕೆಯ ವಾರಸುದಾರರಿಗಾಗಿ ಮಾತ್ರ..!) ಇಲ್ಲಿ ಸೂಚಿಸಿರುವ ಹಾಗೆ ಇಲ್ಲಿನ ಬ್ಲಾಗಿರೊದು…ಈ ಬ್ಲಾಗಿಗೆ ಪ್ರೀತಿ ಪ್ರೇಮ ವಿರಹ ನೆನಪು ಬಿಕ್ಕಳಿಕೆಯ ಬಿಟ್ಟ್ಟು ಹೊರಗಿನ ಪ್ರಪಂಚದ ಅರಿವಿಲ್ಲ…ಮತ್ತೆ ಬೇರೆ ವಿಷಯಗಳ ಪಾಲಿಗೆ ಇದು ಇನ್ನು ಪುಟ್ಟ ಮಗು..ಸ್ವಲ್ಪ ಸಮಯ ಬೇಕಾಗಬಹುದು.. 🙂

  ಪ್ರೀತಿಯಿರಲಿ

 11. ನವಿಲಗರಿ ಅಕ್ಟೋಬರ್ 4, 2008 at 9:36 ಫೂರ್ವಾಹ್ನ #

  ತುಂತುರು ಹನಿಗಳ ಮಹಾಷಯರೇ…ಅದಕ್ಕೆ ನಿಮ್ಮ ಸಹಾಯ ಸಹಕಾರ ಬೇಕಾಗಬಹುದು..ಯಾವುದಕ್ಕು ಎಚ್ಚರದಿಂದಿರಿ…. 😉

 12. ನವಿಲಗರಿ ಅಕ್ಟೋಬರ್ 4, 2008 at 9:40 ಫೂರ್ವಾಹ್ನ #

  ವಿಜಯರಾಜ್ ಜಿ…ಸುಮಿತ್ರ ಮೇಡಮ್ ಗೆ ನಾನು ಹೇಳಿದ ಹಾಗೆ..ಈ ವಿಷಯಗಳನ್ನ ಹೊರತುಪಡಿಸಿದ ಈ ಪ್ರಪಂಚದ ಬೇರೆ ವಿಷಯಗಳ ಪಾಲಿಗೆ ನವಿಲ್ಗರಿ ಇನ್ನು ಪುಟ್ಟ ಪುಟ ಹೆಜ್ಜೆಯಿಡುತ್ತಿರುವ(24 ವರ್ಷದ) ಮಗು..ಸ್ವಲ್ಪ ಸಮಯ ಬೇಕಾಗಬಹುದು…

  ತೇಜಸ್ವಿನಿ ಮೇಡಮ್..ಹೀಗೆ ನವಿಲ್ಗರಿ ಮನೆಗೆ ಬಂದು ಹೋಗ್ತ ಇರಿ..ಸರಿತಪ್ಪನ್ನ ಹೇಳುತ್ತಿರಿ..

 13. Pavithra ಏಪ್ರಿಲ್ 16, 2009 at 10:28 ಫೂರ್ವಾಹ್ನ #

  Kalpanegala lokadalle telisibiduttere. Tumba chennagide Somu.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: