ನೀನಿಲ್ಲದೆ ಬದುಕುವುದು ಯಾಕೆ ಹೇಳಿಕೊಡಲಿಲ್ಲ?

23 ಸೆಪ್ಟೆಂ

 

ಡಿಯರ್ ಇವನೇ…

 

ನಿಜ ಹೇಳ್ತೀನಿ ಕೇಳೊ..ಈ ಬದುಕು ಅನ್ನುವ ಸಾಗರವನ್ನ ನಾವಿಬ್ಬರೇ ಪ್ರೀತಿಯ ದೋಣಿಯಲ್ಲಿ ದಾಟಬೇಕು ಅನ್ನುವ ಹುಚ್ಚು ಭರವಸೆಯೊಂದಿಗೆ ಕೈ ಕೈ ಹಿಡಿದು ಹೊರಟಿದ್ದೆವು..ಅದ್ಯಾವ ಮಾಯೆ ನಿನ್ನ ಕೈ. ಹಿಡಿದೆಳೆಯಿತೋ ಗೊತ್ತಿಲ್ಲ..ಅದ್ಯಾವ ಪಾಪದ ಜನುಮದಲ್ಲಿ ನಾನು ಮಾಡಿದ ಪಾಪ ಈ ಜನುಮದಲ್ಲಿ ತನ್ನ ಸೇಡು ತೀರಿಸಿಕೊಂಡಿತ್ತಲ್ಲೊ?..ಇದ್ದಕಿದ್ದಂತೆ ನೀನು ದಿಕ್ಕು ಬದಲಿಸಿಬಿಟ್ಟೆ..ನೀನು ನನ್ನಳಗಿಟಿದ್ದ ಅಷ್ಟೂ ಬಣ್ಣ ಬಣ್ಣದ ರಂಗೋಲಿಗಳೆಲ್ಲ ಬಣ್ಣ ಕಳೆದುಕೊಂಡವು.. ಅಲ್ಲಾ ಒಂದು ಪ್ರೀತಿಯ ಗೀತೆಯನ್ನ ಒಟ್ಟಿಗೆ ಹಾಡೋಣ ಅನ್ನುವ ಆಸೆ ಹುಟ್ಟಿಸಿದವನು ನೀನು..ಇನ್ನು ಪಲ್ಲವಿಯೇ ಮುಗಿದಿಲ್ಲ..ಅದೆಲ್ಲಿಗೆ ನಿನ್ನ ಪಯಣ? ಸರಿ ನೀನು ಹೋಗು..ಮತ್ತೇನಿಲ್ಲ..ನೀನು ಹೋದ ಮೇಲೆ ನಾನು ಅನುಭವಿಸುವ ಒಂಟಿತನದ ಲೆಖ್ಖ ಕೇಳ್ತೀನಿ ಪ್ಲೀಸ್ ಅದೊಂದು ಕೊಟ್ಟು ಹೋಗ್ತೀಯ.?

 

ನಿನಗೊಂದು ಥ್ಯಾಂಕ್ಸ್ ಹೇಳಬೇಕು ಕಣೋ.ನಾನು ಅತ್ತಾಗಲೆಲ್ಲ ನೀನು ಕಣ್ಣಾಗಿದ್ದೆ..ನಾನು ನಕ್ಕಾಗಲೆಲ್ಲ ನೀನೆ ಕಾರಣವಾಗಿದ್ದೆ..ಅಪ್ಪನ ನೆನಪಾದಾಗ ಅಪ್ಪನಂತಾಗಿದ್ದೆ..ಅಮ್ಮನ ಹೋಲಿಕೆ ನಿನಗೆ ನಾನು ಮಾಡೋದಿಲ್ಲ..ಯಾಕಂದ್ರೆ ನಿನ್ನ ಮಡಿಲಿದೆಯಲ್ಲ ಅದು ಥೇಟ್ ಅಮ್ಮನ ತರಾನೆ..ನಾನು ಕೋಪಿಸಿಕೊಂಡಾಗಲೆಲ್ಲ ಮುದ್ದು ಮಾಡಿದ್ದೆ..ನಾನು ಬಯಂಕರ ಜಗಳವಾಡಿದಾಗಲೆಲ್ಲ ನಿನ್ನದು ಬಯಂಕರವಾದ ಮೌನ..ನಿನ್ನ ಮೌನ ನನಗಿಷ್ಟವಾಗ್ತಿತ್ತು..ಒಮ್ಮೊಮ್ಮೆ ತುಂಬಾ ಕಷ್ಟವಾಗ್ತಿತ್ತು. ನೀನು ಜೊತೆಗಿದ್ದಷ್ಟು ದಿನ ನನ್ನ ಕಣ್ಣಿಂದ ಹೆಚ್ಚು ಮಳೆ ಬಂದಿಲ್ಲ..ಬಂದಿರುವ ಒಂದೆರೆಡು ಹನಿಗಳೂ ಕೂಡ

ನೀನೆ ಖುದ್ದು ಒರೆಸಲಿ ಅನ್ನುವ ಒಂದು ಪುಟಾಣಿ ಕಾರಣಕ್ಕೆ ವಿನಹ ಬೇರೇನು ಇಲ್ಲ..ನೋಡು ನಿನ್ನ ಕಳೆದು ಕೊಂಡಿದ್ದೀನಿ..ಕಣ್ಣುಗಳಲ್ಲೀಗ ಬಯಂಕರ ಮಾನ್ಸೂನ್ ಮಳೆ..ಪ್ಲೀಸ್ ಸುಳ್ಳೇ ಅದರೂ ಒಂದು ಸಲ ಈ ಕಂಗಳ ಒರೆಸಿಹೋಗಬಹುದಲ್ಲವ?

 

ನಿನಗೊಂದು ಥ್ಯಾಂಕ್ಸ್ ಹೇಳಬೇಕು ಕಣೋ, ಹೆಚ್ಚು ಮೌನಿಯಾಗಿರಬೇಡ ಅಂದಿದ್ದೆ..ಬಯಂಕರ ಮಾತಾಡೊಕೆ ಕುಳಿತೆ..ಅದೇನದು ಮಕ್ಕಳ ತರ ಕಣ್ಣೀರು ಹಾಕ್ತೀಯ ಅಂದೆ, ಪುಟಾಣಿ ಮಗು ತರನೇ ನಗುವುದು ಕಲಿತೆ.. ನಾನೀಗ ಮಾತು ಕಲಿತಿದ್ದೀನಿ..ನಿನ್ನ ಮಡಿಲಲ್ಲಿ ಮಲಗಿ ನೀನಂದ್ರೆ ಇಷ್ಟ ಕಣೊ ಅಂತ ನೂರು ಸಲ ಅಲ್ಲ ಸಾವಿರ ಸಲ ಹೇಳಬೇಕು ಹೇಳು ಎಲ್ಲಿದ್ದೀಯ? ನಗು ಕಲಿಸಿದವನು ನೀನು. ಸುಮ್ಮನೆ ನನ್ನ ಕಣ್ಣುಗಳಲ್ಲಿ ನಿನ್ನ ಮುಗ್ಧಭಾವವನ್ನ ತುಂಬಿಕೊಂಡು ಸುಮ್ಮನೆ ನಗುವ ಆಸೆಯಾಗುತ್ತಿದೆ ಹೇಳಿ ಎಲ್ಲಿ ಸಿಕ್ತೀಯ? ಈ ಪತ್ರವನ್ನ ನನ್ನ ಸಮಾಧಾನಕ್ಕೆ ಅಂತಾನೆ ಬರೆಯುತ್ತ ಕುಳಿತಿದ್ದೀನಿ..ಇಲ್ಲದಿದ್ದರೆ ಬಂಗರದಂತ ನಿನ್ನ ನೆನಪುಗಳು ಸುಮ್ಮನೆ ನನ್ನ ಬಿಡಲ್ಲ ಕಣೊ.ಬರೆದ ಮೇಲೇ ಈ ಪತ್ರವನ್ನು ಏನು ಮಾಡುವುದು ತಿಳಿಯದೇ ಸೀದ ಮನೆಯ ಹಿಂದೆ ಅರಳಿ ನಿಂತಿದೆಯಲ್ಲ ಸಂಪಿಗೆಯ ಗಿಡ ಅದರ ಪುಟಾಣಿ ಕೊಂಬೆಗಳಲ್ಲಿ ಸಿಕ್ಕಿಸಿ ಬಂದು ಬಿಡ್ತೀನಿ ಕಣೊ..ಯಾಕೆ ಗೊತ್ತ? ಈ ಜಗತ್ತಲ್ಲಿ ನಿನಗೆ ಹೋಲಿಕೆಯಾಗುವು ದೇವರು ಮತ್ತೆ ದೇವರ ಮುಡಿಯಲ್ಲಿ ನಗುತ್ತ ಇರುತ್ತಲ್ಲ ಸಂಪಿಗೆ ಹೂವು ಎರೆಡೆ ಕಣೊ.. ಸಂಪಿಗೆ ಗಿಡದ ಪುಟಾಣಿ ಕೊಂಬೆನಲ್ಲಿ ತುಂಬಾ ಪತ್ರಗಳಿವೆ..ಎಲ್ಲ ನಿನ್ನ ನೆನಪಲ್ಲೇ ಬರೆದಿದ್ದು..ಪ್ಲೀಸ್ ಈ ಜನುಮದಲ್ಲಿ ಒಂದು ಪತ್ರವನ್ನಾದರೂ ನೀನು ಓದಿದೆ ಅಂದ್ರೆ ನಾನು ನಿನ್ನ ಪ್ರೀತಿಸ್ತಿರೋದು ನಿಜಾ ಅಂತಾನೆ ಕಣೊ..ನೀನು ಓದಿಲ್ಲ ಅಂದ್ರೂ ಕೂಡ ನಾನು ನಿನ್ನ ಪ್ರೀತಿಸ್ತಿದ್ದೀನಿ ಅಂತಾನೆ ಅರ್ಥ ಪುಟ್ಟು..:(

   

ನಿನಗೊಂದು ಥ್ಯಾಂಕ್ಸ್ ಹೇಳಬೇಕು ಕಣೋ..ಯಾರಿಲ್ಲ ಅಂದ್ರು ಬದುಕೋದು ಹೇಳಿಕೊಟ್ಟಿದ್ದೀಯ.. ನೋವುಗಳನ್ನ ಮರೆಯುವುದು ಕಲಿಸಿದ್ದೀಯ..ನೋವಿನಲ್ಲೂ ಸುಮ್ಮನೆ ಹಾಗೆ ನಗುವುದು ತಿಳಿಸಿದ್ದೀಯ..ಆದರೇ  ನಿನಗೆ ನನ್ನ ಮೂರು ಪ್ರಶ್ನೆಗಳಿದೆ ಕೇಳಿಲ್ಲಿ..

 

ನೀನಿಲ್ಲದೆ ಬದುಕುವುದು ಯಾಕೆ ಹೇಳಿಕೊಡಲಿಲ್ಲ?

ನೀನಿಲ್ಲದೇ ನಗುವುದು ಯಾಕೆ ತಿಳಿಸಲಿಲ್ಲ?

ಯಾಕೆ ನಿನ್ನ ಮಲ್ಲಿಗೆ ನೆನಪುಗಳ ಮಾಯೆಯಿಂದ ಮುಕ್ತಳಾಗುವುದು ಕಲಿಸಲಿಲ್ಲ?

 

ಒಂದು ಪ್ರಶ್ನೆಗಾದರೂ ಉತ್ತರಿಸಲು ಬರ್ತೀಯ ಪುಟ್ಟ?

 

ಅದೇ ನಿನ್ನ                                                     ಕೋತಿಮರಿ

 

 

Advertisements

21 Responses to “ನೀನಿಲ್ಲದೆ ಬದುಕುವುದು ಯಾಕೆ ಹೇಳಿಕೊಡಲಿಲ್ಲ?”

 1. padma prakash ಸೆಪ್ಟೆಂಬರ್ 24, 2008 at 12:09 ಅಪರಾಹ್ನ #

  ನೀನು ಜೊತೆಗಿದ್ದಷ್ಟು ದಿನ ನನ್ನ ಕಣ್ಣಿಂದ ಹೆಚ್ಚು ಮಳೆ ಬಂದಿಲ್ಲ..ಬಂದಿರುವ ಒಂದೆರೆಡು ಹನಿಗಳೂ ಕೂಡ
  ನೀನೆ ಖುದ್ದು ಒರೆಸಲಿ ಅನ್ನುವ ಒಂದು ಪುಟಾಣಿ ಕಾರಣಕ್ಕೆ ವಿನಹ ಬೇರೇನು ಇಲ್ಲ.. enri idu..yeshtu ishta aaytu gotta?..ondu huduga aagi..hudugiya stanadall nintu bariyodu andre sulubada matalla..:)

  tumba tumba ishta aaytu annade bere vidhiyilla

  padma prakash
  ujire

 2. vijayraj ಸೆಪ್ಟೆಂಬರ್ 24, 2008 at 12:42 ಅಪರಾಹ್ನ #

  ನೀನು ಜೊತೆಗಿದ್ದಷ್ಟು ದಿನ ನನ್ನ ಕಣ್ಣಿಂದ ಹೆಚ್ಚು ಮಳೆ ಬಂದಿಲ್ಲ..ಬಂದಿರುವ ಒಂದೆರೆಡು ಹನಿಗಳೂ ಕೂಡ
  ನೀನೆ ಖುದ್ದು ಒರೆಸಲಿ ಅನ್ನುವ ಒಂದು ಪುಟಾಣಿ ಕಾರಣಕ್ಕೆ ವಿನಹ ಬೇರೇನು ಇಲ್ಲ

  ಇಂತಹ ಸಾಲುಗಳು ಸ್ವಲ್ಪ ನಂಗೂ ಕಡ ಕೊಡು ಮಾರಾಯಾ….plzzzzzzzz

  ನಿನಗೆ ಸಲಾಮ್… ಸಲಾಮ್…. ಸಲಾಮ್……..:)

  ಅದ್ರೆ ಒಂದು ಮಾತು ಕಣೋ ಈ ಹೊಸ ವಿನ್ಯಾಸ ಅಷ್ಠು ಚೆನ್ನಾಗಿಲ್ಲ ಕಣೋ…
  ಪ್ಲೀಸ್ ಬೇಗ ಬದಲಾಯ್ಸು…
  ಹಂಗೇ ಫಾಂಟ್ ಚಿಕ್ಕದೆ ಇದ್ರೆ ಚೆನ್ನ ಅಂತ ನನ್ನ ಭಾವನೆ…

 3. ವೈಶಾಲಿ ಸೆಪ್ಟೆಂಬರ್ 24, 2008 at 5:21 ಅಪರಾಹ್ನ #

  ನಿಮ್ಮ ಬರಹದ ಸಾಲುಗಳೆಲ್ಲ ಪದ್ಯವಾದರೇ ಹೆಚ್ಚು ಚಂದವಾದೀತು ಅನ್ನಿಸಿತು.
  Good Luck…

 4. Manoranjan ಸೆಪ್ಟೆಂಬರ್ 25, 2008 at 9:26 ಫೂರ್ವಾಹ್ನ #

  ನೀನಿಲ್ಲದೆ ಬದುಕುವುದು ಯಾಕೆ ಹೇಳಿಕೊಡಲಿಲ್ಲ?

  huduganagali hudugiyagali yar melu dipend agi irbardu alva? idu avara vaifalyavana torsute..hudgane jeevana alla…hudugiye jeevana alla.. baduku annodu idyalla adu nimage IMP anta annisalava

 5. ನವಿಲಗರಿ ಸೆಪ್ಟೆಂಬರ್ 26, 2008 at 6:19 ಫೂರ್ವಾಹ್ನ #

  ಪದ್ಮ್ಬ ಮೇಡಮ್..ಯಾಕೋ ಪ್ರೀತಿಯ ವಿಷಯ ಬಂದರೇ ನಾನು ಯಾವ ಸ್ಥಾನದಲ್ಲಾದರೂ ನಿಂತು ಬರೆದೇನು..ತುಂಬಾ ದಿನಗಳ ನಂತರ ನವಿಲುಗರಿಯ ಮನೆಗೆ ಬಂದು ೨ ಮತು ಹೇಳಿದ್ದೀರಿ..ದನ್ಯವಾದ:)

 6. ನವಿಲಗರಿ ಸೆಪ್ಟೆಂಬರ್ 26, 2008 at 6:20 ಫೂರ್ವಾಹ್ನ #

  ವಿಜಯ್ ರಾಜ್ ಜೀ..ನಿಮಗೂ ಇದೇ ಸಾಲು ಇಷ್ಟವಾಯಿತ? ಇದೆಲ್ಲ ನಿಮ್ಮ ಮತ್ತು ಅದ್ಭುತವಗಿ ಬರೆಯುವ ಎಲ್ಲಾ ಸ್ನೇಹಿತರ ಬ್ಲಾಗು ಬರಹಗಳಿಂದ ಪ್ರೇರಣೆಯಾಗಿದ್ದು ಅಷ್ಟೇ.. 🙂

  ಖಂಡಿತ ಬದಲಯಿಸುತ್ತೇನೆ..ಸ್ವಲ್ಪ ಸಮಯ ಕೊಡಿ

 7. ನವಿಲಗರಿ ಸೆಪ್ಟೆಂಬರ್ 26, 2008 at 6:23 ಫೂರ್ವಾಹ್ನ #

  ವೈಶಾಲಿ ಅಕ್ಕ…ಮತ್ತೇನು ಇಲ್ಲ..ಪದ್ಯದ ಗೆಳೆತನ ಹೆಚ್ಚು ಮಾಡಿಕೊಂಡರೇ..ಪತ್ರಗಳು ಮುನಿಸಿಕೊಳ್ಳುತ್ತಾವೇನೊ ಅನ್ನೊ ಭಯ.. 😉

 8. ನವಿಲಗರಿ ಸೆಪ್ಟೆಂಬರ್ 26, 2008 at 6:29 ಫೂರ್ವಾಹ್ನ #

  ಮನೋರಂಜನ್.. ಕಥೆ ಕಾದಂಬರಿಗಳಿಗೂ ಮತ್ತೆ ವಾಸ್ತವಕ್ಕೂ ತುಂಬಾ ವ್ಯತ್ಯಾಸವಿದೆ ಬಿಡಿ..ಹುಡುಗಿಯರಿಗೆ ಹುಡುಗಾನಾಗಲು ಹುಡುಗನಿಗೇ ಹುಡುಗಿಯಾಗಲಿ ಮುಖ್ಯವಲ್ಲ ಜೀವನ ಮುಖ್ಯ ಅನ್ನೊ ನಿಮ್ಮ ಮಾತಿಗೆ ನನ್ನದೊಂದು ಸಣ್ಣ ತಕರಾರಿದೆ..ನಾನು ಇಲ್ಲಿ ಬರೆದಿದ್ದು ನೀವಂದುಕೊಂಡದ್ದಕ್ಕಿಂದ ಬೇರೆ ಜಗತ್ತಿನ ಬಗ್ಗೆ ..ಇಲ್ಲಿ ನಮ್ಮ ಜೀವನದ ಒಣ ಭಾಷಣಗಳಿಗೆ ಇಲ್ಲಿ ಮೂರು ಕಾಸಿಗೂ ಕಿಮ್ಮತ್ತಿಲ್ಲ..ಇಲ್ಲಿರುವ ಅವನ ಜಗತ್ತಿಗೆ ಅವಳೆ ರಾಣಿ…ಮತ್ತ್ತೆ ಅವಳ ಜಗತ್ತಿಗೆ ಅವನೇ ರಾಜಕುಮಾರ.. 😉

 9. Champu ಸೆಪ್ಟೆಂಬರ್ 26, 2008 at 2:52 ಅಪರಾಹ್ನ #

  Super kano..
  ನಿನಗೊಂದು ಥ್ಯಾಂಕ್ಸ್ ಹೇಳಬೇಕು ಕಣೋ..ಯಾರಿಲ್ಲ ಅಂದ್ರು ಬದುಕೋದು ಹೇಳಿಕೊಟ್ಟಿದ್ದೀಯ.. ನೋವುಗಳನ್ನ ಮರೆಯುವುದು ಕಲಿಸಿದ್ದೀಯ..ನೋವಿನಲ್ಲೂ ಸುಮ್ಮನೆ ಹಾಗೆ ನಗುವುದು ತಿಳಿಸಿದ್ದೀಯ.. lines anthu bombat.
  Kapi nenu nin barada ond letter alli adru albardu ankotene yello ond kade alsbidteya.
  Astu emotional agirathe n pakka super agirathe.
  An upcoming writer 😉

 10. Lakshmi S ಸೆಪ್ಟೆಂಬರ್ 28, 2008 at 10:45 ಫೂರ್ವಾಹ್ನ #

  Excellent !

 11. ನವಿಲಗರಿ ಅಕ್ಟೋಬರ್ 4, 2008 at 9:28 ಫೂರ್ವಾಹ್ನ #

  ಚಂಪು..ಯಾಕೋ ನಿನಗೆ ಸ್ವಲ್ಪ ನೋವಿನ ಲೆಟರುಗಳೆ ಇಷ್ಟವಾಗುತ್ತಾವಲ್ಲ? ಏನಿದರ ಮರ್ಮ? ಇರಲಿ ಇರಲಿ..ಕಳ್ಳರು ತುಂಬಾ ದಿನ ಕಳ್ಳತನ ಮಾಡ್ಲಿಕೆ ಸದ್ಯವಿಲ್ಲ ಹಹಹಹಹಹಹಹ್ 😉

  ಥಾಂಕು ಥಾಂಕು…ಸ್ವಲ್ಪ ನಗಬೇಕಗಿ ವಿನಂತಿ..ಅಳೋದು ನವಿಲ್ಗರಿಗೆ ಸ್ವಲ್ಪಾನು ಇಷ್ಟವಿಲ್ಲ..;)

  ಥಾಂಕು ಥಾಂಕು ಲಕುಮಿ 🙂

 12. Jesh.. ಅಕ್ಟೋಬರ್ 5, 2008 at 10:15 ಫೂರ್ವಾಹ್ನ #

  ಪ್ಲೀಸ್ ಈ ಜನುಮದಲ್ಲಿ ಒಂದು ಪತ್ರವನ್ನಾದರೂ ನೀನು ಓದಿದೆ ಅಂದ್ರೆ ನಾನು ನಿನ್ನ ಪ್ರೀತಿಸ್ತಿರೋದು ನಿಜಾ ಅಂತಾನೆ ಕಣೊ..ನೀನು ಓದಿಲ್ಲ ಅಂದ್ರೂ ಕೂಡ ನಾನು ನಿನ್ನ ಪ್ರೀತಿಸ್ತಿದ್ದೀನಿ ಅಂತಾನೆ ಅರ್ಥ ಪುಟ್ಟು..:(

  SORRY ARTHA AGILLA SWALPA HELTHIRA…..

  nan prakara pathra ododakkintha adannu thagollode mukhya….

  alli odu mukhya alla..alva……….

 13. bali ಅಕ್ಟೋಬರ್ 20, 2008 at 3:22 ಅಪರಾಹ್ನ #

  hi

 14. Annapoorna Daithota ಅಕ್ಟೋಬರ್ 22, 2008 at 5:49 ಅಪರಾಹ್ನ #

  Sheershikene ella helutthe… chennaagide…

 15. ನವೀನ ಅಕ್ಟೋಬರ್ 23, 2008 at 7:07 ಫೂರ್ವಾಹ್ನ #

  ಅಲ್ಲಾ ಒಂದು ಪ್ರೀತಿಯ ಗೀತೆಯನ್ನ ಒಟ್ಟಿಗೆ ಹಾಡೋಣ ಅನ್ನುವ ಆಸೆ ಹುಟ್ಟಿಸಿದವನು ನೀನು..ಇನ್ನು ಪಲ್ಲವಿಯೇ ಮುಗಿದಿಲ್ಲ..ಅದೆಲ್ಲಿಗೆ ನಿನ್ನ ಪಯಣ? ……
  ಬಹುಶ ಅ ಪಯಣ ನಿಮ್ಮಲಿ ಏನಾದರೂ ಆಗಿದಿಯ ಸೋಮು ನಿಜವಾಗಲು ತುಂಬ ತುಂಬ ಹೃದಯಕೆ ಥಟುವ ಸಾಲುಗಳು ಈ ಕಥೆಗೆ ಸ್ಪೂರ್ತಿ ಯಾರು ?really i love your words ಯಾರಿಗದ್ರು ಈ ಡೈಲಾಗು ಹೊಡೆದರೆ ಫುಲ್ ಪ್ಲಾಟ್ ನಿನಗೊಂದು ಥ್ಯಾಂಕ್ಸ್ ಹೇಳಬೇಕು ಕಣೋ..ಯಾರಿಲ್ಲ ಅಂದ್ರು ಬದುಕೋದು ಹೇಳಿಕೊಟ್ಟಿದ್ದೀಯ.. ನೋವುಗಳನ್ನ ಮರೆಯುವುದು ಕಲಿಸಿದ್ದೀಯ..ನೋವಿನಲ್ಲೂ ಸುಮ್ಮನೆ ಹಾಗೆ ನಗುವುದು ತಿಳಿಸಿದ್ದೀಯ

 16. Ranjitha veena ಅಕ್ಟೋಬರ್ 28, 2008 at 10:45 ಫೂರ್ವಾಹ್ನ #

  Hi shomu,

  chennagithu ri…..
  haleya nenapugalanu omme suthi bandanthaithu 🙂

 17. ಇಬ್ಬನಿ ನವೆಂಬರ್ 8, 2008 at 6:33 ಫೂರ್ವಾಹ್ನ #

  ಏನು ಕಳೆದಿದೇ ಅ೦ತ ಹುಡೂಕೋಕೇ ಹೋದ್ರೇ ,
  ನನ್ಗೇ ನಿನ್ನ ನವಿಲುಗರಿ ಸಿಕ್ತು ಸಾಗರದ ತಿರದಲಿ ಗೋತ್ತು ಗುರಿ
  ಇಲ್ದಿ ಅಲಿಯೋನಿಗೇ ಮುತು ಸಿಕ್ಕಹಗೇ ದಾನ್ಯವಾದ ಹುಡುಗ

 18. ಇಬ್ಬನಿ ನವೆಂಬರ್ 8, 2008 at 6:42 ಫೂರ್ವಾಹ್ನ #

  nangu blog bareyodanna helikodu huduga

 19. Kavitha ನವೆಂಬರ್ 17, 2008 at 9:40 ಫೂರ್ವಾಹ್ನ #

  Hi,

  I read this article!It sounds very interesting.I was merely involved in this while i was reading.
  Gud Luck!!

 20. Prasann ಮಾರ್ಚ್ 1, 2009 at 1:04 ಫೂರ್ವಾಹ್ನ #

  en saaar.. enadru jadoo ideya nimm kaili… bahalane ishta aytu nange nimma ee kavana.. tumba tumba chennagide.. pratiyondu saalu adbhuta… bahala dinagala mele ondu olleya website sikkide kannadada kavanagalige.. Thanks a looooooot Chomu..:)

 21. Pavithra ಏಪ್ರಿಲ್ 11, 2009 at 9:14 ಫೂರ್ವಾಹ್ನ #

  Tumba chennagide sir, nimma baravanigeya shyli tumba ista aytu, nimma adbuta kalpanegaligondu nanna tumbu hrudayada vandane.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: