ನೀನು ಹೋದ ನಂತರ..!

26 Sep

ಯಾವತ್ತೂ ನನ್ನದೇ ಅಂದುಕೊಂಡ
ಕನಸುಗಳನ್ನೂ ದುರ್ಬೀನು ಹಾಕಿ
ಹುಡುಕಿ ಸೋತಿದ್ದೀನಿ.

ನನ್ನ ತೋಳುಗಳಿಗೆ
ತಬ್ಬಿಕೊಂಡರೇ ಮಹಾಪಾಪ ಅನ್ನುವ
ಸುಳ್ಳನ್ನು ಪ್ರತಿನಿತ್ಯ ಹೇಳಿಕೊಡುತಿದ್ದೇನೆ.

ಕಣ್ಣುಗಳಲ್ಲಿರುವ ಕೆಲವು
ಅಪರೂಪದ ಚಿತ್ರಗಳನ್ನ
ಅಳಿಸಿಬಿಡುವಂತೆ ದೇವರಲ್ಲಿ
ಬೇಡಿಕೊಂಡಿದ್ದಾಗಿದೆ.

ಉಕ್ಕಿ ಬರುವ ಕೆಲವು
ಭಾವನೆಗಳಿಗೆ ನನ್ನ ಪ್ರೀತಿಯ
ಅಸಹಾಯಕತೆಯ ಕತೆ ಹೇಳಿದ್ದೀನಿ.

ಮತ್ತೆ ಮತ್ತೆ ಕಾಡುವ
ಅಪರೂಪದ ಕನಸುಗಳಿಗೆ
ಘಾಸಿಕೊಂಡ ಹಳೆಯ ಕನಸುಗಳ
ಕುರಿತು ಪುಟಗಟ್ಟಲೆ ವರದಿ ಮಾಡಿದ್ದೇನೆ.

ನೀನಿಲ್ಲದೇ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಿರುವ
ನನ್ನ ಕಾಲುಗಳ ಆತ್ಮವಿಶ್ವಾಸಕ್ಕೆ ಒಂದು ಮುತ್ತಿಟ್ಟಿದ್ದೇನೆ.

ಮತ್ತೆ ಕೊನೆಯದಾಗಿ ಮರೆತು ಬಿಡು
ಎಂದು ಹೃದಯಕ್ಕೆ ಸಲ್ಲಿಸಿದ
ಮನವಿಪತ್ರ ತಿರಸ್ಕೃತಗೊಂಡ
ಪರಿಯ ನೆನೆದು ಸೋತು ಸುಣ್ಣವಾಗಿದ್ದೀನಿ.

(ನನ್ನ ಬ್ಲಾಗಿನ ೫೦ ನೆ ಪೋಸ್ಟು ಇದು)

Advertisements

27 Responses to “ನೀನು ಹೋದ ನಂತರ..!”

 1. sunaath September 27, 2008 at 6:02 am #

  ಮನಸ್ಸಿಗೆ (ಸುಳ್ಳು) ಸಮಾಧಾನ ಹೇಳುವ ಈ ಕವನ ನನಗೆ ಹಿಡಿಸಿತು. ಇದು ನಿಮ್ಮ ೫೦ನೆಯ posting ಎಂದು ಬರೆದಿದ್ದೀರಿ. ಬೇಗನೇ ಶತಕ ಹೊಡೆಯಿರಿ.ಶುಭಾಶಯಗಲು.

 2. srinivaas alahalli September 27, 2008 at 10:09 am #

  moda modalu tumba kushiyinda odkuta hode.. abba anstu..aadre kone para odovaaga ayyo peddu Hrudayave anisitu..

  chanda baritiri

 3. Lakshmi S September 28, 2008 at 10:52 am #

  ಐವತ್ತನೆಯ ಪೋಸ್ಟಿಗೆ ಶುಭಾಶಯಗಳು. ಸಹಸ್ರ ಪೋಸ್ಟುಗಳು, ಕೋಟಿ ಕವನಗಳು ಹೊರಹೊಮ್ಮಲೆಂದು ಆಶಿಸುವೆ.

 4. ಪಲ್ಲವಿ ಎಸ್‌. September 28, 2008 at 4:37 pm #

  ತುಂಬ ಚೆನ್ನಾಗಿದೆ ಸೋಮು,

  ”ಯಾವತ್ತೂ ನನ್ನದೇ ಅಂದುಕೊಂಡ
  ಕನಸುಗಳನ್ನೂ ದುರ್ಬೀನು ಹಾಕಿ
  ಹುಡುಕಿ ಸೋತಿದ್ದೀನಿ”

  ಈ ಸಾಲುಗಳು ತುಂಬಾ ಇಷ್ಟವಾದವು. ಹೃದಯಕ್ಕೆ ತನ್ನದೇ ಆದ ತರ್ಕ ಇರುತ್ತದೆ. ಅದನ್ನು ತರ್ಕದಿಂದ ಗೆಲ್ಲುವುದು ಸಾಧ್ಯವಿಲ್ಲ ಎಂಬು ಓದಿದ್ದು ನೆನಪಾಯಿತು.

  ಚೆನ್ನಾಗಿ ಬರೆಯುತ್ತಿದ್ದೀರಿ. ನಿಮ್ಮ ಕನಸುಗಳು ಬೆಳೆಯುತ್ತ ಹೋಗಲಿ, ಅವುಗಳ ಪೈಕಿ ತುಂಬ ತುಂಬ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇನೆ.

  – ಪಲ್ಲವಿ ಎಸ್‌.

 5. ಸುಶ್ರುತ September 29, 2008 at 7:51 pm #

  ಹಾಪ್ ಚೆಂಚುರಿ ಹೊಡ್ದಿದ್ದಕ್ಕೆ ಕಂಗ್ರಾಟ್ಸ್ ಚೋಮೂ..

 6. neelihoovu September 30, 2008 at 6:47 am #

  “ಮತ್ತೆ ಕೊನೆಯದಾಗಿ ಮರೆತು ಬಿಡು
  ಅಂತ ಹೃದಯಕ್ಕೆ ಸಲ್ಲಿಸಿದ
  ಮನವಿಪತ್ರ ತಿರಸ್ಕೃತಗೊಂಡ
  ಪರಿಯ ನೆನೆದು ಸೋತು ಸುಣ್ಣವಾಗಿದ್ದೀನಿ.”

  ಇಲ್ಲಿ ’ಅಂತ’ ಆದಮೇಲೆ ಒಂದು ಕೊಮಾ ಹಾಕಿದ್ರೆ ಅಥವ ’ಎಂದು’ ಅನ್ನುವ ಪದ ಉಪಯೋಗಿಸಿದರೆ ಚೆನ್ನಾಗಿತ್ತು ಅನ್ನಿಸಿತು.ಇಲ್ಲವಾದರೆ ನಿನ್ನ ಅಂತ ಪದ ’ಅಂಥ’ ಅನ್ನಿಸಿ ಗೊಂದಲ ಹುಟ್ಟಿಸೀತು.

  “ನೀನಿಲ್ಲದೇ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಿರುವ
  ನನ್ನ ಕಾಲುಗಳ ಆತ್ಮವಿಶ್ವಾಸಕ್ಕೆ ಒಂದು ಮುತ್ತಿಟ್ಟಿದ್ದೇನೆ.”

  ಇದನ್ನು ಓದಿ ತುಂಬಾ ಖುಷಿಯಾಯ್ತು ಕಣೋ…
  ನಿನ್ ಬ್ಲಾಗ್ ನಲ್ಲಿ ಬರೇ ೫೦ ಪೋಸ್ಟ್ ಅಂದ್ರೆ ಇನ್ನೂ ನಂಬಕ್ಕಾಗ್ತಿಲ್ಲ..!:)
  ಬೇಗ ಸೆಂಚುರಿ ಹೊಡಿ..:)

 7. nagesh mangalore October 1, 2008 at 6:28 am #

  realy super, ennu chennagi bariri, best of luck

 8. ವೈಶಾಲಿ October 1, 2008 at 1:24 pm #

  ಶುಭಾಶಯಗಳು….

  ಹೀಗೇ ಬರೆಯುತ್ತಿರಿ.
  ನಾವು ಓದುತ್ತಿರುತ್ತೇವೆ. ತುಂಬ ಖುಷಿಯಿಂದ.

 9. pnagapriya October 2, 2008 at 12:52 pm #

  hai friends,see my website http://www.recoveryforyourharddrive.blogspot.com

 10. ಅರಿವೇ ಗುರು October 4, 2008 at 8:35 am #

  nice one somu

 11. ನವಿಲಗರಿ October 4, 2008 at 8:58 am #

  ಸುನಾತ್..ಐವತ್ತಕ್ಕೆ ಸುಸ್ತಾಗಿ ಬಿಟ್ಟಿದ್ದೀನಿ..ನೋಡೋಣ..ಪ್ರಯತ್ನವಂತೂ ಇದ್ದಿದ್ದೇ.. 😉 ದನ್ಯವಾದ..

  ಶ್ರೀನಿವಾಸ್ ಸರ್..ಹಾಗೆಲ್ಲ ಮುದ್ದು ಹೃದಯವನ್ನ ಪೆದ್ದು ಅಂತ ಕರೆಯಬೇಡಿಪಾ.. ಹಹಹಹಹ

 12. ನವಿಲಗರಿ October 4, 2008 at 9:02 am #

  ಲಕ್ಷ್ಮಿ ಮೇಡಮ್..ಯಾಕೊ ಸಕತ್ ಬಯ ಅಗ್ತಿದೆ..ಈ ಜಗತ್ತು ಕೇವಲ ಇನ್ನು ನಾಲ್ಕೆ ವರ್ಷ ಇರೋದಂತೆ..ದೊಡ್ ಪ್ರಳಯ ಅಗುತ್ತಂತೆ..ಸಮುದ್ರದ ನೀರು ಉಕ್ಕುತಂತೆ ನಾವೆಲ್ಲ ಸತ್ತು ಹೋಗ್ತಿವಂತೆ..ಈಗ ನೀವೆ ಹೇಳಿ ಹೇಗೆ ಕೋಟ್ತಿ ಕೋಟಿ ಕವನ ಬರೆಯಲಿ? 😦

  ಅಷ್ಟಾಗಲಿಲ್ಲ ಅಂದ್ರೂ ಸ್ವಲ್ಪನಾದ್ರು ಬರಿತೀನಿ ಸರಿ ನ..?

 13. ನವಿಲಗರಿ October 4, 2008 at 9:07 am #

  ಪಲ್ಲವಿ…. ಮೇಲೆ ಲಕ್ಷ್ಮಿಯವರಿಗೆ ಉತ್ತರಿಸಿದ್ದೀನಿ ನೋಡಿ..ನನ್ನ ಕನಸು ಬೆಳೆಯುತ್ತವೋ ಅಥವ ಬೆಳೆಯುವ ಮುಂಚೇನೇ ಮುದುಡಿ ಮರೆಯಾಗ್ತಾವೊ..ಇನ್ನು ೪ ವರ್ಷ ಮಾತ್ರವಂತೆ ನಾವು ಬದುಕೋದು..ಕೋಟಿ ಕೋಟಿ ವರ್ಷಗಳಿಗೂ ಹಂಚಿದರೂ ಕಾಲಿಯಾಗದಷ್ಟು ಕನಸುಗಳನ್ನ ತುಂಬಿಕೊಂಡು ಕುಳಿತಿದ್ದೀನಿ…ಸ್ವಲ್ಪ ಸಮಾಧಾನ ಮಾಡಿ…

  ಕವಿತೆ ನಿಮಗಿಷ್ಟವಾಗಿದೆ ಅಂದ್ರೆ ನನಗೆ ಬರಿಯೋದಕ್ಕೂ ಬರುತ್ತೆ ಅಂತ ಅಂದ ಹಾಗಯಿತು 😉

 14. ನವಿಲಗರಿ October 4, 2008 at 9:16 am #

  ನೀಲಿ ಹೂವಿಗೆ ಜಿಂದಾಬಾದ್…ನೀಲಿ ಹೂವಿಗೆ ಜಿಂದಾಬಾದ್… ನೀಲಿ ಹೂವಿಗೆ ಜಿಂದಾಬಾದ್…

  ನಾಗೇಶ್..ಥಾಂಕು ಥಾಂಕು….

  ವೈಶಾಲು ಅವರೆ….ಪಲ್ಲವಿ ಮತ್ತೆ ಲಕ್ಷ್ಮಿಯವರೆ ಕಾಮೆಂಟಿಗೆ ಪ್ರತಿಯಾಗಿ ನಾನೇನೋ ಬರ್ದಿದ್ದೀನಿ..ಪ್ಲೀಸ್ ಅದನ್ನ ಓದಿ ಸ್ವಲ್ಪ ಸಮಾಧಾನ ಮಾಡಿ ನನಗೆ ಹಹಹಹಹಾಹಹಹಹ

  ಥಾಂಕು ಥಾಂಕು

  ಬುಸ್ ಬುಸ್ ನಾಗಪ್ರಿಯಾ..ಏನಿದು ನಿನ್ನ ಹಾರ್ಡಿಸ್ಕು ಪುರಾಣ? ನವಿಲ್ಗರಿಗೂ ಹರ್ಡಿಸ್ಕುಗೂ ಎಲ್ಲಿಂದೆಲ್ಲಿಯ ಸಂಭಂಧವಯ್ಯ? ಆದ್ರೂ ನವಿಲ್ಗರಿ ಮನೆಗೆ ಬಂದು ನಿಮ್ಮ ಹಾರ್ಡಿಸ್ಕು ತೋರ್ಸಿದ್ದಕ್ಕೆ ಥಾಂಕು ಥಾಂಕು

 15. GURU October 6, 2008 at 12:53 pm #

  Dear Somu,

  ivatte first nimma blog nodide. ashtannu onde dina odide. nijakku tumba tumba khushiyagide. nimma aksharada pravaha heege munduvariyalli

  nimma,

  guru.

 16. ವೈಶಾಲಿ October 7, 2008 at 5:13 pm #

  ಸಮಾಧಾನ ಮಾಡ್ಕೊಳ್ಳಿ ಸೋಮು….ಹಂಗೇನಾದ್ರೂ ಪ್ರಳಯ ಆಯ್ತು ಅಂದ್ರೆ ನಿಮ್ಮ ಕವಿತೆಗಳನ್ನೇ ಒಂದರ ಮೇಲೊಂದು ಜೋಡಿಸಿಟ್ಟು, ಅದರ ಮೇಲೆ ಪ್ರೇಮ ಪತ್ರಗಳನ್ನಿಟ್ಟು , ಅದೂ ಕಡಿಮೆ ಬಿದ್ರೆ ನಮ್ಮದೂ ಅಂತಿರೋ ಒಂದಷ್ಟು ತಲೆಹರಟೆ ಕನಸುಗಳನ್ನೂ ಇಟ್ಟು ನಾವೆಲ್ರೂ ಅದರ ಮೇಲೆಹತ್ತಿ ಕುಳಿತು ತಪ್ಪಿಸಿಕೊಂಡು ಬಿಡೋನವಂತೆ! ಪ್ರಳಯ ಮುಗಿದಮೇಲೆ ಇಳಿದು ಬಂದರಾಯ್ತು! 😉
  ಹೆಂಗಿದೆ ಐಡಿಯಾ? ? ಹೆದರ್ಕೋಬೇಡೀಪ್ಪಾ …… ತಾವು ಬರೆದಷ್ಟೂ ತಪ್ಪಿಸಿಕೊಳ್ಳೋದು ಸುಲಭ..ಬರೀತಾ ಇರಿ… 🙂 🙂

 17. Aharnishi October 9, 2008 at 6:47 am #

  One request,
  somu it pains me if my navilu is not there in your list.Can u please do that fast.
  Or else i feel my blog is not worth to be in ur list.

 18. ನವಿಲಗರಿ October 9, 2008 at 11:01 am #

  Your blog is in the list of my favourites. After seeing your comment, I felt soo bad. I thought your blog is in my blog roll.

  Its really proud to put your blog name in the list.

  Please don’t feel bad and I’m feeling really sorry

  ಈಗ ನೋಡಿ..ನವಿಲುಗರಿಗೆ ಮತೊಂದು ಗರಿ ಬಂದಿದೆ..:)

 19. Aharnishi October 10, 2008 at 6:00 am #

  ಥ್ಯಾ೦ಕ್ಸ್ ಸೋಮು,

  ನಿನ್ನ ಹುರುಪಿಗೆ ಹ್ಯಾಟ್ಸ್ ಆಫ್.

 20. navilgari October 10, 2008 at 7:03 am #

  😉

 21. Annapoorna October 10, 2008 at 10:18 pm #

  Bahala chennaagide somu….
  neenu modlella (andre blog start maadiddaga) bareetidda kavanagala touch ide 🙂

 22. NAYAK October 15, 2008 at 12:48 am #

  Mast baritiya guru

 23. balu October 20, 2008 at 3:21 pm #

  hi bali

 24. balu October 20, 2008 at 3:22 pm #

  hi

 25. Shobha.v Periyapattana Tq, Mysore Dist November 15, 2008 at 9:53 am #

  hai, chennagide nimma writting

 26. mamtha February 13, 2009 at 5:53 am #

  hai somu thumba chenagi bariyuthira ege nemma payana mundhuvariyali endhu harisuthene

 27. Pavithra April 16, 2009 at 10:23 am #

  ಉಕ್ಕಿ ಬರುವ ಕೆಲವು
  ಭಾವನೆಗಳಿಗೆ ನನ್ನ ಪ್ರೀತಿಯ
  ಅಸಹಾಯಕತೆಯ ಕತೆ ಹೇಳಿದ್ದೀನಿ.

  Idenu mounadolagina maatha athava maatinolagina mounana.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: