ಪೋಲಿ ಹುಡುಗ

6 Oct

ಮಡಿಲಲ್ಲಿ ಮಲಗಿಸಿಕೊಂಡು
ಒಂದು ಕತೆ ಹೇಳು ಅಂದ
ಹುಡುಗಿಗೆ..ಒಂದು ಪ್ಲಸ್ ಒಂದು
ಮೂರು ಅಂದು ನಸುನಗುತ್ತಾನೆ.

ತನ್ನ ಮನೆಯ ಗೋಡೆಗೆ
ನೇತು ಹಾಕಿದ್ದ ಮುಕ್ಕೋಟಿ
ದೇವರುಗಳ ಚಿತ್ರಗಳು ಹರಿದು
ಮಣ್ಣುಮುಕ್ಕುತ್ತಿದ್ದರೇ..
ತನ್ನ ಕೋಣೆಯ ಮಬ್ಬುಗತ್ತಲಲ್ಲಿ
ಕಣ್ಣುಕುಕ್ಕುವ ಮೂರು ಕಾಸಿನ
ನೀಲಿಚಿತ್ರಗಳ ಮುಂದೆ ನಿಂತು
ಮೂರು ಸೇರು ಜೊಲ್ಲು ಸುರಿಸುತ್ತಾನೆ

ಬೈಕಿನ ಹಿಂದೆ ಕುಳಿತ ಗೆಳತಿ
ಇವನನ್ನ ತಬ್ಬಿ ಹಿಡಿಯುವ
ಬಗ್ಗೆ ಯೋಚಿಸುತಿದ್ದರೇ,
ಅವನಾಗಲೇ ರೋಡಲ್ಲಿ ಬರುವ
ಹಂಪಿಗಾಗಿ ಚಡಪಡಿಸುತ್ತಾನೆ.

ಕರೆಂಟು ಹೋಗಿ
ಘಂಟೆಯಾದರೂ
ಮನೆಯಲ್ಲಿ ಬೆಳಕಿರಲಿಲ್ಲ.
ಇವಳು ಹಚ್ಚಿಟ್ಟ ಪ್ರತಿ
ಹಣತೆಯ ಮೇಲೂ
ಪ್ರತಿ ದಾಳಿಯಿಟ್ಟು
ಕತ್ತಲು ಬೇಡುತ್ತಾನೆ.

ಇವಳು ಕೆಮ್ಮಿದರೂ
ಸಾಕು ಮಾತ್ರೆಯ ಬದಲಿಗೆ
ಅಮೃತಾಂಜನದ
ಡಬ್ಬಿ ಹಿಡಿದುಕೊಂಡು
ಅಡಿಯಿಂದ ಮುಡಿಯವರೆಗೆ
ಮಸಾಜು ಮಾಡಬೇಕು ಅನ್ನುತ್ತಾನೆ

Advertisements

29 Responses to “ಪೋಲಿ ಹುಡುಗ”

 1. padma prakash October 6, 2008 at 3:09 pm #

  yako poli hudga anta baredagle en bardidare odlo bedvo antidde..sabyateya yelle meerilla..idella nimma anubhavagala? anbavse bardrene isht change barodu..

  ಇವಳು ಕೆಮ್ಮಿದರೂ
  ಸಾಕು ಮಾತ್ರೆಯ ಬದಲಿಗೆ
  ಅಮೃತಾಂಜನದ
  ಡಬ್ಬಿ ಹಿಡಿದುಕೊಂಡು
  ಅಡಿಯಿಂದ ಮುಡಿಯವರೆಗೆ
  ಮಸಾಜು ಮಾಡಬೇಕು ಅನ್ನುತ್ತಾನೆ 😉

 2. prashanth .... funny guy... October 6, 2008 at 3:53 pm #

  solid guru solid….

  naan type maaduvaagle nagthiddini…..

  beautiful….i understood 100% ……..

  somu,……………………….
  nim thalege kodbeku………. enu?

  hehehehehehe…….

 3. Chitra karkera October 7, 2008 at 5:03 am #

  ಕರೆಂಟು ಹೋಗಿ
  ಘಂಟೆಯಾದರೂ
  ಮನೆಯಲ್ಲಿ ಬೆಳಕಿರಲಿಲ್ಲ.
  ಇವಳು ಹಚ್ಚಿಟ್ಟ ಪ್ರತಿ
  ಹಣತೆಯ ಮೇಲೂ
  ಪ್ರತಿ ದಾಳಿಯಿಟ್ಟು
  ಕತ್ತಲು ಬೇಡುತ್ತಾನೆ…..
  ಚೆನ್ನಾಗಿದೆ..ಮತ್ತಷ್ಟು ಬರೆಯಿರಿ…ಆಗಾಗ ಬರ್ತಾ ಇರ್ತೀವಿ

 4. neelihoovu October 7, 2008 at 5:29 am #

  ಗುರೂ.. ಸುಮ್ ಸುಮ್ನೆ ಹೊಗಳ್ತಾ ಇಲ್ಲ.

  ನಿಜವಾಗ್ಲೂ ನಗು ತರಿಸ್ತು.

  ಪೋಲಿತನದ ಕುರಿತು ನಿನ್ನೆ ನೀ ಹೇಳಿದಾಗಲೇ ನಾನೂ ಬರೆಯೋಣ ಅಂತ ಹೊರಟಿದ್ದೆ.

  ಈಗ ಗೊತ್ತಾಯ್ತು ಬಿಡು.. ನೀನು ನಂಗಿಂತಾ ಫುಲ್ ಪೋಲಿ…:-)

 5. ಕನ್ನಡಮ್ಮನ ಮುದ್ದಿನ ಮನೆಮಗಳು October 7, 2008 at 7:02 am #

  poli huduga antha naniyavar bagge barediddiya. hahaha

  tumba chennagide chennag baredidiya innu baribeku yelra bayalli ninnade hesaru barbeku

  ಬೈಕಿನ ಹಿಂದೆ ಕುಳಿತ ಗೆಳತಿ
  ಇವನನ್ನ ತಬ್ಬಿ ಹಿಡಿಯುವ
  ಬಗ್ಗೆ ಯೋಚಿಸುತಿದ್ದರೇ,
  ಅವನಾಗಲೇ ರೋಡಲ್ಲಿ ಬರುವ
  ಹಂಪಿಗಾಗಿ ಚಡಪಡಿಸುತ್ತಾನೆ
  nijavada matalwa mukdalli yenidru manasalli idanne bayastare. idannena politana annodu?

 6. vijayraj October 7, 2008 at 7:18 am #

  🙂

 7. Sushrutha October 7, 2008 at 7:25 am #

  ಪೋಲಿಚೋಮು! 😀

 8. ನವಿಲಗರಿ October 7, 2008 at 8:57 am #

  ಪದ್ಮ ಮೇಡಮ್..ಇದು ಪ್ರತಿ (ತುಂಟ) ಹುಡುಗನ ಪೋಸ್ಟು..;) ಅನುಭವಿಸಿ ಬರೆದಿದ್ದೀನಿ ಅಂತ ಒಪ್ಪಿಕೊಳ್ಳುವಷ್ಟು ದೊಡ್ದವನಾಗಿಲ್ಲ..ಆದ್ರೆ ಚಿಕ್ಕವನೂ ಕೂಡ ಅಲ್ಲ ಅನ್ನುವುದಕ್ಕೆ ಸಾಕ್ಷಿಯಾಗಿ ಈ ಪೋಸ್ಟು ಅಷ್ಟೇ.. 😉

 9. ನವಿಲಗರಿ October 7, 2008 at 9:00 am #

  ಪ್ರಾಶಾಂತಪ್ಪ..ಥಾಂಕು ಥಾಂಕು…

  ಚಿತ್ರಾ ಮೇಡಮ್..ನೀವ್ ಬಂದ್ರೆ ಅದೂ ಅವಾಗವಾಗ ಬರ್ತಾನೆ ಇದ್ರೆ ನವಿಲ್ಗರಿಗೆ ಸ್ವಲ್ಪ ಕಳೆ ಬರುತ್ತೆ..ಬರ್ತೀರಿ ಅವಾಗವಾಗ 😉

  ನೀಲಿಹೂವಿಗಿರುವಷ್ಟು ತುಂಟತನ ನವಿಲುಗರಿಗಿಲ್ಲ ಅಂತ ನನ್ನ ಅನಿಸಿಕೆ ಹಹಹಹಹಹ…

 10. ನವಿಲಗರಿ October 7, 2008 at 9:04 am #

  ಮನಸ್ಸಿನ ಮರ್ಮರದ ವಿಜಯ್ರಾಜ್ ಜಿ ನಾನ್ ಪೋಲಿ ಹುಡುಗಾ ಅಂತ ತಿಳಿದುಕೊಂಡು ಬಿಟ್ರಾ ಹೆಂಗೆ 😉

  ಸುಶ್ರುತಣ್ಣ 😉

 11. ತವಿಶ್ರೀ October 7, 2008 at 5:44 pm #

  ಏನ್ ಸೋಮಣ್ಣಾ! ಏನ್ಸಮಾಚಾರ – ಮೊನ್ನೆ ಸಿಕ್ಕಿದ್ದಾಗ ಮೊದ್ದು ಹುಡುಗನ ತರಹ ಕಾಣಿಸ್ತಿದ್ದೆ 😛

  ಓದುಗರ ಅಭಿರುಚಿಗೆ ತಕ್ಕಂತೆ ಬರಹ ಸಾಗಲಿ 🙂

 12. jyothi.karavaar October 8, 2008 at 9:14 am #

  sabyateya Yelle Mirilla…keep writing..

 13. ಶ್ರೀನಿಧಿ.ಡಿ.ಎಸ್ October 8, 2008 at 3:55 pm #

  ಅಲೆಲೆಲೆಲೆ! ಮೋಟುಗೋಡೆ ಐಟಮ್!:) ಸೂಪರ್ ಕವನ ಮಗಾ!

 14. ಪಲ್ಲವಿ ಎಸ್‌. October 8, 2008 at 6:04 pm #

  ಸೋಮು, ಎಂಥ ಪೋಲಿತನವೂ ಇಲ್ಲ. ಸೊಗಸಾದ ಕವನ. ಒಂಚೂರು ರಸಿಕತೆ, ಒಂಚೂರು ಟಿಪಿಕಲ್‌ ಹುಡುಗುತನ ಹಾಗೂ ಸೊಗಸಾದ ಕನಸು ಸೇರಿಕೊಂಡು ’ಪೋಲಿ ಹುಡುಗ’ ಸೃಷ್ಟಿಯಾಗಿದೆ. ಶೀರ್ಷಿಕೆಯಲ್ಲಷ್ಟೇ ಪೋಲಿ ಇರುವುದು. ಉಳಿದಿದ್ದೆಲ್ಲ ಹುಡುಗರ, ಅಷ್ಟೇ ಏಕೆ, ಒಂಚೂರು ಬದಲಾವಣೆಯೊಂದಿಗೆ ಹುಡುಗಿಯರ ಸಹಜ ಅಭಿವ್ಯಕ್ತಿಯೇ.

  ಒಂದ್ವೇಳೆ ಈ ಕವನ ಪೋಲಿ ಅನ್ನುವುದಾದರೆ, ನವಿಲುಗರಿ ಶೀರ್ಷಿಕೆ ಕೂಡಾ ಪರಮ ಪೋಲಿ ಅನ್ನಬೇಕಾದೀತು 🙂

  ಸೊಗಸಾಗಿದೆ ಕವನ. ಪ್ರತಿಕ್ರಿಯೆಗಳು ಕೂಡಾ.

 15. ಸಂದೀಪ್ ಕಾಮತ್ October 9, 2008 at 5:01 am #

  ನಂಗೆ ಹೈ-ಫೈ ಕವಿತೆಗಳು ಅರ್ಥ ಆಗಲ್ಲ.ಇದು ಮಾತ್ರ ಸಿಂಪಲ್ ಆಗಿ ಚೆನ್ನಾಗಿದೆ ಕೊನೆ ಪ್ಯಾರ ಸೂಪರ್ ಗುರು:)

 16. Aharnishi October 9, 2008 at 6:36 am #

  ಸೋಮು,
  ಬೈಕಿನ ಹಿಂದೆ ಕುಳಿತ ಗೆಳತಿ
  ಇವನನ್ನ ತಬ್ಬಿ ಹಿಡಿಯುವ
  ಬಗ್ಗೆ ಯೋಚಿಸುತಿದ್ದರೇ,
  ಅವನಾಗಲೇ ರೋಡಲ್ಲಿ ಬರುವ
  ಹಂಪಿಗಾಗಿ ಚಡಪಡಿಸುತ್ತಾನೆ…………….ಓದುತ್ತಾ ನಾ ತೊದಲಿಕೊ೦ಡು ಬರೆದಿದ್ದ ಚುಟುಕು ನೆನಪಾಯಿತು…..ಓದುವ೦ತನಾಗು…….(ಸುಮಾರು ಹದಿನೈದು ವರ್ಷದ ಹಿ೦ದೆ ಗೀಚಿದ್ದು)
  “ಬೈಕ್ ಸವಾರಿ”

  ತು೦ಟಿ,
  ನೀ ಕುಳಿತಿರುವಾಗ
  ಬೆನ್ನಿಗ೦ಟಿ
  ಇರಬಾರದೇ
  ರಸ್ತೆಯ ತು೦ಬಾ
  ಬರೀ ಉಬ್ಬು ಗಳದೇ
  ಜ೦ಟಿ.

 17. ನವಿಲಗರಿ October 9, 2008 at 7:39 am #

  ತವಿಶ್ರಿ ಗುರುಗಳೇ..ಈಗಲು ನಾನು ನಿಮ್ಮ ಪ್ರೀತಿಯ ಹುಡುಗನೇ..ಸ್ವಲ್ಪ ತುಂಟತನ ಹೆಚ್ಚಾಯಿತು ಅನ್ನಿಸಿದರೇ ಮುಂದೇ ಹಾಗಾಗದಂತೆ ನೋಡಿಕೊಳ್ಳುತೇನೆ..

  ಪ್ರೀತಿಯಿರಲಿ:)

 18. ನವಿಲಗರಿ October 9, 2008 at 7:40 am #

  ಥ್ಯಾಂಕ್ಯೂ ಜ್ಯೋತಿ..ಕಾರವಾರ ಹೇಗಿದೆ?

  ಶ್ರೀನಿಧಿ..ಮೋಟುಗೋಡೆಯಷ್ಟು ಪೋಲಿತನದಿಂದ ಕೂಡಿದೆಯಾ? ಹುಹ್…

 19. ನವಿಲಗರಿ October 9, 2008 at 7:43 am #

  ಪಲ್ಲವಿ…ಸ್ವಲ್ಪ ಹೆದರಿಕೆಯಾಗಿತ್ತು..ಆ ಹೆದರಿಕೆಯನ್ನ ಸ್ವಲ್ಪ ಕಡಿಮೆ ಮಾಡಿದ್ದೀರಿ ನಿಮ್ಮ ಅನಿಸಿಕೆಯ ಮೂಲಕ..ಬರೆಯುವುದರಲ್ಲಿ ಇಷ್ಟು ತುಂಟತನವಿಲ್ಲದಿದ್ದರೆ ಹೇಗೆ ಅಲ್ಲವ 😉

 20. ನವಿಲಗರಿ October 9, 2008 at 7:44 am #

  ಸಂದೀಪಣ್ಣ..ನಾನು ನಿಮ್ಮ ಕ್ಯಾಸ್ಟೆ..ನನಗೆ ಅಂತ ಕವಿತೆಗಳು ಇಷ್ಟವಗ್ತಾವೆ..ಆದರೆ ಅರ್ಥವಗೋಲ್ಲ..ಮತ್ತೆ ಬರಿಯೋದಕ್ಕೆ ಖಂಡಿತ ಬರೋದಿಲ್ಲ

  ಥಾಂಕು

 21. ನವಿಲಗರಿ October 9, 2008 at 8:13 am #

  ಅಹರ್ನಿಷಿ ಸರ್..ಚುಟುಕು ಬೊಂಬಾಟ್ ಇದೆ..ಅದು ಅಷ್ಟೂ ಹಿಂದೆ ಬರೆದಿದ್ದು? ಎರೆಡೂ ಚುಟುಕುಗಳ ಅರ್ಥ ಒಂದೇ ಇದೆ ಅಲ್ವ? ಇದೊಂತರ ದೇವನೊಬ್ಬ ನಾಮ ಹಲವು ಅನ್ನೊ ರೀತಿ ಹಹಹಹ

  ಆದರೂ ಅಷ್ಟೂ ಹಿಂದೆಯೇ ಬರೆದಿದ್ದೀರಿ ಅಂದ್ರೆ ನೀವ್ ತುಂಬಾ ತುಂಟ ಅನ್ನಿಸುತ್ತೆ..;)

 22. Shruthi.kumar October 9, 2008 at 1:49 pm #

  Idaralli Swalpavu politanavilla.illirod just thunthnana aste..Thunta hudga anta title kotidre innu chandaagi ertitu..so yaavde comennt bagge tale bisi madkobedi..anda hage love letter bar3edu tumba dina aytu..plz ondu letter haaki..

  namgu ond blg madikodi anta heli 2 tingalaagta bantu…oke just nenapiside ashte

 23. navilugari October 10, 2008 at 7:06 am #

  shruthi Thaanku thanku..thunta huduga andre asht glamer iralla ankondu idna kotiddashte hehehehhehehe ..inu 3 dina time kodi ondolle patra baredu hakteeni..sadyakke nammduki girl prendu jagala adide..leter barilike mood illa;)

  oke nim blaag 2 dinadall ready agattte;)

 24. Annapoorna October 10, 2008 at 10:11 pm #

  🙂

 25. M G Harish October 13, 2008 at 7:53 pm #

  ಸಖತ್ ತುಂಟಾಟ!!

 26. ಗಣೇಶ್.ಕೆ November 1, 2008 at 9:43 pm #

  ಪೋಲಿ ಸೋಮಣ್ನರಿಗೆ ಜೈ…!
  ಅಬಾಬಬ ಏನ್ ತುಂಟಾಟ ಇದು.. ಸಾರಿ. ಏನ್ ‘ಪೋಲಾಟ’ ಇದು…! 🙂

 27. Prasadini shetty December 6, 2008 at 11:01 am #

  kavite superb aagi barediddira.. Kavite oduva modale nimma poli huduga shirshikene ella tilisi bidutte

 28. sri April 23, 2010 at 9:14 am #

  good i like it

 29. Shivashankar.S.S April 25, 2010 at 3:33 pm #

  simply superrrrr. keep it up

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: