ಅವನ ವಿಳಾಸ ಮರೆತಿದ್ದೀನಿ.

10 Oct

ಮೊದಲು ಇವನಿಗೆ ನನ್ನ
ಗಿಲಿ ಗಿಲಿ ಗೆಜ್ಜೆಗಳ ಸದ್ದು
ಮತ್ತೆ ನನ್ನ ಕೈಬಳೆಗಳ
ಅದೆಂತದೋ ನಾದ ಕೂಡ
ಹುಚ್ಚೆಬ್ಬಿಸುತ್ತಿತ್ತು.

ಅದ್ಯಾವುದೋ ಮದದಲ್ಲಿ
ಗೆಜ್ಜೆ ಕಿತ್ತಾದ ಮೇಲೆ ಮತ್ತೆ
ಕೈಬಳೆಗಳು ಚೂರಾದ ಮೇಲೆ
ಈಗ ಒಂಚೂರು ಹಾಗೆಲ್ಲ ಇಲ್ಲವಂತೆ.

ಮೊದಲಾದರೇ ಸುಮ್ಮನೆ
ನನ್ನ ಕಣ್ಣುಗಳ ನೋಡಿಯೇ
ಕುಣಿಯುತ್ತಿದ್ದ ಇಂವ,
ಈಗ ಒಂಚೂರು ನನ್ನಲ್ಲಿ
ನೋಡುತ್ತಾನ ಕೇಳಿ ನೋಡಿ?
ಕಾರಣವಿಷ್ಟೆ ಅವನು ಪ್ರೀತಿಸಿದ್ದು
ನನ್ನನ್ನೆ…ಆದರೇ ನನ್ನನ್ನಲ್ಲ

ಅವನ ಬಲವಂತದ ಜೋಕಿಗೂ
ಇಷ್ಟ ಪಟ್ಟು ನಕ್ಕಿದ್ದೀನಿ..
ತುಂಬಾ ದುಃಖದಲ್ಲಿದ್ದೀನಿ
ಒಂಚೂರು ನಗಬೇಕು ಅಂದ್ರೂ
ನಗುವಿನ ತಿಜೋರಿಯ ಕೀಲಿ
ಕೈ ಅವನ ಬಳಿಯಿದೆಲ್ಲ?

ಹೆಸರಿಡಿದೂ ಕೂಗಿದರೆ ಸಾಕು
ಹೆಗಲಲ್ಲಿ ಜೋಕಾಲಿಯಾಡುತ್ತಿದ್ದ
ಮತ್ತೆ ಕೆನ್ನೆ ತುಟಿಗೆಲ್ಲ ಓಕುಳಿಯಿಡುತಿದ್ದ
ಅಸಾಮಿ, ತುಂಬಾ ದಿನದಿಂದ ಪತ್ತೆ ಇಲ್ಲ
ಹೃದಯ ತೆಗೆದುಕೊಂಡಿದ್ದೆ
ಅವನ ವಿಳಾಸ ಮರೆತಿದ್ದೀನಿ.

ಹೀಗೆ ಹೋಗಿ ಹಾಗೆ
ಬಂದುಬಿಡುವೇ ಅಂದು
ಹೋದವನು ಸುಮ್ಮನೇ ಹೋಗಿಲ್ಲ.
“ಎನೋ” ತೆಗೆದುಕೊಂಡು ಹೋಗಿದ್ದಾನೆ.
ಮನೆಯ ನಾಯಿಮರಿಗೆ
ಗಂಜಿಕುಡಿಸುವ ಮಡಿಕೆಯ
ಹತ್ತಿರದ ಜಾಗ ನನಗೆ ಹಿತವೆನ್ನಿಸುತ್ತೆ
ಕಣ್ಣುಗಳಲ್ಲಿ ಶಬರಿಯನ್ನ
ತುಂಬಿಕೊಂಡು ಕುಳಿತಿದ್ದೀನಿ.

Advertisements

26 Responses to “ಅವನ ವಿಳಾಸ ಮರೆತಿದ್ದೀನಿ.”

 1. ತವಿಶ್ರೀ October 10, 2008 at 4:52 pm #

  ವಾಹ್ ವಾಹ್ ಸೂಪರ್ ಕವನ ಸೋಮಣ್ಣ 🙂

  ಹೆಣ್ಣಿನ ಮನದಾಳದೊಳಗಿಳಿದು ಆಕೆಯ ಮನದಿಂಗಿತವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀ

  ನಮ್ಮಮ್ಮ ಹೇಳ್ತಿದ್ರು – ಗಂಡು ಮಕ್ಕಳೇ ಇಷ್ಟು – ಜೀವನದಲ್ಲಿ ಸ್ವಲ್ಪವೂ attachment ಬೆಳೆಸಿಕೊಳ್ಳೋಲ್ಲ – ಅದೇ ಹೆಣ್ಣುಮಕ್ಕಳು ಹಾಗಲ್ಲ

  ಈ ಮಾತುಗಳನ್ನು ಮತ್ತೆ ನೆನಪಿಸಿಕೊಟ್ಟದ್ದಕ್ಕೆ ಧನ್ಯವಾದ

  ಗುರುದೇವ ದಯಾ ಕರೊ ದೀನ ಜನೆ

 2. Bhavalahari October 10, 2008 at 5:18 pm #

  Somanna….

  Mattomme nammanna mukhavismitarannagi maadidyappa..
  adu hego asshtu yathavattagi hennumakkala manasanna odibidtyaa neenu….??

  Manassanna tatto kavana….

 3. ವೈಶಾಲಿ October 10, 2008 at 11:16 pm #

  ಪರಕಾಯ ಪ್ರವೇಶ perfect!
  ಕಣ್ಣುಗಳಲ್ಲಿ ಶಬರಿಯನ್ನ
  ತುಂಬಿಕೊಂಡು ಕುಳಿತಿದ್ದೀನಿ…. ಇಷ್ಟವಾಯ್ತು!
  ಚಂದದ ಕವಿತೆ. ಆದರೂ ಒಂದೆರಡು ಕಡೆ ಭಾವತೀವ್ರತೆಗೆ ಶಬ್ದಗಳು ಸಾಥ್ ಕೊಟ್ಟಿಲ್ಲ ಅನ್ನಿಸಿತು.

 4. manju October 11, 2008 at 4:58 am #

  KANNADA

 5. ಅವನ ಬಲವಂತದ ಜೋಕಿಗೂ
  ಇಷ್ಟ ಪಟ್ಟು ನಕ್ಕಿದ್ದೀನಿ..
  ತುಂಬಾ ದುಃಖದಲ್ಲಿದ್ದೀನಿ
  ಒಂಚೂರು ನಗಬೇಕು ಅಂದ್ರೂ
  ನಗುವಿನ ತಿಜೋರಿಯ ಕೀಲಿ
  ಕೈ ಅವನ ಬಳಿಯಿದೆಲ್ಲ?

  ಹಾಯ್ ಸೋಮು ಈ ಸಾಲುಗಳು ತುಂಬಾ ಚೆನ್ನಾಗಿವೆ..

 6. shreenidhids October 11, 2008 at 6:38 am #

  simple, and beautiful poem.

 7. ಅಹರ್ನಿಶಿ October 11, 2008 at 7:03 am #

  somu,
  Very good.
  ಕಾರಣವಿಷ್ಟೆ ಅವನು ಪ್ರೀತಿಸಿದ್ದು
  ನನ್ನನ್ನೆ…ಆದರೇ ನನ್ನನ್ನಲ್ಲ.
  ಪ್ರೀತಿಯಲ್ಲೂ ಕಲಬೆರೆಕೆ……..ಹ ಹ ಹ

 8. Veena October 11, 2008 at 7:37 am #

  Hai Maga…

  Choopperr agide Kavana ??

  Vilasa Sikitha ??

 9. pradeep October 11, 2008 at 7:44 am #

  ya it is nice ………and why you are not updating ur love letter blog from so many days

 10. ನವಿಲುಗರಿ October 11, 2008 at 8:01 am #

  ತವಿಶ್ರೀ ಗುರುಗಳೇ..ನೀವು ಪೋಲಿಹುಡುಗ ಬರೆದಿದ್ದಕ್ಕೆ ಸ್ವಲ್ಪ ಪ್ರೀತಿಯಿಂದ ಗದರಿಸಿದ ಅನುಭವವಾಯಿತು..ಅದಕ್ಕೆ ನಿಮಗೆ ಕುಷಿಯಾಗಲಿ ಅಂತ ಇದು ಬರೆದಿದ್ದು..ನೀವು ಮೆಚ್ಚಿದ್ದಕ್ಕೆ ಸಂತೋಷವಾಯಿತು 🙂

 11. ನವಿಲುಗರಿ October 11, 2008 at 8:02 am #

  ಭಾವಲಹರಿ..ಎಲ್ಲೀದ್ದೀರಿ ನೀವು? ಯರಾದ್ರು ಮನಸ್ಸನ್ನ ಅರ್ಥ ಮಾಡ್ಕೊಳ್ಳೋದುಂಟೇ? ಅದರಲ್ಲೂ …..???????ಬೇಡ ಬಿಡಿ ಸುಮ್ಮನೆ ಯಾಕೆ ಇಲ್ಲಿ ಜಗಳ ನಡಿಯೋದು ಇಷ್ಟವಿಲ್ಲ ನಾಗೆ ಹಹಹಹಹಹಹ…
  😉

  ಇದು ಅಲ್ಪ ಸ್ವಲ್ಪ ಪ್ರಯತ್ನವಷ್ಟೆ

 12. ನವಿಲುಗರಿ October 11, 2008 at 8:04 am #

  ವೈಶಾಲಿ…ನಿಮ್ಮ ಅಭಿಪ್ರಾಯಕ್ಕೆ ನನ್ನ ಪೂರ್ತಿ ಸಹಮತವಿದೆ…ಸ್ವಲ್ಪ ಕಷ್ಟ ಆಗುತ್ತೆ ಹುಡುಗಿಯ ಸ್ಠಾನದಲ್ಲಿ ನಿಂತು ಬರಿಲಿಕ್ಕೆ..ಆದರೂ ಪ್ರಯತ್ನ ಪಟ್ಟು ಕೆಲವರಿಂದ ಬೇಷ್ ಅನ್ನಿಸಿಕೊಂಡಿದ್ದಿದೆ..ಮತ್ತೊಮ್ಮೆ ಪ್ರೀತಿಯಿಂದ ಮೂತಿ ತಿವಿಸಿಕೊಂಡಿದ್ದಿದೆ..: )

 13. ನವಿಲುಗರಿ October 11, 2008 at 8:06 am #

  ವೀರೇಶಣ್ಣ ಮತ್ತೆ ಪ್ರೀತಿಯ ತುಂತುರುಹನಿಗಳ ಒಡೆಯರೇ. ಥಾಂಕು ಥಾಂಕು. 🙂

 14. ನವಿಲಗರಿ October 11, 2008 at 8:33 am #

  ಅಹರ್ನಿಶಿ..ಯಾವುದರಲ್ಲಿ ಕಲಬೆರಕೆ ಇಲ್ಲ ಹೇಳಿ?

  ವೀಣ ಥ್ಯಾಂಕ್ಸ್…ವಿಳಾಸವಿನ್ನು ಸಿಕ್ಕಿಲ್ಲ

  ಪ್ರದೀಪ್ ಜಿ 😉

 15. nalini srikanth October 11, 2008 at 1:14 pm #

  nanage anmana bandide niv hudugiye irbekta…adre blognalli huduga andkondeddiri….tumba ishte aytu blog

 16. priya October 11, 2008 at 2:51 pm #

  somu tumba chenagidhe super…….

 17. “ಎನೋ” ತೆಗೆದುಕೊಂಡು ಹೋಗಿದ್ದಾನೆ.

  ಗೆಜ್ಜೆ ಮನಸ್ಸಲ್ಲಿತ್ತೋ……
  ಮನಸ್ಸಲ್ಲಿ ಗೆಜ್ಜೆ ಇತ್ತೋ…

 18. ಜ್ತ್ರ್ತ್ಕ್ October 12, 2008 at 4:34 am #

  ಕ್ತ್ಕ್ರ್ಕ್ತ್ಮ್

 19. ನವಿಲಗರಿ October 12, 2008 at 10:09 am #

  ನಳಿನಿ ಮೇಡಮ್..ಖಂಡಿತ ಅಂತ ಅನುಮಾನಗಳೆಲ್ಲ ಬೇಡ..;)

  ಥ್ಯಾಂಕ್ಸ್ ಪ್ರಿಯಾ ಅಕ್ಕ…

  ರಾಧಕ್ರಿಷ್ಣ ಡಿಯರ್….ಗೊತ್ತಿಲ್ಲ..ಆದರೆ ತೆಗೆದುಕೊಳ್ಳುವಾಗ ಲೆಜ್ಜೆಯಂತು ಕಂಡಿತ ಇತ್ತು ಹಹಹಹಹ

 20. Sudarshan October 12, 2008 at 2:20 pm #

  Simply superb. I enjoyed last paragraph much more.

 21. vijayraj October 13, 2008 at 9:56 am #

  super as usual…..

 22. Prasanna October 15, 2008 at 5:05 pm #

  machhi super kavana kano..

 23. rajarajeshwari October 18, 2008 at 3:59 pm #

  chennagide somu

 24. Pavithra April 16, 2009 at 10:16 am #

  Tumba ista aitu Somu.

 25. Anonymous July 9, 2014 at 11:24 pm #

  dehada vanche galu priti alla anno sukshma vanna nimma salugalu heluthive ondu hennu manasare bayasida huduga aake ya badukina putagalinda yeddu hodaga avala vedeneya drushti konadinda heluva nimma riti mechuge aitu

 26. Anonymous April 16, 2015 at 11:26 am #

  ನವಿಲು ಗರಿ ಸೋಮು ನೀಮ್ಮ ಎಲ್ಲ ಕವನಗಳು ತುಂಬಾ ಚೆನ್ನಾಗಿವೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: