ಕಣ್ಣಲ್ಲಿರುವ ಬೆಳಕು ಆರುವ ಮುನ್ನ ಬಂದುಬಿಡು.!

11 ಆಕ್ಟೋ

ಯಾಕೋ ಕೋತಿ ಒಂದು phone ಇಲ್ಲ? ಅಟ್ಲೀಸ್ಟ್ ಒಂದು ಎಸ್ಸೆಮ್ಮೆಸ್ಸಾದ್ರು ಬೇಡ್ವೇನೊ? ಅಂದ ಹಾಗೆ ನಿನ್ನೆ ರಾತ್ರಿ ಕನಸಿಗ್ಯಾಕೆ ಬರಲಿಲ್ಲ? ನನ್ನ ಇಷ್ಟಿಷ್ಟಿಷ್ಟಿಷ್ಟೆ ಕಾಡಲಿಲ್ಲ? ಅದ್ಯಾರು ಹೊಸ ಗೆಳತಿ ರಂಜನ? ಅವಳೇನೊ ಮಾರಯಾ ಸುಮ್ಮನೆ ನೋಡ್ತಾಳ ಹೋಗ್ಲಿ? ಹಂಗೆ ಬಕೆಟ್ ಬಕೆಟ್ಗಟ್ಲೆ ಜೊಲ್ಲ್ ಸುರಿಸ್ತಾಳಲ್ಲೋ? ನೀನೇನೊ ಶ್ರೀ ಕ್ರಿಷ್ಣನ ಚಿಕ್ಕಪ್ಪನ ಮಗನ ತರ ಆಡ್ತೀಯಲ್ಲೊ? ಅವನದಾದ್ರು ಹದಿನಾರು ಸಾವಿರ ಲೀಲೆಗಳಪ್ಪ..! ಇದು ನಿಂದೆಷ್ಟನೆಯದು? ಕಾಲೇಜಿಗೆ ಹೊಸ ಹುಡುಗಿ ಬರೋ ಹಾಗಿಲ್ಲ ಅಲ್ಲವೇನೊ ನಿನಗೆ ಮೈಯ್ಯೆಲ್ಲ ಕೊಳಲಾಗುತ್ತೆ ? ಏನಪ್ಪ ಮಲೆನಾಡ ಮಲ್ಲಿಗೆ ರಂಜನಾಗೆ ಕಾಂಪಿಟೇಷನ್ ಮಾಡೊ ತರ ಕಾಣಿಸ್ತಿದೆ? ಹೊಸ ಸುದ್ಧಿ ಕೇಳಿದೆ ನಿಜಾನ? ಗಾಳಿಪಟ ಸಿನಿಮಾಕ್ಕೆ ಹೋಗಿದ್ರಂತೆ? ಕಾಫ಼ಿ ಡೇ ನಲ್ಲಿ ಹಜಾರ್ ರೂಪಾಯ್ ಬಿಲ್ಲ್ ಬೇರೆ ಮಾಡಿದ್ಯಂತೆ? ನಿಜ ಹೇಳೋ ವಾನರ..! ಇಲ್ಲಿವರೆಗು ನನಗೆ ಜಯನಗರ 4th ಬ್ಲಾಕ್ ತೋರಿಸಿದ್ದಿಯೇನೊ? ಅಟ್ಲೀಸ್ಟ್ ಶಾಂತಿ ಸಾಗರದಲ್ಲಿ ಬೈಟೂ ಟೀ? ಹೊಸ ಗೆಳತಿ ಸಿಕ್ಕಿದ್ ಕೂಡ್ಲೆ ಗಾಳಿಪಟ ಹಾರಿಸೋಕೆ ಹೋಗಿ ಬೀಡೋದ ಮೂದೇವಿ?

ನಿನ್ನಷ್ಟು ಮರೆವು ನನಗಿಲ್ಲಪ್ಪ ಕೇಳಿಸ್ಕೊ, ಇಲ್ಲಿಯವರೆಗೆ ನಾನು ನಿನಗೆ ಹಾಕಿಸಿದ ಕರೆನ್ಸಿಯ ಒಟ್ಟು ಬಾಬತ್ತು ಒಂದು ಸಾವಿರದ ನಾನೂರ ಇಪ್ಪತ್ತು ರೂಪಾಯಿಗಳೂ..! ನಿನ್ನ ಜೊತೆ ನೋಡಿದ ಸಿನಿಮಾಗಳ ಸಂಖ್ಯೆ ಒಟ್ಟು ಆರು ! ಆ ಎಲ್ಲ ಸಿನಿಮಾಗಳ ಟಿಕೇಟಿನ ದುಡ್ಡನ್ನು ನನ್ನ ಪರ್ಸಿಂದಾನೆ ಕಕ್ಕಿಸಿದ್ದೀಯ.! ನನಗಿಷ್ಟವಿಲ್ಲದಿದ್ದರೂ ನೀನು ನನಗೆ ಬಲವಂತದಿಂದ ಕೊಟ್ಟ ಮುತ್ತುಗಳ ಸಂಖ್ಯೆ ಕೇವಲ ಹದಿನಾರು..! ಸಿನಿಮಾದ ಕತ್ತಲಲ್ಲಿ ಎರೆಡು ಸಲ ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳೋಕೆ ಪ್ರಯತ್ನ ಪಟ್ಟೆ ನೀನು, ಆದರೆ ಸುಮ್ಮನೆ ಗದರಿಸಿದಕ್ಕೇನೆ “ಸ್ಸಾರಿ ಚಿಂಪೂ” ಅಂದವನೇ ಬೆಕ್ಕಿನ ಹಾಗೆ ಮುದುರಿ ಕುಳಿತು ಬಿಟ್ಟೆ ಅಲ್ವ ಅವತ್ತು ನೀನು ನನಗೆಷ್ಟು ಇಷ್ಟವಾಗಿ ಬಿಟ್ಟೆ ಅಂದ್ರೆ ಸಿನಿಮಾದ ಕತ್ತಲೂ ಕೂಡ ನಮ್ಮಿಬ್ಬರನ್ನ ನೋಡಿ ನಾಚಿ ನೀರಾಗಿರಬೇಕು ಅಲ್ಲವೇನೊ ಮೂದೇವಿ?

ಸರಿ ನಿನ್ನೆಲ್ಲ ಲೀಲೆಗಳು ಮುಂದುವರಿತಾನೆ ಇರಲಿ ಪ್ರತಿಯೊಂದಕ್ಕು ಒಂದು ಕೊನೆ ಅಂತ ಇರುತ್ತೆ ಅನ್ನೊ ಒಂದು ಮಾತಿನ ಮೇಲೆ ಬೇಜಾನ್ ನಂಬಿಕೆ ಇದೆ ನನಗೆ.! ಎಕ್ಸಾಮ್ಸ್ ಹತ್ರ ಬಂದ್ವು ಕಣೊ ಪ್ಲೀಸ್ ಪ್ಲೀಸ್ ಪ್ಲೀಸ್ ನನಗೋಸ್ಕರ ಅಲ್ಲದೆ ಇದ್ರು ನಿನಗಾಗಿ ಆದ್ರು ಪುಸ್ತಕದ ಕಡೆ ಗಮನ ಕೊಡೊ ಗೆಳೆಯ..! ಗೊತ್ತು ಪುಸ್ತಕ ಬಿಚ್ಚಿದೆ ಅಂದ್ರೆ ನಿನಗೆ ಬೆಂಗಳೂರಿನ ಅಷ್ಟೂ ಬಿಂದಾಸ್ ಬಿಂದಾಸ್ ಹುಡುಗಿಯರ ಚಿತ್ರಗಳು ಕಣ್ಣು ಕುಕ್ಕುತ್ತವೆ ಅಂತ, ಅಲ್ವೊ ದಿನದ ೨೪ ಗಂಟೆ ಕೂಡ ನಿನ್ನ ಸೆಲ್ಲ್ ಅಷ್ಟೋಂದು ಬ್ಯುಸಿಯಾಗಿರತ್ತಲ್ಲೊ? ಆದ್ರೂ ನಿಮ್ಮೂರಿಗೆ ತಿಂಗಳಾದ್ರು ಒಂದೇ ಒಂದು ಫ಼ೋನ್ ಮಾಡೋದಿಲ್ಲವಂತೆ? ದಿನಕ್ಕೆರೆಡು ಸಲ ಕರೆನ್ಸಿ ಹಾಕಿಸ್ತೀಯಲ್ವ? ಎಲ್ಲಾ ಕರೆನ್ಸೀನೂ ರಂಜನಾ ಕಿವಿಗಿ ಮುಡಿಸಿಬಿಡ್ತೀ ಅನ್ನಿಸುತ್ತೆ ಅಲ್ಲವೇನೊ? ಅಯ್ಯೋ ಬಿಡು ನನ್ನ ಕಿವಿಗೆ ಬೆಂಗಳೂರಿನ ಲಾಲ್‌ಬಾಗ್ ನೆ ಇಟ್ಟೋನು ನೀನು ಅಲ್ವೇನೊ ಮೂದೇವಿ?

ಬರೀ ನಿನ್ನ ತಪ್ಪುಗಳನ್ನ ತೊರಿಸಿಕೊಡೊದಕ್ಕೆ ಅಂತಾನೆ ನಾನು ಈ ಪತ್ರ ಬರಿತಾ ಇಲ್ಲ ಕಣೊ, ನನಗೂ ಬರೀ ನಿನ್ನ ತಪ್ಪುಗಳನ್ನೇ ತೋರಿಸಿಕೊಡ್ತ ಇರೋದಕ್ಕೆ ತುಂಬಾನೆ ಹಿಂಸೆ ಆಗ್ತ ಇದೆ ಕಣೊ, ಆದರೇ ಏನು ಮಾಡಲಿ ಹೇಳು ತುಂಬಾ ನೆನಪಾಗ್ತ ಇದ್ದೀಯ ನೀನು. ನಿನಗೇನು ನಿನ್ನ ಬಿಂದಾಸ್ ಬಿಂದಾಸ್ ಹುಡುಗಿಯರ ಜೊತೆ ಅರಾಮಾಗಿರ್ತೀಂii ಆದ್ರೆ ನಾನು? ಹೇಳೋ ರಾಜಕುಮಾರ? ನಿನ್ನ ತರ ನಾನು ಮಾಡಬೇಕ ಚಿಂಪು?. ಇಷ್ಟಗಲ ನಗ್ತ ನಗ್ತ ಇರೋ ನಿನ್ನ ಗೆಳತಿಯರ ಮದ್ಯೆ ನಿನಗಾಗಿ ಒಂದೆರೆಡು ಕಣ್ಣೀರು ಹಾಕೊ ಒಂದು ಜೀವ ಇದೆ ಅನ್ನೋದನ್ನ ಯಾವತ್ತೂ ಮರಿಬೇಡ ಕಣೋ. ಈ ಕಣ್ಣುಗಳಲ್ಲಿರುವ ಬೆಳಕು ಆರಿ ಹೋಗುವ ಮುನ್ನ
ಬಂದು ಬಿಡು

ಅದೇ ನಿನ್ನ ನವಿಲುಗರಿ ಹುಡುಗಿ

Advertisements

17 Responses to “ಕಣ್ಣಲ್ಲಿರುವ ಬೆಳಕು ಆರುವ ಮುನ್ನ ಬಂದುಬಿಡು.!”

 1. neelihoovu ಅಕ್ಟೋಬರ್ 11, 2008 at 9:33 ಫೂರ್ವಾಹ್ನ #

  “ಕಾಲೇಜಿಗೆ ಹೊಸ ಹುಡುಗಿ ಬರೋ ಹಾಗಿಲ್ಲ ಅಲ್ಲವೇನೊ ನಿನಗೆ ಮೈಯ್ಯೆಲ್ಲ ಕೊಳಲಾಗುತ್ತೆ ?”

  ನಂಗೆ ಒಂದು ಡೌಟು.. ಶ್ರೀಕೃಷ್ಣನ ಚಿಕ್ಕಪ್ಪನ ಮಗ ನೀನೇನಾ ಅಂತ!

  ನಮಗಿಷ್ಟವಾದವರ ಹತ್ತಿರ ಪ್ರೀತಿಯಿಂದ ಕೋತಿ, ಮೂದೇವಿ ಅಂತ ಬೈಸಿಕೊಳ್ಳುವುದು ಎಂಥ ಅದ್ಭುತ ಸುಖ ಅಲ್ವಾ?

  ನಂಗೇನಾದ್ರೂ ಲವ್ ಲೆಟರ್ ಬರೆಯಬೇಕಂದ್ರೆ ನಿನ್ ಹತ್ರಾನೆ ಟ್ಯೂಷನ್ ತಗೋತೀನಿ ಗುರುವೆ..:-)

 2. ಅಹರ್ನಿಶಿ ಅಕ್ಟೋಬರ್ 11, 2008 at 10:07 ಫೂರ್ವಾಹ್ನ #

  ಸೋಮು,

  ನಿಜ ಹೇಳಲಾ?????

 3. ಅಹರ್ನಿಶಿ ಅಕ್ಟೋಬರ್ 11, 2008 at 10:27 ಫೂರ್ವಾಹ್ನ #

  ಸೋಮು,
  ಅನುಭವಕ್ಕೂ ಅನುರಣನೆಗೂ ಅವಿನಾಭಾವ ಸ೦ಭ೦ಧ,ಊಹೆಗೆ ನಿಲುಕದ ಅನುಭೂತಿಯಿಲ್ಲ ಅ೦ತಾರೆ.ನಿನ್ನದು ಊಹೆಯಾದ್ರೆ ಹ್ಯಾಟ್ಸ್ ಆಫ್,ಅನುಭವ ಆದ್ರೆ ಆಹಾ ಎ೦ತಾ ಮಧುರ ಯಾತನೆ…..ಅಲ್ವಾ. ನನ್ನ ದಿನಚರಿಯನ್ನೇ ಬದಲಿಸಿದ್ದೀಯ ನೀನು,ಅಹರ್ನಿಶಿ ನವಿಲಗರಿಯನ್ನ ಸ್ಪರ್ಶಿಸಲೇಬೇಕು ಅನ್ನುವ೦ತಾಗಿದೆ.
  ಏರು ಯೌವನದ ದಿನಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದೇನೆ.ಬಿಡುವು ಮಾಡಿಕೊ೦ಡು ನನ್ನ ಅನುಭವಗಳನ್ನ “ಶ್ರೀ …ಮನೆ “ಯಲ್ಲಿ ಹಾಕಬೇಕು ಅನಿಸ್ತಾ ಇದೆ ಯಾಕೋ ಇ೦ದು.ಹೀಗೇ ಬರೀತಾ ಇರು…ನಿರ೦ತರ.

 4. nalini srikanth ಅಕ್ಟೋಬರ್ 11, 2008 at 1:11 ಅಪರಾಹ್ನ #

  Dear Sir/mem

  I read ur some poems and love letter..itz too good..yella odide mele ..hudga aada nivu hudugiya hagge barilekke hege sadya?
  ಇಷ್ಟಗಲ ನಗ್ತ ನಗ್ತ ಇರೋ ನಿನ್ನ ಗೆಳತಿಯರ ಮದ್ಯೆ ನಿನಗಾಗಿ ಒಂದೆರೆಡು ಕಣ್ಣೀರು ಹಾಕೊ ಒಂದು ಜೀವ ಇದೆ ಅನ್ನೋದನ್ನ ಯಾವತ್ತೂ ಮರಿಬೇಡ ಕಣೋ. ಈ ಕಣ್ಣುಗಳಲ್ಲಿರುವ ಬೆಳಕು ಆರಿ ಹೋಗುವ ಮುನ್ನ
  ಬಂದು ಬಿಡು its too good yaar

 5. ತವಿಶ್ರೀ ಅಕ್ಟೋಬರ್ 11, 2008 at 3:17 ಅಪರಾಹ್ನ #

  ವಾಹ್ ವಾಹ್ ಎಂತಹ ಬರಹ 🙂

  ಯಾರೆಲ್ಲ ಮನದೊಳಗೆ ನುಗ್ಗಿ – ಅವರ ಮರೆಮಾಚುವಂತಹ ಮಾತುಗಳನ್ನೆಲ್ಲಾ ಕದ್ದು – ಸೊಗಸಾಗಿ ನಿರೂಪಿಸುತ್ತೀಯೆ

  ನೀನು ನನ್ನನ್ನು ಗುರುಗಳೇ ಅಂತ ಕರೆಸಿಕೊಳ್ಳೋಕ್ಕೂ ಪುಣ್ಯ ಮಾಡಿರ್ಬೇಕು – ಸೋಮಣ್ಣ 🙂

  ಎಂತಹವರಲ್ಲೂ ರಸಿಕತೆಯ ಕೋಡಿಯನ್ನು ಹರಿಸಿಬಿಡುವೆ

  ಗುರುದೇವ ದಯಾ ಕರೊ ದೀನ ಜನೆ

 6. Lakshmi Shashidhar ಅಕ್ಟೋಬರ್ 11, 2008 at 4:37 ಅಪರಾಹ್ನ #

  nijvaaglu superraagide. huDgeeru baiyyo haage baididdiri ….mattu hudgeeru maataaDo haage maatU aaDiddIri ! sakhattaagide !

 7. ನವಿಲಗರಿ ಅಕ್ಟೋಬರ್ 12, 2008 at 10:01 ಫೂರ್ವಾಹ್ನ #

  ಅದರ ಮಜಾ ನೆ ಬೆರೆ ಅಲ್ವ ರಂಜಿತ್?…ನಾನು ನಿಮಗೆ ಲೆಟರ್ ಬರಿಯೋದರ ಬಗ್ಗೆ ತ್ಯೂಶನ್ ತಗೊತೀನಿ..ನೀ ನನಗೆ ಕವಿತೆ ಬರಿಯೋದು ಹೇಗೆ ಅಂತ ಹೇಳಿಕೊಡ್ತೀ ತಾನೆ? ಈ ಶರತ್ತಿಗೆ ಒಪ್ಪಿಗೆ ಕೊಟ್ಟರೆ ನಾನು ರೆಡಿ…

 8. ನವಿಲಗರಿ ಅಕ್ಟೋಬರ್ 12, 2008 at 10:03 ಫೂರ್ವಾಹ್ನ #

  ಅಹರ್ನಿಶಿ ಗುರುಗಳೆ..ಸುಮ್ಮನೆ ಅವರಿವರು ಮತಾಡಿದ್ದು ಕದ್ದು ಕೇಳಿಸ್ಕೊಂಡಿದ್ದು ಅದು ಇದು ಹಾಗೆ ಹೀಗೆ ಅಲ್ಲಿ ಇಲ್ಲಿ ಓದಿದ್ದು ಬರೆದಿದ್ದು ಯೆಲ್ಲ ಸೇರಿಸಿ ಸುಮ್ಮನೆ ಬರಿಲಿಕ್ಕೆ ಪ್ರಯತ್ನಿಸ್ತೀನಿ ಅಷ್ಟೆ..ಅನುಭವ ಎನ್ ಇಲ್ಲಪ್ಪ..ನಾನಿನ್ನು ತುಂಬಾ ಚಿಕ್ಕ ಹುಡುಗ

 9. ನವಿಲಗರಿ ಅಕ್ಟೋಬರ್ 12, 2008 at 10:06 ಫೂರ್ವಾಹ್ನ #

  ನಳಿನಿ ಮೇಡಮ್..ಹುಡುಗಾನೊ ಹುಡುಗಿನೋ..ಅಲ್ಲಿರೊ ಭಾವನಗಳು ಒಂದೇ ಅಲ್ವ? ಅದನ್ನ ಬರಿಲಿಕ್ಕೆ ಪ್ರಯತ್ನಿಸಿದೆ ನಿಮಗಿಷ್ಟವಾಗಿದ್ದಷ್ಟೇ ಸಂತೋಷ 🙂

 10. ನವಿಲಗರಿ ಅಕ್ಟೋಬರ್ 12, 2008 at 10:07 ಫೂರ್ವಾಹ್ನ #

  ತವಿಶ್ರೀ ಗುರುಗಳೆ..ನಿಮಗಿಷ್ಟವಾಯಿತು ಅಂದ್ರೆ ನನಗಷ್ಟೆ ಸಂತೋಷ..:) ಪ್ರೀತಿಯಿರಲಿ

  ಲಕ್ಷ್ಮಿ ಮೇಡಮ್..:)

 11. ambika ಅಕ್ಟೋಬರ್ 13, 2008 at 12:29 ಅಪರಾಹ್ನ #

  Hai Somu avare….

  “ಕಣ್ಣಲ್ಲಿರುವ ಬೆಳಕು ಆರುವ ಮುನ್ನ ಬಂದುಬಿಡು.!” its really wonderfull somu…. sahajavagi avana tappugalanna helutta, manassina alalannu nirupisutta hoguva a hudugi superb….. nimma kadeya saalugalu tumba adbhutavagide…… keep it up & god bless you somu……..

 12. sundaranadu ಅಕ್ಟೋಬರ್ 14, 2008 at 3:16 ಅಪರಾಹ್ನ #

  ಸೋಮೂರವರೇ, ನಾನು ಏನು ಬರೆಯಲಿ ನೀವೇ ಹೇಳಿಬಿಡಿ.
  ಮನಸ್ಸಿನ ಮಾತುಗಳನ್ನ, ಭಾವನೆಗಳನ್ನ ನಮಗೆ ಹೇಳೋಕೆ ಕಷ್ಟ. ನೀವು
  ಪದಗಳಲ್ಲಿ ಅವನ್ನೆಲ್ಲ ಹೇಗೆ ಹಿಡಿದುಬಿಡುತ್ತೀರಿ? ನಿಮಗೆ ನನ್ನ ಕೋಟಿ ನಮನ.

  ನಿಮ್ಮ ಅಭಿಮಾನಿ,
  sundaranadu.wordpress.com

 13. Girish ಅಕ್ಟೋಬರ್ 15, 2008 at 1:44 ಫೂರ್ವಾಹ್ನ #

  Guru….“ಕಣ್ಣಲ್ಲಿರುವ ಬೆಳಕು ಆರುವ ಮುನ್ನ ಬಂದುಬಿಡು.! ತುಂಬಾ ಚೆನ್ನಾಗಿದೇರಿ,ನಂಗೆ ನವಿಲು ಗರಿ ಅಂದರೆ ತುಂಬಾ ಇಷ್ಟ,ದಯವಿಟ್ಟು ಕಾಯಿಸಬೇಡಿ ಆ ಹುಡ್ಗಿನ ಬೇಗ ಹೋಗಿ………………..Sir………..

 14. Prasanna ಅಕ್ಟೋಬರ್ 15, 2008 at 4:58 ಅಪರಾಹ್ನ #

  Tumba chennagide somu..keep writing..

 15. ಕನ್ನಡಮ್ಮನ ಮುದ್ದಿನ ಮನೆಮಗಳು ಅಕ್ಟೋಬರ್ 23, 2008 at 1:44 ಅಪರಾಹ್ನ #

  ಇಷ್ಟಗಲ ನಗ್ತ ನಗ್ತ ಇರೋ ನಿನ್ನ ಗೆಳತಿಯರ ಮದ್ಯೆ ನಿನಗಾಗಿ ಒಂದೆರೆಡು ಕಣ್ಣೀರು ಹಾಕೊ ಒಂದು ಜೀವ ಇದೆ ಅನ್ನೋದನ್ನ ಯಾವತ್ತೂ ಮರಿಬೇಡ ಕಣೋ. ಈ ಕಣ್ಣುಗಳಲ್ಲಿರುವ ಬೆಳಕು ಆರಿ ಹೋಗುವ ಮುನ್ನ
  ಬಂದು ಬಿಡು
  yella hudugiru tanna huduga yeshte tappu madidru bayasodu ishtanne alwa somanna. yest chennagi artha madkond barediddiya.

 16. Jesh ಮಾರ್ಚ್ 26, 2009 at 6:01 ಅಪರಾಹ್ನ #

  haa thumba chennagide..

  but edara bagge heloke swalpa time beku…sariyaagi odoke time sigtha ella..

  thanks somu…

 17. Pavithra ಏಪ್ರಿಲ್ 14, 2009 at 10:00 ಫೂರ್ವಾಹ್ನ #

  Very nice. I like it too much.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: