ಹೆಸರಿನ ಹಂಗಿಲ್ಲದ ಹನಿಗಳು

13 ಆಕ್ಟೋ

ತಾನು ಬರೆಯುವ
ಕವಿತೆಗೆ ಅವಳ
ನೆನಪ ಸಾಲ ಕೇಳಿದ…
ಹುಡುಗಿ ಇಲ್ಲವೆಂದಳು !
ಹುಡುಗ ಅದ್ಭುತ ವಿರಹಗೀತೆ
ಬರೆದು ಸೇಡು ತೀರಿಸಿಕೊಂಡ.!
——————–

ಒಂದು ಕ್ವಿಂಟಾಲ್
ಚಳಿ ಇದೆ.
ಒಂದು ಮುಟಿಕೆಯಷ್ಟು
ನಿನ್ನ ನೆನಪು ಕಳಿಸು.
—————-

ಕಣ್ಣುಗಳು ಒಲವ
ದಾರಿಯ ಮರೆತವು..
ಹೃದಯಕ್ಕೆ ಪ್ರೀತಿಯ
ಬಂಜೆತನ ಅಂಟಿತು.
—————

ಒಂದು ಹಾಡುಬರೆಯಬೇಕು
ಒಂದು ಸಾಲು ನೆನಪಾಗುತ್ತಿಲ್ಲ
ನಿನ್ನದೂ ಅಂತ ಒಂದಕ್ಷರವೂ
ನನ್ನ ಬಳಿಯಿಲ್ಲ..
——————-

ಸಂಜೆ ಸಿಗು..
ರಾತ್ರಿ ಬೆವರಿಳಿಸಿದ
ಕೆಲವು ಬಯಕೆಗಳಿಗೆ
ಉತ್ತರಿಸುತ್ತೇನೆಂದು
ಮಾತು ಕೊಟ್ಟಿದ್ದೇನೆ.
——————-

Advertisements

14 Responses to “ಹೆಸರಿನ ಹಂಗಿಲ್ಲದ ಹನಿಗಳು”

 1. ಪಲ್ಲವಿ ಎಸ್‌. ಅಕ್ಟೋಬರ್ 13, 2008 at 5:32 ಅಪರಾಹ್ನ #

  ಚೆನ್ನಾಗಿವೆ ಚುಟುಕುಗಳು ಸೋಮು.

  ”ಒಂದು ಹಾಡುಬರೆಯಬೇಕು
  ಒಂದು ಸಾಲು ನೆನಪಾಗುತ್ತಿಲ್ಲ
  ನಿನ್ನದೂ ಅಂತ ಒಂದಕ್ಷರವೂ
  ನನ್ನ ಬಳಿಯಿಲ್ಲ..”

  ಈ ಸಾಲುಗಳು ತುಂಬ ಇಷ್ಟವಾದವು.

  ಹಾಡು ಬರೆಯಲು ನೆನಪ ಕಡ ಬೇಕೆ?
  ಬದುಕು ಪೂರ್ತಿ ಉಳಿದಿರುವ ನೆನಪುಗಳು ಸಾಲದೆ?
  ಎದೆ ಹಣತೆಯಲಿ ನೆನಪ ಜ್ಯೋತಿ ಉರಿಸಿಕೊಂಡು
  ಬರೆ ಕವಿತೆಯ ಆಕೆಯನೇ ನೆನಪಿಸಿಕೊಂಡು

  ಚೆನ್ನಾಗಿದೆಯಾ?

  – ಪಲ್ಲವಿ ಎಸ್‌.

 2. Lakshmi Shashidhar ಅಕ್ಟೋಬರ್ 13, 2008 at 6:05 ಅಪರಾಹ್ನ #

  super-ateeta !

 3. Parisarapremi ಅಕ್ಟೋಬರ್ 13, 2008 at 6:24 ಅಪರಾಹ್ನ #

  oLLe chutuka ivre.. 🙂

 4. neelihoovu ಅಕ್ಟೋಬರ್ 14, 2008 at 6:37 ಫೂರ್ವಾಹ್ನ #

  “ಒಂದು ಕ್ವಿಂಟಾಲ್
  ಚಳಿ ಇದೆ.
  ಒಂದು ಮುಟಿಕೆಯಷ್ಟು
  ನಿನ್ನ ನೆನಪು ಕಳಿಸು.”

  ಮುಟಿಕೆ ಸಾಕೆನೋ ತಂದೆ??
  ನಂಗೆ ಸಾಕಾಗಲ್ಲವಪ್ಪ..:-)

  ಎಂದಿನಂತೆ ಎಲ್ಲಾ ಸೂಪರ್‍ ಕಣೋ !

 5. ವಿಕಾಸ್ ಹೆಗಡೆ ಅಕ್ಟೋಬರ್ 14, 2008 at 7:29 ಫೂರ್ವಾಹ್ನ #

  ಚಂದೆ ಇವೆ ಕಣೋ . ಥ್ಯಾಂಕ್ಸ್

 6. vijayraj ಅಕ್ಟೋಬರ್ 14, 2008 at 8:57 ಫೂರ್ವಾಹ್ನ #

  ninne paperalle odide…chenda ive kano

 7. ಶೆಟ್ಟರು (Shettaru) ಅಕ್ಟೋಬರ್ 14, 2008 at 11:11 ಫೂರ್ವಾಹ್ನ #

  “ಒಂದು ಮುಟಿಕೆಯಷ್ಟು
  ನಿನ್ನ ನೆನಪು ಕಳಿಸು.”

  ಭಲಾರೆ…ಭಲಾ.. ಮೆಚ್ಚಿದೆ 🙂

  -ಶೆಟ್ಟರು, ಮುಂಬಯಿ

 8. navilugari ಅಕ್ಟೋಬರ್ 14, 2008 at 3:06 ಅಪರಾಹ್ನ #

  ಥಾಂಕು ಥಾಂಕು ಪಲ್ವಿ.. 😉

  ಎದೆ ಹಣತೆಯಲಿ ನೆನಪ ಜ್ಯೋತಿ ಉರಿಸಿಕೊಂಡು
  ಬರೆ ಕವಿತೆಯ ಅವನನ್ನೇ ನೆನಪಿಸಿಕೊಂಡು ಅಂತ ಬದಲಾಯಿಸಿ ಬರೆದರೇ ಇನ್ನು ಮಸ್ತಾಗಿರುತ್ತೆ ಅಲ್ಲವೆ? 😉

 9. navilugari ಅಕ್ಟೋಬರ್ 14, 2008 at 3:15 ಅಪರಾಹ್ನ #

  ಲಕ್ಷ್ಮಿ ಮತ್ತೆ ಪರಿಸರ ಪ್ರೇಮಿಗಳಿಗೆ ಥ್ಯಾಂಕ್ಸು ಹೇಳ್ತ ಇದ್ದೀನಿ 🙂

  ಇನ್ನು ನೀಲಿಹೂವಿನ ಒಡೆಯರೇ…ಒಂದು ಮುಟಿಕೆ ಸಾಕೆ ಸಾಕು..ಅವಳ ನೆನಪು ಅಷ್ಟು pwerfull ಅಂತ ಹೇಳಿದ್ದೀನಿ ಅಷ್ಟೇ 😉

  ಗೊತ್ತು ನಿನಗೆ ನಿನಗೆ ಬಂದಿರುವ ಚಳಿ ಅಂತಿಂತದ್ದಲ್ಲ. ಒಂದು ಮುಟಿಕೆ ಯಾವ ಮೂಲೆಗೆ? ..ದಾರಾವಾಡ…ಹುಬ್ಬಳ್ಳಿ ಮತ್ತೆ ನಮ್ಮೂರಿನ ಕಡೆ ಕೌದಿ ಅಂತ ಬರುತ್ತೆ ಅದನ್ನ ಹೊದ್ದುಕೊಂಡರೇನೆ ಈ ಚಳಿ ಹೋಗೋದು ಅನ್ನಿಸುತ್ತೆ :O 😉 ಅದರಲ್ಲೂ ಉತ್ತರ ಕರ್ನಾಟಕದ ಕೌದಿ ತುಂಬಾ ಪೇಮಸ್ಸು….ನಮ್ಮ ಪಲ್ಲವಿಯವರನ್ನೇ ಕೇಳಿ ತರಿಸಿಕೊಳ್ಳಿ..ಹೇಗಿದ್ದರೂ ಅವರು ದಾರಾವಾಡದ ಕಡೆಯವರು

 10. ನವಿಲಗರಿ ಅಕ್ಟೋಬರ್ 14, 2008 at 3:25 ಅಪರಾಹ್ನ #

  ವಿಕಾಸು ಮತ್ತೆ ನಮ್ಮ ವಿಜಯರಾಜ್ ಜೀ…ನೀವು ಯಾವತ್ತಾದರು ಇದು ಸರಿ ಇಲ್ಲ ಅಂತ ಹೇಳಿದ ಉದಾಹರಣೆ ಇಲ್ಲ ಬಿಡಿ

  ಶೆಟ್ರೆ..ನೀವ್ ಮೆಚ್ಚಿದ್ದೀರಿ ಅನ್ನೋದೆ ಮತ್ತೆ ಇನ್ನು ಬರಿಬೇಕು ಅನ್ನುವ ಹಾಗೆ ಮಾಡುತ್ತೆ 🙂

 11. prashanth .... funny guy... ಅಕ್ಟೋಬರ್ 15, 2008 at 6:02 ಫೂರ್ವಾಹ್ನ #

  thumba chennagide kano….

 12. ಅಹರ್ನಿಶಿ ಅಕ್ಟೋಬರ್ 15, 2008 at 6:08 ಫೂರ್ವಾಹ್ನ #

  ಸೋಮು,
  ಚೆನ್ನಾಗಿವೆ.

 13. ವೈಶಾಲಿ ಅಕ್ಟೋಬರ್ 15, 2008 at 2:22 ಅಪರಾಹ್ನ #

  ಚಂದಕ್ಕಿದೆ… ತುಂಬ ತುಂಬ ಇಷ್ಟವಾಯ್ತು……

 14. Tejaswini ಅಕ್ಟೋಬರ್ 19, 2008 at 7:06 ಫೂರ್ವಾಹ್ನ #

  ಹೆಸರಿನ ಹಂಗಿಲ್ಲದ ಹನಿಗಳೆಲ್ಲಾ ತುಂಬಾ ಚೆನ್ನಾಗಿವೆ. ಮೊದಲ ಹಾಗೂ ಮೂರನೆಯ ಹನಿಗಳು ಮತ್ತೂ ಇಷ್ಟವಾದವು. ಬರೆಯಿತ್ತಿರಿ.

  -ತೇಜಸ್ವಿನಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: