ನಿನ್ನ ಮುಡಿಗೆ ಮಲ್ಲಿಗೆ ಮುಡಿಸುವಾಸೆ..

16 Oct

ಟೊಕ್ಕಿ…..ಇದು ನಾನು ಬರೆಯುತ್ತಿರುವ ಮೊದಲ ತೊದಲ ಪತ್ರ.ನಾನು ಸುಳ್ಳು ಹೇಳುತ್ತಿದ್ದೀನಿ ಟೊಕ್ಕಿ, ನಂಬಬೇಡ ನನ್ನ.. ನಾನು ಬರೆದು ನಿನಗೆ ಕಳಿಸಲಾಗದ ಅಸಂಖ್ಯಾತ ಪತ್ರಗಳಲ್ಲಿ ಇದು ಒಂದು ಪತ್ರವಾಗದೇ ಇದ್ದರೆ ಸಾಕು ಟೊಕ್ಕಿ. ಜನ ನಗ್ತಾರೆ ಕಣೆ, ಕಾಲೇಜ್ ಹುಡುಗ ನಾನು.ನನ್ನ ರೂಮು ಯಾವ್ ತರ ಇರಬೇಕು ಹೇಳು? ಹಾಲಿವುಡ್ ಬಾಲಿವುಡ್ ಚಿತ್ರಗಳ ಅಮಲು ಅಮಲು ನಟಿಯರ ಗೋಡೆ ಚಿತ್ರಗಳು? ಪೋಲಿ ಗೆಳೆಯರು ಕದ್ದುಮುಚ್ಚಿ ಕೊಟ್ಟಂತ ನೀಲಿ ನೀಲಿ ಪೀಡೆ ಚಿತ್ರಗಳ ಜೊಲ್ಲು ಜೊಲ್ಲು ಸೀಡಿಗಳು? ಇಲ್ಲ ಟೊಕ್ಕಿ ಅದಕ್ಕೆ ಹೇಳಿದ್ದು ಜನ ನಗ್ತಾರೆ ಕಣೆ ಅಂತ. ಕೇಳಿಲ್ಲಿ ನೀನು ನನಗೆ ಮೊದಲು ಮೊದಲು ತೊದಲುತ್ತ ಕೊಟ್ಟು ಜಿಂಕೆಮರಿಯಂತೆ ಓಡಿಹೋದೆಯಲ್ಲ ಅದೇ ಪುಟಾಣಿ ನವಿಲುಗರಿ, ನನ್ನ ದೇವರ ಮನೆಯಂತ ಪುಟಾಣಿ ಕೋಣೆಯಲ್ಲಿ ಬೆಚ್ಚಗೆ ಕುಳಿತಿದೆ. ಮತ್ತೆ ನಾನು ಇದುವರೆಗು ಬರೆದು ನಿನಗೆ ಕಳಿಸಲಾಗದ ಒಟ್ಟು ನೂರ ನಲವತ್ತೆರೆಡು ಪತ್ರಗಳು ನಿನ್ನ ನವಿಲುಗರಿ ಜೊತೆಯಲ್ಲಿ ಕುಳಿತಿವೆ. ಇದು ನನ್ನ ನೂರ ನಲವತ್ತಮೂರನೆಯ ಪತ್ರ.. ಟೊಕ್ಕಿ ಐ ವ್ ಯು ಕಣೆ. ದೇವರ ಚಿತ್ರದ ಪಕ್ಕದಲ್ಲಿಯೆ ನಾನು ಕದ್ದು ಮುಚ್ಚಿ ತೆಗೆದ ನಿನ್ನ ಚಿತ್ರ ದೇವರಿಗೆ ಪೈಪೋಟಿ ಹೊಡೆಯುವಂತೆ ಕುಳಿತಿದೆ. ಬೆಳಗ್ಗೆ ಎದ್ದು ಯಾರ ಮುಖ ನೋಡಲೀ ಅಂತ ತಳಮಳ ಶುರುವಾಗುತ್ತೆ. ಕೋಪ ಬೇಡ ಕಣೆ ನಾನು ದೇವರ ಮುಖವನ್ನೆ ಮೊದಲು ನೋಡೋದು. ಯಾಕಂದ್ರೆ ಜೀವನ ಪೂರ್ತಿ ನಿನ್ನ ಪುಟಾಣಿ ಮುಖವನ್ನ ನೋಡುತ್ತ ಇರಬೇಕಲ್ಲವ ನಾನು? ಅದಕ್ಕೆ ಆ ದೇವರ ದಯೆ ಬೇಕಲ್ವ ಟೊಕ್ಕಿ?

.
.ಯಾಕೊ ಗೊತ್ತಿಲ್ಲ ಇವತ್ತು ದೇವಸ್ಥಾನಕ್ಕೆ ಹೋಗ್ಲೆಬೇಕು ಅನ್ನಿಸ್ತು ಗೊತ್ತ. ಅದು ಗಾಳಿಆಂಜನೇಯನ ಸನ್ನಿಧಿ. ಪೂರ್ತಿ ಏಳು ಸುತ್ತು ಹೊಡೆದೆ. ಅದರರ್ಥ ನಿನ್ನ ಜೊತೆ ಏಳು ಹೆಜ್ಜೆ ಹಾಕಬೇಕು ಅಂತನ? ಅಥವ ಏಳು ಜನುಮಗಳಲ್ಲೂ ನೀನು ನನ್ನ ಪ್ರೀತಿಯ ಗುಬ್ಬಚ್ಚಿ ಹುಡುಗಿ ಅಂತಾನ? ಗೊತ್ತಿಲ್ಲ ಟೊಕ್ಕಿ ನನಗೆ. ಈ ಏಳು ಹೆಜ್ಜೆಗಳಲ್ಲಿ ನಂಬಿಕೆ ಇಲ್ಲ ಕಣೆ. ನನ್ನ ಜೀವನದಲ್ಲಿ ನಾನು ಇಡುವ ಪ್ರತಿ ಹೆಜ್ಜೆಯಲ್ಲೂ ನಿನ್ನದೊಂದು ಹೆಜ್ಜೆ ಜೊತೆಯಾಗಿರುತ್ತೆ, ಜೊತೆಯಾಗಿರಬೇಕು. ಅದೇನದು ಏಳು ಜನ್ಮ? ಈ ಜನುಮದಲ್ಲಿ ನನ್ನ ಜೊತೆಯಿರಬೇಕು ನೀನು ಕೊನೆಯವರೆಗು. ಇನ್ನು ಉಳಿದ ಎಲ್ಲಾ ಜನುಮಗಳಲ್ಲು ನಾನು ನಿನ್ನ ಜೊತೆ ಇರ್ತೀನಿ..ಇಷ್ಟು ಸಾಕಲ್ವ. ಅದೇನೋ ಆಂಜನೇಯನಂತ ಅಜನ್ಮ ಬ್ರಹ್ಮಚಾರಿಗೆ ಮತ್ತು,ನಿನ್ನ ಜೊತೆ ಮದುವೆಯಾಗಿ ಡಜನ್ ಡಜನ್ ಪಾಪುಪುಟಾಣಿಗಳನ್ನ ಮುದ್ದಾಡುವ ಯೋಜನೆ ಹಾಕಿಕೊಂಡಿರುವ ನನ್ನಂತವನ ಪ್ರಾರ್ಥನೆ ಇಷ್ಟವಾಯಿತು ಅನ್ನಿಸುತ್ತೆ ಬಲಗಡೆಯ ಪ್ರಸಾದ ಕಣೆ. ಅಷ್ಟೆ ಅಲ್ಲ ಬರುವಾಗ ಮೊಳಗುತ್ತಿದ್ದ ಘಂಟೆಯ ಸದ್ದಿನಲ್ಲಿ ಯಾವುದೋ ಪ್ರೇಮಗೀತೆಯ ಘಮ ಸುಮ

.
ಈ ಸಲ ಖಂಡಿತ ಮಿಸ್ಸ್ ಮಾಡೋದೆ ಇಲ್ಲ ಈ ಪತ್ರವನ್ನ ನಿನಗೆ ತಲುಪಿಸ್ತೀನಿ. ಹೊಳೆದಂಡೆಯ ಪಕ್ಕದಲ್ಲಿರುವ ಮಲ್ಲಿಗೆ ತೋಟದ ಹತ್ರ ಬರ್ತೀಯ ಅಲ್ವ ನೀನು? ಆ ಮಾರಮ್ಮನ್ ತರ ಸೀರೆ ಸುತ್ತಿಕೊಂಡು ಬರಬೇಡ ನೋಡು ನನಗೆ ಇಷ್ಟ ಅಗಲ್ಲ. ನಿನಗೆ ಕಪ್ಪು ಚೂಡಿ ತುಂಬಾ ಒಪ್ಪುತ್ತೆ. ಮೊದಲು ತಲೆಗೆ ಹರಳೆಣ್ಣೆ ಹಾಕೋದು ಕಮ್ಮಿ ಮಾಡು. ಮತ್ತೊಂದು ವಿಷ್ಯ ಈ ಸಲ ತಲೆ ತುಂಬ ಹೂವು ಮುಡಿದುಕೋಂಡು ಬರಬೇಡ. ನಿನಗೇ ಅಂತಾನೆ ಮಲ್ಲಿಗೆ ತೋಟದಲ್ಲಿ ಮೊಗ್ಗುಗಳನ್ನ ಕದ್ದು ತೆಗೆದಿಟ್ಟುಕೊಂಡಿರುತ್ತೇನೆ.ಮಲ್ಲಿಗೆ ಮೊಗ್ಗುಗಳ ಮಾಲೆ ಮಾಡಿ ನಾನೆ ನಿನಗೆ ಮುಡಿಸಬೇಕು ಅಂತ ತುಂಬಾ ಇಷ್ಟ ಕಣೆ. ಅಷ್ಟೆ ಅಲ್ಲ ನನ್ನ ನೂರ ನಲವತ್ತಮೂರು ಪತ್ರಗಳನ್ನು ನಿನ್ನ ಮಡಿಲಲ್ಲಿ ಓದಿ ಒದಿ ಹೇಳಬೇಕು. ನೀನು ಇಷ್ಟಗಲ ಕಣ್ಣರಳಿಸಿ ನೋಡೊದನ್ನ ನನ್ನ ಪುಟಾಣಿ ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು. ಬರ್ತೀಯ ಅಲ್ಲವೇನೆ?
ನಿನ್ನ ಚೋಮು

Advertisements

15 Responses to “ನಿನ್ನ ಮುಡಿಗೆ ಮಲ್ಲಿಗೆ ಮುಡಿಸುವಾಸೆ..”

 1. ಸಂದೀಪ್ ಕಾಮತ್ October 16, 2008 at 10:35 am #

  ಟೊಕ್ಕಿ !ಆಹಾ ಚನ್ನಾಗಿದೆ ಹೆಸರು:)

 2. hema October 16, 2008 at 10:56 am #

  photo dallirodu mallige alla lo kakada hoovu…. 😉

 3. ವೈಶಾಲಿ October 16, 2008 at 1:03 pm #

  ಚೋಮು ನಿಂದ ಹಿಂಗೆಲ್ಲ ಪತ್ರ ಬಂದ್ರೆ ಆ ಹುಡುಗಿ ಪತ್ರ ಓದ್ತಾ ಓದ್ತಾ ಬರೋದನ್ನೇ ಮರ್ತು ಬಿಡ್ತಾಳೆನೋ ! ಬಂದ್ಮೇಲೆ ವಾಪಸ್ ಅಂತೂ ಹೋಗಲ್ಲ!
  ಟೊಕ್ಕಿ! ಆಹಾ! ಸೂಪರ್ ಆಗಿದ್ಯಪ್ಪಾ ಹೆಸರು 🙂

 4. navilugari October 16, 2008 at 1:25 pm #

  sandeep thyaaaanksu……

  hema…hooovu hooove…yaake hoovallu bedabhaava hudukteeri neevella?

 5. navilugari October 16, 2008 at 1:27 pm #

  vaishaaali ……..kaadu kaadu sakaaytu aval barle illa..:( so yaak barlilla anta mattondu letter bariteeeni oke na? patra mjecchiddakke thyaanks….

 6. ಅಹರ್ನಿಶಿ October 16, 2008 at 2:46 pm #

  ಸೋಮು,
  ನಿನ್ನ ಲವ್ ಚೀಟಿ ಯನ್ನ ಓದಿದೆ,ನ೦ತರ ನೆನಪಿನಲ್ಲಿ ಉಳಿದದ್ದು ಒ೦ದೇ “ಟೊಕ್ಕಿ”.ಆಹಾ ಎ೦ತಹ ಹೆಸರು.ಇದು ಪೂರ್ತಿ ಹೆಸರಾ,ಅರ್ಧ ಹೆಸರಾ,ಅರ್ಧರ್ಧ ಹೆಸರಾ?ಟೊಕ್ಕಿ ಯ ಪೂರ್ತಿ ಹೆಸರೇನಿರಬಹುದು ಎ೦ದು ತಲೆ ಕೆರೆದುಕೊ೦ಡು ಕುಳಿತಿರುವೆ,ನನ್ನ ತಲೆ ಹುಣ್ಣಾಗುವ ಮೊದಲು ಹೇಳಿಬಿಡೋ ಚೋಮು.

 7. navilugari October 16, 2008 at 3:35 pm #

  idu pet name.heheheh full details beku andre just mail madi helteeni shreedhara swamigale 😉

 8. ಸಂದೀಪ್ ಕಾಮತ್ October 17, 2008 at 5:35 am #

  ಗೆಳೆಯ ಗೆಳತಿಯರಿಗೆ ಚಂದದ ಹೆಸರಿಡಬೇಕೇ ಸಂಪರ್ಕಿಸಿ Mr .Somu1

 9. Ravichandra.manjunath October 17, 2008 at 10:10 am #

  ಮಲ್ಲಿಗೆ ಮೊಗ್ಗುಗಳ ಮಾಲೆ ಮಾಡಿ ನಾನೆ ನಿನಗೆ ಮುಡಿಸಬೇಕು ಅಂತ ತುಂಬಾ ಇಷ್ಟ ಕಣೆ. ,

  Mr. Somu really its very good story …. nevu barederuva aa anjyaneya swamy temple and its prasadam and mallige thota and the above sentence , its really nana manasenalli nati adarenda nanu nemma tharaha story bareya bekandedenne .. adake neve suprti somu …

  Somu really I love u r story and i like it…..

  Hava a nice day 4 u ……….
  Bye bye

 10. rajarajeshwari October 18, 2008 at 3:57 pm #

  super story soma , edu nijavada story nenappa?

 11. A.N. Raju December 15, 2008 at 10:09 am #

  ಮತ್ತೆ ನಾನು ಇದುವರೆಗು ಬರೆದು ನಿನಗೆ ಕಳಿಸಲಾಗದ ಒಟ್ಟು ನೂರ ನಲವತ್ತೆರೆಡು ಪತ್ರಗಳು ನಿನ್ನ ನವಿಲುಗರಿ ಜೊತೆಯಲ್ಲಿ ಕುಳಿತಿವೆ. ಇದು ನನ್ನ ನೂರ ನಲವತ್ತಮೂರನೆಯ ಪತ್ರ.. ಟೊಕ್ಕಿ ಐ ವ್ ಯು ಕಣೆ. WA!. NIJA KANRI E MANASE HAGE MANASINA MATU HELYKE DAIRYA NE BARULU. ADU 140 PATRA ERALI ATAVA 1140 PATRA ERALI AGUDE ELA KANRI. PLZ NIVU MATRA DAIRYA MADI NIMA PRITI KALEDU KOLU MADALU.

 12. ranjitha December 24, 2008 at 1:02 pm #

  Hi,
  nina love chiiti thumba chenangide chomu
  mathe hudgi haralene hakidre ningeno kasta ??????

 13. Vishwa January 10, 2009 at 9:19 am #

  Soma,

  Nijavagiyoo nanu tumba dina miss madikonde nimma…….evattu sikkitu nanage nimma blog na vilasa,,,,

  nijavagiyoo,,,,,,,,,,great neevu..nijavagiyoo neevu preetiyalli sotiddira nanna tara…….nanna katene yaro helida hage ettu…..

  Tumba thanks nimage, nanna haleya nenapugalige jeeva kotidakke….

 14. shruthi February 10, 2009 at 9:12 am #

  ಚೋಮು ನೀನು ಆದಷ್ಟು ಬೇಗ ನಿನ್ನ ೧೪೩ ಪತ್ರಗಳನ್ನು ಅವರಿಗೆ ಓದಿ ಹೇಳು…..ಆ ದಿನ ಬೇಗ ಬರಲಿ ಎಂದು ಹಾರೈಸುತ್ತೇನೆ..

 15. Pavithra April 16, 2009 at 9:56 am #

  Nimma patra mallige hoovina hage ide.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: