ನಾನು ಕಪ್ಪಿದ್ದೀನಿ ಅಂತ ನೀನು ನೋ ಅಂತಿದ್ದೀಯ?

18 ಆಕ್ಟೋ

ಟೊಕ್ಕಿ..
ನೀನು ತುಂಬಾ ಕೆಟ್ಟವಳು. ಆದ್ರೂ ತುಂಬಾ ತುಂಬಾ ಒಳ್ಳೆಯವಳು. ಕೊನೆಗೂ ನೀನು ಮಲ್ಲಿಗೆ ತೋಟಕ್ಕೆ ಬರಲಿಲ್ಲ.ನನ್ನ ಮಲ್ಲಿಗೆಯ ಮಾಲೆ ಮುಡಿಯಲಿಲ್ಲ.ನನ್ನ ಎಲ್ಲಾ ಪತ್ರಗಳನ್ನ ಕಣ್ಣರಳಿಸಿ ಕೇಳಲಿಲ್ಲ. ನಾನದನ್ನ ಕಣ್ಣಲ್ಲಿ ತುಂಬಿಕೊಳ್ಳಲಿಲ್ಲ. ನಿನ್ನನ್ನ ಅಷ್ಟು ಸನಿಹದಿಂದ ನೋಡಿ ತಣಿಯುವ ನನ್ನ ಹೃದಯದ ಆಸೆ ಕೊನೆಗೂ ಈಡೇರಲಿಲ್ಲ. ಟೊಕ್ಕಿ ಕೇಳಿಲ್ಲಿ ಮಲ್ಲಿಗೆಯ ಮೊಗ್ಗುಗಳ ಮಾಲೆ ಮಾಡಿ ಹಿಡಿದಿಟ್ಟುಕೊಂಡಿದ್ದ ನನ್ನ ಕೈಗಳೂ ಸೋಲಲಿಲ್ಲ. ನಿನ್ನ ಬರುವಿಕೆಗೆ ಆಸೆಗಣ್ಣಿನಿಂದ ಸಂಜೆ ಸೂರ್ಯಾಸ್ತಮಾನದವರೆಗೂ ಕಾದ ನನ್ನ ಕಾಲುಗಳು ನೋಯಲಿಲ್ಲ ಕಣೆ. ಕೇವಲ ಕಾಲವೆಂಬುದು ನನ್ನ ಮುಂದೆ ಸತ್ತು ಮಲಗಿತು ಅಷ್ಟೆ . ನೀನು ಬರುವ ದಿನ ಸೂರ್ಯ ನಾನೇನು ಅವನ ಅಜನ್ಮ ಶತ್ರುವೇನೋ ಅನ್ನುವಂತೆ ನನ್ನ ಜೊತೆ ಕ್ರೂರವಾಗಿ ನಡೆದುಕೊಂಡ. ಎಂದಿನಂತೆ ತನ್ನ ಗಂಟುಮೂಟೆಕಟ್ಟದೆ ಕೊಂಚ ತಡವಾಗಿಯೆ ಮುಳುಗಿ ತನ್ನ ಹೋದ ಜನ್ಮದ ಕೊಪ ತೀರಿಸಿಕೊಂಡನೇನೊ…!

ಸೋಮಾರಿ ಕಣೆ ನಾನು. ಜಗತ್ತು ದಿನದ ತನ್ನರ್ದ ಕೆಲಸ ಮುಗಿಸಿದ ಮೇಲೇನೆ ಈ ನಿನ್ನ ಕಪ್ಪು ಬಣ್ಣದ ಹುಡುಗ ಹಾಸಿಗೆ ಬಿಟ್ಟು ಮೇಲೇಳುತ್ತಿದ್ದಿದ್ದು. ನೀನು ನಂಬಲ್ಲ ಕಣೆ ನಿನಗೆ ಮಲ್ಲಿಗೆಯ ಮುಡಿಸುವ ದಿನ ಬೆಳಗ್ಗೆ 6 ಕ್ಕೆ ಎದ್ದವನೇ ಸ್ನಾನ ಮಾಡಿ ವಾರ ಪೂರ್ತಿ ಸ್ನಾನ ಮಾಡದೆ ಇದ್ದ ಸೇಡು ತೀರಿಸಿಕೊಂಡೆ. ಯಾವತ್ತು ಬಾಚಣಿಗೆಯ ಮುಖವನ್ನೇ ಕಾಣದ ನನ್ನ ಮೂರು ಮತ್ತೊಂದು ಕೂದಲುಗಳಿಗೆ ಬಾಚಣಿಗೆಯ ದರ್ಶನ ಮಾಡಿಸಿದೆ. ಕನ್ನಡಿಗೆ ತುಂಬಾ ದಿನಗಳ ನಂತರ ನನ್ನ ಕಪ್ಪು ಕಪ್ಪು ಮುಖದ ಸಂದರ್ಶನ ಕೊಟ್ಟೆ. ಪೌಡರ್ ಹಚ್ಚಿದ್ದೇನು, ಹುಬ್ಬು ಕುಣಿಸಿದ್ದೇನು, ಮೆಲ್ಲಗೆ ನನ್ನಷ್ಟಕ್ಕೆ ನಕ್ಕಿದ್ದೇನು, ಕಲರ್ ಕಲ್‌ರ್ ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆಗಳ ಹುಡುಕಿದ್ದೇನು? ಮನೆಯಲ್ಲೇ ಇರುವ ದೇವರಿಗೆ ೭ ಸುತ್ತು ಕಮ್ಮಿ ಆಗುತ್ತೆ ಅಂತ ೧೪ ಸುತ್ತು ಸುತ್ತಿದ್ದೇನು? ಇಷ್ಟೆಲ್ಲ ಹುಚ್ಚಾಟಗಳ ಮರೆಯಲ್ಲಿ ನಿಂತು ಗಮನಿಸುತ್ತಿದ್ದ ನನ್ನ ತುಂಟ ಅಕ್ಕನೆದುರು ನಾಚಿಕೆಯಿಂದ ಹಲ್ಕಿರಿದು ತಲೆ ತಗ್ಗಿಸಿದ್ದೇನು?.. “ ಏನೋ ಕರಿಯ ವಿಷಯ” ಅಂತ ಅಕ್ಕ ಕೇಳಿದರೆ ಅಷ್ಟೆ ತುಂಟದನದಿಂದ “ಅಕ್ಕ ಟೊಕ್ಕಿ ಇವತ್ತು ಸಿಗ್ತಾಳಂತೆ ಹೋಗ್ಲ?” ಅಂತ ಕೇಳಿ ಮತ್ತೆ ಹಲ್ಕಿರಿದಿದ್ದೇನು?..

ನೋಡು ನಾನು ಅಷ್ಟೊಂದು ಆಸೆ ಇಟ್ಕೊಂಡು ಬಂದಿದ್ದೆ ನೀನು ಇಷ್ಟೊಂದು ನಿರಾಸೆ ಮಾಡಿಬಿಟ್ಟೆ. ಏನು ನಾನು ಕಪ್ಪಗಿದ್ದೀನಿ ಅಂತ ನ? “ಕರಿಯ ಐ ಲವ್ ಯೂ” ಅಂತ ಹಾಡು ಹೇಳಬಹುದಲ್ವ? ಕಪ್ಪು ಕಸ್ತೂರಿ ಕಣೆ ಟೊಕ್ಕಿ ಮರಿಬೇಡ. ನನಗೆ ಕೋಪ ಬಂದಿದೆ ನಿನ್ ಮೇಲೆ . ನಿನ್ನ ಡುಮ್ಮಿ ಅಂತೀನಿ. ಬೇಜಾರ್ ಆಗ್ತೀಂii? ಬೇಡ ಕಣೆ ನೀನ್ ಬೇಜಾರ್ ಆದ್ರೆ ನಾನ್ ಮಗು ತರ ರಚ್ಚೆ ಹಿಡಿದು ಅತ್ತುಬಿಡ್ತೀನಿ. ನನ್ ಜೊತೆ ಮಾತು ಬಿಡ್ತೀಯ? ನಾನೆ ಮುದ್ದು ಮಾಡಿ ಮಾತಾಡುಸ್ತೀನಿ. ಯಾವತ್ತು ನಿನ್ನ ಡುಮ್ಮಿ ಅನ್ನಲ್ಲ ಪ್ರಾಮಿಸ್ ಪ್ರಾಮಿಸ್.॒…………………………………….ಡುಮ್ಮಿ

ಸರಿ ಆ ಮಲ್ಲಿಗೆಯ ತೋಟಕ್ಕೆ ಯಾರೋ ಮಾಟ ಮಾಡಿಸಿದ ಹಾಗಿದೆ ಅಲ್ಲಿ ಬೇಡ. ನೀನು ನಮ್ಮ ಗಾಳಿ ಆಂಜನೇಯನ ಗುಡಿ ಹತ್ರಾನೆ ಬಾ. ಮೊದಲೇ ಹೇಳಿದ್ದೀನಿ ಸೀರೆ ಸುತ್ತಿಕೊಂಡು ಬರಬೇಡ ಹರಳೆಣ್ಣೆ ನಿನ್ನ ತಲೆಯಲ್ಲಿ ಇರಲೇ ಕೂಡದು..ನನಗೆ ಗೊತ್ತು ನೀನು ಕಳ್ಳಿ ತಲೆಗೆ ಹೂವು ಮುಡಿದುಕೊಂಡು ಬರೊದಿಲ್ಲ ಅಂತ. ಹೇಗಿದ್ರು ನಾನು ಮುಡಿಸ್ತೀನಿ ಅಲ್ಲವ?

ಈ ಸಲ ಬರ್ಲೇ ಬೇಕು ಇಲ್ಲ ಅಂದ್ರೆ ತುಂಬ ಕೋಪ ಬರುತ್ತೆ ಪ್ರೀತಿಯಿಂದ..

ಅದೇ ನಿನ್ನ
ಸಕತ್ ಕರಿಯ

Advertisements

10 Responses to “ನಾನು ಕಪ್ಪಿದ್ದೀನಿ ಅಂತ ನೀನು ನೋ ಅಂತಿದ್ದೀಯ?”

 1. rvichandra ಅಕ್ಟೋಬರ್ 18, 2008 at 9:01 ಫೂರ್ವಾಹ್ನ #

  modlu tokki malge totakke baa anta letter bardiri eega yake baralilla anta tumba istavago tara baredri…matte mundina patradalli..tokki banda mele enaaytu anta bariri oke ne?

 2. ಅನಾಮಿಕ ಅಕ್ಟೋಬರ್ 18, 2008 at 3:51 ಅಪರಾಹ್ನ #

  haha olle kathe soma , halli sogadina kathe

 3. rajarajeshwari ಅಕ್ಟೋಬರ್ 18, 2008 at 3:52 ಅಪರಾಹ್ನ #

  haha olle halli sogadina kathe. love is blind

 4. ತವಿಶ್ರೀ ಅಕ್ಟೋಬರ್ 19, 2008 at 4:14 ಫೂರ್ವಾಹ್ನ #

  ನಾ ಕರಿಯನೆಂದು ನೀ
  ಜರಿಯಬೇಡ ಬಿಳಿ
  ಗೆಳತಿ ಗರ್ವದಿಂದ ಕಪ್ಪಿಗಿಂತ
  ಬಿಳಿ ಬಣ್ಣ ಹೆಚ್ಚು ಬೇರಾವ ಹಿರಿಮೆಯಿಂದ 🙂

 5. Ravichandra.manjunath ಅಕ್ಟೋಬರ್ 19, 2008 at 5:29 ಫೂರ್ವಾಹ್ನ #

  Dear Chommu ,

  don’t worry chommu, nemma tokki bandee baruthale , adare galli anjaneya temple ge alla,
  chommu nevu barederuva ee love letter really good and in 1st letter allai tokki malge totakke baa anta letter bardiri eega in 2nd letter allai yake baralilla anta tumba istavago tara baredri

  might be 3rd letter nalli nemma tokki ………………………………..

  nanu helalla neve next letter bareeeeeeee……
  cya

 6. ವೈಶಾಲಿ ಅಕ್ಟೋಬರ್ 20, 2008 at 10:44 ಫೂರ್ವಾಹ್ನ #

  ಕಾಲವೆಂಬುದು ನನ್ನ ಮುಂದೆ ಸತ್ತು ಮಲಗಿತು ಅಷ್ಟೆ …..wah!

 7. Prafull ಅಕ್ಟೋಬರ್ 22, 2008 at 5:43 ಫೂರ್ವಾಹ್ನ #

  Papu i loveu very much kano why u forget me……….
  “Whenever u go my heart is always runs to u and be wit u chinna
  I LOVE YOU SO MUCH…………………………..

 8. shreenidhids ಅಕ್ಟೋಬರ್ 23, 2008 at 10:21 ಫೂರ್ವಾಹ್ನ #

  ಚಂದ ಬರೀತೀಯ ಮಗ ಇಂತದ್ದೆಲ್ಲ!
  🙂
  ಏನಾದರೂ ಹೊಸ ತರದ್ದು ಬರಿಯೋಕಾಗತ್ತ ನೋಡು… ನೀನು ಬರೀತೀಯ ಮನಸ್ಸು ಮಾಡಿದ್ರೆ!

 9. Shaani ಅಕ್ಟೋಬರ್ 25, 2008 at 3:43 ಅಪರಾಹ್ನ #

  Tokkina thumba sathyisbedappa

 10. Pavithra ಏಪ್ರಿಲ್ 16, 2009 at 10:00 ಫೂರ್ವಾಹ್ನ #

  Very nice Chomu

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: