ಒಂದೆರೆಡು ಸಾಲಿನ ಕತೆಗಳು.

27 Oct

——————————————————————————————–
ಇಲ್ಲಿಗೆ ಅವಳ ನನ್ನ ಕತೆ ಮುಗಿಯಿತೆಂದು ಒಂದು ಹಾಳೆಯಲ್ಲಿ ಬರೆದು ಪೂರ್ಣವಿರಾಮ ಹಾಕಲಿಕ್ಕೆ ಹೋದ ಅಷ್ಟರಲ್ಲಿಯೇ ಪೆನ್ನಿನ್ನ ಇಂಕು ಕಾಲಿಯಾಗಿತ್ತು.
——————————————————————————————–
ಮತ್ತೆಂದೂ ಅವನ ಮುಖ ನೋಡಬಾರದೆಂದು ನೊಂದುಕೊಂಡು ಮನೆಗೆ ಹಿಂದಿರುಗಿದ ಹುಡುಗಿಯ ಮುಖದಲ್ಲೇ ಅವನಿದ್ದ.
——————————————————————————————–
ನೇರ ನಡೆ, ನೇರ ನುಡಿ ನೇರ ಮನಸ್ಸಿನ, ನೇರ ಹೃದಯದ ಹುಡುಗ,,, ಮನೆಯ ಗೋಡೆಯನ್ನ ಪ್ರತಿನಿತ್ಯ ಹಾರುತ್ತಿದ್ದ. ಪಕ್ಕದಲ್ಲಿ ಜೋಯಿಸರ ಮಗಳ ಮನೆಯಿತ್ತು.
——————————————————————————————–
ಕೆಲಸ ಮಾಡದೆ ಸೋಮಾರಿತನದಿಂದ ಮನೆಯಲ್ಲಿ ಕುಳಿತಿದ್ದ ದಡೂತಿ ದೇಹದವನಿಗೆ ಪುಟಾಣಿ ಗಡಿಯಾರ ತನ್ನ ಟಿಕ್ ಟಿಕ್ ಸದ್ದಿನಲ್ಲಿ ಚಡಿಯೇಟು ಕೊಟ್ಟಂತೆ ಭಾಸವಾಗುತ್ತಿತ್ತು.
——————————————————————————————–
ನಿನ್ನನ್ನ ಯಾರೂ ಮುದ್ದಿಸುವುದಿಲ್ಲ ಅಂತ ಗುಲಾಬಿ ಚೆಂಡುಹೂವಿನ ಕಾಲೆಳೆಯುತ್ತಿತ್ತು. ಗುಲಾಬಿ ಕೀಳಲು
ಬಂದ ಮಗು ಕೈಗೆ ಮುಳ್ಳು ಚುಚ್ಚಿ ಅಳುತ್ತಿತ್ತು. ನಾನು ಯಾರನ್ನು ಅಳಿಸುವುದಿಲ್ಲವೆಂದ ಚೆಂಡುಹೂವು ತನ್ನ ಸೇಡು ತೀರಿಸಿಕೊಂಡಿತು.
——————————————————————————————–
ಇವಳ ಜಗತ್ತಿನಲ್ಲಿ ಪ್ರೀತಿ ಪ್ರೇಮಕ್ಕೆ ಮೂರು ಕಾಸಿನ ಕಿಮ್ಮತ್ತಿಲ್ಲ . ಇವಳ ಬದುಕು ಸರಿದಾರಿಗೆ ಬಂದಿದ್ದು ಅವನು ತನ್ನ ದಿಕ್ಕು ಬದಲಿಸಿದ ಮೇಲಂತೆ.
——————————————————————————————–
ತಪ್ಪು ಯಾರದ್ದು ಅಂತ ಜಗಳವಾಡಿದರು.ಕೊನೆಗೂ ಉತ್ತರ ಸಿಗದೆ ಇಬ್ಬರು ತಬ್ಬಿಕೊಂಡರು.
——————————————————————————————–
ಕೊನೆಗು ಅವನದು ಅಂತ ಏನು ಉಳಿಯಲಿಲ್ಲ ಎಂದುಕೊಂಡ ಹುಡುಗಿ ಬಿಕ್ಕಳಿಸುವ ಹೊತ್ತಿಗೆ, ಅವಳ
ಈಮೈಲಿಗಿಟ್ಟ ಅವನ ಹೆಸರಿನ ಪಾಸ್‌ವರ್ಡ್ ಅವಳ ದುಃಖ ಕಮ್ಮಿ ಮಾಡಿತ್ತು.
——————————————————————————————–
ಒಂದು ಕಡೆ ಇವನ ಪ್ರೀತಿ, ಮತ್ತೊಂದು ಕಡೆ ಅವಳ ಪ್ರೇಮವನ್ನ ಒಂದು ತಕ್ಕಡಿಯಲ್ಲಿ ತೂಕಹಾಕಿದರು. ಗಾಬರಿಗೆ ಬಿದ್ದ ತಕ್ಕಡಿ ತೂಗಲೇ ಇಲ್ಲ.
——————————————————————————————–
ತುಂಬಾ ಒಳ್ಳೆ ಹುಡುಗ..ತುಂಬಾ ಸುಳ್ಳು ಹೇಳಿ ಅವಳ ಪ್ರೀತಿಯನ್ನ ಪಡೆದಿದ್ದ. ಈಗ ಒಂದೇ ಒಂದು ಸತ್ಯ ಹೇಳಲಾಗದ ಪರಿಸ್ಥಿತಿಯಲ್ಲಿದ್ದಾನೆ…
———————————————————————————————

(ವಿಜಯ-ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

Advertisements

37 Responses to “ಒಂದೆರೆಡು ಸಾಲಿನ ಕತೆಗಳು.”

 1. appu October 27, 2008 at 1:50 pm #

  waw brother superb , awesome
  nange thumba thumba essta aithu 😉
  all the best

 2. nim mane hudgi... October 27, 2008 at 4:43 pm #

  ಪೂರ್ಣವಿರಾಮ ಹಾಕಲಿಕ್ಕೆ ಹೋದ ಅಷ್ಟರಲ್ಲಿಯೇ ಪೆನ್ನಿನ್ನ ಇಂಕು ಕಾಲಿಯಾಗಿತ್ತು,,,,,ನಾನು ಯಾರನ್ನು ಅಳಿಸುವುದಿಲ್ಲವೆಂದ ಚೆಂಡುಹೂವು,,,,
  bahala mana taaguva salugalu…
  ¸¸.•♥´¨`♥¸¸.•♥´¨`¸¸.•♥´¨`♥¸¸.•♥´¨`

 3. sunaath October 27, 2008 at 6:25 pm #

  ಪ್ರತಿ ಸಾಲಿನಲ್ಲೂ ಖುಶಿ ಕೊಡುವ ಕತೆಗಳು.

 4. ಸಂದೀಪ್ ಕಾಮತ್ October 28, 2008 at 5:32 am #

  ವಿ ಕ ನಲ್ಲಿ ಓದಿದಾಗಲೆ ರಿಮೈಂಡರ್ ಹಾಕಿದೆ ಮಂಗಳವಾರ ಮೊದಲು ಅಭಿನಂದಿಸಬೇಕು ಅಂತ.
  ಸಕ್ಕತ್ ಆಗಿದೆ ಸೋಮು..

 5. ವಿಜಯರಾಜ್ ಕನ್ನಂತ October 28, 2008 at 6:17 am #

  ninne vk nalli odide….. thumbaa cute aagive. especially 5th and 9th are really super

 6. ವೃಕ October 28, 2008 at 8:40 am #

  ಸಕ್ಕತ್ ಸೋಮ….
  ತುಂಬಾ ಚೆನ್ನಾಗಿದೆ.

  ಪಕ್ಕದಲ್ಲಿ ಜೋಯಿಸರ ಮಗಳ ಮನೆಯಿತ್ತು …ಹ್ಹ ಹ್ಹ ಹ್ಹಾ ಸೂಪರ್

 7. Jesh October 28, 2008 at 12:06 pm #

  thumba chennagide…

 8. ವೈಶಾಲಿ October 28, 2008 at 11:42 pm #

  🙂 nice…

 9. ಪಲ್ಲವಿ ಎಸ್‌. October 29, 2008 at 1:03 am #

  ಪ್ರೀತಿಯ ಸೋಮು,

  ”ಒಂದು ಕಡೆ ಇವನ ಪ್ರೀತಿ, ಮತ್ತೊಂದು ಕಡೆ ಅವಳ ಪ್ರೇಮವನ್ನ ಒಂದು ತಕ್ಕಡಿಯಲ್ಲಿ ತೂಕಹಾಕಿದರು. ಗಾಬರಿಗೆ ಬಿದ್ದ ತಕ್ಕಡಿ ತೂಗಲೇ ಇಲ್ಲ”

  ಸೊಗಸಾಗಿವೆ ಈ ಸಾಲುಗಳು.

 10. ಕನ್ನಡಮ್ಮನ ಮುದ್ದಿನ ಮನೆಮಗಳು October 29, 2008 at 12:41 pm #

  ನಿನ್ನನ್ನ ಯಾರೂ ಮುದ್ದಿಸುವುದಿಲ್ಲ ಅಂತ ಗುಲಾಬಿ ಚೆಂಡುಹೂವಿನ ಕಾಲೆಳೆಯುತ್ತಿತ್ತು. ಗುಲಾಬಿ ಕೀಳಲು
  ಬಂದ ಮಗು ಕೈಗೆ ಮುಳ್ಳು ಚುಚ್ಚಿ ಅಳುತ್ತಿತ್ತು. ನಾನು ಯಾರನ್ನು ಅಳಿಸುವುದಿಲ್ಲವೆಂದ ಚೆಂಡುಹೂವು ತನ್ನ ಸೇಡು ತೀರಿಸಿಕೊಂಡಿತು

  manassige tumba ishta vayithu somanna

 11. naveen October 29, 2008 at 1:22 pm #

  ನಿನ್ನನ್ನ ಯಾರೂ ಮುದ್ದಿಸುವುದಿಲ್ಲ ಅಂತ ಗುಲಾಬಿ ಚೆಂಡುಹೂವಿನ ಕಾಲೆಳೆಯುತ್ತಿತ್ತು. ಗುಲಾಬಿ ಕೀಳಲು
  ಬಂದ ಮಗು ಕೈಗೆ ಮುಳ್ಳು ಚುಚ್ಚಿ ಅಳುತ್ತಿತ್ತು. ನಾನು ಯಾರನ್ನು ಅಳಿಸುವುದಿಲ್ಲವೆಂದ ಚೆಂಡುಹೂವು ತನ್ನ ಸೇಡು ತೀರಿಸಿಕೊಂಡಿತು.

  A bird proposed a white rose, in reply the white rose said that I will love you when I will be red. The bird cut his Body and colour the rose red by his blood. Now the Rose loves the Bird but the Bird is no more…..

  see how the rose cheats every one papa haa maguna pakshina saha bidalilla inna haa premigalanu saha bidodilla alva somu…….

 12. skhalana October 29, 2008 at 5:17 pm #

  ತುಂಬಾ ಚೆನ್ನಾಗಿದೆ ಸೋಮಣ್ಣ.

  “ತಪ್ಪು ಯಾರದ್ದು ಅಂತ ಜಗಳವಾಡಿದರು.ಕೊನೆಗೂ ಉತ್ತರ ಸಿಗದೆ ಇಬ್ಬರು ತಬ್ಬಿಕೊಂಡರು.”

  ಜಗತ್ತೇ ಓದಬೇಕಾದ ಸರಳ ಸತ್ಯ ಕಥೆ ಇದು !

 13. sharashchandra kalmane October 29, 2008 at 6:10 pm #

  ಸೋಮು,
  ತುಂಬ ಚನ್ನಾಗಿದೆ. ಇವಗಳನ್ನು ಮೊದಲು ವಿಜಯ ಕರ್ನಾಟಕದಲ್ಲಿ ಓದಿ ನಿಮ್ಮ ಹೆಸರು ನೋಡಿದ ಕೂಡ್ಲೇ ನಿಮ್ಮ ನೆನಪಾಯ್ತು.

 14. navada October 30, 2008 at 11:03 am #

  ಸೋಮು,
  ತುಂಬಾ ಒಳ್ಳೆ ಹುಡುಗ..ತುಂಬಾ ಸುಳ್ಳು ಹೇಳಿ ಅವಳ ಪ್ರೀತಿಯನ್ನ ಪಡೆದಿದ್ದ. ಈಗ ಒಂದೇ ಒಂದು ಸತ್ಯ ಹೇಳಲಾಗದ ಪರಿಸ್ಥಿತಿಯಲ್ಲಿದ್ದಾನೆ…
  ಚೆನ್ನಾಗಿದೆ. ಓದಿ ಖುಷಿಯಾಯಿತು. ಇನ್ನಷ್ಟು ಸಾಲುಗಳು ಬರಲಿ.
  ನಾವಡ

 15. NiTiN muttige October 31, 2008 at 5:38 pm #

  “Namma somu” sanna kathe barediddu tumba santosha.. superb ide… bahala meaning ide…

 16. ಹೇಮಶ್ರೀ October 31, 2008 at 8:18 pm #

  ತುಂಬಾ ತುಂಬಾ ಚೆನ್ನಾಗಿವೆ. ಇನ್ನೂ ಬರೆಯುತ್ತಾ ಇರಿ.

 17. venuvinod November 1, 2008 at 2:35 am #

  ಎರಡು ಸಾಲಿನ ಕಥೆಗಳು ಖುಷಿ ಕೊಟ್ಟವು, ಅದರಲ್ಲೂ
  ತಪ್ಪು ಯಾರದ್ದು ಅಂತ ಜಗಳವಾಡಿದರು.ಕೊನೆಗೂ ಉತ್ತರ ಸಿಗದೆ ಇಬ್ಬರು ತಬ್ಬಿಕೊಂಡರು
  ಈ ಕಥೆ ಬಹಳ ಆಪ್ತ.

 18. Chomi November 3, 2008 at 7:58 am #

  ತಪ್ಪು ಯಾರದ್ದು ಅಂತ ಜಗಳವಾಡಿದರು.ಕೊನೆಗೂ ಉತ್ತರ ಸಿಗದೆ ಇಬ್ಬರು ತಬ್ಬಿಕೊಂಡರು.

  ತುಂಬಾ ಒಳ್ಳೆ ಹುಡುಗ..ತುಂಬಾ ಸುಳ್ಳು ಹೇಳಿ ಅವಳ ಪ್ರೀತಿಯನ್ನ ಪಡೆದಿದ್ದ. ಈಗ ಒಂದೇ ಒಂದು ಸತ್ಯ ಹೇಳಲಾಗದ ಪರಿಸ್ಥಿತಿಯಲ್ಲಿದ್ದಾನೆ…

  iveraDu thumabane chennagidhe and Nija ansostu mansige hathradhallidhe [:)]

 19. Annapoorna Daithota November 4, 2008 at 4:33 pm #

  Chennaagide 🙂

 20. naveen kumar November 5, 2008 at 11:34 am #

  en guru….yerade saalinalli yestondhu vishaya helbittidhiya…….really ameging…..plz give me ur e mail id…..plz plz

 21. ಶ್ರೀ November 5, 2008 at 8:33 pm #

  very very cute:) ಎಲ್ಲಾ ಕತೆಗಳೂ ಇಷ್ಟ ಆದ್ವು

 22. ನವಿಲಗರಿ November 6, 2008 at 6:43 am #

  ಹಾಯ್ ಅಪ್ಪು ಡಿಯರ್ ಅಷ್ಟೋಂದು ಇಷ್ಟ ಆಯ್ತ? ಗುಡ್ ಗುಡ್..

  ತ್ತ್ಯಾಂಕ್ಸು ಗುರುವೇ….

  ನಮ್ ಮನೆ ಹುಡುಗಿ ನಿನಗೇ ಇದೇ ಸಾಲು ಯಾಕ್ ಇಷ್ಟ ಆಯ್ತು ಅಂತ ಕೇಳಬಹುದ? ಯಕೊ ನನಗೆ ಅನುಮಾನ ಬರ್ತಿದೆ… 😉

 23. ನವಿಲಗರಿ November 6, 2008 at 6:44 am #

  ಸಂದೀಪ್ ಸುನಾತ್ ಮತ್ತೆ ವಿಜಯ್ ರಾಜ್ ಜೀ….

  ಮೆಚ್ಚಿದ್ದಕ್ಕೆ ದನ್ಯವಾದ.. 🙂

 24. ನವಿಲಗರಿ November 6, 2008 at 6:46 am #

  ವಕ್ರ…….ಜೆಶ್….ವೈಶಲಿ ಥ್ಯಾಂಕ್ಯು….

  ಪಲ್ಲವಿ…ನನಗೆ ಗೊತ್ತಿತ್ತು ನೀವು ಈ ಪೋಸ್ಟ್ ಗೆ ಕಾಮೆಂಟ್ ಅಂತ ಮಡಿದ್ರೆ ನೀವ್ ಅದೇ ಸಾಲನ್ನ ಇಷ್ಟ ಪಡ್ತೀರಿ ಅಂತ…ನನಗೂ ಅದೋಂದೆ ಸಾಲು ಇಷ್ಟವಗಿದ್ದು..;)

 25. ನವಿಲಗರಿ November 6, 2008 at 6:48 am #

  ಕನ್ನಡಮ್ಮನ ಮುದ್ದಿನ ಮನೆಮಗಳು …ಏನಿದು ಇಷ್ಟುದ್ದ ಇದೆ ನಿಮ್ ಹೆಸರು?

  ನವೀನ್ ಥಾಂಕು ಡಿಯರ್….

  ಸ್ಕಲನಪ್ಪ…ತುಂಬಾ ತುಂಬಾ ಥ್ಯಾಂಕ್ಸಪ್ಪ….

 26. ನವಿಲಗರಿ November 6, 2008 at 6:49 am #

  ಶರಶ್ಚಂದ್ರ ಸರ್..ನೀವ್ ಮೆಚ್ಚಿದ್ದು ತುಂಬಾ ಕುಷಿ ಆಯ್ತು….ಅವಗವಾಗ ನಮ್ ನವಿಲ್ಗರಿ ಕಡೆ ಬರ್ತ ಇರಿ…

  ನಾವುಡ ಗುರುಗಳೇ..ನಿಮ್ ಹಾರೈಕೆ ಹೀಗೆ ಇರಲಿ…

 27. ನವಿಲಗರಿ November 6, 2008 at 6:51 am #

  ನಿತಿನ್, ಹೇಮು ವೇಣುಡಿಯರ್..ನಮ್ ಚೋಮಿ, ನಿಮಗೂ ನಮ್ಮದೂಕಿ ಸಲಾಂ ಸಲಾಂ

 28. ನವಿಲಗರಿ November 6, 2008 at 6:55 am #

  ಅನ್ನಪೂರ್ಣಕ್ಕೋ ಥ್ಯಾಂಕ್ಸಕ್ಕೋ….

  ನವೀನ್ ಸರ್..ನಾನು ನಿಮಗೆ ಮೈಲ್ ಮಾಡ್ತೀನಿ 🙂

  ಶ್ರೀ ಸರ್…ದನ್ಯವಾದ

 29. ಸುಧಾಕರ.ಬಿ November 7, 2008 at 12:35 pm #

  ಹಾಯ್ ಸೋಮು,
  ನಿಮ್ಮ ಎರದು ಸಾಲಿನ ಕತೆಗಳು ತುಂಬಾ ಚೆನ್ನಾಗಿವೆ. ಇಷ್ಡವಾಯಿತು. ತುಂಬ ದಿನವಾಗಿತ್ತು ನಿಮ್ಮ ಬ್ಲಾಗ್ ನೊಡಿರಲಿಲ್ಲ ನೋಡಿ ತುಂಬ ಖುಷಿ ಆಯ್ತು. ಹೀಗೆ ಬರೀತಾ ಇರಿ..
  ನಿಮ್ಮ
  ಸುಧಾಕರ.ಬಿ

 30. nim mane hudgi... November 7, 2008 at 6:52 pm #

  anumaana padoke en ide somu avre nive helidirala……
  “ನವಿಲುಗರಿ ಇದು ಹೃದಯಗಳ ವಿಷಯ..!
  ಕಡ್ಡಾಯವಾಗಿ ಪ್ರೀತಿ, ಪ್ರೇಮ,ವಿರಹ,ನೆನಪು ಮತ್ತು ಬಿಕ್ಕಳಿಕೆಯ ವಾರಸುದಾರರಿಗಾಗಿ ಮಾತ್ರ..!”
  ¸¸.•♥´¨`♥¸¸.•♥´¨`¸¸.•♥´¨`♥¸¸.•♥´¨`

 31. ರಂಜಿತ್ November 9, 2008 at 1:00 pm #

  ಒಂದು ಕಡೆ ಇವನ ಪ್ರೀತಿ, ಮತ್ತೊಂದು ಕಡೆ ಅವಳ ಪ್ರೇಮವನ್ನ ಒಂದು ತಕ್ಕಡಿಯಲ್ಲಿ ತೂಕಹಾಕಿದರು. ಗಾಬರಿಗೆ ಬಿದ್ದ ತಕ್ಕಡಿ ತೂಗಲೇ ಇಲ್ಲ.

  ತುಂಬಾ ಒಳ್ಳೆ ಹುಡುಗ..ತುಂಬಾ ಸುಳ್ಳು ಹೇಳಿ ಅವಳ ಪ್ರೀತಿಯನ್ನ ಪಡೆದಿದ್ದ. ಈಗ ಒಂದೇ ಒಂದು ಸತ್ಯ ಹೇಳಲಾಗದ ಪರಿಸ್ಥಿತಿಯಲ್ಲಿದ್ದಾನೆ…

  ಇದೆರಡೂ ಸೂಪರ್ ಗುರುಗಳೇ…:-)

 32. Basavaraj.S.Pushpakanda November 14, 2008 at 6:21 am #

  nimmade kanusugalige,nimmade krushi sikkare intha erede eredu saalinallu jeeva tumbabhahudu.nimma ananya baravanige tumba santhosha mattu khushi nidide.kathegalu hige saagali.
  time idre nanna blog nodi
  http://pushpakanda.blogspot.com
  matte siguva …..

 33. Seema November 14, 2008 at 9:28 am #

  Tumbaa chennagive.
  Ishta aaytu 🙂

 34. champu March 13, 2009 at 2:58 pm #

  Jus superb

 35. shree October 13, 2009 at 7:14 am #

  super guru….kppe going

 36. shree October 13, 2009 at 7:14 am #

  super guru….keep going

 37. somu October 28, 2009 at 1:49 pm #

  hi somu, kathegalu tumba chennagive…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: