ಕೊನೆಯ ಉಸಿರಿನವರೆಗೂ ನಿನ್ನ ಉಸಿರಾಟ ಕೇಳಿಸಬೇಕು..!

3 Nov

ಟೊಕ್ಕಿ ಪುಟ್ಟುಗೆ.

ಟೊಕ್ಕಿ, ಕೊನೆಗೂ ನಿನ್ನಿಂದಾನೆ ಪತ್ರ ಬರುತ್ತೆ ಅಂತ ಕಾದ ನನ್ನ ಶಬರಿಯಂತ ಮನಸ್ಸಿಗಾದ ಗಾಯಕ್ಕೆ ಸ್ವಲ್ಪಾನೆ ಸ್ವಲ್ಪ ಸಮಾಧಾನದಿಂದಿರಲು ಹೇಳಿ ಪತ್ರ ಬರಿತಿದ್ದೀನಿ. ಪತ್ರ ಬರಿಯೋದಕ್ಕು ಮೊದಲೆ ಹೇಳಿಬಿಡ್ತೀನಿ. ಯಾವತ್ತೂ ಪತ್ರ ಬರಿಬಾರದು ಅಂದುಕೊಂಡ ಷರತ್ತನ್ನು ಗೌರವಯುತವಾಗಿ ಮುರಿತಿದ್ದೀನಿ. ಕೆಲವು ಘಳಿಗೆಗಳಲ್ಲಿ ನಿನ್ನ ನೆನಪುಗಳು ಹೆಗಲೇರುತ್ತವಲ್ಲವ ಅಂತ ಸಮಯದಲ್ಲಿ ನಾನು ಇಂತ ಕಠಿಣ ನಿರ್ದಾರಗಳನ್ನ ತೆಗೆದುಕೊಳ್ಳುವಂತೆ ಮಾಡಿಬಿಡ್ತಾವೆ..ನಿನ್ನ ನನ್ನ ಮುದ್ದು ಮೊಲದಂತಿದ್ದ ಪ್ರೇಮದ ಆಣೆ ಪ್ರಮಾಣಗಳಿಗೆ, ಕವಡೆ ಕಾಸಿನ ಕಿಮ್ಮತ್ತಿರೋದಿಲ್ಲ ಅಲ್ಲವ? ಇಲ್ಲಿಯವಗೆ ನೂರಾರು ಪ್ರಾಮಿಸ್ಸುಗಳನ್ನ ಮಾಡಿದ್ದೀನಿ.ಅಷ್ಟೆ ಸಲ ಅದನ್ನ ಮುರಿದಿದ್ದೀನಿ ಕೂಡ..ಅದೆಲ್ಲ ನಿನ್ನ ಮೇಲಿನ ಪ್ರೀತಿಯ ಸಲುವಾಗಿಯೇ ಅನ್ನೋದು ನಿನ್ನಷ್ಟೆ ಸತ್ಯ ಅಲ್ಲವ? ಪ್ರಾಮಿಸ್ಸುಗಳನ್ನ ಮುರಿಯೋದರಲ್ಲಿ ಕೂಡ ಅದೆಷ್ಟು ಪ್ರೀತಿಯಿರುತ್ತಿತ್ತು ಟೊಕ್ಕಿ?

ಸರಿ ಹೀಗೆಲ್ಲ ತಬ್ಬಿಕೊಳ್ಳೊಲ್ಲ ಅಂದಿದ್ದೆ..ಮರುದಿನವೆ ನಿನ್ನ ಉರಿಸುಗಟ್ಟಿಸಿದ್ದೆ.ಮತ್ಯಾವತ್ತು ನಿನ್ನ ಕೆನ್ನೆ ಕೆಂಪು ಮಾಡೋಲ್ಲ ಅಂದಿದ್ದೆ ಮರುದಿನವೆ ನಿನ್ನ ಕೆಂಪು ಕೆಂಪು ತುಟಿ ಮತ್ತಷ್ಟು ರಂಗು ರಂಗು. ಯಾವತ್ತು ನಿನ್ನ ಕಾಯಿಸೊಲ್ಲ ಅಂದು ನಿನ್ನ ನೆತ್ತಿಮುಟ್ಟಿ ಪ್ರಾಮಿಸ್ ಮಾಡಿದ್ದೆ..ಆದರೆ ಗಂಟೆಗಟ್ಟಲೆ ನೀನು ನನಗಾಗಿ ಚಡಪಡಿಸುತ್ತಾ ಕಾಯೋದನ್ನ ಮರದ ಮೆರೆಯಲ್ಲಿ ನೋಡಿ ಕಣ್ಣೀರಾಗಿದ್ದೆ. ಹೇಳು ನಾನು ಮುರಿದ ಅಷ್ಟೂ ಮಾತುಗಳಲ್ಲಿ ಮುಟಿಕೆಯಷ್ಟಾದರೂ ಪ್ರೀತಿಯಿತ್ತಲ್ಲವ ಟೊಕ್ಕಿ? ಮತ್ಯಾಕೆ ಈಗಿನ ನಿನ್ನ ನಡುವಳಿಕೆ ನನಗೊಂತರ ಬಯ ತರಿಸುತ್ತೆ? ದೂರವಾಗುತ್ತಾಳೆ ಅನ್ನುವ ಕೆಟ್ಟಾನುಕೆಟ್ಟ ಕನಸು ಬೀಳಿಸುತ್ತೆ? ಇಲ್ಲಿವರೆಗೂ ನಿನ್ನಲ್ಲಿ ನಾನಿಟ್ಟ ಪ್ರೀತಿಗೆ ನ್ಯಾಯ ಸಿಗುತ್ತ ಅನ್ನುವ ಪ್ರಶ್ನಾರ್ಥಕ ಚಿನ್ಹೆ ಇದಿರಾಗುತ್ತೆ?

ಟೊಕ್ಕಿ ನೀನು ದೂರವಾಗುತ್ತಿದ್ದಿ….ಆದರೇ ಇಲ್ಲಿ ನಿನ್ನ ಕುರಿತಾದ ಕೆಲವು ಕನಸುಗಳನ್ನ ಈ ಹೃದಯ ಹೆರಿಗೆ ಮಾಡಿಸುತ್ತಲೇ ಇದೆ. ಪ್ರತಿ ಕನಸಿಗು ನೀನು ನನ್ನವಳು ಅಂತ ಸುಳ್ಳೇ ಸಮಾಧಾನ ಮಾಡುತ್ತಾನೆ ಇದ್ದೀನಿ.. ಸರಿ ಬಾ ಇಲ್ಲಿ..! ಮೊದಲು ಹೇಳುತ್ತಿದ್ದೆ ಅಲ್ಲವ ಮೂರು ಹೋಗಿ ಆರಾಗಲಿ..ಆರು ಹೋಗಿ ಮೂರಾಗಲಿ…ನಾವೆಂದಿಗೂ ಒಂದೇ ಕಣೋ ಅಂತ? ಹಾಗಂತ ಇನ್ನೊಂದೇ ಬಾರಿ ಸುಳ್ಳಾದರೂ ಹೇಳಿ ಹೋಗು ಇಷ್ಟು ದಿನದ ನನ್ನ ಯಾತನೆಗೆ ಒಂಚೂರೇ ಚೂರು ?…..ಇಲ್ಲ ಬಿಡು ನೀನು ಹೇಳೋಲ್ಲ ನನಗೆ ಗೊತ್ತಿದೆ..

ಯಾವ ನೋವಾದರೂ ಸಹಿಸಬಹುದು ಪುಟ್ಟ. ಕಾರಣಗಳಿಲ್ಲದೆ ತಿರಸ್ಕಾರ ಅನ್ನುವುದಿದೆಯಲ್ಲ ಅದು ತುಂಬಾ ನೋವು ಕೊಡುತ್ತೆ.ಬೆಟ್ಟದಷ್ಟು ಪ್ರೀತಿಸಿದ್ದೆ..ಅಷ್ಟೆ ಪ್ರೀತಿ ನಿನ್ನಿಂದ ಸಿಕ್ಕಿದೆ ನನಗೆ..ನನ್ನ ದುರಾಸೆ ಅಂದರೇ, ಈ ಉಸಿರು ನಿಲ್ಲುತ್ತದಲ್ಲವ? ಅಲ್ಲಿಯವರೆಗು ನನಗೆ ನಿನ್ನ ಉಸಿರಾಟ ಕೇಳಿಸಬೇಕು ಅನ್ನೋದು ಪ್ಲೀಸ್ ಇಲ್ಲವೆನ್ನಬೇಡ. ಕಾರಣವಿಲ್ಲದೇ ಹೋದವಳು ನೀನು..ಪ್ಲೀಸ್ ಕಾರಣವಿಲ್ಲದ ಮತ್ತೆ ಬಂದುಬಿಡು..ಒಂದೆ ಒಂದು ಮಾತನಾಡದೆ ಹಂಗೆ ತಬ್ಬಿಬಿಡುತ್ತೇನೆ.ಮತ್ತೆ ನಿನ್ನ ಮುಂದೆ ಮಂಡಿಯೂರಿ ಕುಳಿತು ಇಲ್ಲಿ ಎಷ್ಟೂ ಜನುಮಗಳಿದ್ದಾವೊ ಅಷ್ಟೂ ಜನುಮದಲ್ಲೂ ನೀನು ನನ್ನ ಜೊತೆಗಿರು ಅಂದು ಕೇಳಬೇಕು .ಮತ್ತೆ ನಿನ್ನ ತುಟಿಗಳಿಗೆ ರಂಗು ರಂಗು ತುಂಬಬೇಕು, ನಿನ್ನ ಕಾಯಿಸಿ ಕಾಯಿಸಿ ಕಾಡಬೇಕು, ಮತ್ತೆ ನಾನು ನಿನಗೆ ಪ್ರೀತಿಯಿಂದ ಸಾವಿರ ಸಾವಿರ ಆಣೆ ಪ್ರಾಮಾಣಗಳನ್ನ ಮಾಡಬೇಕು ಮತ್ತೆ ಅದೇ ಪ್ರೀತಿಯಿಂದ ಅವೆಲ್ಲವನ್ನು ಮುರಿದುಹಾಕಬೇಕು ಪ್ಲೀಸ್ ಬರ್ತೀಯಲ್ಲವ?

ಅದೇ ನಿನ್ನ ಚೋಮು

Advertisements

7 Responses to “ಕೊನೆಯ ಉಸಿರಿನವರೆಗೂ ನಿನ್ನ ಉಸಿರಾಟ ಕೇಳಿಸಬೇಕು..!”

 1. ಅಹರ್ನಿಶಿ November 5, 2008 at 9:33 am #

  ಸೋಮು,
  ಚೆನ್ನಾಗಿದೆ ಪತ್ರ.ವಿರಹ ವಿಲ್ಲದ ಪ್ರೇಮಪತ್ರದಲ್ಲಿ ಸತ್ವ ವಿಲ್ಲ ಅಲ್ಲವಾ!

  ಹೇಳಿ ಹೋಗು ಕಾರಣ
  ಅ೦ದ ಮಜ್ನು ….
  ಕಾರಣ…
  ಹೀಗೇ ಸುಮ್ಮನೆ
  ಅ೦ದಳು ಲೈಲಾ!
  ಸದಾ ಹತ್ತಿರವೇ ಇದ್ದರೆ
  ವಿರಹದ ಬೇಗೆ ..
  ಅರ್ಥವಾಗುವುದಾದರೂ
  ಹೇಗೆ….

  ಹೆ೦ಗೆ,ಚೋಮು ನಿನ್ನ ನೋಡಿ ನಾನು …ಶುರು ಹಚ್ಚಿಕೊ೦ಡೆ.

 2. Rohini November 11, 2008 at 9:21 am #

  ಟೊಕ್ಕಿ ನೀನು ದೂರವಾಗುತ್ತಿದ್ದಿ….ಆದರೇ ಇಲ್ಲಿ ನಿನ್ನ ಕುರಿತಾದ ಕೆಲವು ಕನಸುಗಳನ್ನ ಈ ಹೃದಯ ಹೆರಿಗೆ ಮಾಡಿಸುತ್ತಲೇ ಇದೆ. ಪ್ರತಿ ಕನಸಿಗು ನೀನು ನನ್ನವಳು ಅಂತ ಸುಳ್ಳೇ ಸಮಾಧಾನ ಮಾಡುತ್ತಾನೆ ಇದ್ದೀನಿ.. ಸರಿ ಬಾ ಇಲ್ಲಿ..! ಮೊದಲು ಹೇಳುತ್ತಿದ್ದೆ ಅಲ್ಲವ ಮೂರು ಹೋಗಿ ಆರಾಗಲಿ..ಆರು ಹೋಗಿ ಮೂರಾಗಲಿ…ನಾವೆಂದಿಗೂ ಒಂದೇ ಕಣೋ ಅಂತ? ಹಾಗಂತ ಇನ್ನೊಂದೇ ಬಾರಿ ಸುಳ್ಳಾದರೂ ಹೇಳಿ ಹೋಗು ಇಷ್ಟು ದಿನದ ನನ್ನ ಯಾತನೆಗೆ ಒಂಚೂರೇ ಚೂರು ?…..ಇಲ್ಲ ಬಿಡು ನೀನು ಹೇಳೋಲ್ಲ ನನಗೆ ಗೊತ್ತಿದೆ..

  yeshtu atu kondu baredidiya somanna helalla antha gotidru yak keltiya? bidu prithi andre ishtena preethi madidmele manassige novu madikollodanna abhyasa madkobeku alva somanna? chennagi baredidiya swanta anubhavisida hage. manadalada matinanthide kano

 3. Annapoorna Daithota November 12, 2008 at 3:40 pm #

  `Tokki’ hesru chennaagide 😀

 4. shrungara November 17, 2008 at 3:32 pm #

  ಓಹ್, ನಿಮ್ಮದೋ ನವಿರಾದ ಮನಸ್ಸಿಗೆ ಸಂಬಂಧಿಸಿದ ವಿಚಾರಧಾರೆ! ನನ್ನದೋ ಸುಂದರ ಸೊಗಸಾದ ದೇಹಗಳಿಗೆ ಸಂಭಂದಿಸಿದ ರೋಮಾಂಚಕ..ನೆವರ್ ಬಿಫೋರ್,,ಅಂತಾರಲ್ಲಾ ಹಾಗಿದೆ

  ನಿಮ್ಮದು ಟೊಕ್ಕಿ ಆದರೆ ನನ್ನದು ಸೊಕ್ಕಿದ ಮೈಗಳ ವಿಚಾರ…

  http://shrungara.wordpress.com/

  ಸ್ವಲ್ಪ ಓದಿ ನೋಡಿ…
  ನಿಮ್ ಗಂಟೇನು ಹೋಗತ್ತೆ?
  ಹಾಗಂದ್ರೆ ಈಗ ಬಯ್ಕೋತೀರೇನೊ?

  ಇತಿ ನಿಮ್ಮ ಸಹೃದಯ ಕತೆಗಾರ

 5. ರಂಜಿತ್ November 24, 2008 at 12:50 pm #

  ಗುರುಗಳೇ,

  ನಿಮ್ಮ ಟೊಕ್ಕಿ ಪುಟ್ಟು ಒಪ್ಪಿಕೊಂಡಳೇ? ಅವಳ ಜತೆ ಇರೋಕ್ಕೆ ಇಷ್ಟು ದೊಡ್ಡ ಲೀವ್ ತಗೊಂಡ್ರೆ ಹೇಗೆ ?
  ಮತ್ತೊಂದು ಪೋಸ್ಟ್ ಪ್ಲೀಸ್…:)

 6. ರಂಜಿತ್ November 24, 2008 at 12:51 pm #

  ಗುರುಗಳೇ,

  ನಿಮ್ಮ ಟೊಕ್ಕಿ ಪುಟ್ಟು ಒಪ್ಪಿಕೊಂಡಳೇ? ಅವಳ ಜತೆ ಇರೋಕ್ಕೆ ಇಷ್ಟು ದೊಡ್ಡ ಲೀವ್ ತಗೊಂಡ್ರೆ ಹೇಗೆ ?

  ಮತ್ತೊಂದು ಪೋಸ್ಟ್ ಪ್ಲೀಸ್…:)

 7. Pavithra April 11, 2009 at 9:36 am #

  Nimma patragalannella odutidda hage nimma kalpanegala kalpaneyalle teli hogutiddineno annisibidutte, nimma bavanegalu, sundaravada kalpanegalu nange tumba ista agutte.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: