ಹೇಮಾ ಮತ್ತು ರಂಜಿತನ “ಹಾಗೇ ಸುಮ್ಮನೆ”

29 Nov

ಕೆಲವೊಂದು ಸಮಯದಲ್ಲಿ ವಾರಪೂರ್ತಿ ಗುಬ್ಬಚ್ಚಿಯ ಹಾಗೆ ಕುಳಿತರೂ ಗುಬ್ಬಚ್ಚಿ ಗಾತ್ರದ ಒಂದು ಪುಟಾಣಿ ಕವನ ಬರಿಯುವುದೂ ಕೂಡ ಒಂದೊಂದು ಸಲ ಅಗದ ಮಾತು..ಆದರೇ ಇಲ್ಲಿ ನನ್ನ ಪ್ರೀತಿಯ ಗೆಳೆಯ “ನೀಲಿಹೂವಿನ” ರಂಜಿತ್ ಮತ್ತು ಗೆಳತಿ “ಹೇಮಾಂತರಂಗದ” ಹೇಮಾ ಹಾಗೆ ಸುಮ್ಮನೆ ಮಾತನಾಡುತ್ತಲೇ ಒಂದು ಶಾಕ್ ಕೊಟ್ಟಿದ್ದಾರೆ..ನನಗಿಷ್ಟ ಆಯ್ತು..ನಿಮಗೂ ಇಷ್ಟವಾಗುತ್ತೆ ಅನ್ನುವ ನಂಬಿಕೆಯೊಂದಿಗೆ ಅವರ ಒಪ್ಪಿಗೆಯನ್ನ ಕೇಳದೇ ಇಲ್ಲಿ ಹಾಕುತ್ತಿದ್ದೇನೆ. ಒಪ್ಪಿಸಿಕೊಳ್ಳಿ..

ಥಾಂಕ್ಸ್ ಹೇಮಾ ಡಿಯರ್ ಮತ್ತು ರಂಜಿತ್
————————————————————————————————
hema:
ದೇಹವಿದೆ ಉಸಿರಿಲ್ಲ,
ಕಣ್ಗಳಿವೆ ನೋಟವಿಲ್ಲ,
ಹೃದಯವಿದೆ ಪ್ರೀತಿಯಿಲ್ಲ,
ಆರ್ಕುಟ್ ಇದೆ…… ಬೇಕಾದವರ ಸ್ಕ್ರಾಪೇ ಇಲ್ಲ
——————————–
Ranjith:
ಏ ಜಂಭದ ಹುಡುಗೀ
ಹೆಚ್ಚಾಗಿವೆ ನಿನ್ನ ಮಾತುಗಳು ಈ ನಡುವೆ,
ಬಾಯಿಗೊಂದು ಬೀಗ ಬೇಕಿವೆ
ಅರ್ಜೆಂಟಾಗಿ ಮಾಡಬೇಕಿದೆ ಮದುವೆ,
ನನ್ನ ಒಂದು ಫೋನ್ ಕಾಲ್ ಸಾಕು ನಿನ್ನಪ್ಪನಿಗೆ,
ಕೂಡಲೇ ನೀನಂದು ವಧುವೇ..:)
—————————-
hema:
ಹೇ ರಂಜಿತ್, ನಿನಗಿದು ತರವೇ,
ಗೆಳೆಯನೆಂದುಕೊಂಡಿದ್ದೆ ನಿನ್ನನ್ನು,
ನನ್ನನ್ನೇ ನೇಣುಗಂಬಕ್ಕೇರಿಸಲು
ಅಣಿ ಮಾಡುತ್ತಿರುವೆ….
—————————-
Ranjith:
ಮದುವೆಗೆ ನೇಣೇಕೆ ಹೋಲಿಕೆ?
ನೂರು ಮಕ್ಕಳ ಜತೆ ಆಟವಾಡಿಕೊಂಡಿರಲು
ಮದುವೆಯೆ ಅಲ್ಲವೆ ಪೀಠಿಕೆ? 😉
ಬೇಗ ನಿನಗೊಂದು ಸಾಥಿ ಸಿಗಲಿ ಎಂಬುದಷ್ಟೇ ನನ್ನ ಆಶಯ,
ಆಗಲೇ ನನ್ನೆದೆಯಲಿ ಕಾಯುತಿದೆ ನಿನಗೊಂದು ಶುಭಾಶಯ…
—————————-
hema:
ಇಂಜಿನಿಯರ್ ಕೆಲಸ ನಿಲ್ಲಿಸಿ,
ಮ್ಯಾಚ್ ಮೇಕರ್ ಕೆಲಸ ಶುರು ಮಾಡಿಬಿಡಿ,
ಜಟ್ ಪಟ್ ಅಂತ ನನಗೊಂದು ಗಂಡು ನೋಡಿಬಿಡಿ,
ವರ್ಷ ವರ್ಷವೂ ಆಟವಾಡಲಿಕ್ಕೆ ನಿಮಗೊಂದು ಪಾಪ
ಇನ್ನೂ ಬರೀಲಿಕ್ಕೆ ನನಗೆ ನಾಚಿಕೆಯಾಗುತ್ತೆ ಹೋಗೀಪಾ……
—————————-
Ranjith:
ಉತ್ತರಿಸಲಾಗದೇ ಬೆವರ್ ಬಂತೆ?
ಪೋವಾರ್ ಮೆದುಳಿಗೆ ಪವರ್ ಹೋಯ್ತೇ?:)
—————————-
Hema:
ಪವರ್ ಬೇರೆ ಬೇಕೆ ರಂಜಿತ್ ಗೆ ಉತ್ತರಿಸಲು?
ಬ್ರಹ್ಮಾಸ್ತ್ರ ಬೇಕೇನು ಗುಬ್ಬಿಯನ್ನು ಸಾಯಿಸಲು?
—————————-
Ranjith:
ಮಾಡಬೇಕು ಕವಿಗಳ ಸಂಗ..
ಬೇಕಿತ್ತೇ ನಿಮಗೆ ಅವರ ಜತೆ ಪಂಗಾ?
—————————-
Hema:
ಪಂಗ ತೆಗೆದರೆ ಅಲ್ಲವೆ ಕವಿತೆಗಳು ಹುಟ್ಟುವುದು,
ನಿಮ್ಮಿಂದ ನಾವು ಕವಿಯತ್ರಿ ಎನಿಸಿಕೊಳ್ಳುವುದು
—————————-
Ranjith:
ಅಂತೂ ಇಂತೂ
ಜಟ್ ಪಟ್ ಆಗಿ
ಮನದಾಸೆ ಹೊರಬಂತು…:)
ನಿಮ್ಮ ಖುಷಿಗಾಗಿ ಆಗುವುದ
ಬಿಟ್ಟು ಇಂಜಿನೀರು,
ಮ್ಯಾಚುಮೇಕರೇನು
ಆಗಬಲ್ಲೆ ಅಡುಗೆ
ಕಾಂಟ್ರಾಕ್ಟರು..
—————————-
hema:
ನಿಮ್ಮನ್ನು ಅಷ್ಟೊಂದು ಕಾಡಿಸಿ ಮಾಡಿಕೊಳ್ಳುವ ಮದುವೆಯಾದರೂ ಯಾಕೆ, ಅಡಿಗರನ್ನು ಅಡಿಗೆ
ಕಾಂಟ್ರಾಕ್ಟರ್ ಆಗಿಸಿ ನಾನೇನು ನರಕಕ್ಕೆ ಹೋಗಬೇಕೆ?
(ಅಂದಹಾಗೆ, ನಾನುಮದುವೆಗೆ ಅವಸರವೆಂದು ಹೇಳಿದೆನೆ?
ಕಾಣದ ಸುಂದರಿಗೆ ಕಾಯುತ್ತಿರುವುದು ನಾನಲ್ಲ ನೀನೆ )
—————————-
Ranjith:
ಹದ್ದನ್ನು ಗುಬ್ಬಿ ಎಂದುಕೊಳ್ಳುವುದು ಮುಗ್ಧತೆ,
ರಂಜಿತ್ ಗೆ ಉತ್ತರಿಸಲು ಒದ್ದಾಡುವುದನು ಬಿಟ್ಟು
ಮಾಡು ನೀ ನಿನ್ನ ಮದುವೆಗೆ ಸಿದ್ದತೆ..:)
—————————-
hema:
ಸಿದ್ದತೆ ಮಾಡಿಕೊಳ್ಳಲೇನಿದೆ ಮದುವೆಗೆ,
ಸಿಂಗಾರ ಬೇಕೇನು ವಧುವಿನಂತೆ ಕಾಣುವ ಹುಡುಗಿಗೆ?
—————————-
Ranjith:
ಕವಿಯತ್ರಿ ಅನ್ನಿಸಿಕೊಳ್ಳಬೇಕಾದ್ರೆ ತೆಗೆಯಿರಿ ಪಂಗ,
ನಿಮ್ಮಾಸೆಗೆ ತರಲಾರೆ ಭಂಗ..
‘ನನ್ನ’ ಗೆಳತಿಯಾಗಿ ಓದುಗರ ಕೈಲಿ
ನೀವನ್ನಿಸಿಕೊಳ್ಳದಿದ್ದರೆ
ಸಾಕು ಮಂಗ..
—————————-
hema:
ನಿಮ್ಮ ಆಶೀರ್ವಾದ ಹೀಗೆ ಇರಲಿ,
ನೀವು ಕಾಲೆಳೆಯುತ್ತೀರಿ ಅಂತಲಾದರೂ ನನ್ನಿಂದ
ಒಂದೆರೆಡು ಕವನಗಳು ಹೊರಬರಲಿ….
—————————-
Ranjith:
ಕಾಣದ ಸುಂದರಿಗೆ ಕಾಯುತಿರುವುದು ನಾನೇ,
ಕಾಯುವೆ ಆಕೆಗೆ, ಬಂದರೆ ಬರಲಿ ಏನೇ…
ನೀವೂ ಬೇಗ ಮದುವೆ ಆದರೆ,
ನಿಮ್ಮ ಮಗನ ಜತೆ ಮಾಡುವೆ
ನನ್ನ ಮಗಳ ಮದುವೆ..:)
—————————-
hema:
ನೀವು ಕಾಯುತಲೇ ಇದ್ದರೆ ಆಕೆಗೆ,
ಆಗುವುದೆಂದು ಮದುವೆ,
ಕಾಯುತ್ತಿರುವ ನನ್ನ ಮಗನಿಗೆ,
ನಿಮ್ಮ ಮಗಳು ಸಿಗುವುದೆಂದು?
ಕಾದು ಕಾದು ದೇವದಾಸನೇ ಆದಾನೇನೋ,
ಅವನೂ ನಿಮ್ಮಂತೆಯೇ ಮುಂದು…
—————————-
Ranjith:
ಸಿಂಗಾರವೇ ಹೆಣ್ಣಿನ ಸೌಂದರ್ಯಕ್ಕೆ ಒಡವೆ..
ವಧುವಿನಂತೆ ಕಾಣುವ ಹುಡುಗಿಯೆ ನಿನಗ್ಯಾಕೆ ಅದರ ಗೊಡವೆ..
ಆದರೆ ಸಿಂಗರಿಸಿಕೊಂಡರೆ,
ಹುಡುಗನ ಕಂಗಳಿಗೆ ಅವಳು
ತುಂಬಿದ ಸೀಸದ ಮದ್ಯವೆ..;-)
—————————-
hema:
ಸೀಸೆ ಮುಗಿಯುವವರೆಗಷ್ಟೆ ನಶೆ,
ವಯಸ್ಸು ಇಳಿಯುವವರೆಗಷ್ಟೇ ಆಶೆ….
—————————-
Ranjith:
ಸೌಂದರ್ಯವೆಂಬುದು ನಶೆ,
ಏರಿದಷ್ಟೇ ವೇಗವಾಗಿ ಇಳಿಯುವುದು..
ಪ್ರೀತಿಯೆಂಬುದು ಕೊಟ್ಟಂತೆ ಭಾಷೆ..
ಜೀವನಪೂರ್ತಿ ನಿಭಾಯಿಸಬೇಕಾವುದು..:)
—————————-
Ranjith:
ಮೈ ಡಿಯರ್ ಹೇಮಾ,
ನೀವೂ ಎಲ್ಲಾ
ಹುಡುಗಿಯರಂತೆ ಸೇಮಾ(same)..:)?
ಯಾಕೆ ನನ್ನ ಕೈಯ್ಯಿಂದ ಕಾಲೆಳೆಸಿಕೊಳ್ಳುವಿರಿ,
ಬಿದ್ದು ಬಿದ್ದು ಮೂತಿ ಮಣ್ಣಾಗಿಸಿಕೊಳ್ಳುವಿರಿ.!.;-)
ಹ ಹ ಹ..:)
—————————-
hema:
ಪ್ರೀತಿಯ ರಂಜಿತ್,
ನಿಮ್ಮ ಕವಿತೆಗಳಂತು ನಿಮ್ಮಂತೆ ಸಕತ್,
ಬರುವುದಾದರೇ ನಿಮ್ಮಿಂದ ನಮಗೂ ಒಂದೆರೆಡು ಕವನ
ಕಾಲೆಳಿಸಿಕೊಳ್ಳೋಕು ರೆಡಿನಾನು ಸರೀನಾ….
—————————-
Ranjith:
ಈ ರಂಜಿತ್-ಸಕತ್ ಪ್ರಾಸ
ಬೇರೆ ಯಾರೋ ಬಳಸಿದ್ದಲ್ಲವೇ?
ನೀವೂ ಭಾಳ ಶಾಣ್ಯ ಇದೀರಲ್ಲ..
ಪ್ರಾಸ ಬಳಸಿ ಅವರ ನೆನಪು ಮಾಡಿಸಿ
ಕಾಲೆಳೆಸಿಕೊಳ್ಳುವ ಮಾತಾಡುತ್ತ,
ನನ್ನ ಕಾಲೆಳೆದೇಬಿಟ್ಟಿರಲ್ಲ..:)
—————————-
hema:
ಛೆ ನಿಮ್ಮ ಕಾಲು ಎಳೆಯಲಾದೀತೆ,
ನೋಯಿಸಿಕೊಳ್ಳಬೇಡಿ ಮನಸ,
ಇಷ್ಟಕ್ಕು ನಿಮಗೆ ಆಕೆಯ ನೆನಪಾಗಬೇಕೆಂದು,
ನಾನು ಪಡಬೇಕಾಗಿಲ್ಲ ಪ್ರಯಾಸ,
ದಿನವೂ ಆಳುತ್ತಿದ್ದಾಳೆ ಆಕೆ ನಿಮ್ಮ ಕನಸ…
—————————-
Ranjith:
ನಾನಾಗಬೇಕಂತಿದ್ದೆ ಕಾಳಿದಾಸ,
ಅನ್ನುತಿರುವಿರಲ್ಲ ನನ್ನನ್ನು ದೇವದಾಸ,
ಸಿದ್ದತೆ ಮಾಡಿಕೊಳ್ಳುತಿರುವೆವು
ನಾವಿಬ್ಬರೂ ಬದುಕನು ಗೆಲ್ಲಲು,
ನಿಮಗೆ ತಾಳ್ಮೆ ಇರಲಿ,
ದೇವತೆಗಳೆ ಕಾಯುತಿರುವರಲ್ಲ
—————————-
hema:
ನಿಮಗೆ ಆ ಹುಡುಗಿ ಸಿಗಲಿ ಎಂದು,
ನಮ್ಮಂತ ಗೆಳೆಯರು ಹರಸುತಿಹರು
ನಿಮ್ಮ ಹುಡುಗಿಗೆ ಬೇಗ ಸಿಗಲು ಹೇಳಿ
ಅಕ್ಷತೆ ಚೆಲ್ಲಲೆಂದು ಕಾದ ದೇವತೆಗಳೂ,
ಸ್ವರ್ಗದಲ್ಲಿ ನಿದ್ದೆ ಮಾಡುತಿಹರು…..
—————————-
Ranjith:
ಹರಸುವ ಗೆಳೆಯರ ಬಾಯಿಗೆ
ಜಗದ ಸಿಹಿಯೆಲ್ಲಾ ಸೇರಲಿ..
ನಿದ್ರಿಸುವ ದೇವತೆಗಳಿಗೆಲ್ಲ
ನೋವಿನ ಸೊಳ್ಳೆ ಕಚ್ಚಲಿ..:)

Advertisements

23 Responses to “ಹೇಮಾ ಮತ್ತು ರಂಜಿತನ “ಹಾಗೇ ಸುಮ್ಮನೆ””

 1. ವೈಶಾಲಿ November 29, 2008 at 9:16 pm #

  ಆಹಾ!!

 2. ಶರಶ್ಚಂದ್ರ ಕಲ್ಮನೆ November 30, 2008 at 9:37 am #

  ಸೂಪರ್ ಜುಗಲ್ ಬಂದಿ 🙂 ಥ್ಯಾಂಕ್ಸ್ ಸೋಮು 🙂

 3. Ramesh November 30, 2008 at 7:43 pm #

  ಹಿಂಗಿರ್ಬೇಕು.. ಕವನಗಳಲ್ಲಿ.. 🙂

 4. rohini December 1, 2008 at 6:29 am #

  ಕವಿಗಳ ಬಾಯಿಂದ ಬೀಳೋ ಪ್ರತಿ ಮಾತು ಕವನನೇ. ಅಲ್ವಾ ಸೋಮಣ್ಣ!

 5. dhanu December 1, 2008 at 8:42 am #

  great job somu nim frends du..nijaa heegella matadkondu bariyodu tumbane kashta..:) nam kade inda ranjit mate hema ge thanks:)

 6. ವಿಜಯರಾಜ್ ಕನ್ನಂತ December 1, 2008 at 12:12 pm #

  ssssssssssssssssupeerrro super

 7. 웃ನವೀನ್웃 December 1, 2008 at 12:24 pm #

  ತೋಚಿದಾಗ ಗೀಚೋದು ಅಂದ್ರೆ ಇದೇನಾ ಸೋಮು ನಿಜವಾಗ್ಲೂ ಸುಮ್ನೆ ಸುಪೆರ್ಬ್

 8. ನೀಲಾಂಜಲ December 1, 2008 at 6:19 pm #

  ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

 9. siddudevaramani December 3, 2008 at 1:18 am #

  ರೀ .. ಭಾರೀ ಮಸ್ತ್ ಅನಿಸಿತು..
  ಕುಶಿ ಆತು.. ಹೀಗೆ ಬರೀರಿ..

 10. ಸುಶ್ರುತ December 3, 2008 at 10:56 am #

  🙂 nice..

 11. M G Harish December 4, 2008 at 4:36 am #

  ಮಸ್ತು ಮಸ್ತು ಕವನ ಅಂದ್ರೆ ಇದೆ ಅಲ್ವೇ??? 🙂 ಸೂಪರ್..

 12. adiga December 6, 2008 at 9:10 am #

  ha ha ha yatha prasa maraya.

 13. Roopa December 8, 2008 at 2:07 pm #

  Awesome!!

 14. neelanjala December 11, 2008 at 8:56 am #

  😀 😀 😀

 15. Sunil Hegde December 11, 2008 at 1:11 pm #

  ಹಾಗೇ ಸುಮ್ಮನೆ ಬರೆದ ಸಾಲುಗಳ ಜುಗಲ್ ಬಂದಿಯಲ್ಲಿ ಕೆಲವು ಕ್ಷಣ ಬಂಧಿಯಾಗುವಂತೆ ಮಾಡಿದ್ದಕ್ಕೆ ಧನ್ಯವಾದ… 😉

 16. nuthan December 18, 2008 at 2:35 pm #

  who is this hema?

 17. manu December 21, 2008 at 12:46 pm #

  ranju, this is awesome.nanage nijakku gottirilla ninu eshtondu sweataagi jagala aadtiya anta.keep fighting with sweater one

 18. pranesh December 22, 2008 at 8:37 am #

  so nice………..super

 19. JakasHudga December 31, 2008 at 4:58 am #

  ತುಂಬ ಚೆನ್ನಾಗಿದೆ..
  ಮಜಾ ಬಂತು

 20. ranjitha January 2, 2009 at 9:28 am #

  yenri adu ranjith mathe hema
  jagala adtidiro, kal yelitidiro, snehadinda kavan baritidiro gothaglila 😉

 21. ಸುದರ್ಶನ್ January 8, 2009 at 8:19 am #

  ಆಹಾ, ರೋಮಾನ್ಚನಭರಿತ ಸಂದರ್ಭದಲ್ಲಿ ನಮ್ಮನ್ನೆಲ್ಲ ಸಿಲುಕಿಸಿ ಮನಸ್ಸನ್ನ ತಣಿಸಿದ್ದೀರ.
  ಇಂತಹ ಸಂದರ್ಭದಲ್ಲಿ ವಾಸ್ತವವಾಗಿ ಸಿಲುಕಿಕೊಂಡವರಿಗೆ ಅದೇನು ಪರೀಕ್ಷೆ ಕಾದಿದೆಯೋ, ಪಾಪ.. 😉
  ತಮಗೆ ನನ್ನ ಪರವಾಗಿ ಅಭಿನಾಂಧನೆಗಳು..!!

 22. mehaboob February 17, 2009 at 10:39 am #

  agag nann hagu nanna hudagiy madye e thara nadita iratade ri suparb

 23. Prasann February 28, 2009 at 3:47 pm #

  saar, sooooooooooooooooper agide.. thanks

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: