ತುಂಬಾ ತುಂಬಾ ಲವ್ ಯೂ…

8 Dec

ಒಲವಿನ ಭಾನು.

ಹೀಗೆ ನಿನ್ನ ಹೆಸರು ಬರೆಯಲು ಹೊರಟ ಈ ಪೆನ್ನಿನ ಮೂತಿಯ ತುದಿ ಬಂಗಾರವಾಯಿತು..ಹಾಗೆಯೇ ನಿನ್ನ ಹೆಸರು ಬರೆಸಿಕೊಂಡ ಈ ಹಾಳೆಯ ಮೇಲೆ ಬಂಗಾರದ ಚಿತ್ತಚಿತ್ತಾರಗಳು.ನಿನ್ನ ನೆನಪು ಮಾಡಿಕೊಂಡ ನನ್ನ ಮನಸ್ಸಿಗೆ ಈಗಾಗಲೇ ಬಂಗಾರದ ಕಾಲುಗಳು.ನಿನ್ನ ತುಂಬಿಕೊಂಡ ಈ ಕಂಗಳಲ್ಲಿ ಬಂಗಾರದ ಕನಸುಗಳು.ನಿನ್ನ ಜೊತೆ ಇಡಬೇಕಾದ ಹೆಜ್ಜೆಗಳ ಹಿಂದುಮುಂದೆಲ್ಲ ಬಂಗಾರದ ಹೂವುಗಳು.ನನ್ನೊಳಗೆ ನೀನಿಟ್ಟ ಎಲ್ಲ ರಂಗೋಲಿಗಳು ಕೂಡ ಬಂಗಾರದ ಚುಕ್ಕಿಗಳು ಅಲ್ಲವ? ನಿನ್ನ ತಬ್ಬಿಕೊಂಡ ಈ ಎದೆಯ ಅಷ್ಟೂ ರೋಮಗಳಲ್ಲಿ ಬಂಗಾರದ ತೆನೆಗಳು.ನಿನ್ನ ಜೊತೆ ನಾನಿರುವ ಒಂದು ಚಿಕ್ಕ ಗುಡಿಸಲು ಕೂಡ ಬಂಗಾರದ ಅರಮನೆ. ಕೈಬಳೆ ಬಂಗಾರವಲ್ಲ, ನಿನ್ನ ಕೈ ಬಂಗಾರ. ಕಾಲ್ಗೆಜ್ಜೆ ಬಂಗಾರವಲ್ಲ, ನೀನಿಟ್ಟ ಪ್ರತಿಹೆಜ್ಜೆಂii ಸಪ್ಪಳ ಕೂಡ ಬಂಗಾರವೇ. ನಿನ್ನ ಜೊತೆಗಿದ್ದ ಈ ಆರುನೂರ ಇಪ್ಪತ್ತು ದಿನಗಳು ಬಂಗಾರದಂತ ದಿನಗಳೇ ಆಗಿದ್ದವು. ಇನ್ನು ಜೊತೆಗಿರುವ ಸಾವಿರಾರು ದಿನಗಳೂ ಬಂಗರದಂತ ದಿನಗಳೇ ಆಗಿರುತ್ತವೆ.

ಭಾನು… ನಿನಗೆ ಒಂದು ಪತ್ರಬರಿಲಿಕ್ಕೆ ಕುಳಿತವನಿಗೆ ನೋಡು ಏನೂ ತೋಚುತ್ತಿಲ್ಲ. ನೀನು ನನ್ನೆಡೆಗಿಟ್ಟಿರುವ ಪ್ರೀತಿಗೆ ಈ ಪತ್ರ ತುಂಬ ಚಿಕ್ಕದು ಕಣೆ. ಮೊದಮೊದಲು ತುಂಬಾ ಗೋಳು ಹೊಯ್ದುಕೊಂಡೆ ಕ್ಷಮೆಯಿರಲಿ. ನಾನಿರುವ ಕಲರ್ ಗೆ ಅಷ್ಟೊಂದು ಸ್ಕೋಪ್ ತಗೋಬಾರದಿತ್ತು ಅದಕ್ಕೊಂದು ಕ್ಷಮೆಬೇಕು. ನಿಂಜೊತೆ ಸಿನಿಮಾಗೆ ಬರಲಿಲ್ಲ ಅದಕ್ಕೂ ಕ್ಷಮೆಬೇಕು. ನಿಂಜೊತೆ ಗುಟ್ಟಾಗಿ ಕುಳಿತು ಬೈಟು ಟೀ ಕುಡಿಯಲಿಲ್ಲ, ಇಲ್ಲಿಯವರೆಗೆ ಒಂದು ಪುಟಾಣಿ ಐಸ್ಕ್ರೀಮ್ ತಿನ್ಸಿಲ್ಲ, ನಿನ್ನ ಕೆಲವು ನೋವುಗಳಿಗೆ ನಗು ತುಂಬಲಿಲ್ಲ,ಅದಕ್ಕೂ ಕ್ಷಮೆಯಿರಲಿ. ಕೆಲವು ಸಲ ತುಂಬಾ ಕೆಟ್ಟದಾಗಿ ಬೈದಿದ್ದೀನಿ ಅದಕ್ಕೊಂದು ದೊಡ್ಡ ಕ್ಷಮೆ ಇರಲಿ. ಆದರೂ ಇಂದಿಗೂ ಬೆಟ್ಟದಷ್ಟು ಪ್ರೀತಿಸುತ್ತಿದ್ದೀಯ ಅಲ್ಲವ, ಅದಕ್ಕೆ ನಿನ್ನ ಬಂಗರದಂತವಳು ಅಂತ ಕರೆದಿದ್ದು. ನಿಜಕ್ಕೂ ನಿನಗೆ ನಾನು ಅರ್ಹನ ಅಂತ ಯೋಚಿಸ್ತಿರೋವಾಗಲೇ, ಚಿನ್ನ.. ಮಿಸ್ ಯೂ ಅನ್ನುವ ನಿನ್ನ ಬಂಗಾರದಂತಹ ಎಸ್ಸೆಮ್ಮೆಸ್ಸ್ ಬಂದುಬಿಡುತ್ತೆ. ಎಲ್ಲವನ್ನು ಮರೆತು ನಾನು ಮಿಸ್ ಯು ಟೂ ಅಂದುಬಿಡುತ್ತೇನೆ.

ಭಾನು… ನಿಜಕ್ಕೂ ಹುಡುಗಿಯರಿಗೆ ಒಂದಿಷ್ಟು ಆಸೆಗಳು ಅಂತ ಇರ್ತಾವಂತೆ ನಿಜಾನ? ಹುಡುಗ ಸುಂದರವಾಗಿರ್ಬೇಕು, ಬಹಳ ಎತ್ತರವಾಗಿರಬೇಕು, ಕಣ್ಣು ತುಂಬಾ ಚಂದವಿರಬೇಕು, ಪಸ್ಟ್ ಕ್ಲಾಸ್ ಅನ್ನುವ ಕೆಲ್ಸ, ಕೈ ತುಂಬ ಸಂಬಳ..ಹೀಗೆ ಇಷ್ಟೆ ಚಿಕ್ ಚಿಕ್ಕ ಆಸೆಗಳು ಕಣೆ..ಇದೆಲ್ಲ ನಿಜ ಅಲ್ವ? ಆದರೇ ನಾನಿದರಲ್ಲಿ ಏನು ಅಲ್ಲವಲ್ಲೆ? ಸದ್ಯಕ್ಕೆ ನಾನು ಖಾಲಿ ಜೇಬಿನ ಪಕೀರ..ಈಗ ಹೇಳಿಕೊಳ್ಳುವಂತ ಕೆಲ್ಸವಾಗಲಿ,ಸಂಬಳವಾಗಲಿ,ಯಾವುದೂ ಇಲ್ಲ ಗೊತ್ತ? ಗೊತ್ತಿಲ್ಲದೇ ಏನು..! ನನ್ನನ್ನಿಷ್ಟಪಡುವ ವೂದಲ ದಿನದಂದೇ ನಿನ್ಗೆಲ್ಲ ತಿಳಿದಿತ್ತು..ಆದರೂ ಹಚ್ಚಿಕೊಂಡೆ ಮೆಚ್ಚಿಕೊಂಡೆ..ಯಾಕೆ? ಪ್ರಶ್ನೆ ಕೇಳಿದ್ದೀನಿ ಉತ್ತರ ಹೇಳಬೇಕಾದವಳು ನೀನು..ನನಗೆ ಗೊತ್ತು ನೀನು ಹೇಳೋಲ್ಲ..ಮಿಸ್ ಯೂ ಅಂತ ಮೆಸ್ಸೇಜ್ ಕಳ್ಸೋದು ಬಿಟ್ರೆ ಮತ್ತೇನು ಗೊತ್ತಿಲ್ಲ ನಿಂಗೆ.

ಮತ್ತೇನು ಇಲ್ಲಪ್ಪ..ಯಾಕೋ ಪತ್ರಬರಿಬೇಕು ಅನ್ನಿಸ್ತು ಅದ್ಕೆ ಒಂದೆರೆಡು ಸಾಲು ಬರೆದೆ. ಓದಿ ನಿನಗಿಷ್ಟ ಆಗಿ ಮಿಸ್ ಯೂ ಅಂತ ಒಂದೆಸ್ಸೆಮ್ಮೆಸ್ ಬಂದ್ರು ನನಗಷ್ಟೇ ಸಾಕು. ಮತ್ತೊಂದು ವಿಷ್ಯ.. ಬೆಳಗ್ಗಿನ ಜಾವಕ್ಕೇ ಎದ್ದು ನೀನು ಕೆಲ್ಸಕ್ಕೆ ಹೋಗೊದು ನೆನೆಸಿಕೊಂಡ್ರೆ ತುಂಬಾ ಬೇಜಾರು ಕಣೆ..ಹಂಗೆ ಬೆಳಗ್ಗೆ ೯ ಗಂಟೆಯವರೆಗೂ ನಿನ್ನ ತಬ್ಬಿಕೊಂಡು ಮುಸುಕೆಳೆದು ಮಲಗಿಬಿಡಬೇಕು ಅನ್ನಿಸುತ್ತೆ. ಮುಂದೊಂದು ದಿನ ಇದೆಲ್ಲ ಇದ್ದಿದ್ದೆ ಅಲ್ಲವ? ಸರಿ ನಿಂಗೆ ಇನ್ನೊಂದು ವಿಷ್ಯ ಹೇಳಬೇಕು ಅಂತ ಇದ್ದೀನಿ. ಅದೇನಪ್ಪ ಅಂದ್ರೆ ತುಂಬಾ ತುಂಬಾ ಲವ್ ಯೂ… ಮತ್ತೆ ತುಂಬಾ ತುಂಬಾ ಮಿಸ್ ಯೂ..

ಯಾವತ್ತೂ ನಿನ್ನ
ಕರಿಯ

Advertisements

16 Responses to “ತುಂಬಾ ತುಂಬಾ ಲವ್ ಯೂ…”

 1. ರಂಜಿತ್ December 8, 2008 at 12:10 pm #

  ಪ್ರತೀ ಸಲ ನಿನ್ನ ಪ್ರೇಮಪತ್ರ ಓದಿದಾಗಲೂ ನಾನಂದ್ಕೋತಿದ್ದೆ. ಇದೇ ಲಾಸ್ಟು. ಇನ್ನೂ ಡಿಫೆರೆಂಟ್ ಆಗಿ ಸೋಮಂಗೆ ಬರೆಯೊಕ್ಕಾಗಲ್ಲ ಅಂತ. ಪ್ರತಿ ಸಲಾನೂ ನನ್ನ ಅನಿಸಿಕೆಯನ್ನು ಸುಳ್ಳು ಮಾಡ್ತಿಯಲ್ಲ ಬ್ರದರ್?!

  “ನಿಜಕ್ಕೂ ಹುಡುಗಿಯರಿಗೆ ಒಂದಿಷ್ಟು ಆಸೆಗಳು ಅಂತ ಇರ್ತಾವಂತೆ ನಿಜಾನ? ಹುಡುಗ ಸುಂದರವಾಗಿರ್ಬೇಕು, ಬಹಳ ಎತ್ತರವಾಗಿರಬೇಕು, ಕಣ್ಣು ತುಂಬಾ ಚಂದವಿರಬೇಕು, ಪಸ್ಟ್ ಕ್ಲಾಸ್ ಅನ್ನುವ ಕೆಲ್ಸ, ಕೈ ತುಂಬ ಸಂಬಳ..”

  ಇದು ನಿಜಾನೇನೋ?? ಓದಿದ ಮೇಲೆ ನಂಗೇನೂ ಇಲ್ಲ ಅಂತ ಯಾಕೋ ಗಿಲ್ಟ್ ಆಯ್ತಪ್ಪ.

  ಇನ್ನೂ ಬರಿ.. ಎದೆಯಲ್ಲಿನ ಪ್ರೇಮವೆಲ್ಲಾ ಬ್ಲಾಗಿನಲ್ಲಿ ಹರಿಯಲಿ..:)

 2. Kallare December 8, 2008 at 12:20 pm #

  ಸೋಮು,
  ಟೊಕ್ಕಿ ಹುಡುಗ ಕಾಣೆ ಆದ್ನಾ ಅಂದ್ಕೊಂಡೆ.. ಸುಮ್ನೆ ಒಂದ್ಸಲ ನೋಡಿದ್ರೆ ಹೊಸಾ ವಿಷಯ.ನಿಮಗೆಲ್ಲೋ ಒಮ್ಮೆ ಪ್ರತಿಕ್ರಿಯಿಸಿದ ನೆನೆಪಿದೆ.. ಆದರೆ ಪ್ರತಿ ಬರಹವನ್ನೂ ಓದಿದ್ದೇನೆ. ಮೆಚ್ಚಿದ್ದೇನೆ. ಕವನಗಳು ಚೆಂದ. ಒಂದು ಸಾಲಿನವು ಇನ್ನೂ ಚೆಂದ.ಆದರೆ ಈ ಬರಹದ ಧಾಟಿ ಮೊದಲಿನ ಪತ್ರದಲ್ಲಿದ್ದಂತೆ ಇಲ್ಲ. (ಚೆನ್ನಾಗಿಲ್ಲ ಅಂತಲ್ಲ)ಯಾಕೆ?

 3. navilugari December 8, 2008 at 12:41 pm #

  ranjith………..ಇದು ನಿಜಾನೇನೋ?? ಓದಿದ ಮೇಲೆ ನಂಗೇನೂ ಇಲ್ಲ ಅಂತ ಯಾಕೋ ಗಿಲ್ಟ್ ಆಯ್ತಪ್ಪ.

  nanagu adella illa ntha sakt bejaru gotttaaa?

 4. navilugari December 8, 2008 at 12:43 pm #

  kallaare sir…neev bahala buddivantaru..;) kandu hididu bittiri..;)
  nija patra modala patragala tara illa… yake anta neevu kelbardu nanu helbardu hahahhaha

 5. kallare December 8, 2008 at 1:23 pm #

  somu.. saaru illa saambaaroo illa kevala kallare ashte. helillaa andre e tokkinoo bhaanoo ibrannoo sersi…. gottalla enaagutte anta aamele…

 6. rohini December 9, 2008 at 10:26 am #

  “ನಿಜಕ್ಕೂ ಹುಡುಗಿಯರಿಗೆ ಒಂದಿಷ್ಟು ಆಸೆಗಳು ಅಂತ ಇರ್ತಾವಂತೆ ನಿಜಾನ? ಹುಡುಗ ಸುಂದರವಾಗಿರ್ಬೇಕು, ಬಹಳ ಎತ್ತರವಾಗಿರಬೇಕು, ಕಣ್ಣು ತುಂಬಾ ಚಂದವಿರಬೇಕು, ಪಸ್ಟ್ ಕ್ಲಾಸ್ ಅನ್ನುವ ಕೆಲ್ಸ, ಕೈ ತುಂಬ ಸಂಬಳ..”

  nijavaada preethi andare huduga hegiddaru ok preethi annodu manassu hrudayakke sambandisiddu
  prrethi annodu kurudu anthare yar melu preethi hego hutkolalla athava atana anda hana astti idannella nodinu prrethi huttalla huttidaru adu shashwatha alla alva somanna

  ನಿಜಕ್ಕೂ ನಿನಗೆ ನಾನು ಅರ್ಹನ ಅಂತ ಯೋಚಿಸ್ತಿರೋವಾಗಲೇ, ಚಿನ್ನ.. ಮಿಸ್ ಯೂ ಅನ್ನುವ ನಿನ್ನ ಬಂಗಾರದಂತಹ ಎಸ್ಸೆಮ್ಮೆಸ್ಸ್ ಬಂದುಬಿಡುತ್ತೆ. ಎಲ್ಲವನ್ನು ಮರೆತು ನಾನು ಮಿಸ್ ಯು ಟೂ ಅಂದುಬಿಡುತ್ತೇನೆ.

  ii salu hege barediddiya nodu nine ii tara vedane patta hage idu kalpane tara illa somanna

 7. sundaranadu December 9, 2008 at 3:00 pm #

  Preetiya kariya sorry Tokki sorry Navilagari,

  Nimma kavanavagali, katheyagali athava mattondu. ene adaru adara thumba preetine irutte. innu preetige sarisati nimma barahagalu matravenisutte.

  Preetiyinda Nimma abhimani,
  Rajanna

 8. narasimha nayak December 12, 2008 at 9:33 am #

  yaako patra ella patragala tara ilvallaa? nim swanta hudugigenaadru baredidda idu? hudugiya hesaru bhaanu na?

 9. ಅಹರ್ನಿಶಿ December 12, 2008 at 1:00 pm #

  ಸೋಮು,

  ಟೊಕ್ಕಿ ಹೋಗಿ ಭಾನು ಬ೦ದ್ಳು ಡು೦.. ಡು೦…

 10. Manaswi December 12, 2008 at 5:24 pm #

  ಲವ್ ಲೆಟರ್ ಗೊತ್ತು,ಆದರೆ ಲವ್ ಚೀಟಿ ನೋಡಿರಲೂ ಇಲ್ಲ ಕೇಳಿರಲೂ ಇಲ್ಲ… !ಪುಟ್ಟ ಚೀಟಿಯಲ್ಲಿ ಪ್ರೇಮ ಉಕ್ಕಿ ಹರಿದಿದೆ,
  “ನಿನ್ನ ತಬ್ಬಿಕೊಂಡು ಮುಸುಕೆಳೆದು ಮಲಗಿಬಿಡಬೇಕು ಅನ್ನಿಸುತ್ತೆ. ಮುಂದೊಂದು ದಿನ ಇದೆಲ್ಲ ಇದ್ದಿದ್ದೆ ಅಲ್ಲವ? ಸರಿ ನಿಂಗೆ ಇನ್ನೊಂದು ವಿಷ್ಯ ಹೇಳಬೇಕು ಅಂತ ಇದ್ದೀನಿ.”ವಾಹ್ ವಾಹ್, ತುಂಬಾ ಇಷ್ಟ ಆಗ್ಬಿಡತ್ತೇನೋ ಹೀಗೆ ಹುಡುಗೀರಿಗೆ ಹೇಳ್ಬಿಟ್ರೆ!

 11. M G Harish December 12, 2008 at 8:14 pm #

  ಟೊಕ್ಕಿಗೆ ಕೈಕೊಟ್ಬಿಟ್ರಾ ಸೋಮು? 😦

 12. nagtalwar December 15, 2008 at 3:26 pm #

  ನಿಮ್ಮ ಚೀಟಿ ಒಂದೊಂದಾಗಿ ಓದುತ್ತಾ ಹೋದ್ರೆ, ಒಮ್ಮೆ ಹುಡುಗಿಗೆ ನಾನೇ ಚೀಟಿ ಕೊಟ್ಟಂಗೆ; ಮತ್ತೆ ಆಕಿ ಕೊಟ್ಟಂಗೆ,ನಾನ್ ಮರ್ತಂಗೆ…ಮತ್ತೆ ಎದಿಯಾಗೆ ಆಕಿ ಕೈ ಹಾಕಿ ಬಗದಂಗ ….., ಒಲ್ಲೆರೀ ನ ಒಲ್ಲೆ ಅನ್ನುಕೋತ ಮತ್ತೊಂದು ಚೀಟಿ ಓದಿದಂಗೆ….

 13. champu March 25, 2009 at 4:04 pm #

  ನಿಜಕ್ಕೂ ನಿನಗೆ ನಾನು ಅರ್ಹನ ಅಂತ ಯೋಚಿಸ್ತಿರೋವಾಗಲೇ, ಚಿನ್ನ.. ಮಿಸ್ ಯೂ ಅನ್ನುವ ನಿನ್ನ ಬಂಗಾರದಂತಹ ಎಸ್ಸೆಮ್ಮೆಸ್ಸ್ ಬಂದುಬಿಡುತ್ತೆ. ಎಲ್ಲವನ್ನು ಮರೆತು ನಾನು ಮಿಸ್ ಯು ಟೂ ಅಂದುಬಿಡುತ್ತೇನೆ.

  Simply superb 🙂

 14. Lekhak March 31, 2009 at 9:05 pm #

  “Mitra
  Simply super kano ninna prema patra
  Nivibbaru bega agi tumba hatra”

 15. Pavithra April 13, 2009 at 11:54 am #

  I like it very much. It’s very nice and cute.

 16. sharath February 2, 2010 at 4:19 pm #

  nan life kan mundhe banda hagayithu

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: