ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ

30 Dec

ನಾನು ನಿನ್ನ ರಸ್ತೆಯಲ್ಲಿ
ಕೊನೆಯವರೆಗೂ ಸಾಗಬೇಕಿತ್ತು,
ಮದ್ಯೆ ಮದ್ಯೆ ದಾರಿ ಹರಿದಿತ್ತು
ಮತ್ತೆ ಬೆಳಕು ಮುನಿದಿತ್ತು.
ಪೂರ್ತಿಯಾಗುವ ಮೊದಲೆ
ಪ್ರಯಾಣ ಮುಗಿದಿತ್ತು.

ನಿನಗೇ ಅಂತ ನಾನು
ಬರೆದಿಟ್ಟ ಹಾಡುಗಳ
ಎಲ್ಲಾ ಸಾಲುಗಳು
ಅಳಿಸಿಹೋಗಿದ್ದವು
ಮತ್ತೆ ಬೆರೆಯೋಣವೆಂದರೇ
ನೀನು ನೆನಪಾಗುತ್ತಿದ್ದಿಯಾ
ಮತ್ತೆ ನೆನಪಾಗುತ್ತಿಲ್ಲ!

ಹಾಗೆ ಒಂದು ಸಲ ಅತ್ತು
ಬಿಡೋಣವೆಂದು ಕೊಂಡರೇ
ನಿನಗೆ ಕೊಟ್ಟ ಮಾತು, ಮತ್ತೆ
ಅತ್ತಾಗ ನೀನಿಟ್ಟ ಮುತ್ತು ನೆನಪಾಯಿತು.!
ದುಃಖ ನುಂಗಿಕೊಂಡೆ..ಅದರೂ
ಮಾತು ಉಳಿಸಿಕೊಳ್ಳಲಾಗುತ್ತಿಲ್ಲ
ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ !

ಎಲ್ಲಾ ನೆನಪುಗಳಿಗೂ
ಒಂದು ಸಮಾಧಿ ಕಟ್ಟಿಸಬೇಕು!
ಎಲ್ಲಾ ಹನಿಗಳಿಗೂ ಒಂದು
ದೊಡ್ಡ ನದಿಯ ಹುಡುಕಬೇಕು !
ಮತ್ತೆ ನಾನು ದೂರ ದೂರ ಹೋಗಬೇಕು
ಕ್ಷಮಿಸು ಅಲ್ಲಿ ನೀನು ನೆನಪಾಗೊಲ್ಲ
ಮತ್ತೆ ನೆನಪಾಗಬಾರದು ಕೂಡ!

Advertisements

25 Responses to “ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ”

 1. ranjitha December 30, 2008 at 12:52 pm #

  hello somu,
  yake astond dukadinda baredidiri?
  ” ಕ್ಷಮಿಸು ಅಲ್ಲಿ ನೀನು ನೆನಪಾಗೊಲ್ಲ
  ಮತ್ತೆ ನೆನಪಾಗಬಾರದು ಕೂಡ! ” adu yendigu sadya villa
  nenapaugalu yendigu doora hogola

 2. Prasanna December 30, 2008 at 5:45 pm #

  ಸೋಮು ,

  ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಕವನ , ನನಗೆ ಇಷ್ಟ ಆಯಿತು .

 3. hemapowar123 December 30, 2008 at 6:39 pm #

  ಓದಿದಾಗ ಆಳದಲ್ಲೆಲ್ಲೋ ಕಾಡುತ್ತೆ ಸೋಮ್ಸ್ ನಿನ್ನ ಬರಹ. ಇನ್ನದೆಷ್ಟು ನೋವಿಟ್ಕೊಂಡಿದೀಯ ಮಾರಾಯ ನಿನ್ನೊಳಗೆ, ಮುಗಿಯುವ ಹಾಗೇ ಕಾಣದು? ಕವಿತೆ ಮಸ್ತಾಗಿದೆ.

 4. ranjith December 31, 2008 at 5:02 am #

  ಮಸ್ತಾಗಿದೆ ಕವನ.

  ಕೊನೆಯ ಪ್ಯಾರಗ್ರಾಫ್ ನ ಕಂಬದ ಮೇಲೆ ನಿಂತಿದೆ,ಕವನ ದ ಅಣೆಕಟ್ಟು!:)

  ತಮಾಷೆಗೆ ಒಂದು ಮಾತು.ಎದೆ ಅಣೆಕಟ್ಟು ಕಟ್ಟಿದ್ಯಾರು?ಸರಿಯಾಗಿ ಕಟ್ಟಿಲ್ಲ ನೋಡು..ನನ್ನದು ಅದೇ ಫೀಲ್ಡು.. ನಾನು ಕಟ್ಟಲಾ?;)

 5. Harish December 31, 2008 at 10:35 am #

  Hi boss
  wish you a great new year……
  This is simply super
  But at last u r ordering that she wil not come again..
  How can it is possible Boss

 6. shwetha December 31, 2008 at 10:42 am #

  ನಿನಗೇ ಅಂತ ನಾನು
  ಬರೆದಿಟ್ಟ ಹಾಡುಗಳ
  ಎಲ್ಲಾ ಸಾಲುಗಳು
  ಅಳಿಸಿಹೋಗಿದ್ದವು
  e salu thumba chanagidhe somu

 7. ನವಿಲುಗರಿ December 31, 2008 at 10:52 am #

  ರಂಜಿತ ನಾನು ದುಃಖದಲ್ಲಿ ಬರೆದಿಲ್ಲಪ್ಪ..ಕವನದ ವಿಷಯ ಅಷ್ಟೆ…

  ಮೆಚ್ಕೊಂಡಿದ್ದಕ್ಕೆ ಥ್ಯಾಂಕ್ಸ್

 8. navi December 31, 2008 at 11:45 am #

  From navi,,,
  Wav tumba chennagi kavana baritira. Evattinda nanu nimma fan ri. All the best……….
  Advance Wishes…
  HAPPY NEW YEAR…….
  Hosa varsha hosa harshada jote, hosa hurupannu tarali…

 9. ನವಿಲುಗರಿ December 31, 2008 at 12:16 pm #

  ದನ್ಯವಾದ ಪ್ರಸನ್ನ ಸರ್..:)

  ಹೇಮ..ಜಗತ್ತಲ್ಲಿ ನಗುವಿಗೆ ಒಂದು ಕೊನೆಯಿದೆ..ಆದರೇ ನೋವಿಗೆ ಕೊನೆಯಿಲ್ಲ ಅನ್ನುವ ಕೆಲವೇ ಕೆಲವರ ಗುಂಪೊಂದಿದೆ..ಅವರಿಗೇ ನೋವು ಅನವರತಾ ಹಾಗೆ ಇರತ್ತೆ ಖಾಲಿಯಾಗೋ ಮಾತೇ ಇಲ್ಲ..ಖಾಲಿ ಆಗೋದು ಅವರಿಗೇ ಬೇಕಿಲ್ಲ ಅಂತ ನನ್ನ ಭಾವನೇ..;)

  ಥ್ಯಾಂಕ್ಸ್ ಮೆಚ್ಚಿಕೊಂಡಿದ್ದಕ್ಕೆ..:)
  ನಿನ್ನ ಚೋಮು 😉

 10. ನವಿಲುಗರಿ December 31, 2008 at 12:19 pm #

  ರಂಜಿತ್..ಈಗಾಗಲೇ ಅಣೆಕಟ್ಟು ಕಟ್ಟೋದಕ್ಕೆ ಅಂತ ಅಡಿಪಾಯ ಹಾಕುತ್ತಾ ಇದ್ದೀರಿ ನನಗೆ ಗೊತ್ತಿದೆ..ಸ್ವಲ್ಪ ಹುಷಾರಾಗಿ ಕಟ್ಟಿ…ಮುಂದೆ ಭದ್ರವಾಗಿ ನಿಲ್ಲಬೇಕು ಅಲ್ಲವ ಅಣೆಕಟ್ಟು?

 11. ನವಿಲುಗರಿ December 31, 2008 at 12:27 pm #

  ಶ್ವೇತಾ ಥಾಂಕು ಥಾಂಕು…;)

  ಹರೀಶ್ ಸಾರ್…

  ಬರೋದಿಲ್ಲ ಅಷ್ಟೇ ಹೇಳೋದು 😉 ಒಡೆದ ಹಾಲು, ಮುರಿದ ಮನಸು,ಚೂರಾದ ಕನ್ನಡಿ, ಮತ್ತೆ ಬೆನ್ನು ತಿರಿಗಿಸಿ ಹೋದ ಹೃದಯ ಮತ್ತೆ ಹಳೆಯ ಸ್ಥಿತಿಗೆ ಬಂದ ಉದಾಹರಣೆಗಳು ತುಂಬಾ ತುಂಬಾ ಕಡಿಮೆ 😉

  ಥ್ಯಾಂಕ್ಸ್ ಸರ್..:)

 12. rohini January 1, 2009 at 7:04 am #

  ನಾನು ನಿನ್ನ ರಸ್ತೆಯಲ್ಲಿ
  ಕೊನೆಯವರೆಗೂ ಸಾಗಬೇಕಿತ್ತು,
  ಮದ್ಯೆ ಮದ್ಯೆ ದಾರಿ ಹರಿದಿತ್ತು
  ಮತ್ತೆ ಬೆಳಕು ಮುನಿದಿತ್ತು.
  ಪೂರ್ತಿಯಾಗುವ ಮೊದಲೆ
  ಪ್ರಯಾಣ ಮುಗಿದಿತ್ತು.
  whaw tumba ishta vayitu novina kavana

  ಎಲ್ಲಾ ನೆನಪುಗಳಿಗೂ
  ಒಂದು ಸಮಾಧಿ ಕಟ್ಟಿಸಬೇಕು!
  ಎಲ್ಲಾ ಹನಿಗಳಿಗೂ ಒಂದು
  ದೊಡ್ಡ ನದಿಯ ಹುಡುಕಬೇಕು !
  ಮತ್ತೆ ನಾನು ದೂರ ದೂರ ಹೋಗಬೇಕು
  ಕ್ಷಮಿಸು ಅಲ್ಲಿ ನೀನು ನೆನಪಾಗೊಲ್ಲ
  ಮತ್ತೆ ನೆನಪಾಗಬಾರದು ಕೂಡ!

  tumba novalli barediddiya somanna
  kavana tumba chennagide yeshtondu novide somanna ninna manasalli ninna yedeyalli

  ಕ್ಷಮಿಸು ಅಲ್ಲಿ ನೀನು ನೆನಪಾಗೊಲ್ಲ
  ಮತ್ತೆ ನೆನಪಾಗಬಾರದು ಕೂಡ!

  ninna maretare tane nenapagodu

 13. harish January 1, 2009 at 4:10 pm #

  hai,, somanna,, neeenu adbhuta barahagaara kano… neenu munde dodda ettarakke belitiya kano.. really am happy

 14. gururaj hosakote January 5, 2009 at 12:42 pm #

  adbhuta sir…blog na headline nodid koodle ne yeno ontara feel agattte….preeti prema virahakke ondu bere blog irodu nijakku kushi taro vichara…

  tumba sundaravaagide nimma kavite….nimma ella barahagalanna odida mele nanage annisiddu..ello ondu kade layabaddavaagi baritilla annisutte…baravanige shaily tumba muddaagide..aadru neevu tumba pustakagalanna odlikke saadyavaadre khandita odi…nimma baraha innu adbhutavagatte

 15. Rajesh Manjunath January 5, 2009 at 6:07 pm #

  ಸೋಮುರವರೆ,
  ನಾನು ಮೊದಲಿಗೆ ರಂಜಿತ್ ಗೆ ಧನ್ಯವಾದ ಹೇಳ್ಬೇಕು, ಈ ದಿನ ನಿಮ್ಮ ಬ್ಲಾಗ್ ವಿಳಾಸ ಕೊಟ್ಟು, ಸೊಗಸಾಗಿದೆ ಒಮ್ಮೆ ಭೇಟಿ ನೀಡಿ ಅಂದಿದ್ರು. ಯಥಾಪ್ರಕಾರ ಭೇಟಿ ನೀಡಿದೆ ನಾನು.
  ಸರ್… ನಿಜಕ್ಕೂ ಎಲ್ಲಾ ಸಾಲುಗಳು ಅದ್ಭುತ ಎನ್ನುವಷ್ಟು ಚೆನ್ನಾಗಿವೆ, ಮೊದಲಿಂದ ಕೊನೆವರೆಗೂ ಎಲ್ಲ ಸಾಲುಗಳು ನನಗೆ ತುಂಬಾ ಹಿಡಿಸಿದವು. ವಿರಹವನ್ನು ಮೊಗೆ-ಮೊಗೆದು ಹಂಚಿದಂತಿದೆ.
  -ರಾಜೇಶ್ ಮಂಜುನಾಥ್

 16. Vishwa January 8, 2009 at 6:09 am #

  Somu..

  Tumba nenapadalu….avattu bittu hoda nanna gelati..ee nimma kaviteyindagi..Tumba thanks maretidda avalannu mattomme nenapu madisidakke….

  Regards
  Vishwa

 17. ಮಹಿಮ January 8, 2009 at 4:39 pm #

  ಮಾರಾಯ್ರೆ ವಿರಹ ಪ್ರೀತಿ ಬಿಕ್ಕಳಿಕೆ ಇರೋರಿಗೆ ಮಾತ್ರ ಅಂತ ಬರೆದಿದ್ದೀರ! ನಿಜ ಪ್ರತಿ ನದಿಗೂ ಅದರದ್ದೇ ಇತಿಹಾಸವಿದೆ,ಪ್ರತಿ ಮರುಭೂಮಿಗೂ ಹಿಂದೆ ತಾನು ನದಿಯಾಗಿದ್ದೆ ಅನ್ನೋ ನೆನಪಿರುತ್ತೆ ಅಂದ್ಕೋತೀನಿ,ಹಾ!! ಇವು ಕೇವಲ ಪ್ರತಿಮೆಗಳು ಮಾತ್ರ, ಪ್ರತಿ ಮಾನವ ಜೀವಿಯೂ ವಿರಹ ಪ್ರೇಮದ ತಾಪವನ್ನ ಅನುಭವಿಸದೇ ಜೀವನ ಮುಗಿಸಿದ್ರೆ ಅವರಷ್ಟು ಅನ್ ಲಕ್ಕಿ ಯಾರೂ ಇಲ್ಲ,ಪ್ರೇಮ,ಪ್ರೀತಿ ಅದೃಷ್ಟ ಇರೋರಿಗೆ ಸಿಗೋದು,ಏನಂತೀರಾ?
  as usual poem is awsome!!

 18. minchulli January 29, 2009 at 11:51 am #

  ಹಾಯ್,

  ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

  ಧನ್ಯವಾದಗಳು,

  ಶಮ, ನಂದಿಬೆಟ್ಟ
  http://minchulli.wordpress.com

  ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ

 19. Mahesh Mulekar February 17, 2009 at 2:08 pm #

  Thanks to BDT Shivaji for introducing such wonderful blog.

  Urinda doora iddu, olle baraha nodo avakaasha ne irlilla.

  Kavite bhaavanegalanna keraliso hage, nenapugalanna marakaliso hage…

  Tumba Chennagide rayre.

 20. champu March 13, 2009 at 2:55 pm #

  sakath agide kano.
  Good work 🙂

 21. Pavithra April 16, 2009 at 10:10 am #

  ಎಲ್ಲಾ ನೆನಪುಗಳಿಗೂ
  ಒಂದು ಸಮಾಧಿ ಕಟ್ಟಿಸಬೇಕು!
  ಎಲ್ಲಾ ಹನಿಗಳಿಗೂ ಒಂದು
  ದೊಡ್ಡ ನದಿಯ ಹುಡುಕಬೇಕು !
  ಮತ್ತೆ ನಾನು ದೂರ ದೂರ ಹೋಗಬೇಕು
  ಕ್ಷಮಿಸು ಅಲ್ಲಿ ನೀನು ನೆನಪಾಗೊಲ್ಲ
  ಮತ್ತೆ ನೆನಪಾಗಬಾರದು ಕೂಡ!

  It’s very beautiful somu

 22. Akhilesh(SAKHI) May 6, 2009 at 11:18 am #

  akasmaath odhide…
  mattenannu browse maadalu manasu optilla.. ide padagalanna kannalli kattikotiddini…

  tymba chennagide….

  odeyuva manasugala saddu keluvavaryaro…??

 23. Priya October 15, 2009 at 7:13 am #

  Somu avre nem prathi kathe/kavana odidaglu kannali neeru baruthe. Nan madida tappu nanig nenapaguthe, avnu hegidano yeno anta neniskondu bejar aguthe.
  Hege barita ere, all the very best.

 24. naveen January 4, 2011 at 3:34 pm #

  tumba chennagide sir nimma kavana
  nangantu tumbane istavaytu

  Navi…

 25. amaresh.PG October 4, 2012 at 6:28 am #

  HUDUGIRA NENAPU SAYSODU NAMMANNE
  ADARU NAVU NAMBTIVI HUDUGIRANNE
  YENIDU PREETIYA PARIKALPANE
  PREETI TILIYADU YEGENDU YOCHANE

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: