ಇಂತಿ ನಿನ್ನ ಪ್ರೀತಿಯ…ನಾನ್ಯಾರು?

8 ಫೆಬ್ರ

ಕೋತಿಮರೀ!

ಮೊದಲೆಲ್ಲ ನಿನ್ನ ಹೀಗೆ ಕರಿಯೋಕೆ ಎಷ್ಟು ಚೆನ್ನಾಗಿರ್ತಿತ್ತು ಗೊತ್ತ? ಹೀಗೆ ಕರಿಯೋದೆ ಒಂದು ಹಬ್ಬ. ನಿನ್ನ ತುಂಟತನ, ನಿನ್ನ ಕಪಿಚೇಸ್ಟೆ, ನಿನ್ನ ಹುಡುಗುತನ, ಮತ್ತು ಕೋತಿ……..ಅಂತ ಹೇಳಿ ನೀನು ಹಲ್ಕಿರಿಯುತ್ತಿದ್ದ ನಿನ್ನ ಆ ನಿಶ್ಕಲ್ಮಶ ನಗು ಇದ್ಯಾವುದನ್ನೂ ನನ್ನಿಂದ ಮರಿಯೋಕಾಗುತ್ತಿಲ್ಲ. ನೀನು ಮಾತಿನ ಮಲ್ಲಿ, ಒಂದು ಸಲವು ನಾನು ನಿನ್ನ ಮುಂದೆ ಗೆದ್ದಿದ್ದಿಲ್ಲ ಬರೀ ಸೋತಿದ್ದೆ ಸೋತಿದ್ದು. ಆದರೂ ಪ್ರತಿ ಸಲ ಸೋತಾಗಲು ನಾನೆ ಗೆದ್ದೆ ಅನ್ನುವಷ್ಟು ಖುಷಿ, ಆದರೂ ನೀನು ನನ್ನವಳಲ್ಲ ಅನ್ನುವ ಒಂದೇ ಒಂದು ದೊಡ್ಡ ಸೋಲಿದೆಯಲ್ಲ? ಈ ಸೋಲು ಯಾವತ್ತು ನನ್ನ ಈ ಮುಖದಲ್ಲಿ ನಗುವನ್ನ ಕಾಣದಿರುವ ಹಾಗೆ ಮಾಡಿಬಿಡುತ್ತದೇನೊ..!!

ನನಗೆ ಯಾವುದನ್ನು ಮರಿಯೋದಕ್ಕೆ ಆಗುತ್ತಿಲ್ಲ. ಸುಮ್ಮನೆ ಮರೆತವನಂತೆ ನಾಟಕವಾಡುತ್ತೀನಿ ಅಷ್ಟೆ. ಸಮಸ್ತ ಮೊಬೈಲು ಕಂಪನಿಗಳು ನಮ್ಮಿಬ್ಬರಿಂದಾನೆ ಉದ್ಧಾರವಾದವೇನೊ. ಪ್ರತಿ ಸಲ ಮೊಬೈಲು ಕಳೆದುಕೊಂಡಾಗಲೂ ಕಾಯಿನ್ ಬೂಥುಗಳ ಗುಡಾಣದಂತಹ ಹೊಟ್ಟೆಗೆ ಬರ್ಜರಿ ಮೃಷ್ಟಾನ್ನ ಭೋಜನ ಮಾಡಿಸುತ್ತಿದ್ದೆವು ನೆನಪಿದೆಯಾ? ಮತ್ತೆ ನನ್ನ ಕಡುಗಪ್ಪು ಕೈ ಹಿಡಿದು ನೀನು ರೋಡು ದಾಟಿಸುತ್ತಿದ್ದ ಪರಿಯ ನೆನೆಸಿಕೊಂಡರೇ ಸಾಕು.. ದೇವರೇ.. ಈ ಕೈ ಯಾವತ್ತು ಸಡಿಲಾಗದಂತೆ ಶಾಪ ಕೊಟ್ಟುಬಿಡು ಅಂತ ಅದೆಷ್ಟು ಸಲ ಗೋಗರೆದಿದ್ದೆನೊ..! ನೆನಪಿದೆಯಾ? ಮೊದಲ ಸಲ ನಿನ್ನ ಮುಂದೆ ನಿಂತಾಗ ಬೆವರುತ್ತಿದ್ದ ಪರಿ? “ಯಾಕೊ ಹೀಗೆ ನಡುಗುತ್ತಿದ್ದೀಯ?” ಅಂತ ನೀನು ಕಿಚಾಯಿಸಿದರೆ. “ಬಿಸಿಲಲ್ಲಿ ಬಂದೆ ಅಲ್ಲವಾ ಅದಕ್ಕೆ” ಅಂದ ನಾನು ನಿನ್ನ ಮುಂದೆ ಮಂಗನಾಗಿದ್ದು? ಯಾಕಂದರೆ ಅದು ಜೂನ್ ತಿಂಗಳ ಮದ್ಯಕಾಲ. ಸೂರ್ಯನ ದರ್ಶನವಾಗಿ ಅದೆಷ್ಟು ದಿನಗಳಾಗಿದ್ದವೊ.. ಇನ್ನು ಬೆವರುವ ಮಾತೆಲ್ಲಿ?

ನೀನಾದರೂ ಅಷ್ಟೆ ಯಾವತ್ತು ನಾನು ನಿನಗಿಷ್ಟ ಅನ್ನುವ ಹಾಗೆ ನಡೆದುಕೊಳ್ಳಲಿಲ್ಲ. ಅಸಲಿಗೆ ನೀನು ಯಾವ ಹುಡುಗರನ್ನು ಕಣ್ಣೆತ್ತಿ ಕೂಡ ನೋಡುತ್ತಿರಲಿಲ್ಲ ಬಿಡು. ಆದರೆ ಒಂದು ಹುಡುಗಿ ಹೇಗಿರಬೇಕೊ ಹಾಗಿದ್ದೆ. ಈಗಲು ಹಾಗೆ ಇದ್ದೀಯ ಅದೇ ನಿನ್ನ ಇಷ್ಟಗಲ ಮಗುವಿನಂತಹ ನಗುವಿನೊಂದಿಗೆ. ಅದೇನ ನನಗಿಷ್ಟವಾಗಿದ್ದು? ಎಲ್ಲಾ ಹುಡುಗರ ಹಾಗೆ ನಾನು ಕೇವಲ ನಿನ್ನ ಮಾತಿಗೆ ನಿನ್ನ ನಗುವಿಗೆ ಕರಗಿಬಿಟ್ಟೆನ? ಇಲ್ಲ, ಸಾದ್ಯವೇ ಇಲ್ಲ. ನನಗೆ ಇಷ್ಟವಾಗಿದ್ದು ನೀನು ಅಷ್ಟೆ. ನಿನ್ನೊಳಗಿನ ಆ ನಗು ಮಾತ್ರವಲ್ಲ ಕಣೆ, ಅಮ್ಮನಂತ ಪ್ರೀತಿಯಿದೆ, ಅಕ್ಕನಂತಹ ಅಕ್ಕರೆಯಿದೆ. ಆದರೆ ನೋಡು ನನಗೆ ಇದ್ಯಾವುದನ್ನು ಅನುಭವಿಸುವ ಭಾಗ್ಯವೇ ಇಲ್ಲ. ನಾನು ಅನಾಥ ಅನ್ನುವ ಭಾವ ಕಾಡದಿರುತ್ತದ ಹೇಳು. ನೀನು ಬಿಡು ಎಲ್ಲ ಕುಲ್ಲಂ ಕುಲ್ಲ. ನಾನಿನ್ನು ನಿನಗೇನು ಹೇಳಿರಲೇ ಇಲ್ಲ. ಅಷ್ಟರಲ್ಲಿಯೇ ನೀನು, ಮಾತಿನ ಮದ್ಯೆ “ಈ ಪ್ರೀತಿ ಪ್ರೇಮ ಎಲ್ಲ ನನಗಿಷ್ಟ ಇಲ್ಲಪ್ಪ, ಅಪ್ಪಿತಪ್ಪಿ ಕೂಡ ನನ್ನ ಮೇಲೆ ಯಾವುದೇ ತರಹದ ಭಾವನೆಯಿಟ್ಟುಕೊಳ್ಳಬೇಡ ನಾವಿಬ್ಬರು ಗೆಳೆಯ ಗೆಳತಿಯರಾಗಿದ್ದರೇನೆ ಮಜಾ ಅಲ್ಲವ” ಅಂತ ಇಷ್ಟಗಲ ನಕ್ಕು ಬಿಟ್ಟು ಫೋನಿಟ್ಟೆ ನೆನಪಿದೆಯಾ? ಹೌದು ಹೌದು ಹೌದು ಅಂತ ನಾನು ನಕ್ಕು ಸುಮ್ಮನಾಗಿ ನೀನು ಪೋನಿಟ್ಟ ಮೇಲೆ ಬಿಕ್ಕುತ್ತಿದ್ದೆ.

ಇದೆಲ್ಲವನ್ನ ನಿನಗೆ ಫೋನಿನಲ್ಲೇ ಹೇಳಬಹುದಿತ್ತು. ನಿನ್ನ ಧ್ವನಿ ಕೇಳಿದ ಕೂಡಲೆ ಹೇಳಬೇಕಾಗಿರೊದನ್ನೆಲ್ಲ ಮರೆತು, ಮಂಗನ ಹಾಗೆ ಬಲವಂತದಿಂದ ಯಾವುದೋ ಜೋಕು ಹೇಳಿಕೊಂಡುಬಲವಂತದ ನಗುವನ್ನ ಮುಖದ ಮೇಲೆ ತಂದುಕೊಳ್ಳೊದಕ್ಕೆ ಒದ್ದಾಡುತ್ತೀನಿ. ಅದಕ್ಕೆ ಈ ಪತ್ರ. ಪತ್ರಬರೆದಾದ ಮೇಲಾದ್ರು ನಿನಗೆ ತಲುಪಿಸ್ತೀನಿ ಅನ್ನೊ ಬರವಸೆ ನನಗೂ ಇಲ್ಲ. ಒಂದು ಮಾತು,.. ನಿನ್ನ ನಿರಾಕಾರಣೆ ನನ್ನ ಜೀವನದಲ್ಲಿ ಒಂದು ಕಪ್ಪು ಚುಕ್ಕಿಯಷ್ಟೆ. ಆ ಕಪ್ಪು ಚುಕ್ಕಿ ಮರೆಯಾಗೊದು ಸ್ವಲ್ಪ ತಡವಾಗಬಹುದು. ಇದೇ ಕಾರಣಕ್ಕೆ ನಿನ್ನ ಮೇಲೆ ದ್ವೇಷ ಸಾದಿಸೊಲ್ಲ. ಕನಸಿನಲ್ಲಿಯೂ ಕೂಡ ನಿನ್ನ ಬಗ್ಗೆ ಕೆಡುಕು ಬಯಸೊಲ್ಲ. ಬಾರು ಪಬ್ಬುಗಳ ಗೆಳೆತನ ನನ್ನಿಂದಾಗಲ್ಲ. ಯಾಕಂದ್ರೆ ನಾನು ನಿನ್ನ ಗೆಳೆಯ. ನೀನು ಇಷ್ಟು ಒಳ್ಳೆಯವಳಾಗಿರುವಾಗ ನಾನು ಹೇಗೆ ಅಷ್ಟು ಕೆಟ್ಟವನಾಗಿರೋಕೆ ಸಾದ್ಯ? ಇನ್ನು ತುಂಬಾ ತುಂಬಾ ಹೇಳೋದಿತ್ತು. ಇಷ್ಟು ಹೇಳೋಷ್ಟರಲ್ಲಿಯೇ ಯಾಕೊ ಕಣ್ಣುಗಳೆಲ್ಲ ನೀರು ನೀರಾಗಿ ಪತ್ರವೆಲ್ಲ ಒದ್ದೆಯಾಗುತ್ತಿದೆ. ಉಳಿದಿದ್ದು ನನ್ನೊಳಗೆ ಉಳಿದು ಬಿಡಲಿ ಬಿಡು. ನಾನು ಅಳಿಯುವ ತನಕ

ಇಂತಿ ನಿನ್ನ ಪ್ರೀತಿಯ
ನಾನ್ಯಾರು ?

Advertisements

34 Responses to “ಇಂತಿ ನಿನ್ನ ಪ್ರೀತಿಯ…ನಾನ್ಯಾರು?”

 1. Annapoorna Daithota ಫೆಬ್ರವರಿ 8, 2009 at 6:48 ಅಪರಾಹ್ನ #

  🙂

 2. ಕೇಶವ ಫೆಬ್ರವರಿ 9, 2009 at 1:20 ಫೂರ್ವಾಹ್ನ #

  ರವಿ ಬೆಳೆಗೆರೆಯವರ “ಲವ್‍ಲವಿಕೆ”ಯ ತದ್ರೂಪ! ಒಳ್ಳೆ ಶೈಲಿ ಕಣ್ರಿ!! ಈ ಪತ್ರ ಓದಿದ ಮೇಲೆ ಆ ಹುಡುಗಿ ಪ್ರೀತಿಸೋದು ಗ್ಯಾರಂಟಿ!!!
  – ಕೇಶವ (www.kannada-nudi.blogspot.com)

 3. bhaavana gopal ಫೆಬ್ರವರಿ 9, 2009 at 9:38 ಫೂರ್ವಾಹ್ನ #

  wowwwwwwww jinkemari aytu tokki aaytu bhaanu aytu ee kotimari yaaru? cute agide olle bhavane..:)

 4. Ramu b kumbar ಫೆಬ್ರವರಿ 10, 2009 at 7:21 ಫೂರ್ವಾಹ್ನ #

  inti ninna pritiya lekhana tumba chennagi bandide

 5. ranjitha ಫೆಬ್ರವರಿ 10, 2009 at 7:21 ಫೂರ್ವಾಹ್ನ #

  Hi somu,
  its superrrrrrrrrrrrrb 🙂

 6. ಅನಾಮಿಕ ಫೆಬ್ರವರಿ 10, 2009 at 8:30 ಫೂರ್ವಾಹ್ನ #

  chennagide chomu………… [:)]

 7. ಮೌನಿ ಫೆಬ್ರವರಿ 11, 2009 at 8:21 ಫೂರ್ವಾಹ್ನ #

  ಚೆನ್ನಾಗಿದೆ

  -ಮೌನಿ

 8. kallare ಫೆಬ್ರವರಿ 11, 2009 at 9:35 ಫೂರ್ವಾಹ್ನ #

  🙂

 9. ಸಂದೀಪ ಫೆಬ್ರವರಿ 11, 2009 at 11:05 ಫೂರ್ವಾಹ್ನ #

  ಮನಸ್ಸಿನ ಭಾವನೆಗಳನ್ನು ಎಳ್ಳಷ್ಟು ಬಿಡದೆ ಇಂಚಿಂಚಾಗಿ ಬರವಣಿಗೆಗೆ ರೂಪಾಂತರಿಸಿದ್ದಿರಿ. ಅದ್ಭುತವಾದ ಭಾವುಕ ಪತ್ರ.

 10. sangeetha ragunath ಫೆಬ್ರವರಿ 11, 2009 at 4:41 ಅಪರಾಹ್ನ #

  chomu neenellaadru nange idnanna bardidre..yappaaa beda bidu..

  bangalore ge bandaga ninge dhaaravadada peda kandita kodsteeni..super ide..:)

 11. ಅನಾಮಿಕ ಫೆಬ್ರವರಿ 12, 2009 at 10:47 ಅಪರಾಹ್ನ #

  somu chennagide kano … kalpanikavo athava nijavada katheno?

 12. raji mahadev ಫೆಬ್ರವರಿ 12, 2009 at 10:48 ಅಪರಾಹ್ನ #

  thumba chennagide. Kalpanikavo athava nijavadadda?

 13. ನವಿಲುಗರಿ ಫೆಬ್ರವರಿ 13, 2009 at 11:12 ಫೂರ್ವಾಹ್ನ #

  ಅನ್ನಪೂರ್ಣೇಶ್ವರಕ್ಕ..;)

  ಕೇಶವಣ್ಣ ಅಷ್ಟ್ ದೊಡ್ಡ್ ಮಾತೆಲ್ಲ ಹೇಳಿಬಿಟ್ರೆ ಹೇಗೆ? ಲವ್ ಲೆಟರುಗಳಿಗೆ ಬೆಳೆಗೆರೆ ಗೆ ಬೆಳಗೆರೆನೆ ಸಾಟಿ…:) ದಯವಿಟ್ಟು ನನ್ನ ಲೆಟನ ಬೆಳಗೆರೆಯ ತದ್ರೂಪ ಅಂದು ಬೆಳಗೆರೆಗೆ ಅವಮಾನ ಮಾಡ್ಬೇಡಿ ಹಹಹ

 14. ನವಿಲುಗರಿ ಫೆಬ್ರವರಿ 13, 2009 at 11:15 ಫೂರ್ವಾಹ್ನ #

  ಭಾವನಕ್ಕ ಎನ್ ಮಾಡೋದು ಜನ ಚೇಂಜ್ ಕೇಳ್ತಾರೆ..ಮುಂದೆ ಎನ್ ಕಥೆ ನೊ ಗೊತ್ತಿಲ್ಲ…ನಿಮ್ ಮನೆ ಮುಂದಿನ್ ಹುಡುಗಿಯನ್ನ ಯಾವುದಕ್ಕೂ ಹುಶಾರಾಗಿರೋಕೆ ಹೇಳು !

  ಥ್ಯಾಂಕ್ಸ್ ರಾಮು ಡಿಯರ್ !

  ರಂಜು ನಿಂಗು ಕೂಡ ದೊಡ್ ಧನ್ಯವಾದ !

 15. ನವಿಲುಗರಿ ಫೆಬ್ರವರಿ 13, 2009 at 11:16 ಫೂರ್ವಾಹ್ನ #

  ಮೌನಿ

  ಕಲ್ಲಾರೆ ಮಹೇಶಣ್ಣ

  ಮತ್ತೆ ಸಂದೀಪಣ್ಣ ..:)

  ಪತ್ರ ಮೆಚ್ಚಿದ್ದಕ್ಕೆ ಧನ್ಯವಾದ !

 16. ನವಿಲುಗರಿ ಫೆಬ್ರವರಿ 13, 2009 at 11:18 ಫೂರ್ವಾಹ್ನ #

  ಸಂಗೀತ ಎನ್ ವಿಷ್ಯಾ ಸಕತ್ ಕುಷಿನಲ್ಲಿರೋ ಹಾಗಿದೆ? ಮದ್ವೆ ಆದ್ ಮೇಲ್ ಕೂಡ ಇಷ್ಟ್ ಕುಷಿಯಾಗಿರೋರ್ನ ಇದೇ ಮೊದಲ ಸಲ ನೋಡ್ತ ಇರೋದು.. ! ಓಕೆ ನೋಡೋಣ ಧಾರವಾಡದ ಪೇಡ ಬರುತ್ತ ಅಥವ ಹೋದ ಸಲ ಯಾಮಾರಿಸಿದ ಹಾಗೆ ಈ ವರ್ಷನೂ ಯಾಮಾರಿಸ್ತೀರ ಅಂತ !

  ಥ್ಯಾಂಕ್ಸ್ ಬ್ಲಾಗ್ ಗೆ ಕೊನೆಗೂ ಬಂದಿದ್ದಕ್ಕೆ !

 17. ನವಿಲುಗರಿ ಫೆಬ್ರವರಿ 13, 2009 at 11:22 ಫೂರ್ವಾಹ್ನ #

  ಮೊದಲನೆಯದಾಗಿ ಶ್ರೀ ಶ್ರೀ ಶ್ರೀ ರಾಜರಾಜೇಶ್ವರಿ ಮಹದೇವಮ್ಮನವರಿಗೆ ನವಿಲುಗರಿ ಬ್ಲಾಗಿಗೆ ಸ್ವಾಗತ !

  ಇಲ್ಲ ಸ್ವಂತದ್ದಲ್ಲ ಅಂದ್ರೆ ತಪ್ಪಾಗುತ್ತೆ.. ಪತ್ರ ಸ್ವಂತದ್ದಾದ್ರು ಇಲ್ಲಿರೋ ಕೆಲವು ಭಾವನೆಗಳು ಸ್ವಂತದ್ದಾದ್ರು ಪತ್ರದಲ್ಲಿರೋ ರೀತಿ ಪ್ರೀತಿ ಇಲ್ಲ ಹಹಹಹಹಹ ಪತ್ರ ಬರಿಯೋಕೆ ಒಂದು ವಿಷ್ಯ ಬೇಕಾಗಿತ್ತು ಸೋ ಸ್ವ್ಂತ ಅನುಭವಗಳನ್ನೆ ಉಪಯೋಗಿಸಿಕೊಂಡೆ ಅಷ್ಟೆ !

 18. mehaboob ಫೆಬ್ರವರಿ 17, 2009 at 10:31 ಫೂರ್ವಾಹ್ನ #

  manasin aladalii ulid zalak

 19. minchulli ಮಾರ್ಚ್ 2, 2009 at 3:09 ಅಪರಾಹ್ನ #

  ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ. ನೀವು ಬಂದರೆ ತುಂಬಾ ಸಂತೋಷ ಆಗುತ್ತೆ.

  ಶುಭವಾಗಲಿ,
  – ಶಮ, ನಂದಿಬೆಟ್ಟ

 20. Anikethana ಮಾರ್ಚ್ 16, 2009 at 8:23 ಫೂರ್ವಾಹ್ನ #

  hey heart touching geleya..adaralloo kobeyalli baruva saalugalu..superb 🙂 keep it up
  Sunil.

 21. ಅನಾಮಿಕ ಮಾರ್ಚ್ 25, 2009 at 12:28 ಅಪರಾಹ್ನ #

  fantastic macha

 22. amul raj ಏಪ್ರಿಲ್ 16, 2009 at 9:15 ಫೂರ್ವಾಹ್ನ #

  namskara sir yen sir bardidira ee pathravanna
  nivu enternet nalli hakuva modalu aa nimma prithiya hrudayake ond sarii kalesidre ee thapathre ne barthirlilla eedana odida nanage nimma mele ondthara eeshta aagbitedira a hudigi yen sir yava hudigiedru sikthidlu yenapa eevnu hagelthidanalapa anokobedi naneanu prethisidavaranna teakisuvdu nanna kelasavalla nimma kavana nanna prithi eennu sathilla nannu elle edini antha hethithu

 23. Ranganatha ಜುಲೈ 7, 2009 at 11:45 ಫೂರ್ವಾಹ್ನ #

  Dear Somu,

  Attyadbhutavada lekhanagala gonchalugalanne naanu noodi, odi, anubhavisi aveshakkolagaagiddene… Enu onapu, enu vyiyyaara, anu sogasu, enu bhava, enu baditha…. bahala chennagide… nange ee ella lekhanagalanna odi manassige bahala aanadavaayithu… Sogasaada baraha, sogasaada shabda prayoga, utthama bhava olagondantha lekhana, kavithe…

  Inno hecchu chennagi bareyiri… namma rasika manassige thampereyiri.

  Inti nimma oduga,
  Ranganatha. B. Rao

 24. Pranav.K.R ಜುಲೈ 11, 2009 at 2:31 ಅಪರಾಹ್ನ #

  hoy oy swalpa hushaaru sir,,,,

 25. amritavarshini ಜುಲೈ 13, 2009 at 5:23 ಫೂರ್ವಾಹ್ನ #

  hi somanna… enri hingellaa bardiddeera..? so much touching… ondu kshana ellarannoo bhaavukarannaagisutte… fablous… keep it up…

 26. sri ಆಗಷ್ಟ್ 3, 2009 at 5:32 ಫೂರ್ವಾಹ್ನ #

  nandu same story friend…… nanu tumba valleyavanu ante adakke nanu avalige bedavante…..

 27. Arun ಆಗಷ್ಟ್ 6, 2009 at 3:17 ಅಪರಾಹ್ನ #

  “ಈ ಪ್ರೀತಿ ಪ್ರೇಮ ಎಲ್ಲ ನನಗಿಷ್ಟ ಇಲ್ಲಪ್ಪ, ಅಪ್ಪಿತಪ್ಪಿ ಕೂಡ ನನ್ನ ಮೇಲೆ ಯಾವುದೇ ತರಹದ ಭಾವನೆಯಿಟ್ಟುಕೊಳ್ಳಬೇಡ”
  ಯಾಕೊ ಈ ಸಾಲುಗಳನ್ನ ಓದಿ ಕಣ್ಣು ಒದ್ದೆ ಆಯ್ತು ಕಣ್ರಿ
  ನಾನ್ ಪ್ರೀತಿಸಿದ ಹುಡುಗಿ almost ಈ ತರಾನೇ ಹೇಳಿದ್ಳು…

  super ಆಗಿದೆ ನಿಮ್ಮ ಇಂತಿ ನಿನ್ನ ಪ್ರೀತಿಯ….
  ಇಂತಿ ನಿನ್ನ ಪ್ರೀತಿಯ ನನ್ನ ನೆಚ್ಚಿನ ಚಿತ್ರ.

 28. sandhya ಸೆಪ್ಟೆಂಬರ್ 16, 2009 at 8:59 ಫೂರ್ವಾಹ್ನ #

  super ………….

 29. Basavaraja.K. Kyadiggere ಆಗಷ್ಟ್ 10, 2010 at 8:15 ಫೂರ್ವಾಹ್ನ #

  It’s Not a Film. It held the film in Real life.

 30. basavaraj g sankanagoudar ಆಗಷ್ಟ್ 19, 2010 at 10:20 ಫೂರ್ವಾಹ್ನ #

  very very good tumbaaaaaaaaaaa channagide

 31. Thara.r ಆಗಷ್ಟ್ 28, 2010 at 10:53 ಫೂರ್ವಾಹ್ನ #

  “ಈ ಪ್ರೀತಿ ಪ್ರೇಮ ಎಲ್ಲ ನನಗಿಷ್ಟ ಇಲ್ಲಪ್ಪ, ಅಪ್ಪಿತಪ್ಪಿ ಕೂಡ ನನ್ನ ಮೇಲೆ ಯಾವುದೇ ತರಹದ ಭಾವನೆಯಿಟ್ಟುಕೊಳ್ಳಬೇಡ” ede tara nanu ondu kaladali heledy but evaga nanu pranakinta hechage ondu huduga prithista edene adeke karana avanu nan mele eteruvanta prithi ade tara nima prithi nejane agedre a hudge nemge seke segtale atlist nevu bardero e letter othe adru nimmana love madtale

  All the best

  ಇಂತಿ ನಿನ್ನ ಪ್ರೀತಿಯ ನನ್ನ ನೆಚ್ಚಿನ ಚಿತ್ರ.

 32. bhavya ಫೆಬ್ರವರಿ 4, 2011 at 10:26 ಫೂರ್ವಾಹ್ನ #

  nim later le ero prithe nejana

 33. hariprasad ಮೇ 19, 2011 at 1:26 ಅಪರಾಹ್ನ #

  hi the feelings in this latter was good, i dont about you but the expression of ur feelings, the style of adding the words was good keep it up and i hope the one whom you waiting she will come to you

 34. husainsante@gmail.com ಜೂನ್ 4, 2011 at 7:17 ಫೂರ್ವಾಹ್ನ #

  chennagideyappa. heege bareeta iru.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: