ಕಣ್ಣು ಕ್ಯಾಂಪಸ್ಸಿನಲ್ಲಿ ಕುಳಿತ ಚಂದನೆಯ ಕಣ್ಣುಗಳ ಭೇಟೆಯಾಡುತ್ತೆ !

23 Mar

shhhh

ಯಾರಲ್ಲಿ?..!
ಈಗಷ್ಟೇ ಹದಿನಾರು ತುಂಬಿ ಹದಿನೇಳು ಅಷ್ಟೇ.. ಅಷ್ಟೇನಾ? ನಿಜ ಹೇಳ್ಬೇಕು ಅಂದ್ರೆ ಹುಡುಗೀರು ನಮ್ ನಮ್ ವಯಸ್ಸನ್ನ ಕುಚ್ ಕುಚ್ ಕಮ್ಮಿ ನೇ ಹೇಳ್ಕೊಳ್ಳೋದು. ನಿಜ ಹೇಳಬೇಕು ಅಂದ್ರೆ ನನಗೆ ಹದಿನೇಳಾಗಿ ಒಂದು ವರ್ಷ ಆಯ್ತಪ್ಪ ! ಇಲ್ಲಿವಯವರೆಗು ನಾನಾಯ್ತು, ನನ್ನ ಪುಸ್ತಕಗಳಾಯ್ತು, ನನ್ನ ಪುಟಾಣಿ ಸ್ಕೂಟಿ, ನಮ್ಮಪ್ಪಾಮ್ಮ ನನ್ ಕೆಲ್ವು ಜಿಗ್ರಿ ದೋಸ್ತುಗಳಾಯ್ತು ಅಂತ ಇದ್ಬಿಟ್ಟೆ. ಮತ್ಯಾಕೆ ಈ ಪತ್ರ ಬರೆಯುವ ಉಮೇದು ಬಂದಿದ್ದು ಅಂತ ಕೇಳಬೇಡಿ..ನಾಚಿ ನೀರಾಗಿ ಹೋಗ್ಬಿಡ್ತೀನಿ ಅಷ್ಟೆ. ಹೊರಗೆಲ್ಲೋ ಅಪಾಚ್ಚಿ ಬೈಕಿನ ಸದ್ದು ಕೇಳಿದರೆ ನನಗ್ಯಾಕೊ ಇಲ್ಲಿ ಸುಮ್ನಿರೋಕಾಗ್ತಿಲ್ಲ! ಅದ್ಯಾರೋ ಪೋಲಿ ಹುಡುಗನ ಬೆನ್ನಿಗೆ ತನ್ನನ್ನಂಟಿಸಿಕೊಂಡು ಕುಳಿತಿರುವ ಆ ಹುಡುಗಿ ನನ್ನ ಸವತಿಯೇನೋ ಅನ್ನಿಸಿಬಿಡತ್ತೆ. ಪುಸ್ತಕವನ್ನ ಎದೆಗೊತ್ತಿಕೊಂಡು ಸುಮ್ಮನೆ ತಲೆಬಗ್ಗಿಸಿ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಮೊದ್ಲಿನ್ ತರ ಓಡಡೋಕ್ ಆಗ್ತಿಲ್ಲ. ಕಣ್ಣು ಕ್ಯಾಂಪಸ್ಸಿನಲ್ಲಿ ಕುಳಿತ ಚಂದನೆಯ ಕಣ್ಣುಗಳ ಭೇಟೆಯಾಡುತ್ತೆ. ಮನೇನಲ್ಲಿ ಸುಮ್ಮನೆ ಸೀರೆ ಸುತ್ತಿಕೊಂಡು ಕನ್ನಡಿ ಮುಂದೆ ನಿಂತ್ಕೊಂಡು ಬಿಟ್ರೆ ನಿಮಿಷ ಘಂಟೆಗಳೆಲ್ಲ ಆತ್ಮಹತ್ಯೆ ಮಾಡ್ಕೋತಾವೆ. ಅಮ್ಮ ಅನುಮಾನದ ಕಣ್ಣುಗಳಲ್ಲಿ ನೋಡ್ತಾಳೆ. ನಾನು ಸುಮ್ಮನೆ ತುಂಟನಗು ನಕ್ಕು ಬಾಗಿಲು ಹಾಕೊಂಡ್ಬಿಡ್ತೀನಿ. ದಿಂಬು ಉಸಿರುಗಟ್ಟಿ ಸಾಯುತ್ತೆ. ಮತ್ತೇ ಮತ್ತೇ ಮುಂದೇ ಎನ್ ಗೊತ್ತ?..ಬೇಡ ಸೆನ್ಸಾರ್ ಕಟ್ ಪ್ಲೀಸ್..!
ಪ್ಲೀಸ್ ಬೈಯ್ಕೋಬೇಡಿ ನಾನು ತುಂಬಾ ತುಂಬಾ ಒಳ್ಳೆ ಹುಡುಗಿ ಗೊತ್ತ !

ನಿಜ ಕಣ್ರಿ ಐ ಯಾಮ್ ಇನ್ ಲವ್ ! ಹಾಗಂತ ಇನ್ನೂ ಯಾರನ್ನೂ ಇಷ್ಟಪಟ್ಟಿಲ್ಲ! ನನಗೂ ಒಬ್ಬ ಗೆಳೆಯ ಅಂತ ಇದ್ದಿದ್ರೆ ಅನ್ನಿಸೋಕೆ ಶುರುವಾಗಿದೆ ! ಕ್ಯಾಂಪಸ್ಸಿನ ಮಸಾಲ ದೊಸೆಯನ್ನ ಇಬ್ಬರೂ ಹರಿದು ಮುರಿದು ತಿನ್ನಬೇಕು ಅನ್ನಿಸ್ತಿದೆ, ಯಾವುದಾದರೂ ಎರೆಡು ಕಣ್ಣುಗಳೂ ಸುಮ್ಮನೆ ನನ್ನೇ ನೋಡ್ಬೇಕು ಅನ್ನಿಸ್ತಿದೆ, ಅವನ ತಬ್ಬಿಕೊಂಡು ಹಿ ಈಸ್ ಮೈ ಡ್ರೀಮ್ ಬಾಯ್ ಅಂತ ನನ್ನ flirt ಗೆಳತಿಯರ ಮುಂದೆ ನಿಲ್ಬೇಕು ಅನ್ನಿಸ್ತಿದೆ. ಈ ಹೆಗಲ ಮೇಲೆ ಒಂದಿಷ್ಟು ಕೇಜಿ ತೂಕದ ಕೈ ಯಾವಗಲೂ ಇರಬೇಕು ಅನ್ನಿಸ್ತಿದೆ. ಹಾದಿ ಬೀದೀಲಿ ನನ್ನ ರೇಗಿಸಿದೋರ ಮೂತಿ ಕೆಂಪಾಗಿಸೋ ಕಪ್ಪು ಬಣ್ಣದ ರಾಜಕುಮಾರ ಬೇಕು. ಮೊದಲೇ ಹೇಳಿಬಿಡ್ತೀನಿ ನನಗೆ ಕಪ್ಪು ಬಣ್ಣದ ರಾಜಕುಮಾರನೇ ಬೇಕು. ಯಾಕೋ ಕಪ್ಪು ಬಣ್ಣ ಅಂದ್ರೆ ನನಗಿಷ್ಟಾನಪ್ಪ. ಆದ್ರೆ ತುಂಬ ಚಂದ ಇರ್ಬೇಕು ಓಕೆ ನ? ಯಾಕೆ ಅಂತ ಸ್ವಲ್ಪ ಕೇಳಿ.. ನಾನು ಇಡೀ ಕಾಲೇಜಿನ ಹಾಟ್ ಕೇಕ್ ತರ ಇದ್ದೀನಿ. ಇಂತ ಕ್ಯೂಟ್ ಹುಡುಗಿಗೆ ಎಂತ ಹುಡುಗ ಇರ್ಬೇಕು ಅಲ್ವಾ?

ಇದನ್ನೇ ಅಡ್ವಾಂಟೇಜ್ ಆಗಿ ತಗೊಳ್ಳೋದಾದ್ರೆ ನನಗವನು ಖಂಡಿತ ಬೇಡ ! ಅವನ ಜೊತೆ ನಾನ್ ಪಾರ್ಕಿಗೆ ಬರೋಲ್ಲ! ಅಪ್ಪು ಸಿನಿಮಾಗೆ ಆದ್ರೆ ಖಂಡಿತ ಮಾರ್ನಿಂಗ್ ಷೋಗೆ ಬಂದೇ ಬರ್ತೀನಿ! ಸಿನಿಮಾದ ಕತ್ತಲಲ್ಲಿ ಏನಾದ್ರೂ ಆಟ ಆಡಿದ್ರೆ ಹುಷಾರ್! ನನಗಿಷ್ಟ ಆಯ್ತು ಅಂದ್ರೆ ಸುಮ್ಮನೆ ಯಾರಿಗೂ ಗೊತ್ತಾಗದ ಹಾಗೆ ಒಂದು ಚೋಟ ಮುತ್ತು ಕೊಟ್ಬಿಡ್ತೀನಿ ಹಾಗಂತ ಮತ್ತೆ ಅವನು ಮುಂದುವರಿಯೋ ಹಾಗಿಲ್ಲ ! ತುಂಬಾ ಪುಟ್ಟ ಹುಡುಗಿ ನನಗೆ ಏನೂ ಗೊತ್ತಾಗೊಲ್ಲ ಅಂದುಕೊಂಡು ಸುಮ್ಮನೆ ಬೈಕಿಗೆ ಬ್ರೇಕು ಹಾಕಿದ್ರೆ ಸರಿ ಇರಲ್ಲ ಮತ್ತೆ!
ನನಗಿಷ್ಟ ಆದ್ರೆ ನಿನ್ನ ಉಸಿರುಕಟ್ಟೋ ಹಾಗೆ ತಬ್ಬಿಕೊಳ್ಳೋಕು ಬರುತ್ತೆ ಚಿಂತೆ ಬೇಡ ! ತುಂಬಾ ಮುದ್ದಾಗಿ ಬೆಳೆದ ಹುಡುಗಿ ನಾನು ಅದಕ್ಕಿಂತ ಮುದ್ದಾಗಿ ನೋಡ್ಕೋಬೇಕು ! ಅಪ್ಪ ಅಮ್ಮಾ ಅಂದ್ರೆ ಪ್ರಾಣ ನನಗೆ
ಅವರ ಕೈಕಾಲು ಹಿಡಿದಾದ್ರು ಒಪ್ಪಿಸ್ಬೇಕು ! ಮನೆ ಬಿಟ್ಟು ಬರೋ ಜಾಯಮಾನ ನನ್ನದಂತೂ ಅಲ್ಲ ಇದೊಂದು ವಿಷ್ಯದಲ್ಲಿ ನೋ ಕಾಂಪ್ರೋಮೈಸ್ ಡಿಯರ್ !

ಲವ್ ಲೆಟರ್ ಎಲ್ಲ ಬರಿಯೋ ಹುಡುಗಿ ಹೇಗೋ ಏನೋ ಅಂತ ಯೋಚನೆ ಬೇಡ. ನನಗೆ ಗೊತ್ತು ನಾನ್ ಸೂಪರ್ ಹುಡುಗಿ ಅಂತ. ನನಗೊಬ್ಬ ಸೂಪರ್ ಗೆಳೆಯ ಬೇಕು ಅಷ್ಟೇ ! ಪ್ಲೀಸ್ ಕೆಳಗಿನ ನಂಬರ್ ಗೆ ಒಂದು ಕಾಲ್ ಮಾಡಿ ಕಾಯ್ತ ಇರ್ತೀನಿ. ಸುಮ್ಮನೆ ಒಂದು ಸಲ ನನ್ನ ಧ್ವನಿ ಕೇಳೋಕಾದ್ರೂ ಮಾಡ್ತೀರಿ ಅಲ್ವಾ?

ಈ ನಂಬರಿನ ಹುಡುಗಿ !
9886587846

Advertisements

45 Responses to “ಕಣ್ಣು ಕ್ಯಾಂಪಸ್ಸಿನಲ್ಲಿ ಕುಳಿತ ಚಂದನೆಯ ಕಣ್ಣುಗಳ ಭೇಟೆಯಾಡುತ್ತೆ !”

 1. Girish March 24, 2009 at 3:37 am #

  Good Wrighting Well

 2. nakul March 24, 2009 at 4:54 am #

  very nice but ur number is wrong

 3. sunil March 24, 2009 at 8:02 am #

  super aagide…

 4. SurajGowda March 24, 2009 at 8:15 am #

  Somanna namaskara , hudugeera manadhalli yenenu nadeyutthe, odutthe , kuniyutthe antha nimma chutuku kutuku padagalalli athyuthamavaagi bannisiddhiri..

 5. Anikethana March 24, 2009 at 8:34 am #

  ನಮಸ್ಕಾರ,
  ಚೆನ್ನಾಗಿದೆ ಸೋಮಣ್ಣ ….
  ಮಧ್ಯದಲ್ಲಿ atleast ಒಂದೆರಡು ಸಾಲಲ್ಲಿ ಭಾವುಕಳಾಗಿದ್ರೆ ಬರಹ perfect ಆಗ್ತಿತ್ತೇನೋ ….just my opiinion sir.
  keep writing..Take care
  Sunil.

 6. ರಂಜಿತ್ March 24, 2009 at 9:11 am #

  ಅದ್ಯಾವ್ ನಂಬರ್ ಸರ್…:)

  ಕಾಲ್ ಮಾಡ್ಬೇಕಾಯ್ತೀಗ..:)

 7. Vishwa March 24, 2009 at 11:35 am #

  ಬಿಟ್ರೆ ನಿಮಿಷ ಘಂಟೆಗಳೆಲ್ಲ ಆತ್ಮಹತ್ಯೆ ಮಾಡ್ಕೋತಾವೆ.
  Super agide sir ee maatu…….

 8. svatimuttu March 25, 2009 at 11:36 am #

  somu tumbaane chennagide… muddagide…….. ah No.ge iga cal madtene…….:)

 9. champu March 25, 2009 at 3:17 pm #

  Superb.. Jus awesome..
  Maraya ond ond saari nange doubt barathe ne hudgino hudgano antha astara matige ondu henina manasannu artha madkondu bariteyalla.
  Really hats off to you..

 10. ರೋಹಿಣಿ March 26, 2009 at 5:33 am #

  somi
  nin yavaglo hudugiyade hudugi manasalli iro ritine barediddiyallo yaru phone madde idru nanu madtini kano. ninu hudugi yadru chintilla i like you somi. i miss you lot

 11. Swetha March 26, 2009 at 2:53 pm #

  HI Somu,
  Thumba Chennagi moodi bandide,, ninna kalpanege padagala jodanege hats off 🙂

 12. Jesh March 26, 2009 at 5:43 pm #

  hai

  ಬಿಟ್ರೆ ನಿಮಿಷ ಘಂಟೆಗಳೆಲ್ಲ ಆತ್ಮಹತ್ಯೆ ಮಾಡ್ಕೋತಾವೆ.,
  ಯಾವುದಾದರೂ ಎರೆಡು ಕಣ್ಣುಗಳೂ ಸುಮ್ಮನೆ ನನ್ನೇ ನೋಡ್ಬೇಕು ಅನ್ನಿಸ್ತಿದೆ

  Thuba chennagide oduthale naa yelli eddini..annonde gothagalla…melina yeradu vakhyagalu thumba chennagide…

 13. Rohini Joshi March 26, 2009 at 8:46 pm #

  abba sooper kanase….tumba muddaagide patra[:)]

 14. Shailaja March 28, 2009 at 11:09 am #

  Tumba chennagide. nimm number ge try madide but no respose

 15. raviyatike March 30, 2009 at 4:27 am #

  nice writing.. keep writing… good luck

 16. ambika April 1, 2009 at 10:22 am #

  Abba!!!!!

  sakathagide somu avare… hadinaarara vayassina chanchalateya manassanna tumba chennagi bimbisiddira….

  adu sari niv yavaga hudugiyagidri somu?????????

  ha ha ha tumbane chennagide… wish you gud luck somu

 17. Bhuvan Puduvettu April 1, 2009 at 4:09 pm #

  Tumba chennagideri…

 18. supreeth.k.s April 2, 2009 at 1:07 am #

  ಏನ್ ಸೋಮಣ್ಣ, ಆ ಹುಡುಗಿ ಬರ್ದಿರೋದು ಪ್ರೇಮ ಪತ್ರವಾ ಅಥವಾ ಹತ್ತಾರು ಕಂಡೀಶನ್ ಹಾಕಿ ದೇವೇಗೌಡ್ರು ಸಿಮ್ಮಿಗೆ ಬರೆಯೋ ಪತ್ರವಾ?

 19. Venkatesh K April 2, 2009 at 9:59 am #

  Hi Somu!
  Nice write up! I could not stop calling you.

  Any way, nice talking to you.

  Keep writing…..

  Venkatesh K.

 20. Venkatesh K April 2, 2009 at 10:01 am #

  Hi Somu!
  Nice write up! I could not stop calling you on reading this.

  Any way, nice talking to you.

  Keep writing…..

  Venkatesh K.

 21. navilugari April 2, 2009 at 2:37 pm #

  ಗಿರೀಶು ನಕುಲ್ ಮತ್ತೆ ಸುನಿಲ್ ಡಿಯರ್…ಪತ್ರ ಇಷ್ಟಪಟ್ಟಿದ್ದಕ್ಕೆ ತುಂಬ ತುಂಬಾ ತುಂಬ ತುಂಬಾ …………….[;)]

 22. navilugari April 2, 2009 at 2:40 pm #

  ಸೂರಜ್ ಡಿಯರ್…ಹುಡುಗಿಯರ ಮನಸ್ಸಲ್ಲಿ ಎನ್ ಎನ್ ನಡಿಯತ್ತೆ ಅಂತ ಇಷ್ಟೇ ಇಷ್ಟು ಗೊತ್ತಿರೋ ಮಹನುಭಾವನನ್ನ ಕರ್ಕೊಂಡು ಬಂದು ನನ್ ಮುಂದೆ ನಿಲ್ಸು..ಮತ್ತಷ್ಟು ಲೆಟರ್ ಬರಿಯಬಹುದು ಹಹಹಹಹಹಹಹಹ

  ಅನಿಕೇತನ..ಎನ್ ಮಾಡೋದು ಭಾವುಕ ಮನಸ್ಸು ಬರೋದು ಸ್ವಲ್ಪ ಲೇಟಾಗುತ್ತೆ ಅನ್ಸುತ್ತೆ…ಇನ್ನು ಹುಡುಗಿಗೆ ಚಿಕ ಏಜ್ ಬಿಡಿ..ಸುಮ್ಮನೆ ಭಾವುಕ ಮನಸ್ಸಲ್ಲಿ ಯಾಕೆ ಕಟ್ಟಿ ಹಕೋದು ಅಲ್ಲವ?

 23. navilugari April 2, 2009 at 2:41 pm #

  ರಂಜಿತ್ ಡಿಯರ್..ಅದೆಷ್ಟ್ ಸಲ ಕಾಲ್ ಮಡಿದ್ಯೋ ಯರಿಗೆ ಗೊತ್ತು? ಅ ಹುಡುಗಿ ಹೇಳ್ತ ಇತ್ತು..ಯಾವುದೋ ಹುಡುಗ ಮಾಲ್ಡೀವ್ಸ್ ಇಂದ ಪದೇ ಪದೇ ಪೋನ್ ಮಾಡ್ತ ಇದ್ದಾನೆ..ಅವನ ಕಾಟ ತಡಿಯೋಕಾಗದೆ ಅವನಿಗೆ ” ಅಣ್ಣಾ” ಅಂದುಬಿಟ್ಟೆ ಅಂತ 😉

 24. navilugari April 2, 2009 at 2:43 pm #

  ವಿಶ್ವಣ್ಣ ಸ್ವಾತಿಮುತ್ತು ಅಂಡ್ ಚಂಪಕಲಿ ಡಿಯರ್…ಮೆಚ್ಚಿದ್ದಕ್ಕೆ ಪತ್ರ ನಿಮಗೆ ಥ್ಯಾಂಕ್ಸ್ ಹೇಳ್ತ ಇದೆ..:)

 25. navilugari April 2, 2009 at 2:45 pm #

  ರೋಹಿಣಿ ಐ ಲವ್ ಯೂ ( ಆ ಹುಡುಗಿಯ ಕಡೆಯಿಂದ) 😉

  ಶ್ವೇತ ಥಾಂಕ್ ಯೂ…:)

 26. navilugari April 2, 2009 at 2:47 pm #

  ರೋಹಿಣಿ ನಕ್ಷತ್ರಕ್ಕೆ ಇಲ್ಲಿಂದಾನೆ ಒಂದು ಪ್ಲಯಿಂಗ್ ಕಿಸ್ಸು..ತುಂಬ ದಿನ ಆದಮೇಲೆ ಬಂದಿರೋದಕ್ಕೆ..;)

  ಶೈಲಜಾ ಮೇಡಮ್..ಸುಮ್ಮನೆ ಸುಳ್ಳು ಹೇಳಬೇಡಿ..ಆ ಹುಡುಗಿಗೆ ಯಾವ ಕಾಲು ಬಂದಿಲ್ಲವಂತೆ ನಿಮ್ಮ ನಂಬರ್ ಇಂದ….

  ಅಂಬಿಕ …ಅಬ್ಬ ಅಷ್ಟು ಇಷ್ಟ ಅಗೋಯ್ತ ಲೆಟರ್?

 27. navilugari April 2, 2009 at 2:48 pm #

  ಸುಪ್ರೀತಣ್ಣ..ದೇವೇಗೌಡರು ಬರೆಯೋ ಪತ್ರದಲ್ಲಿ ಕೂಡ ಪ್ರೀತಿ ಇರುತ್ತೆ ಅಲ್ಲವೇನೊ? ಇಲ್ಲದಿದ್ರೆ ಸಾವಿರಾರು ಪತ್ರಗಳನ್ನ ಅದೆಂಗೆ ಬರಿಯೋಕೆ ಅಗ್ತ ಇತ್ತು ಹೇಳು?

 28. navilugari April 2, 2009 at 2:49 pm #

  ವೆಂಕಟೇಶಣ್ಣ..ನೀವು ಕಾಲ್ ಮಾಡಿದ್ದಕ್ಕೆ ತುಂಬ ಕುಷಿಯಾಯ್ತು ಆ ಹುಡುಗಿಗೆ..;)

 29. Pavan April 8, 2009 at 9:07 am #

  No words abt ur writing…. Really very nice story……….. keep writing……..

 30. Pavithra April 14, 2009 at 10:12 am #

  Yava padagalanna upayogisali nimma kalpanegala bagge helalu.

 31. dharithri April 16, 2009 at 12:17 pm #

  ಎಂಥದ್ದು ಮಾರಾಯ್ರೆ..ಒಳ್ಳೊಳ್ಳೆ ಬರಹಗಳನ್ನು ಬರಕೊಂಡು ಪ್ರೀತಿ, ಪ್ರೇಮ ವಿರಹ ವಾರಸುದಾರರಿಗೆ ಮಾತ್ರ ಅಂತ ಕಟ್ಟಪ್ಪಣೆ ಮಾಡೋದು?!
  -ಧರಿತ್ರಿ

 32. govardhan May 4, 2009 at 2:31 pm #

  navilugari geleya namaste..
  nanhesru govardhan alpaswalpa sahithya oodkondawnu,mood bandaaga kavitegeecho havyasa 13 varsha dinda. geleya ninna baravanige chennagide oodugaranna hidididuva taakatthide ninna kriyaasheelathe hosa roopa galna padedu kollali. govarhan

 33. Mantu May 5, 2009 at 1:06 pm #

  Nim baravanige nodidre neevu tumba DARE N DASHING NATURE noru ansutte…… bt baravanige tumba muddagide kanri…. keep it up

 34. sonu May 18, 2009 at 2:27 pm #

  ondh hudugi manasina chithrana thumbhane vibinnavagi nimma kalpaneli chennagi mudidhe………………

 35. Anonymous June 8, 2009 at 12:11 pm #

  ನಿಮ್ಮ ಬರಹಗಳನ್ನು ನೋಡಿದ ಮೇಲೆ ನೀವು ಭಾಷೆಯ ಮೇಲೆ ಹಿಡಿತವನ್ನು ಸಾದಿಸಿದ್ದೀರಿ. ನಾನೂ ಕೂಡ ನಿಮ್ಮ ಲೇಖನಗಳ ಹಾಗೂ ಕವನಗಳು ಅಭಿಪ್ರಾಯಗಳಿಗೆ ಮಾರುಹೋಗಿದ್ದೇನೆ. ನೀವು ಹುಡುಗಿಯೋ ಹುಡುಗನೋ ಅದು ನನಗೆ ಬೇಕಾಗಿಲ್ಲ. ಆದರೆ ಈ ತರ ಲೇಖನಗಳು ಕೆಲವೊಮ್ಮೆ ಮುದ ನೀಡುತ್ತವೆ. ವಂದನೆಗಳು. ನಿಮಗೆ ಕುತೂಹಲಕ್ಕೆ ಕಾಲ್ ಮಾಡಿದೆ ರಿಂಗ ಆಯಿತು, ಅದರೆ ಮುಂದುವರಿಯಲಿಲ್ಲ , ಬೇಡ ಬಿಡಿ ನಾನು ವಿವಾಹಿತ. ನನ್ನ ಹೆಂಡತಿಗೂ ನಿಮ್ಮ ಲೇಖನಗಳನ್ನು ತೋರಿಸಿದ್ದೇನೆ . ಆಕೆಯು ತುಂಬಾ ಇಷ್ಟ ಪಟ್ಟಳು.

 36. amritavarshini July 13, 2009 at 5:11 am #

  somanna.. oh sorry sorry somanni.. 😉 yaavaga huduga aagirteera, inyaavaga hudgi aagteera anta ondoo gottaagolla kanri 🙂 anyway very nice… superb …

 37. Priya July 30, 2009 at 10:58 am #

  Super ede guru, nanig edan odhi nan hudga nenpada gotha…..I mis him a lot………..

 38. Arun August 6, 2009 at 2:48 pm #

  Hi navilugari,
  navilugariyantha naviraada bhaavanegalanna tumba super aagi nimma padagalalli bannisiddeeri…….
  simply superb…

 39. Pallavi August 25, 2009 at 12:45 pm #

  e patra bardiro hudgi thumba jaaaaaane

 40. Sandeep November 7, 2009 at 4:28 pm #

  hage summane……………..

 41. sowmya November 12, 2009 at 11:36 am #

  ee letter vijaya karnataka dhindha kaddhirodhaa??? bardhiddhu naanu hesru ninga ;)…… kaLLa kaNla neenu…

  hogli ist chennagella mundhe bareyoke hogbeDa.. namge kasta agotthe …

  sowmya

 42. raju January 11, 2010 at 7:43 pm #

  awesome……….

 43. omkarpatil February 1, 2010 at 3:13 pm #

  hi, navilugari ninu malo-femello, adu nanage bekagilla. aadre, nee bareda eee lekhana tumba chennagide. manassige tumba muda niduttave ee taraha lekhana ittichina dinagalalli barode illa. nimma lekhana midulige mattu hrudayakke directaagi natutte chear up mundina patrakke chataka paksi taraha kayuttiruva ninna abhimaani

 44. sampath kollegal February 3, 2010 at 3:24 am #

  hi, guru namaskara.tumba chennagide nimma lekanagalu.

 45. Anonymous April 2, 2014 at 9:30 am #

  tui poli

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: