ನಿನ್ನ 3 ಜನ ಅಣ್ಣಂದಿರಿಂದ ಅದೆಷ್ಟು ಕಿಸ್ಸುಗಳು ಮಿಸ್ಸಾದವು..?

13 May

313309~Indian-village-girl-near-Haridwar-Posters

ಹದಿನೇಳನೆಯ ಕ್ರಾಸಿನ ಹುಡುಗಿಗೆ !

ತುಂಬಾ ದಿನಗಳಾದ ಮೇಲೆ ಪತ್ರ ಬರ್ದಿದ್ದಾನೆ ಕರಿಯಾ ಅಂತ ಒಂದು ಮುಕ್ಕಾಲು ಕೇಜಿ ಕೋಪ ಬಂದಿರಬೇಕು ಅಲ್ಲವಾ? ಇಲ್ಲಿ ನಾನು ನಿನ್ನ ಒಂದುವರೆ ಇಂಚು ಮೂಗು ನೀನು ಕೋಪಿಸಿಕೊಂಡಾಗ ಹೇಗೆ ಕಾಂಡೀತು ಎಂದು ನೆನೆಯುತ್ತ ಮತ್ತೆ ನಿನ್ನ ನೆನೆಯುತ್ತಾ ಮತ್ತೆ ನಿನ್ನೊಬ್ಬಳನ್ನೆ ನೆನೆಯುತ್ತಾ ಈ ಪತ್ರವನ್ನ ಬರೆಯುತ್ತಿದ್ದೇನೆ. ಎಂದಿನಂತೆ ನಾನು ನಿನ್ನ ನೆನಪಲ್ಲಿ ಫ಼ುಲ್ ದಿಲ್ಕುಷ್. ನೀನು ಕೊಟ್ಟ ಅಷ್ಟೂ ಮುತ್ತುಗಳನ್ನ ಈ ಎದೆಯೊಳಗೆ ಜೋಪಾನವಾಗಿ ಜೋಡಿಸಿಟ್ಟು ದಿನಕ್ಕೊಂದರಂತೆ ತೆಗೆದುಕೊಂಡು ಮತ್ತಷ್ಟು ಮುತ್ತುಗಳಿಗೆ ಬೇಡಿಕೆ ಸಲ್ಲಿಸುವವನಿದ್ದೀನಿ. ಮುತ್ತು ಮತ್ತು ನನ್ನ ಬಗೆಗಿರುವ ಪ್ರೀತಿಯ ವಿಷಯದಲ್ಲಿ ನೀನು ಅಕ್ಷಯ ಪಾತ್ರೆ ಮತ್ತು ನಾನು ಅಕ್ಷಯಪಾತ್ರೆಯನ್ನೂ ಖಾಲಿಮಾಡಿ ಬಿಡುತ್ತೇನೆಂದು ಹೊರಟ ಒರಟ.

ಮತ್ತೆ ಹೇಗಿದ್ದಾರೆ ನಿನ್ನ ದೂರ್ವಾಸಮುನಿಯಂತ ಮೂರು ಜನ ಅಣ್ಣಂದಿರು? ಸುಂದರವಾದ ಹುಡುಗಿಯ ಹಿಂದೆ ಈ ದೇವರು ಅನ್ನುವ ಪಾಪಿಷ್ಟ, ಬಲಿಷ್ಟ ಅಣ್ಣಂದಿರನ್ನ ಹುಟ್ಟಿಸಿರುತ್ತಾನೆ ಅನ್ನುವ ಮಾತು ಕೇಳಿದ್ದೆ, ಆದರೆ ಇದು ನಿನ್ನ ವಿಷಯದಲ್ಲಿ ನಿಜವಾಯ್ತು ಅಲ್ವಾ? ದೂರ್ವಾಸಮುನಿಯಂತ ನಿನ್ನಣ್ಣಂದಿರಿಂದ ಅದೆಷ್ಟು ಕಿಸ್ಸುಗಳು ಮಿಸ್ಸಾದವು ನೆನಪಿದೆಯಾ? ಅದೆಷ್ಟು ಅಪ್ಪುಗೆಗಳು ತಬ್ಬಲಿಗಳಾದವು ನೆನಪಿದೆಯಾ? ಅದೆಷ್ಟು ಮಾರ್ನಿಂಗ್ ಶೋ ಸಿನಿಮಾಗಳು ಲಾಸು ಮಾಡಿಕೊಂಡವು ನೆನಪಿದೆಯಾ? ತುಂಬಾ ಹೂವುಗಳು ನಿನ್ನ ಮುಡಿಗೇರಲಿಲ್ಲ.. ತುಂಬಾ ತುಂಬಾ ಬೇಜಾರಾದಾಗಾ ನನ್ನ ಕಣ್ಣ ಹನಿಗಳು ನಿನ್ನ ಮಡಿಲು ಸೇರಲಿಲ್ಲ. ಪಾರ್ಕಿನ ಮೂಲೆಯ ಬೆಂಚುಗಳು ಮತ್ತು ನಿನ್ನ ಮನೆಯ ಹದಿನೇಳನೆಯ ಕ್ರಾಸಿನ ಮೂಲೆಯ ಕತ್ತಲು ನಾಚಿಕೊಳ್ಳಲಿಲ್ಲ.. ನಿನ್ನ ಬಂಗಾರದಂತ ಕಾಲ ಬೆರಳುಗಳಿಗೆ ನನ್ನ ಒರಟು ಒರಟು ಕಾಲ ಬೆರಳು ತಾಗಿಸಿಕೊಂಡು ನಡೆಯುವಾಗ ನನಗಾಗುತ್ತಿದ್ದ ಕುಷಿ ಮತ್ತೆ ನನಗೆ ಸಿಗಲಿಲ್ಲ..ನಿನ್ನ ಕೈ ಹಿಡಿದು ನಡೆಯುತ್ತಿದ್ದರೆ ಊರಲ್ಲಿರೊ ಅಷ್ಟೂ ಹುಡುಗರ ಹೊಟ್ಟೆ ಉರಿಯುವುದನ್ನ ಮತ್ತೆ ನೋಡಲಾಗಲೇ ಇಲ್ಲವಲ್ಲಾ? ಇಷ್ಟೆಲ್ಲ ಲಾಸುಗಳನ್ನ ಅದ್ಯಾವ ದೇವರು ತಂದುಕೊಡುತ್ತಾನೆ? ತುಂಬಿಕೊಡುತ್ತಾನೆ?

ನಿಂಗೆ ಈ ಪತ್ರ ಓದಿ ನಗು ಬರ್ತಿದ್ಯಾ? ಪತ್ರ ತಮಾಷೆ ತರ ಕಾಣ್ಸುತ್ತಾ ? ಸರಿ ಹಗಾದ್ರೆ ಕೇಳಿಲ್ಲಿ.. ನಂಗೆ ನಿನ್ನ ಬಿಟ್ಟು ಬದುಕಿರೋ ಶಕ್ತಿ ಇದ್ಯಾ ಅಂತ ತುಂಬಾ ಸಲ ಕನ್ನಡಿ ಮುಂದೆ ನಿಂತು ಕೇಳಿಕೊಂಡಿದ್ದೀನಿ. ನನ್ನ ಕಣ್ಣುಗಳೇ ಧಾರಾಕಾರವಾಗಿ ಅಳುವ ಮೂಲಕ ನನ್ನ ಪ್ರಶ್ನೆಗೆ ಉತ್ತರಿಸಿವೆ. ನನ್ನಿಂದ ನಿನ್ನನ್ನ ದೂರ ಮಾಡಿದ ನಂತರದ ಒಂದು ಕ್ಷಣದಿಂದಲೇ ನಿನ್ನ ಮೇಲಿನ ನನ್ನ ಪ್ರೀತಿ ಇಮ್ಮಡಿಯಾಗಿದೆ..ಅದಕ್ಕಾಗಿ ನಿನ್ನ ಮನೆಯವರಿಗೆ ಗೌರವಪೂರ್ವಕವಾಗಿ ಒಂದು ದೊಡ್ಡ ಥ್ಯಾಂಕ್ಸ್. ಮತ್ತಷ್ಟು ದೂರ ಮಾಡದೇ ಇದ್ದರೆ ಆ ಇಲ್ಲದ ದೇವರಿಗೂ ಒಂದು ದೊಡ್ಡ ಥ್ಯಾಂಕ್ಸ್ ಮತ್ತು ಇಲ್ಲಿಂದಾನೆ ಒಂದು ಫ಼್ಲಯಿಂಗ್ ಕಿಸ್ಸು. ಮತ್ತೆ ನೀನು ನಂಬುವ ನಾನು ನಂಬದೇ ಇರುವ ದೇವರಲ್ಲಿ ನಾನು ಕೇಳಿಕೊಳ್ಳುವುದಿಷ್ಟೆ. ಈ ಪೆದ್ದು ಹುಡುಗಿಗೆ ಒಂದಿಷ್ಟು ಗ್ರಾಮುಗಳ ತೂಕದ ದೈರ್ಯವನ್ನಾದರೂ ಕೊಡು ಅಂತ. ಆ ಮೂಲಕವಾದರೂ ತನ್ನ ಅಣ್ಣಂದಿರ ಮುಂದೆ ನಿಂತು, ನಂಗೆ ಆ ಕರಿಯನನ್ನ ಕೊಡ್ಸಿ ಅನ್ನುವ ಮಾತು ಆಡ್ತಿಯೇನೊ ಅಂತ. ಇಲ್ಲವಾದರೇ ಹೇಗಿದ್ದೀಯೋ ಹಾಗೆ ಮನೆಯ ಬಾಗಿಲಿಗೆ ಬಂದುಬಿಡು. ಮನೆಯ ಮತ್ತು ಈ ಎದೆಯ ಹೊಸ್ತಿಲು ಯಾವತ್ತು ನಿನಗೆ ಅಂತಾನೆ ಕಾಯುತ್ತಿರುತ್ತೆ.

ನಿನಗೆ ಗೊತ್ತ? ಪ್ರತಿದಿನ ನಾನು ದೀಪ ಹಚ್ಚುವಾಗ ಆರಿಸುವಾಗ ಮತ್ತು ಮಲಗುವಾಗ ನಿನ್ನ ನೆನಪು ಮಾಡಿಕೊಳ್ಳುತ್ತೇನೆ.. ನನಗೆ ನೀನೆಂದರೆ ಬೆಳಕು, ನೀನೆಂದರೆ ಕತ್ತಲು ನೀನೆಂದರೆ ಹಾಸಿಗೆ ಮತ್ತೆ ಕೊನೆಯದಾಗಿ ನೀನೆಂದರೆ ನನ್ನ ಎಲ್ಲ ನೆನಪುಗಳ ಮೆರವಣಿಗೆ ಮತ್ತೆ ನೀನೆಂದರೆ ನನ್ನ ಮುಂದಿರುವ ಪೂರ್ತಿ ಬದುಕು !

ನಿನ್ನವನೆ…..,,

ನವಿಲೂರ್ ಹುಡ್ಗ

Advertisements

24 Responses to “ನಿನ್ನ 3 ಜನ ಅಣ್ಣಂದಿರಿಂದ ಅದೆಷ್ಟು ಕಿಸ್ಸುಗಳು ಮಿಸ್ಸಾದವು..?”

 1. svatimuttu May 13, 2009 at 1:12 pm #

  somu ayyo paapa , ah annandiru illadidre ninna balu hasanagirtitteno….. hogli sumniru alabeda..:)…. chennagide letter..

 2. preethi May 14, 2009 at 5:01 am #

  Enappa double double?

 3. Vishwa May 15, 2009 at 9:44 am #

  ನೀನೆಂದರೆ ನನ್ನ ಮುಂದಿರುವ ಪೂರ್ತಿ ಬದುಕು !

  nanna hudugige propose madakke swalpa nimma barahadinda wordings kadila……???

  Regards
  Vishwa

 4. Pavithra May 15, 2009 at 1:32 pm #

  Love madidru estu kasta kodtare alva Somu

 5. Lakshmi Shashidhar May 17, 2009 at 8:48 am #

  what a comeback ! 🙂 ಸಖತ್ ಇಷ್ಟ ಆಯ್ತು ಈ ಬರಹ.

 6. kumaar May 18, 2009 at 6:14 am #

  huhhhhhhhhhhhhhhhhh nam huudgige idna nodkonde yenaadru heltene

 7. swapna hirekeroor May 18, 2009 at 6:31 am #

  re somu yene heli nim hatra naanu ond love letter baresteeni kanri…nam huduganige kodlikke…nimma mail chk maadi nimgeno msg kalsiddini

 8. geeta vasudhev May 18, 2009 at 6:33 am #

  nemma letter tubba channagede..print out tagande naanu thanks

 9. sonu May 18, 2009 at 2:16 pm #

  nim antha preethiso huduganige aa hudugi annandhiru oppige kodthare bidri…………….
  thumbhane chennagidhe……………….

 10. ಅನಿಕೇತನ May 25, 2009 at 11:04 am #

  ಸೋಮಣ್ಣ,
  ಮತ್ತೊಂದು superb ಬರಹ…….
  ಖುಷಿ ಕೊಟ್ಟ್ಟಿತು 🙂
  ನಿಮ್ಮ,
  ಸುನಿಲ್.

 11. Akhila June 6, 2009 at 4:38 pm #

  hmm chennagide, tension madkollbedi bidi sir.nimma e letter odi aa hudgi yen avra akkaane siktaare..

 12. champu June 7, 2009 at 6:13 pm #

  ನನ್ನಿಂದ ನಿನ್ನನ್ನ ದೂರ ಮಾಡಿದ ನಂತರದ ಒಂದು ಕ್ಷಣದಿಂದಲೇ ನಿನ್ನ ಮೇಲಿನ ನನ್ನ ಪ್ರೀತಿ ಇಮ್ಮಡಿಯಾಗಿದೆ..ಅದಕ್ಕಾಗಿ ನಿನ್ನ ಮನೆಯವರಿಗೆ ಗೌರವಪೂರ್ವಕವಾಗಿ ಒಂದು ದೊಡ್ಡ ಥ್ಯಾಂಕ್ಸ್.
  Jus superb 🙂

 13. Disha June 9, 2009 at 6:31 am #

  ನೀವು ಯಾವಾಗ ಮುಂದಿನ ಲೆಟರ್ ಪೋಸ್ಟ್ ಮಾಡ್ತೀರಾ ಅಂತ ತುಂಬಾ ಕಾದೆ. ಆದರೆ ಹೊಸ ಲೆಟರ್ ಓದೋದು ಮಾತ್ರ ತುಂಬಾ ಲೇಟಾಗಿ ಹೋಯಿತು. :-(( ಓದಿ ಇಷ್ಟ ಪಡುವಷ್ಟು ತುಂಬಾ ತುಂಬಾ ಚೆನ್ನಾಗಿದೆ ಈ ಲವ್‌ಲೆಟರ್ ಸಹ..

 14. manasu June 10, 2009 at 9:31 pm #

  hi somu, nimmanna nodid mele anisthu coment barile beku antha, 3 years ninda navilgari somu na meet madbeku ankondidde.. ivattu meet madide.. great talent… super somu…

 15. dharithri June 13, 2009 at 11:52 am #

  ಸೋಮು ಸರ್..ರಿಯಲೀ ವಂಡರ್ಫುಲ್! ಓದಿ ತುಂಬಾ ಖುಷಿಪಟ್ಟೆ..ಅಷ್ಟು ಚೆನ್ನಾಗ್ ಬರೆದಿದ್ದೀರ…
  -ಧರಿತ್ರಿ

 16. amritavarshini July 13, 2009 at 4:57 am #

  hi somanna… sakat aagide letter… eega deffinetly nim hudgige dhairya bande barutte.. and 1 more thing , ee letter ellaadroo aa doorvaasa annandirige sikkidre scene innoo chennaagirbodu alla..?? 😉 😉 simply superb …

 17. Priya July 30, 2009 at 11:17 am #

  Tumba chanagide……..ನನ್ನಿಂದ ನಿನ್ನನ್ನ ದೂರ ಮಾಡಿದ ನಂತರದ ಒಂದು ಕ್ಷಣದಿಂದಲೇ ನಿನ್ನ ಮೇಲಿನ ನನ್ನ ಪ್ರೀತಿ ಇಮ್ಮಡಿಯಾಗಿದೆ..ಅದಕ್ಕಾಗಿ ನಿನ್ನ ಮನೆಯವರಿಗೆ ಗೌರವಪೂರ್ವಕವಾಗಿ ಒಂದು ದೊಡ್ಡ ಥ್ಯಾಂಕ್ಸ್………edu tumba esta aithu…..

 18. Nimma Barahagalu tumba channaagive… ellavu ondu reeti neeve helida haage preetiyalle giraki hodeyuttive. baravanigeya shili nodi nannadondu salahe. idara jotege adraachege nodi…

 19. Rajendra September 11, 2009 at 1:57 pm #

  Hi Somu,

  yaake articles barita ella…
  nimma baraha tumba chennagide…..
  dont stop it….

  Please keep on writing…..

 20. sowmya November 12, 2009 at 11:29 am #

  ುಂಬಾ ಹೂವುಗಳು ನಿನ್ನ ಮುಡಿಗೇರಲಿಲ್ಲ.. ತುಂಬಾ ತುಂಬಾ ಬೇಜಾರಾದಾಗಾ ನನ್ನ ಕಣ್ಣ ಹನಿಗಳು ನಿನ್ನ ಮಡಿಲು ಸೇರಲಿಲ್ಲ. ಪಾರ್ಕಿನ ಮೂಲೆಯ ಬೆಂಚುಗಳು ಮತ್ತು ನಿನ್ನ ಮನೆಯ ಹದಿನೇಳನೆಯ ಕ್ರಾಸಿನ ಮೂಲೆಯ ಕತ್ತಲು ನಾಚಿಕೊಳ್ಳಲಿಲ್ಲ..

  superb lines.. keep it up gurugaLe 🙂

 21. omkarpatil February 1, 2010 at 2:59 pm #

  hi, somu
  love andre bare cinima nodi mado inta samayadalli love maduvaga pratiyondu ksanavannu hege truptiyinda anand anubhavisabekendu endu love madorge heli kottidiya u make a love guru

 22. ragini.c January 27, 2011 at 11:04 am #

  sir,

  is really superb,nanna huduga one time care madidare ennondu time tumba neglect madtane,appa amma andare tumba like madtane,avanu nanage helidane ninaginta avare mukhya.sir nanu yenu madbeku antha heli.edu nimma maneya hudugi antha tilidukolli sir.iam waiting for your reply.
  my email id:raginiblr@yahoo.com

 23. ನವಿಲಗರಿ October 1, 2012 at 11:30 am #

  thannks yellarigu…:)

 24. amaresh.pg October 5, 2012 at 6:29 am #

  “”””””‘yen boss! yava dariyallidira
  tumbane hattiravagide yenu yinnu hasegalu jasti yiddva
  yirali bejar madkobedi””””””””
  *******SUPER<<<>>SUPER*******SUPER<<<>>>>SUPER!!******
  [[[[[AMARESH.PG]]]]]]

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: